
ಲಂಕಾಳನು ಸೋಲಿಸಿ ಗೋಡೆ ಜಿಗಿದುI
ಲಂಕಾ ಪ್ರವೇಶಿಸಿದ ಅಜಾನುಬಾಹು ವೀರ ಹನುಮ,II
ರಾತ್ರಿ ಚಂದ್ರನ ಬೆಳಕಿನಲಿ ಹೂ ರತ್ನಗಳಿಂದI
ಕಂಗೊಳಿಸುತಿದ್ದವು ನಗರದ ರಾಜಮಾರ್ಗಗಳು, II
ಮೋಡಗಳಾಲಂಕೃತ ಆಗಸದಂತೆ ಕಂಡಿತು ನಗು ವ ವಾದ್ಯI
ದ್ವನಿಗಳಿಂದ ತುಂಬಿದ ಮನೆಗಳಾಲಂಕೃತ ರಮ್ಯ ನಗರ,II
ಕಮಲ ಸ್ವಸ್ತಿಕ ವಿನ್ಯಾಸದ ರಾಕ್ಷಸರ ಮನೆಗಳI
ಬಾಗಿಲ ಕಿಟಕಿಗಳು ಅಲಂಕರಿಸಿದ್ದವು ರತ್ನ ವಜೃಗಳಿಂದ, II
ರಾಮ ಸುಗ್ರೀವರ ಕಾಯರ್ಕ್ಕೆ ಬಂದ ಹನುಮI
ಲಂಕಾನಗರ ಸುತ್ತಿ ಅದರ ಸೌಂದರ್ಯ ಸವಿದನು, II
ಕಟ್ಟಡದಿಂದ ಕಟ್ಟಡಕ್ಕೆ ಇಣುಕುತ ಹನುಮI
ಕಂಡನು ವಿವಿಧ ವಿನ್ಯಾಸ, ಆಕಾರಗಳ ಕಟ್ಟಡಗಳನು, II
ತ್ರಿತಾಣ ಸ್ವರ ಸುಶ್ರವ್ಯ ಮಧುರ ಗೀತೆ ತುಂಬಿದI
ಸ್ವರ್ಗ-ಅಪ್ಸರೆಯಂತಯ ಸ್ತ್ರಿ-ಪ್ರೇಮ ಮದ, II
ನಡುಪಟ್ಟಿ ಗೆಜ್ಜೆ ನಿನಾದ, ಸೋಪಾನ-ಹೆಜ್ಜೆ ನಿನಾದI
ಚಪ್ಪಾಳೆ, ರಾಕ್ಷಸರ ಕೇಕೆ ಕೇಳಿ ಬಂದವು ಭವನಗಳಿಂದ, II
ರಾಕ್ಷಸರ ತಮಾಷೆ, ವೇದ ಪಠಣ, ಘರ್ಜನೆ, I
ರಾವಣನ ಗುಣಗಾನ ಸದ್ದುಗಳೂ ಕೇಳಿ ಬಂದವು ಹನುಮನಿಗೆ,II
ನಗರ ಮಧ್ಯೆವಲಯದ ರಾಜಮಾರ್ಗಗಳಲ್ಲಿ ಗಸ್ತಿ ತಿರುಗುವ,I
ಗುಪ್ತಚಾರ ರಾಕ್ಷಸರನ್ನು ಕಂಡ ಹನುಮ, II
ಕಂಡ ಹನುಮ ಜಟಾಧಾರಿ, ಬೋಳುತಲೆ,ಗೋ-ಚರ್ಮಧಾರಿ,I
ಕುಶಹುಲ್ಲು,ಅಗ್ನಿಕುಂಡಲ ಆಯುಧಧಾರಕ ರಾಕ್ಷಸರನು; II
ಹನುಮಗೆ, ಸುತ್ತಿಗೆ ಗುದ್ದಲಿ ಹಿಡಿದ, ಆಯುಧಗಳಧಾರಕ,I
