ಯುಗಾದಿ ಸಂಭ್ರಮದ ನಡುವೆ ಮನೆ ತೆರವು ಭೀತಿ!

By admin

ಯಾಳಗಿ ಪಂಚಾಯತಿ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ

ಯುಗಾದಿ ಸಂಭ್ರಮದ ನಡುವೆ ಮನೆ ತೆರವು ಭೀತಿ!

Contents
ಯಾಳಗಿ ಪಂಚಾಯತಿ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶಯುಗಾದಿ ಸಂಭ್ರಮದ ನಡುವೆ ಮನೆ ತೆರವು ಭೀತಿ!ಯಾವುದೇ ನೋಟಿಸ್ ನೀಡದೆ ಅಥವಾ ಪರವಾನಗಿ ಪಡೆಯದೆ ಬಡವರ ಮನೆಗಳ ಕಲ್ಲುಗಳನ್ನು ಕಿತ್ತು ಹಾಕಲಾಗುತ್ತಿದೆ. ಹಬ್ಬದ ಸಂಭ್ರಮದಲ್ಲಿರಬೇಕಾದ ಜನ ಈಗ ಬೀದಿಗೆ ಬೀಳುವ ಆತಂಕದಲ್ಲಿದ್ದಾರೆ. ಹಿರಿಯ ಅಧಿಕಾರಿಗಳ ಗಮನಕ್ಕೆ ತರದೆ ಪಿಡಿಒ ಅವರು ಏಕಪಕ್ಷೀಯ ನಿರ್ಧಾರ ಕೈಗೊಂಡು ಸರ್ವಾಧಿಕಾರಿ ಧೋರಣೆ ತೋರುತ್ತಿದ್ದಾರೆ.-ಪ್ರಶಾಂತಗೌಡ ಗೋರಗೋರಿ, ಗ್ರಾಮದ ನಿವಾಸಿ……ಗ್ರಾಮದಲ್ಲಿ ಜನಪ್ರತಿನಿಧಿಗಳ ಹಾಗೂ ಹಿರಿಯ ಅಧಿಕಾರಿಗಳ ಗ್ರಾಮಸ್ಥರ ಒತ್ತಾಯದಂತೆ 4.5 ಲಕ್ಷ ವೆಚ್ಚದಲ್ಲಿ 4 ಮೀಟರ್ ಅಗಲ ಹಾಗೂ 75 ಮೀಟರ್ ಉದ್ದದ ಸಿಸಿ ರಸ್ತೆ ನಿರ್ಮಿಸಲಾಗುತ್ತಿದೆ. ಇಲ್ಲಿ ಯಾವುದೇ ಕಟ್ಟಡ ಅಥವಾ ಮನೆ ತೆರವುಗೊಳಿಸುವ ಮಾಹಿತಿ ನಮಗಿಲ್ಲ, ಇದು ಪಂಚಾಯತಿಗೆ ಸಂಬಂಧಿಸಿದ ಬಿಟ್ಟ ವಿಷಯವಾಗಿದೆ.-ರಾಮಚಂದ್ರ, ಜೆಇ ಪಂಚಾಯತ್ ರಾಜ್ ಇಲಾಖೆ ಸುರಪುರ.

