
ದಾಟಿ ಆಯಾಸವಿಲ್ಲದೆ ಅಸಾಧ್ಯ ಮಹಾಸಾಗರ ವI
ನೋಡಿದ ತ್ರಿಕೂಟ-ಶಿಖರ ಮೇಲಿನ ಲಂಕಾನಗರ,II
ನೂರು ಯೋಜನೆ ಸಮುದ್ರ ದಾಟಿಯಾಯಿತು,I
ಇನ್ನು ಮುಂದಿನ ನೂರು ಯೋಜನೆ? II
ಅರಣ್ಯಗಳ ಮಧ್ಯೆ ಹಚ್ಚಹಸಿರು ಹುಲ್ಲುಗಾವಲುI
ಬಂಡೆ ಬೆಟ್ಟಗಳನ್ನು ದಾಟುತ ನಡೆದ ಹನುಮ, II
ಎತ್ತ ನೋಡಿದರೂ ಬೆಟ್ಟಗಳ ಸಾಲI
ಹೂ ಹೂಬಳ್ಳಿಗಳಿಂದ ತುಂಬಿದ ಸಾಲ, II
ಕರ್ನಿಕಾರ, ಸರಳಾನ , ಖಜೂರ ಹೂ ಬಿಟ್ಟಿದವುI
ಚಾರೊಳಿ ,ಲಿಂಬೆ, ಕಾಡುಮಲ್ಲಿಗೆ, ಮಲ್ಲಿಗೆ ಸುಗಂಧ,II
ಮೆಣಸು, ಕದಂಬ,ಸಪ್ತದಳ ಬಾಳೆ, ದಾಳಿಂಬ,I
ಮತ್ತಿ, ಕಣಗಿಲು, ಹೂ ಮೊಗ್ಗೆ ಕಾಯಿ, ತುಂಬಿದ್ದವು,II
ಕಂಗೊಳಿಸುವ ವನ ಉಪವನ, ಹಕ್ಕಿಗಳ ನಿನಾದ,I
ಹಂಸ ಬಾತುಗೋಳಿ ತುಂಬಿ ಸತ್ತುವರೆದ ಹೊಂಡಗಳು, ||
ಕಣ್ಮನ ಸೆಳೆವ ಸುಂದರ ಪರಿಸರI
ಕಂಡು ಬೆರಗಾದನು ಮಹಾನ್ ವಾನರ, ||
ಸೊತ್ಪಲಾಭಿಃ ಕಮಲ ತುಂಬಿದ ಹೊಂಡಗಳ ಮಧ್ಯೆಯI
ರಾವಣನ ಲಂಕಾನಗರ ಸಮೀಪಿಸಿದ ಹನುಮ, II
ಸ್ವರ್ಗದಂತೆ ಕಂಡಿತು ಲಂಕಾನಗರ,I
ಸುತ್ತುವರೆದ ಚಿನ್ನದ ರಕ್ಷಣಾ ಗೋಡೆಗಳ ನಗರ, II
ರಾವಣ ವ ರಾಕ್ಷಸರು ತಿರುಗುತಿದ್ದರು ಗಸ್ತುI
ಸೀತೆ ತಂದಾಗಿನಿಂದ ಇನ್ನೂ ಹೆಚ್ಚಿತು ಗಸ್ತು, II
ಶರದಕಾಲದ ಮೋಡಗಳಂತ ದೈತ ಮನೆಗಳ,ಅಲಂಕೃತ ಓಣಿಗಳ,I
ಸ್ವರ್ಣಕಮಾನುಗಳ, ಪತಾಕೆಗಳ ಸುಂದರ ನಗರ,II
ವಿಶ್ವಕರ್ಮ ನಿರ್ಮಿಸಿದ ರಾಕ್ಷಸರಾಜ ರಾವಣನ ಲಂಕೆ I
ಕಂಡಿತು ಆಕಾಶದಲಿ ತೆಲುವಂತೆ, ಕೋಟೆಗೋಡೆ ಕಂಡಿತು II
ಸಿಂಹ ವ ನಗರ ಸೊಂಟದಂತೆ, ಸುತ್ತುವರೆದ ಹೊಂಡಗಳು, I
ಕಂಡವು ಸರಪಳಿ ಕೀಲಿಗಳಂತೆ, II
ತಿಳಿದು ಕರ್ಣಕುಂಡಲಾಕೃತಿ ಕಟ್ಟಡಗಳ ಮಾನಸಿಕತೆ I
ಸಮೀಪಿಸಿದ ಹನುಮ ಉತ್ತರದ್ವಾರ, ಚಿಂತಿಸಿದ ಹನುಮ “II
