ಸುಂದರಕಾಂಡ ರಾಮಾಯಣ ಭಾಗ-56

By admin


ಇಚ್ಛಾರೂಪಧಾರಣಿ ರಾಕ್ಷಸಿ ಸಿಂಹಿಕಾ ಕಂಡಳುI
ಹನುಮನ, ಮನದಲಿ ಇಚ್ಛಿಸಿದಳು, II
“ಬಹಳ ಕಾಲದ ನಂತರ ಒಂದು ಮಹಾ ಪ್ರಾಣಿI
ಬರುತ್ತಿದೆ ನನ್ನತ್ತ, ಈ ಸುಖಭೋಜನ ಸವಿಯುವೆ” II
ದೇಹ ಹಿಗ್ಗಿಸಿ, ಬಾಯ್ತೆರೆದು ಉಸಿರೇಳೆದಳು ಸಿಂಹಿಕಾ,I
ಗಾಳಿಗೆ ಹಿಂದಕ್ಕೆ ದೂಕಿದಂತೆ ಬಾಸವಾಯಿತು ಹನುಮನಿಗೆ, II
ಮೇಲು ಕೇಳಗೆ ಹಾರುತ ಹಿಂದಕ್ಕೆ ನೋಡಿದ ಹನುಮI
ಸಮುದ್ರದಿ ಮೇಲೆದ್ದು ನಿಂತ ದೈತ ಪ್ರಾಣಿ, II
“ ಸುಗ್ರೀವ ಹೇಳಿದ ದೈತ ಪ್ರಾಣಿ, ಇದೇ”I
ಮನದಲಿ ನುಡಿದನು ಹನುಮ, II
ಇವಳೇ ಸಿಂಹಿಕಾ, ಗುರುತಿಸಿ ಹನುಮI
ಹೆಚ್ಚಿಸಿಕೊಂಡನು ತನ್ನ ದೇಹ, ಕಾರ್ಮೋಡಿನಂತೆ, II
ನೋಡಿ ಹನುಮನ ದೈತ ದೇಹI
ಸಿಂಹಿಕಾ ಹೆಚ್ಚಿಸಿಕೊಂಡಳ ತನ್ನ ಬಾಯಿಗಾತ್ರ, II
ಘರ್ಜಿಸುವ ಮೋಡದಂತೆ ಎರಗಿದಳು ಸಿಂಹಿಕಾI
ಕಂಡು ಅವಳ ಬಾಯಿ ಕುಗ್ಗಿಕೊಂಡ ಹನುಮ ದೇಹ, II
ಸಿಂಹಿಕಾಳ ಬಾಯಲಿ ಹೊಕ್ಕನು ಹನುಮII
ಸಿದ್ಧ ಚಾರನರನು ಕಂಡನು ಅವಳ ಬಾಯಲ್ಲಿ, II
ನಾಶ ಪಡಿಸಿದನು ಹನುಮ ತನ್ನ ಉಗುರುಗಳಿಂದI
ಸಿಂಹಿಕಾಳ ದೇಹದೊಳಗಿನ ಅಂಗಗಳನ್ನು, II
ಸೀಳಿ ಅವಳ ಎದೆ ವೇಗದಿ ಹೊರಬಿದ್ದನು,I
ಸಿಂಹಿಕಾ ಹೆಣವಾಗಿ ಸಮುದ್ರದಲಿ ಬಿದ್ದಳು, II
“ ಓ ವಾನರಾ, ಶುಭವಾಗಲಿ, ಕ್ರೂರ ಪ್ರಾಣಿ ವಧಿಸಿದೆ”I
ಹನುಮನ ಹೊಗಳು ಜೀವಿಗಳು ಉಸುರಿದವು,II
ದೂರದೃಷ್ಠಿ, ಧೈರ್ಯ, ಜಾಣ್ಮೆ, ನಿಪುನತೆ, I
ನಾಲ್ಕು ಗುಣಗಳಿರುವ ವ್ಯಕ್ತಿ ಕಾರ್ಯದಲಿ ವಿಫಲನಾಗನು, II
ಗರುಡನಂತೆ ಪುನಃ ವೇಗದಿ ಹಾರಿದನುI
ಆಕಾಶದಲಿ ಮಹಾ ಬಲಶಾಲಿ ಹನುಮನು, II
ನೂರು ಯೋಜನೆ ಕೊನೆಗೊಂಡಿತು, ಕಂಡವುI
ಗಿಡ ಮರ ಕಡಲತೀರ, ಪಯಣ ಮುಗಿಯಿತು; II
ನೆಲದ ಮೇಲೆ ಇಳಿಯುತ್ತಲೆ ಹನುಮಾನ ಕಂಡನು I
ನಡುಗಡ್ಡೆ ಮಲಯ-ವಲಯದ ಅರಣ್ಯಗಳ ಗಿಡಮರಗಳ ದೃಶ್ಯ, II
ಇಂದ್ರಿಗಳ ನಿಯಂತ್ರಿಸಿ,ಶಾಂತ ಮನಸ್ಸಿನಿಂದ ಹನುಮI
ಕಂಡನು ನದಿಗಳು ಪತಿ-ಸಾಗರ ಸೇರುವ ರಮ್ಯ ದೃಶ್ಯ, II
ತನ್ನ ದೇಹವನ್ನು ಸಾಮಾನ್ಯ ರೂಪಕ್ಕೆ ತಂದನುI
ಎಲ್ಲವನ್ನು ತೊರೆದು ಆತ್ಮ-ವಿಮೋಚನೆ ಮಾಡಿಕೊಂಡ ಹನುಮ, II
ಸಮುದ್ರದಡ ಪರ್ವತ ಶಿಖರ ಮೇಲೆ ನಿಂತು ಹನುಮ I
ವೀಕ್ಷಿಸಿದ ಲಂಕಾನಗರವನು, ಮಹಾಸರ್ಪ,ರಾಕ್ಷಸಿ, II
ಮಹಾಪರ್ವತ, ಸಮುದ್ರದಲೆ ಕಂಡ ಹುನುಮನಿಗೆ I
ಕಂಡಿತು ಲಂಕಾನಗರ ಇಂದ್ರನ ಅಮರಾತಿಯಂತೆ II
ಸುಂದರಕಾಂಡ

ಹನುಮಾನನು ಸಿಂಹಳಿಕಾಳನ್ನು ವಧಿಸಿ ಲಂಕೆಗೆ ಬಂದ ಸಾಹಸವನ್ನು ಆದಿಕವಿ ವಾಲ್ಮೀಕಿಯು ಬಣ್ಣಿಸಿರುವರು, ಅದರಲ್ಲಿಯ ಮುಖ್ಯಾಂಶಗಳು: (1)ಸಿಂಹಳಿಕಾಳನ್ನು ಹನುಮಾನ ವಧಿಸಿದ ಅವನ ನಾಲ್ಕನೆ ಸಾಹಸ: ಇಚ್ಛಾರೂಪಧಾರಣಿ ರಾಕ್ಷಸಿ ಸಿಂಹಿಕಾ ಹನುಮಾನನ ಕಂಡು ಮನದಲಿ ಅವನನ್ನು ಭಕ್ಷಿಸಿಸಲು ಇಚ್ಛಿಸಿದಳು: “ಬಹಳ ಕಾಲದ ನಂತರ ಒಂದು ಮಹಾ ಪ್ರಾಣಿ ಬರುತ್ತಿದೆ ನನ್ನತ್ತ, ಈ ಸುಖಭೋಜನ ಸವಿಯುವೆ”; ಸಿಂಹಿಕಾಳು ತನ್ನ ದೇಹ ಹಿಗ್ಗಿಸಿ, ಬಾಯ್ತೆರೆದು ಉಸಿರೇಳೆದಳು, ಆವಾಗ ಹನುಮನಿಗೆ ತನ್ನನು ಗಾಳಿಗೆ ಹಿಂದಕ್ಕೆ ದೂಕಿದಂತೆ ಬಾಸವಾಯಿತು, ಮೇಲು ಕೇಳಗೆ ಹಾರುತ ಹನುಮ ಹಿಂದಕ್ಕೆ ನೋಡಿದನು, ಹನುಮನಿಗೆ ಸಮುದ್ರದಿಂದ ಮೇಲೆದ್ದು ನಿಂತ ದೈತ ಪ್ರಾಣಿ ಕಂಡಿತು , “ ಸುಗ್ರೀವ ಹೇಳಿದ ದೈತ ಪ್ರಾಣಿ, ಇದೇ” ಎಂದು ಹನುಮಾನನು ಮನದಲಿ ನುಡಿದನು; ಅವಳೇ ಸಿಂಹಿಕಾ ಎಂದು ಗುರುತಿಸಿ ಹನುಮನು ತನ್ನ ದೇಹ ಕಾರ್ಮೋಡಿನಂತೆ ಹೆಚ್ಚಿಸಿಕೊಂಡನು, ನೋಡಿ ಹನುಮನ ದೈತ ದೇಹ ಸಿಂಹಿಕಾಳು ತನ್ನ ಬಾಯಿಗಾತ್ರವನ್ನು ಹೆಚ್ಚಿಸಿಕೊಂಡಳ ಹಾಗು ಘರ್ಜಿಸುವ ಮೋಡದಂತೆ ಸಿಂಹಿಕಾ ಹನುಮನ ಮೇಲೆ ಎರಗಿದಳು, ಹನುಮಾನನು ಕಂಡು ಅವಳ ಬಾಯಿಯನ್ನು ತಕ್ಷಣ ತನ್ನ ದೇಹ ಕುಗ್ಗಿಕೊಂಡನು, ಸಿಂಹಿಕಾಳ ಬಾಯಲಿ ಹೊಕ್ಕನು ಹನುಮ ಮತ್ತು ಅವಳ ಬಾಯಲ್ಲಿ ಸಿದ್ಧ ಚಾರನರನು ಕಂಡನು, ಹನುಮನು ತನ್ನ ಉಗುರುಗಳಿಂದ ಸಿಂಹಿಕಾಳ ದೇಹದೊಳಗಿನ ಅಂಗಗಳನ್ನು ನಾಶ ಪಡಿಸಿದನು ಹಾಗು ಸೀಳಿ ಅವಳ ಎದೆ ವೇಗದಿಂದ ಹೊರಬಿದ್ದನು, ತಕ್ಷಣ ಸಿಂಹಿಕಾಳು ಹೆಣವಾಗಿ ಸಮುದ್ರದಲಿ ಬಿದ್ದಳು; ಈ ದೃಶ್ಯ ಕಂಡು ಅಲ್ಲಿದ್ದ ಜೀವಿಗಳು “ ಓ ವಾನರಾ, ಶುಭವಾಗಲಿ, ಕ್ರೂರ ಪ್ರಾಣಿಯನು ವಧಿಸಿದೆ”ಎಂದು ಹೊಗಳಿಕೆ ಮಾತುಗಳನ್ನು ಉಸುರಿದವು; ದೂರದೃಷ್ಠಿ, ಧೈರ್ಯ, ಜಾಣ್ಮೆ, ನಿಪುನತೆ, ಈ ನಾಲ್ಕು ಗುಣಗಳಿರುವ ವ್ಯಕ್ತಿ ತನ್ನ ಕಾರ್ಯದಲಿ ವಿಫಲನಾದನು ಎಂಬ ಸಾರ್ವಕಾಲೀನ ಸತ್ಯವನ್ನು ಆದಿಕವಿ ಬೋಧಿಸಿರುವರು; (2)ಆತ್ಮವಿಮೋಚನೆ ಬಹು