ಒಕ್ಕಣಿನ, ಒಂದು-ಕಿವಿಯ, ಡೊಳ್ಳಹೊಟ್ಟೆಯ, II
ತೂಗು ಮೊಲೆಯ, ಭಯಾನಕ ಕೂರೂಪಿ, ವಕ್ರಬಾಯಿ, I
ಕಳ್ಳದೇಹ, ಧನುಷ್ಯಧಾರಿ, ಖಡ್ಗಧಾರಿ, II
ವಿಷ್ಮಯ ಕವಚಧಾರಿ ರಾಕ್ಷಸರು ಕಂಡರು, I
ಇತ್ತ ಎತ್ತರವಿಲ್ಲ ಅತ್ತ ಕುಳ್ಳವಿಲ್ಲ, ಅತಿ ಕಪ್ಪು ಅಲ್ಲ, II
ಅತಿ ಸುದ್ರೂಪಿ ಅಲ್ಲ,ವಿಚಿತ್ರರೂಪಗಳ ರಾಕ್ಷಸರು ಕಂಡರು, I
ಮಹಾಬಲಿ ಹನುಮ ಕಂಡನು: ಭಲ್ಲೆ ವ ಗಿಡ II
ಆಯುಧ ಹಿಡಿದ, ಸಿಡಿಲುಧಾರಕ, ಹೂಮಾಲೆ ಹಿಡಿದ, I
ಶ್ರೀಗಂಧಲೇಪಿತ, ಆಭರಣಾಲಂಕೃತ, ಬಲಶಾಲಿ, II
ವಿಚಿತ್ರ ಆಯುಧ-ಧಾರಕ ವಿಚಿತ್ರ ರೂಪಗಳ, I
ವಿಚಿತ್ರಭಂಗಿಯ ರಾಕ್ಷಸರನು, ಶತ ಸಾವಿರ ಸೇನೆ ಸಜ್ಜಾಗಿ ನಿಂತಿತ್ತು II
ನಗರ ಮಧ್ಯೆ ರಕ್ಷಣೆಗಾಗಿ ರಾವಣನ ಆಜ್ಞೆಯಂತೆ, I
ಬಂಡೆ-ಪರ್ವತ ಶಿಖರದಲಿ ಚಿನ್ನದ ದ್ವಾರಗಳ ರಾವಣನ ಅಂತಪುರII
ಕಂಡನು ಹನುಮ, ಸುತ್ತುವರೆದಿದ್ದವು ರಾವಣನ ಅಂತಪುರI
ಶ್ವೇತ-ಕಮಲ-ಹೂ ತುಂಬಿದ ಹೊಂಡಗಳು, II
ಉಪವನಗಳು,ನುಸುಳಿದನು ಹನುಮ ರಹಸ್ಯದಿI
ರಾವಣನ ಸ್ವರ್ಗ ಸಮ ಲಂಕೆಯ ಒಳಗಡೆ,II
ಕುದುರೆಗಳ ಹುಙ್ಕಾರ, ರಥ-ಆಭೂಷಣಗಳ ನಾದ I
ಸಜ್ಜಿತ ಕುದುರೆ ಆನೆಗಳು, ಅಲಂಕೃತ ವಿಮಾನ ದೃಶ್ಯ, II
ಪಶು ಪಕ್ಷಿಗಳ ಗಿಜಿಬಿಜಿ, ಸಹಸ್ರ ಬಲದಿI
ರಾಕ್ಷಸ-ಸೇನೆ ಕಾವಲು ಪ್ರವೇಶದ್ವಾರದಲಿ. II
ಸುಂದರ ಕಾಂಡ
ಲಂಕಾಳನ್ನು ಸೋಲಿಸಿ, ಅವಳಿಂದ ಶುಭಕೋರಿಕೆ ಪಡೆದು ಹನುಮಾನನು ಲಂಕಾನಗರವನ್ನು ಪ್ರವೇಶಿಸಿದ ಸಂದರ್ಭದಲ್ಲಿ ಆದಿಕವಿ ವಾಲ್ಮೀಕಿಯು ಲಂಕಾನಗರದ ಸೌಂದರ್ಯವನ್ನು ಬಣ್ಣಿಸುತ ಕೆಲವು ಪ್ರಮುಖ ಅಂಶಗಳನ್ನು ಉಲ್ಲೆಖಿಸಿರುವರು (1) ಲಂಕಾನಗರದ ಕಟ್ಟಡ ಮತ್ತು ಮನೆಗಳ ಬಾಹ್ಯ ಮತ್ತು ಆಂತರಿಕ ವಿನ್ಯಾಸ : ಕಮಲ, ಸ್ವಸ್ತಿಕ ವಿವಿಧ ವಿನ್ಯಾಸ, ಆಕಾರಗಳ ಕಟ್ಟಡದ ರಾಕ್ಷಸರ ಮನೆಗಳು ಮತ್ತು ಅವುಗಳ ಬಾಗಿಲ ಕಿಟಕಿಗಳು ರತ್ನ ವಜೃಗಳಿಂದ ಅಲಂಕರಿಸಿದ್ದ ವಿವರಣೆಯು ತ್ರೇತಾಯುಗದ ಶಿಲ್ಪಶಾಸ್ತ್ರ, ವಿನ್ಯಾಸಶಾಸ್ತ್ರಗಳ ಬಳಕೆ ಉಲ್ಲೇಖಗಳಾಗಿವೆ. (2) ಸಂಗೀತ, ಮನರಂಜನೆ ಕಲೆ: ಸುಶ್ರವ್ಯ ಮಧುರ ಗೀತೆಗಳು, ತುಂಬಿದ ಸ್ವರ್ಗ-ಅಪ್ಸರೆಯಂತಯ ಸ್ತ್ರಿ-ಪ್ರೇಮ ಮದ ದೃಶ್ಯಗಳು, ನಡುಪಟ್ಟಿ ಗೆಜ್ಜೆ ನಿನಾದ, ಸೋಪಾನ-ಹೆಜ್ಜೆಗಳ ಸದ್ದು ಚಪ್ಪಾಳೆ, ರಾಕ್ಷಸರ ಕೇಕೆ, ರಾಕ್ಷಸರ ತಮಾಷೆ ಮಾತುಗಳು, ಇತ್ಯಾದಿ ವರ್ಣನೆಯು ರಾಕ್ಷಸ ಜನಾಂಗವೂ ಸಂಗೀತ, ಮನರಂಜನೆ, ಕಲೆಗಳಲ್ಲೂ ಫಲಿತರಾಗಿದ್ದ ಉಲ್ಲೇಖಗಳು ರಾಕ್ಷಸ ಸಮುದಾಯದ ನಾಗರಿಕತೆ ಕುರುಹುಗಳಾಗಿವೆ. (3) ವೈದಿಕ ಪರಂಪರೆ ಆಚರಣೆ: ರಾಕ್ಷಸರಲ್ಲೂ ವೈದಿಕ ಪರಂಪರೆ ಆಚರಣೆಗಳಿದ್ದವು; ವೇದ ಪಠಣ ಉಚ್ಚಾರಗಳು, ಜಯಕಾರಗಳು, ರಾವಣನ (ನಾಯಕನ) ಗುಣಗಾನ ಇತ್ಯಾದಿ ಉಲ್ಲೇಖಗಳಿವೆ. (4) ರಾಕ್ಷಸರ ವಿಚಿತ್ರ ರೂಪಗಳು: ರಾಜಮಾರ್ಗಗಳಲ್ಲಿ ಗಸ್ತಿ ತಿರುಗುವ ಗುಪ್ತಚಾರ ರಾಕ್ಷಸರು, ಜಟಾಧಾರಿ, ಬೋಳುತಲೆ, ಗೋ-ಚರ್ಮಧಾರಿ, ಕುಶಹುಲ್ಲು ಮತ್ತು