ಆಕಾಶದೆತ್ತರ ಕೈಲಾಸಪರ್ವತದಂತಹ I
ಲಂಕೆ ಯಲ್ಲಿ ಹಾರಿ ಹೋಗಲಿಯೇ, ಸುಭದ್ರ ಕಟ್ಟಡದಾಚೆ! II
ಪಾತಾಳದ ಭೋಗವತಿನಗರ ಕಾಯುವ ಸರ್ಪಗಳಂತೆI
ಕಾಯುತಿಹರು ರಾಕ್ಷಸರು ಎಚ್ಚರದಿ ಲಂಕೆ, II
ಎತ್ತ ನೋಡಿದರೂ ಭಲ್ಲೆ ಆಯುಧ ಹಿಡಿದುI
ಗಸ್ತು ತಿರುಗುವ ರಾಕ್ಷಸರ ಹಿಂಡು, II
ಸಾಗರ ಮಧ್ಯೆ ಆಭೇದ ಕೋಟೆಗಳ ರಕ್ಷಣೆI
ಭಯಾನಕ ಶತ್ರು ರಾವಣನ ರಕ್ಷಾಕವಚವಾಗಿತ್ತು ಲಂಕಾ,II
ಕೋಟೆ ಅಭೇದ ನೋಡಿ ಹನುಮ ನುಡಿದI
“ವಾನರ ಸೇನೆ ಬಂದರೂ, ಜಯ ಅಸಾಧ್ಯ ವಾನರರಿಗೆ, II
ದೇವತೆಗಳೂ ಲಂಕೆಯನ್ನು ಜಯಿಸಲಾರರು,I
ರಾವಣನನ್ನು ಜಯಿಸಲು ರಾಮನಿಗೆ ಸಾಧ್ಯವೇ? II
ಮನವೊಲಿಸಲು, ಕಾಣಿಕೆ ನೀಡಲು ಇಲ್ಲವೇ ಯುದ್ಧಮಾಡಲುI
ಅವಕಾವಿಲ್ಲ,ರಾಕ್ಷಸರನ್ನು ಎದಿರಿಸುವದು ಹೇಗೆ? II
ಅಂಗದ, ನಿಲ, ನಿಪುಣ ಸುಗ್ರೀವ ವ ನಾನು,I
ನಾಲ್ವರು ವಾನರರಿಗೆ ಮಾತ್ರ ಸಾಧ್ಯ ಇದನ್ನು ನುಸಳಲು,II
ಮೊದಲು ಜನಕ ಪುತ್ರಿ ಸೀತೆ ಜೀವಂತವಿರುವಳೆ ಅಥವಾ ಇಲ್ಲ, I
ತಿಳಿದು, ನಂತರ ಮುಂದಿನ ವಿಚಾರ ಮಾಡೋಣ”, II
ಸುಂದರಕಾಂಡ
ಆದಿಕವಿ ವಾಲ್ಮೀಕಿಯು ಈ ಸಂದರ್ಭದಲ್ಲಿ ಲಂಕಾನಗರದ ಬಾಹ್ಯ ಮತ್ತು ಒಳ-ಸೌಂದರ್ಯ ಹಾಗು ಹನುಮಾನನ ಮಾನಸಿಕಗೊಂದಲಗಳ ಅಂಶಗಳನ್ನು ಯಥಾವತ್ತಾಗಿ ವಿವರಿಸಿರುವರು, ಅದರಲ್ಲಿಯ ಮುಖ್ಯಾಂಶಗಳು:(1) ಹನುಮಾನನ ಮನಗೆದ ಲಂಕಾ ಸೌಂದರ್ಯ: ಹನುಮನು ಆಯಾಸವಿಲ್ಲದೆ ಅಸಾಧ್ಯ- ಮಹಾಸಾಗರವನ್ನು ದಾಟಿ ತ್ರಿಕೂಟ-ಶಿಖರ (ಇಂದಿನ ಶೃೀಲಂಕಾದ ಮಧ್ಯ ಭಾಗ) ಮೇಲಿನ ಲಂಕಾನಗರವನ್ನು ನೋಡಿದನು ಹಾಗು ನೂರು ಯೋಜನೆ ಸಮುದ್ರ ದಾಟಿಯಾಯಿತು, ಇನ್ನು ಮುಂದಿನ ನೂರು ಯೋಜನೆ? ಎಂಬ ಸ್ವಯಂ ಪ್ರಶ್ನಿಸಿಕೊಂಡನು; ಹನುಮನು ಅರಣ್ಯಗಳ ಮಧ್ಯೆ ಹಚ್ಚಹಸಿರು ಹುಲ್ಲುಗಾವಲು, ಬಂಡೆ ಬೆಟ್ಟಗಳನ್ನು ದಾಟುತ ಲಂಕಾನಗರದತ್ತ ನಡೆದನು, ಎತ್ತ ನೋಡಿದರೂ ಬೆಟ್ಟಗಳ ಸಾಲ, ಬಗೆ ಬಗೆ ಹೂಗಳಿಂದ ತುಂಬಿದ ಸಾಲಗಳು; ಕರ್ನಿಕಾರ, ಸರಳಾನ (ಕರ್ಪೂರ ಗಿಡ), ಖಜೂರ ಗಿಡಗಳು ಹೂ ಬಿಟ್ಟಿದವು; ಚಾರೊಳಿ(ಕೊಲೆಮಾವು ಗಿಡ),ಲಿಂಬೆ, ಕಾಡುಮಲ್ಲಿಗೆ, ಮಲ್ಲಿಗೆ ಸುಗಂಧ, ಮೆಣಸು, ಕದಂಬ,ಸಪ್ತದಳ ಬಾಳೆ, ದಾಳಿಂಬ, ಮತ್ತಿ, ಕಣಗಿಲು ಗಿಡಗಳು ಹೂ, ಮೊಗ್ಗೆ ಮತ್ತು ಕಾಯಿಗಳಿಂದ ತುಂಬಿದ್ದವು; ಕಂಗೊಳಿಸುವ ವನ ಉಪವನ, ಹಕ್ಕಿಗಳ ನಿನಾದ, ಹಂಸ ಬಾತುಗೋಳಿಗಳಿಂದ ತುಂಬಿ ಸತ್ತುವರೆದ ನೀರಿನ ಹೊಂಡಗಳು, ಕಣ್ಮನ ಸೆಳೆವ ಸುಂದರ ಪರಿಸರ ಕಂಡು ಬೆರಗಾದನು ಮಹಾನ್ ವಾನರ, ಹನುಮನು ಸೊತ್ಪಲಾಭಿ (ನೈದಿಲೆ), ಕಮಲ ಹೂ ಗಿಡಗಳಿಂದ ತುಂಬಿದ ನೀರಿನ ಹೊಂಡಗಳ ಮಧ್ಯೆಯಿದ್ದ ರಾವಣನ ಲಂಕಾನಗರವನ್ನು ಸಮೀಪಿಸಿದನು; ರಾವಣ ಮತ್ತು ರಾಕ್ಷಸರು ಗಸ್ತು ತಿರುಗುತಿದ್ದ, ಸುತ್ತುವರೆದ ಚಿನ್ನದ ರಕ್ಷಣಾ ಗೋಡೆಗಳ ರಕ್ಷಣೆನೆಯಲಿದ್ದ ಲಂಕಾನಗರವು ಹನುಮನಿಗೆ ಸ್ವರ್ಗದಂತೆ ಕಂಡಿತು, ಸೀತೆಯನ್ನು ತಂದಾಗಿನಿಂದ ನಗರದಲ್ಲಿ ಗಸ್ತು ಇನ್ನೂ ಹೆಚ್ಚಿತು; ಶರದಕಾಲದ ಮೋಡಗಳಂತ ದೈತ ಮನೆಗಳ, ಅಲಂಕೃತ ಓಣಿಗಳ, ಸ್ವರ್ಣಕಮಾನುಗಳ, ಪತಾಕೆಗಳಿಂದ ಅಲಂಕೃತ ಸುಂದರ ನಗರ, ವಿಶ್ವಕರ್ಮ ನಿರ್ಮಿಸಿದ ರಾಕ್ಷಸರಾಜ ರಾವಣನ ಲಂಕೆಯು ಹನುಮನಿಗೆ ಆಕಾಶದಲಿ ತೆಲುವಂತೆ ಕಂಡಿತು” ಹೀಗೆ ಲಂಕಾ ನಗರದ ಬಾಹ್ಯ ಸೌಂದರ್ಯವನ್ನು ಆದಿಕವಿ ವಾಲ್ಮೀಕಿಯು ಲಂಕಾ ನಗರದ ಬಾಹ್ಯ ಪ್ರಕೃತಿ ಸೌಂದರ್ಯವನ್ನು ಎಂದು ಬಣ್ಣಿಸಿರುವರು. (2)ಲಂಕಾ ಭದ್ರತೆ: ಲಂಕೆಯ ಭದ್ರತೆ ಬಗ್ಗೆ ಹನುಮಾನನು ” ಕೋಟೆಗೋಡೆ ಸಿಂಹ ಮತ್ತು