ಮುಖ್ಯ: ಸಮುದ್ರ ಮಧ್ಯೆ ಸಿಂಹಳಿಕಾಳನ್ನು ವಧಿಸಿ ಪುನಃ ಆಕಾಶದಲಿ ಮಹಾ ಬಲಶಾಲಿ ಹನುಮನು ಗರುಡನಂತೆ ವೇಗದಿಂದ ಹಾರಿದನು, ನೂರು ಯೋಜನೆ ಪಯಣ ಮಾರ್ಗ ಕೊನೆಗೊಂಡಿತು, ಪಯಣ ಮುಗಿಯಿತು; ನೆಲದ ಮೇಲೆ ಇಳಿಯುತ್ತಲೆ ಹನುಮಾನನು ಗಿಡ ಮರ ಕಡಲತೀರ ಕಂಡನು ಹಾಗು ಅವನಿಗೆ ನಡುಗಡ್ಡೆ ಮಲಯ-ವಲಯದ ಅರಣ್ಯಗಳ ಗಿಡಮರಗಳ ದೃಶ್ಯವೂ ಕಂಡಿತು, ಇಂದ್ರಿಗಳನ್ನು ನಿಯಂತ್ರಿಸಿ ಶಾಂತ ಮನಸ್ಸಿನಿಂದ ಹನುಮನು ನದಿಗಳು ತಮ್ಮ ಪತಿ ಸಮುದ್ರವನ್ನು ಸೇರುವ ರಮ್ಯ ದೃಶ್ಯ ಕಂಡನು; ತನ್ನ ದೇಹವನ್ನು ಸಾಮಾನ್ಯ ರೂಪಕ್ಕೆ ತಂದು ಹನುಮಾನನು ಎಲ್ಲವನ್ನು ತೊರೆದು ಆತ್ಮ-ವಿಮೋಚನೆ ಮಾಡಿಕೊಂಡನು(ಅಲಿಪ್ತ ಭಾವನೆ ತಳೆದನು); ಸಮುದ್ರದಡ ಪರ್ವತ ಶಿಖರ ಮೇಲೆ ನಿಂತು ಹನುಮನು ಒಂದು ಕ್ಷಣ ಲಂಕಾನಗರವನು ವೀಕ್ಷಿಸಿದನು, ಮಹಾಸರ್ಪ, ಮಹಾರಾಕ್ಷಸಿ, ಮಹಾಪರ್ವತಗಳನ್ನು ಸಮುದ್ರದಲ್ಲಿಯೇ ಕಂಡ ಹುನುಮನಿಗೆ ಲಂಕಾನಗರ ಇಂದ್ರನ ಅಮರಾವತಿ ನಗರದಂತೆ ಕಂಡಿತು. ಹೀಗೆ ನೂರು ಯೋಜನೆ ಉದ್ದದ ಸಮುದ್ರವನ್ನು ದಾಟಿ ಲಂಕೆಯ ಭೂಮಿಯ ಮೇಲೆ ಇಳಿದ ಹನುಮಾನು ಸೀತೆ ಹುಡುಕುವ ಕಾರ್ಯಕ್ಕೆ ಆರಂಭಿಸಿದನ್ನು ಆದಿಕವಿ ವಾಲ್ಮೀಕಿಯು ಬಣ್ಣಿಸಿರುವರು, ಅವರಿಗೆ ಸಮುದ್ರ ಸೇರುವ ನದಿಗಳು ಪತ್ನಿ ಓಡಿಬಂದು ಪತಿಯನ್ನು ಸೇರಿದಂತೆ ದೃಶ್ಯವು ಕಂಡತು, ಅವರ ಉಪಮಾಲಂಕಾರಿಕ ಕಾವ್ಯಸೈಲಿ ಬಹು ಅದ್ಭುತ.
ಡಾ. ಅರ್ಜುನ ಯ. ಪಂಗಣ್ಣವರ ವಾಲ್ಮೀಕಿ ಸಾಹಿತ್ಯ ಚಿಂತಕ‌