ಸುಂದರಕಾಂಡ ರಾಮಾಯಣ ಭಾಗ-64

By admin


ಜೂಜಾಟದಲಿ ಮಹಾ ಜೂಜುಕೋರ I
ಜೂಜುಕೋರನನ್ನು ಸೋಲಿಸಿದಂತೆ ಕಂಡವು ಹನುಮಗೆ II
ಹೊಂಗಿರಣ ದ್ವೀಪಗಳು ಚಿಂತನೆಯಲ್ಲಿ ಸ್ತಬ್ಧವಿದಂತೆ;I
ಒಂದೆಡೆ ದ್ವೀಪಗಳು ಮತ್ತೊಂದೆಡೆ ಪ್ರತಿಬಿಂಬಿಸುವ II
ಅಲಂಕಾರಗಳು ಹೊಂಗಿರಣದಿಂದ ತುಂಬಿಸಿದ್ದವು ವಿಶಾಲ ಆವರಣ;I
ಬಣ್ಣ ಬಣ್ಣದ ಉಡಿಗೆ ತೊಡಿಗೆಗಳಲ್ಲಿ ಅಲಂಕೃತ II
ಸಹಸ್ರ ಸ್ತ್ರೀಯರು ಆಸನಗಳಲ್ಲಿ ಕುಳುತಿದ್ದನು ಕಂಡ ಹನುಮ, I
ಮದ್ಯದಮಲಿನಲಿ ಕುಣಿದು ತಣಿದು ದಣಿದು II
ಮಧ್ಯರಾತ್ರಿಯಲಿ ಗಾಢನಿದ್ರೆಗೆ ಜಾರಿದ್ದರು, ಕೇಳುತಿತ್ತು I
ನಿದ್ರಾ-ಮುದ್ರೆಯಲಿ ಹೊರಳಾಡುವ ಸ್ತ್ರೀಗಳ ಆಭರಣಗಳ ಸದ್ದುII
ಹಂಸ ಭ್ರಮರಗಳು ಕಮಲಗಳೊಂದಿಗೆ ಆಡಿದ ಸದ್ದಿನಂತೆ, I
ಕಂಡನು ಹನುಮ: ನಿದ್ರೆಯಲಿII
ತುಟಿಗಳಿಂದ ಹಲ್ಲು ಮುಚ್ಚಿಕೊಂಡ, I
ಕಣ್ಣು ಮುಚ್ಚಿದ ಸುಂದರ ಸ್ತ್ರೀ ಮುಖಗಳನು; ಹಗಲಿನಲ್ಲಿ ಅರಳಿದ ಸ್ತ್ರೀ-ಮುಖ II
ಕಮಲಗಳು ರಾತ್ರಿಯಲಿ ದಳದಿ ಮುಚ್ಚಿಕೊಂಡ ಕಮಲದಂತೆ ಕಂಡವು;I
ಮತ್ತಿನಲಿ ಭ್ರಮರಗಳು ಮುಖಪದ್ಮಿನಿ II
ಸುಂದರಿಯರ ತುಟಿಗಳನ್ನು ಮುತ್ತುತಿದ್ದವು ಪುನ: ಪುನಃ ;I
ಕಂಡರು ಸುಂದರಿಯರು ರಾವಣನ ಆವರಣದಲಿ II
ಶರತ-ರಾತ್ರಿಯ ನಕ್ಷತ್ರಗಳಂತೆ ಸ್ವಚ್ಚ ಆಕಾಶದಲಿ; I
ಸುಂದರ ಸ್ತ್ರೀಯರ ಮಧ್ಯೆ ರಾಕ್ಷಸ-ರಾಜ ಕಂಡನು ನಕ್ಷತ್ರಗಳ II
ಮಧ್ಯೆ ಹೊಳೆವ ಚಂದ್ರನಂತೆ; “ಆಕಾಶದಿ ಉದುರಿದ I
ಉಲ್ಕೆಗಳ ಗುಂಪೇ ಈ ಸ್ತ್ರೀಯರು?” ಹನುಮ ಪ್ರಶ್ನಿಸಿಕೊಂಡ; II
ಮತ್ತಿನಲ್ಲಿ ಕುಣಿದು ಉಡುಪು ಆಭರಣಗಳು ಅಸ್ತವ್ಯಸ್ತI
ಭಂಗಿಯ ಸ್ತ್ರೀಯರ ಪ್ರಜ್ಞೆ ಕಂಡಿತು ನಿದ್ರೆ ಕದ್ದಂತೆ; II
ಕದಡಿದ ಹಣೆ ಕುಂಕುಮ, ದೆಸೆ ತಪ್ಪಿದ ಕಾಲ್ಸರ, I
ಕೊರಳಿದಿ ಹೊರಬಿದ್ದ ಆಭರಣ ಪರಿವೇಯಿಲ್ಲದ ಸಂದರಿಯರು; II
ಕೊರಳಲಿ ರತ್ನ ಹಾರ, ಗೆಜ್ಜೆ ನಡುಪಟ್ಟಿಯ ಕೆಲವು ಸುಂದಿರಿಯರು I
ಕಂಡರು ಬಹಳ-ನಡೆದ ಹೆಣ್ಣು ಯುವ ಅಶ್ವದಂತೆ; II
ಕಿವಿ ಆಭರಣ ಧರಿಸಿದ ಕೆಲವು ಸುಂದರಿಯರುI
ಕಂಡರು ಆನೆ ಸಂಹರಿಸಿದ ಹೂ-ಬಳ್ಳಿಗಳಂತೆ; II
ಹೊಳೆಯುತಿದ್ದವು ಸ್ತನಗಳ ಮಧ್ಯೆ ಚಂದ್ರ ಬೆಳಕಿನಂತೆ I
ರತ್ನದ ಹಾರಗಳು ಹಂಸದಂತೆ ನಿದ್ರಿಸುವ ಸುಂದರಿಯರ; II
ಹಂಸ ಚಕ್ರವಾಕ ಪಕ್ಷಿಗಳ ತುಂಬಿದ ನದಿ ದಡದ ಮರಳು ರಾಶಿಯಂತೆ I
ಕಂಡವು ಪೃಷ್ಠಗಳು ಕೆಲ ಸುಂದರಿಯರ;II
ಸುಂದರಿಯರ ನಿದ್ರೆ- ಮಂದಸ್ಮಿತ ಕಂಡಿತುI
ನದಿ ದಡದಲಿಯ ಮೊಸಳೆಗಳ ನಡೆಯಂತೆ;II
ಕೆಲವು ಸುಂದರಿಯರ ಕೋಮಲಾಂಗ ವ ಸ್ತನಗಳುI
ಕಂಡವು ಶುಭ ಭೂಷಿತ ಆಭರಣಗಳಂತೆ; II
ಕೆಲ ಸುಂದರಿಯರ ಉಸಿರಾಟ ಗಾಳಿ I
ಇನ್ನು ಕೆಲ ಸುಂದರಿಯರ ಮೈಮೇಲಿನ ಉಡುಪು ಎತ್ತುತಿತ್ತು ಪದೇ ಪದೇ; II
ಇನ್ನು ಕೆಲವರ ಕುತ್ತಿಗೆಯ ಬಣ್ಣ ಬಣ್ಣದ ಉಡುಪುಗಳುI
ದ್ವಜದಂತೆ ಹಾರುತಿದ್ದವು ಉಸಿರು-ರಭಸಕ್ಕೆ; II
ಕೆಲ ಸುಂದರಿಯರು ಉಸಿರಾಟದಿI
ತೆಲಿ ಬರುತಿತ್ತು ಮದ್ಯ-ವಾಸನೆ ಪದೇ ಪದೇ; II
ಕೆಲ ರಾವಣ-ಪತ್ನಿಯರು ಮುತ್ತಾಡುತಿದ್ದರು ಪರಸ್ಫರI
ಭಾವಿಸಿ ಮತ್ತಿನಲ್ಲಿ ರಾವಣನ ಮುಖವೆಂದು; II
ಸುಂದರ ಕಾಂಡ