ನಗರದ ಸೊಂಟದಂತೆ ಕಂಡಿತು, ಸುತ್ತುವರೆದ ಹೊಂಡಗಳು ಸರಪಳಿ ಕೀಲಿಗಳಂತೆ ಕಂಡವು, ತಿಳಿದು ಕರ್ಣಕುಂಡಲಾಕೃತಿ ಕಟ್ಟಡಗಳ ಮಾನಸಿಕತೆಯನ್ನು ಹನುಮಾನ ಉತ್ತರದ್ವಾರವನ್ನು ಸಮೀಪಿಸಿದನು ಹಾಗು ಹನುಮನು ಮನದಲ್ಲಿ ಒಂದು ಕ್ಷಣ ಹೀಗೆ ಚಿಂತಿಸಿದನು “ಸುಭದ್ರ ಕಟ್ಟಡದಾಚೆ ಆಕಾಶದೆತ್ತರ ಕೈಲಾಸ-ಪರ್ವತದಂತಹ ಲಂಕೆಯಲ್ಲಿ ಹಾರಿ ಹೋಗಲಿಯೇ! ಪಾತಾಳದ ಭೋಗವತಿನಗರವನ್ನು ಕಾಯುವ ಸರ್ಪಗಳಂತೆ ರಾಕ್ಷಸರು ಎಚ್ಚರದಿಂದ ಲಂಕೆಯನು ಕಾಯುತಿಹರು! ಎತ್ತ ನೋಡಿದರೂ ಭಲ್ಲೆ ಆಯುಧ ಹಿಡಿದು ಗಸ್ತು ತಿರುಗುವ ರಾಕ್ಷಸರ ಹಿಂಡು; ಸಮುದ್ರ ಮಧ್ಯೆ ಆಭೇದ ಕೋಟೆಗಳ ರಕ್ಷಣೆಯೂ ಭಯಾನಕ ಶತ್ರು ರಾವಣನ ಲಂಕಾನಗರದ ರಕ್ಷಣಾ ಕವಚವಾಗಿತ್ತು; ಹನುಮ ಅಭೇದ ಕೋಟೆಯನು ನೋಡಿ ಮನದಲಿ ಹೀಗೆ ನುಡಿದನು “ವಾನರ ಸೇನೆ ಬಂದರೂ, ಜಯ ಅಸಾಧ್ಯ ವಾನರರಿಗೆ, ದೇವತೆಗಳೂ ಲಂಕೆಯನ್ನು ಜಯಿಸಲಾರರು, ರಾವಣನನ್ನು ಜಯಿಸಲು ರಾಮನಿಗೆ ಸಾಧ್ಯವೇ? ಮನವೊಲಿಸಲು, ಕಾಣಿಕೆ ನೀಡಲು ಇಲ್ಲವೇ ಯುದ್ಧಮಾಡಲು ಅವಕಾವಿಲ್ಲ, ಹಾಗಾದರೆ ರಾಕ್ಷಸರನ್ನು ಎದಿರಿಸುವದು ಹೇಗೆ? ಅಂಗದ, ನಿಲ, ನಿಪುಣ ಸುಗ್ರೀವ ಮತ್ತು ನಾನು, ಈ ನಾಲ್ವರು ವಾನರರಿಗೆ ಮಾತ್ರ ಇದನ್ನು ನುಸಳಲು ಸಾಧ್ಯ; ಏನೇಯಾಗಲಿ ಮೊದಲು ಜನಕ ಪುತ್ರಿ ಸೀತೆಯು ಜೀವಂತವಿರುವಳೆ ಅಥವಾ ಇಲ್ಲ, ವಿಷಯ ತಿಳಿದು ನಂತರ ಮುಂದಿನ ವಿಚಾರ ಮಾಡೋಣ”ಎಂದು ಲಂಕೆಯ ಭದ್ರತೆಯನ್ನು ವಿವರಿಸಿದನು: ಆದಿಕವಿ ವಾಲ್ಮೀಕಿಯು ಅಭೇದ ಲಂಕಾನಗರದ ರಾವಣನನ್ನು ಜಯಿಸಲು ರಾಮನಿಗೆ ಸಾಧ್ಯವೇ? ಎಂಬ ಶಂಕೆಯುಕ್ತ ಮಾತುಗಳನ್ನು ವ್ಯಕ್ತಪಡಿಸಿರುವರು.
…..ಡಾ. ಅರ್ಜುನ ಯ. ಪಂಗಣ್ಣವರ ವಾಲ್ಮೀಕಿ ಸಾಹಿತ್ಯ ಚಿಂತಕ