ಸೆಕ್ಯುಲರ್ ವಾಯ್ಸ್ ನ್ಯೂಸ್ ಕೆಂಭಾವಿ

ಕೆಂಭಾವಿ ತಾಲೂಕಿನ ಯಾಳಗಿ ಗ್ರಾಮದಲ್ಲಿ ಯುಗಾದಿ ಹಬ್ಬದ ಸಿದ್ಧತೆಯ ನಡುವೆಯೇ ಬಡ ಕುಟುಂಬಗಳ ಮನೆಗಳನ್ನು ಅನಧಿಕೃತವಾಗಿ ತೆರವುಗೊಳಿಸಲು ಮುಂದಾಗಿರುವ ಪಂಚಾಯತಿ ಅಧಿಕಾರಿಗಳ ಕ್ರಮಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಏನಿದು ಘಟನೆ?
ಯಾಳಗಿ ಗ್ರಾಮದ ವಾರ್ಡ್ ನಂ. 3ರ ಹೆಳವರ ಓಣಿ (ಶರಣ ಗುಡಿ ಏರಿಯಾ) ದಲ್ಲಿ ಪಂಚಾಯತ್ ರಾಜ್ ಇಲಾಖೆಯಿಂದ ಸಿಸಿ ರಸ್ತೆ ನಿರ್ಮಾಣ ಕಾಮಗಾರಿ ಮಂಜೂರಾಗಿದೆ. ನಿಯಮದಂತೆ 4 ಮೀಟರ್ (ಅಂದಾಜು 12 ಪೀಟ್) ಅಗಲದ ರಸ್ತೆ ನಿರ್ಮಿಸಬೇಕಿದೆ. ಆದರೆ, ಪಂಚಾಯತಿ ಅಭಿವೃದ್ಧಿ ಅಧಿಕಾರಿ (PDO) ಹಾಗೂ ಸಿಬ್ಬಂದಿಗಳು ಯಾವುದೇ ಮುನ್ಸೂಚನೆ ನೀಡದೆ, ಜೆಸಿಬಿ ಮೂಲಕ ಸುಮಾರು 25 ಪೀಟ್‌ಗೂ ಅಧಿಕ ರಸ್ತೆ ಅಗೆದು ಅಕ್ರಮವಾಗಿ ಮನೆಗಳ ತೆರವಿಗೆ ಮುಂದಾಗಿದ್ದಾರೆ ಎಂದು ನಿವಾಸಿಗಳು ಆರೋಪಿಸಿದ್ದಾರೆ.

ಗ್ರಾಮಸ್ಥರ ಒತ್ತಾಯ:
ರಸ್ತೆ ಎಸ್ಟೀಮೇಟ್ ಎಷ್ಟಿದೆಯೋ ಅಷ್ಟು ಮಾತ್ರ ಕಾಮಗಾರಿ ನಡೆಸಲಿ. ವಿನಾಕಾರಣ ಬಡವರ ಮನೆಗಳನ್ನು ಒಕ್ಕಲೆಬ್ಬಿಸುವ ಅಧಿಕಾರಿಗಳ ವಿರುದ್ಧ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಕೂಡಲೇ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಯಾಳಗಿ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಯಾವುದೇ ನೋಟಿಸ್ ನೀಡದೆ ಅಥವಾ ಪರವಾನಗಿ ಪಡೆಯದೆ ಬಡವರ ಮನೆಗಳ ಕಲ್ಲುಗಳನ್ನು ಕಿತ್ತು ಹಾಕಲಾಗುತ್ತಿದೆ. ಹಬ್ಬದ ಸಂಭ್ರಮದಲ್ಲಿರಬೇಕಾದ ಜನ ಈಗ ಬೀದಿಗೆ ಬೀಳುವ ಆತಂಕದಲ್ಲಿದ್ದಾರೆ. ಹಿರಿಯ ಅಧಿಕಾರಿಗಳ ಗಮನಕ್ಕೆ ತರದೆ ಪಿಡಿಒ ಅವರು ಏಕಪಕ್ಷೀಯ ನಿರ್ಧಾರ ಕೈಗೊಂಡು ಸರ್ವಾಧಿಕಾರಿ ಧೋರಣೆ ತೋರುತ್ತಿದ್ದಾರೆ.

-ಪ್ರಶಾಂತಗೌಡ ಗೋರಗೋರಿ, ಗ್ರಾಮದ ನಿವಾಸಿ

……

ಗ್ರಾಮದಲ್ಲಿ ಜನಪ್ರತಿನಿಧಿಗಳ ಹಾಗೂ ಹಿರಿಯ ಅಧಿಕಾರಿಗಳ ಗ್ರಾಮಸ್ಥರ ಒತ್ತಾಯದಂತೆ 4.5 ಲಕ್ಷ ವೆಚ್ಚದಲ್ಲಿ 4 ಮೀಟರ್ ಅಗಲ ಹಾಗೂ 75 ಮೀಟರ್ ಉದ್ದದ ಸಿಸಿ ರಸ್ತೆ ನಿರ್ಮಿಸಲಾಗುತ್ತಿದೆ. ಇಲ್ಲಿ ಯಾವುದೇ ಕಟ್ಟಡ ಅಥವಾ ಮನೆ ತೆರವುಗೊಳಿಸುವ ಮಾಹಿತಿ ನಮಗಿಲ್ಲ, ಇದು ಪಂಚಾಯತಿಗೆ ಸಂಬಂಧಿಸಿದ ಬಿಟ್ಟ ವಿಷಯವಾಗಿದೆ.

-ರಾಮಚಂದ್ರ, ಜೆಇ ಪಂಚಾಯತ್ ರಾಜ್ ಇಲಾಖೆ ಸುರಪುರ.