ಸುಂದರಕಾಂಡ‌ ರಾಮಾಯಣ ಭಾಗ-62

By admin


ರಾವಣ-ಅಂತಪುರ ಹತ್ತಿರ ಕಂಡನು ಹನುಮI
ಚಿನ್ನ ವಜ್ರ, ಹವಳ, ರತ್ನ ಲೇಪಿತ ಪುಷ್ಪಕವಿಮಾನ, II
ಭೂಲೋಕದಿಂದ ಸೂರ್ಯ-ದಾರಿಯಲಿ ಆಕಾಶಕ್ಕೆ
ಹಾರುವ ವಿಮಾನ, ವಿಶ್ವಕರ್ಮನ ಸೃಷ್ಠಿ, II
ಮಹಾ ಕೌಶಲ್ಯದಿಂದ ನಿರ್ಮಿಸಿದ, ಕೆತ್ತನೆI
ಕುಸರಿನ ಕೆಲಸಗಳ ಮಹಾ ಸೃಷ್ಠಿ, II
ವಿಶ್ವದ ಎಲ್ಲ ಭಾಗಗಳಿಂದ ತರಿಸಿದ ಬಿಡಿಭಾಗಳI
ಜಾಣ್ಮೆ ಜೋಡನೆ, ನಿಖರ ರಚನೆ ಸೃಷ್ಠಿ,II
ಪರ್ವತ-ಶಖರಗಳಂತೆ ತುದಿಗಳು, ಶರದ-ಚಂದ್ರನ ಶಾಂತತೆI
ಹೃದಯ-ಗಾಂಭೀರತೆ, ವೈಭವ ಹೆಚ್ಚಿಸದವು ವಿಮಾನಕ್ಕೆ, II
ಭಯಾನಕ ಕಣ್ಣು, ಗಾತ್ರದ ರಾಕ್ಷಸರುI
ಬೃಹತ್ ಪುಷ್ಪಕವಿಮಾನ ಚಾಲಕರು, II
ಹೂವಿನಗಿಂತ ಹೆಚ್ಚು ಸುಂದರ ಪುಷ್ಪಕ ವಿಮಾನI
ಕಂಡು ಹನುಮ ಮಂತ್ರಮುಗ್ಧನಾದ. II
ಸುಂದರ ಕಾಂಡ