ಅಗ್ನಿಕುಂಡಲ ಆಯುಧಧಾರಕ ರಾಕ್ಷಸರು, ಸುತ್ತಿಗೆ ಗುದ್ದಲಿ ಹಿಡಿದ, ಆಯುಧಗಳಧಾರಕ, ಧನುಷ್ಯಧಾರಿ, ಖಡ್ಗಧಾರಿ, ವಿಷ್ಮಯ ಕವಚಧಾರಿ ರಾಕ್ಷಸರು, ಅತೀ ಎತ್ತರನೂ ಅಲ್ಲ ಅತೀ ಕುಳ್ಳನು ಅಲ್ಲ, ಅತೀ ಕಪ್ಪು ಅಲ್ಲ, ಅತೀ ಸುದ್ರೂಪಿ ಅಲ್ಲದ ರಾಕ್ಷಸರು, ಒಕ್ಕಣಿನ, ಒಂದು-ಕಿವಿಯ, ಡೊಳ್ಳಹೊಟ್ಟೆಯ, ತೂಗು ಮೊಲೆಯ, ಭಯಾನಕ ಕೂರೂಪಿ, ವಕ್ರಬಾಯಿ, ಕಳ್ಳದೇಹ ದ ರಾಕ್ಷಸರು, ಭಲ್ಲೆ ಮತ್ತು ಗಿಡ-ಆಯುಧ ಹಿಡಿದ, ಸಿಡಿಲುಧಾರಕ, ಹೂಮಾಲೆ ಹಿಡಿದ, ಶ್ರೀಗಂಧಲೇಪಿತ, ಆಭರಣಾಲಂಕೃತ, ಬಲಶಾಲಿ, ವಿಚಿತ್ರ ಆಯುಧ-ಧಾರಕ, ವಿಚಿತ್ರ ರೂಪಗಳ, ವಿಚಿತ್ರಭಂಗಿಯ ರಾಕ್ಷಸರು, ಹೀಗೆ ವಿಚಿತ್ರರೂಪಗಳ ರಾಕ್ಷಸರ ಉಲ್ಲೇಖಗಳಿವೆ.(5) ರಾವಣನ ಅಂತಪುರ ದೃಶ್ಯ: ಚಿನ್ನದ ದ್ವಾರಳ ರಾವಣನ ಅಂತಪುರವು ಬಂಡೆ-ಪರ್ವತ ಶಿಖರದಲಿತ್ತು; ರಾವಣನ ಅಂತಪುರವು ಶ್ವೇತ-ಕಮಲ-ಹೂ ತುಂಬಿದ ಹೊಂಡಗಳು, ಉಪವನಗಳಿಂದ ಸುತ್ತುವರೆದಿತ್ತು, ಸ್ವರ್ಗ ಸಮ ರಾವಣನ ಅಂತಪುರದ ಆವರಣ ಒಳಗಡೆ ಸಜ್ಜಿತ ಕುದುರೆ ಆನೆಗಳು, ಕುದುರೆಗಳ ಹುಙ್ಕಾರ, ರಥ-ಆಭೂಷಣಗಳ ಸದ್ದು , ಅಲಂಕೃತ ವಿಮಾನ ದೃಶ್ಯ, ಪಶು ಪಕ್ಷಿಗಳ ಗಿಜಿಬಿಜಿ, ಸಹಸ್ರ ಬಲದ ರಾಕ್ಷಸ-ಸೇನೆಯು ಪ್ರವೇಶದ್ವಾರದಲಿ ಕಾವಲು ನಿಂತ ದ್ವನಿ-ದೃಶ್ಯಗಳನ್ನು ಸಾನ್ಯವಾಗಿದ್ದನ್ನು ಉಲ್ಲೇಖಿಸಿರುವರು ಆದಿಕವಿ ವಾಲ್ಮೀಕಿ.
ಡಾ. ಅರ್ಜುನ ಯ. ಪಂಗಣ್ಣವರ ವಾಲ್ಮೀಕಿ ಸಾಹಿತ್ಯ ಚಿಂತಕ