ಹನುಮಾನ ಕಂಡಂತೆ ಆದಿಕವಿ ವಾಲ್ಮೀಕಿಯು ರಾವಣನ ಪುಷ್ಪಕ ವಿಮಾನದ ವರ್ಣನೆಯನ್ನು ಹೀಗೆ ಮಾಡಿರುವರು: ಹನುಮನು ರಾವಣ-ಅಂತಪುರ ಹತ್ತಿರ ಚಿನ್ನ ವಜ್ರ, ಹವಳ, ರತ್ನ ಲೇಪಿತ ಪುಷ್ಪಕವಿಮಾನವನ್ನು ಕಂಡನು; ಭೂಲೋಕದಿಂದ ಸೂರ್ಯ-ದಾರಿಯಲಿ ಆಕಾಶಕ್ಕೆ ಹಾರುವ ವಿಮಾನವನ್ನು ವಿಶ್ವಕರ್ಮನು ವಿಶ್ವದ ಎಲ್ಲ ಭಾಗಗಳಿಂದ ಬಿಡಿಭಾಗಳನ್ನು ತರಿಸಿ ಜಾಣ್ಮೆಯಿಂದ ಜೋಡನೆ ಮಾಡಿ, ನಿಖರವಾಗಿ ನಿರ್ಮಿಸಿ, ಅದರ ಮೇಲೆ ಕುಸರಿನ ಕೆತ್ತನೆ ಕೆಲಸಗಳನ್ನು ಮಹಾ ಕೌಶಲ್ಯದಿಂದ ಈ ಮಹಾಸೃಷ್ಠಿ ನಿರ್ಮಿಸಿದನು; ಪರ್ವತ-ಶಖರಗಳಂತೆ ಅದರ ತುದಿಗಳು, ಶರದ-ಚಂದ್ರನ ಶಾಂತತೆ, ಹೃದಯ-ಗಾಂಭೀರತೆ ನೋಟಗಳು ವಿಮಾನಕ್ಕೆ ವೈಭವ ಹೆಚ್ಚಿಸಿದ್ದವು; ಭಯಾನಕ ಕಣ್ಣು ಮತ್ತು ಗಾತ್ರದ ರಾಕ್ಷಸರು ಬೃಹತ್ ಪುಷ್ಪಕ ವಿಮಾನದ ಚಾಲಕರು, ಹೂವಿನಗಿಂತ ಹೆಚ್ಚು ಸುಂದರವಾದ ಪುಷ್ಪಕ ವಿಮಾನವನ್ನು ಕಂಡು ಹನುಮ ಮಂತ್ರಮುಗ್ಧನಾದನು. ಆದಿಕವಿಯು ಈ ಸಂದರ್ಭದಲ್ಲಿ ತ್ರೇತಾಯುಗದ ತಂತ್ರಜ್ಞಾನಜನ್ಯ ಮಹಾ ಅದ್ಭುತ ಆವಿಷ್ಕಾರ ಬೃಹತ್ ಕೃತ್ರಿಮ-ಹಕ್ಕಿ ‘ಪುಷ್ಪಕ ವಿಮಾನದ’ ನಿರ್ಮಾಣವನ್ನು ಅಂದಿನ ಖ್ಯಾತ ಅಭಿಯಂತರ ವಿಶ್ವಕರ್ಮನು ವಿಶ್ವದ ಎಲ್ಲ ಭಾಗಗಳಿಂದ ಬಿಡಿಭಾಗಗಳನ್ನು ತರಿಸಿ ಅದನ್ನು ಜೋಡಿಸಿ ಮಾಡಿದನೆಂಬ ವಿಚಾರವನ್ನು ಹಂಚಿಕೊಂಡಿರುವರು ಹಾಗು ಅದರ ಬಾಹ್ಯ ಸೌಂದರ್ಯ ಮತ್ತು ಚಾಲಕರ ಬಗ್ಗೆ ವಿವರಿಸಿರುವರು. ಕಲಿಯುಗದ ನಾವು ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಮುಂದು ವರೆದಿರುವೆವು ಮತ್ತು ಹಿಂದಿನ ಕಾಲದಲ್ಲಿ ಆ ಕಾಲದ ಜನರು ಅನಾಗರಿಕರು ಆಗಿದ್ದರು ಮತ್ತು ಅವರಿಗೆ ಜ್ಞಾನ ವಿಜ್ಞಾನದ ಗಂಧ ಗೊತ್ತಿದ್ದಿಲ್ಲ ಎಂಬ ಮಹಾ ಊಹೆಯಲ್ಲಿ ಇದ್ದೇವೆ, ಆದರೆ ಈ ಭೂಮಂಡಲದ ಮೇಲೆ ಅಗಣಿತ ನಾಗರಿಕತೆಗಳು ಹುಟ್ಟಿ, ಬೆಳೆದ, ಉಚ್ರಾಯ ಸ್ಥಿತಿ ತಲುಪಿ ನಾಶ ಹೊಂದಿರುತ್ತವೆ, ಅವರು ಬಳಿಸುವ ಜ್ಞಾನ ವಿಜ್ಞಾನ ನಮ್ಮಗಿಂತಲೂ ಮಿಗಿಲಾಗಿತ್ತು ಎಂಬ ಸತ್ಯಾಂಶವು ಅವರು ಬಿಟ್ಟಹೋದ ಕುರುಹುಗಳಿಂದ ತಿಳಿಯುತ್ತವೆ, ಉತ್ಖನನದಲ್ಲಿ ನಿತ್ಯ ಒಂದು ಗತ ನಾಗರಿಕತೆಯ ಕುರುಗಳು ಸಿಗುತ್ತಿವೆ, ಹೊಸ ಹೊಸ ವಿಷ್ಮಯಗಳನ್ನು ಅನಾವರಣಗೊಳಿಸುತ್ತಿವೆ; ಕೆಲವು ಬುದ್ಧಿಜೀವಿಗಳು ನಾವೇ ಶ್ರೇಷ್ಠವೆಂಬ ಮಾನಸಿಕ ಭ್ರಮೆಯಲ್ಲಿ ಪುರಾತನ ಕಾಲದ ಇತಿಹಾಸದ ಕುರುಹುಗಳಾದ ಲೋಕಗೀತೆ, ರಾಮಾಯಣ, ಮಹಾಭಾರತಗಳನ್ನು ಕಟ್ಟುಕಥೆಗಳೆಂದು ಮನರಂಜನೆ ಸಾಹಿತ್ಯದಲ್ಲಿಯೇ ಇರಿಸಕೊಂಡಿವೆ, ಅವುಗಳ ಪಾತ್ರಗಳ ಸುಳಿಯಲ್ಲಿ ಸಿಕ್ಕು ಇನ್ನೂ ಹೊರಬಂದಿಲ್ಲ, ಅದರೆ ಅಂತಹವರು ಆ ಮಹಾ ಕುರುಹುಗಳಲ್ಲಿ ಹುದುಗಿದ ಸತ್ಯಗಳನ್ನು ತಿಳಿಯದೇ ಕಸ್ತೂರಿ ಮೃಗದಂತೆ ವನಸುತ್ತುತ್ತಿರುವರು.
ಡಾ. ಅರ್ಜುನ ಯ. ಪಂಗಣ್ಣವರ ವಾಲ್ಮೀಕಿ ಸಾಹಿತ್ಯ ಚಿಂತಕ‌