ರಾವಣನ ಅಂತಪುರ ರಾತ್ರಿ ರಹಸ್ಯದ ನೋಟಗಳನ್ನು ಆದಿಕವಿ ವಾಲ್ಮೀಕಿಯು ಹನುಮಾನ ಕಂಡಂತೆ ರಸವತ್ತಾಗಿ, ವಿಡಂಬನಾತ್ಮಕವಾಗಿ ಮುಂದೊರೆದು ಬಣ್ಣಿಸಿರುವರು: (1) ರಾವಣನ ಅಂತಪುರದ ರಾತ್ರಿ ನೋಟ: ಬಣ್ಣ ಬಣ್ಣದ ಉಡಿಗೆ ತೊಡಿಗೆಗಳಲ್ಲಿ ಅಲಂಕೃತ ಸಹಸ್ರ ಸ್ತ್ರೀಯರು ಅಂತಪುರದ ಆಸನಗಳಲ್ಲಿ ಕುಳುತಿದ್ದರು, ಕೆಲವು ಸ್ತ್ರೀಯರು ಮದ್ಯದಮಲಿನಲಿ ಕಣಿದು ತಣಿದು ದಣಿದು ಮಧ್ಯರಾತ್ರಿಯಲಿ ಗಾಢನಿದ್ರೆಗೆ ಜಾರಿದ್ದರು, ನಿದ್ರೆಯಲಿ ತುಟಿಗಳಿಂದ ಹಲ್ಲು ಮುಚ್ಚಿಕೊಂಡ, ಕಣ್ಣು ಮುಚ್ಚಿದ ಸುಂದರ ಸ್ತ್ರೀ ಮುಖಗಳು ಹಗಲಿನಲ್ಲಿ ಅರಳಿದ ಸ್ತ್ರೀ-ಮುಖ ಕಮಲಗಳು ರಾತ್ರಿಯಲಿ ದಳಗಳಿಂದ ಮುಚ್ಚಿಕೊಂಡ ಕಮಲದಂತೆ ಕಾಣುತಿದ್ದವು, ಮತ್ತಿನಲಿ ಭ್ರಮರಗಳು ಮುಖಪದ್ಮಿನಿ ಸುಂದರಿಯರ ತುಟಿಗಳನ್ನು ಪುನ: ಪುನಃ ಮುತ್ತುತಿದ್ದ ದೃಶ್ಯ ಸಾಮಾನ್ಯವಾಗಿತ್ತು; ರಾವಣನ ಆವರಣದಲಿ ಆ ಸುಂದರಿಯರು ಶರತ-ರಾತ್ರಿಯ ಸ್ವಚ್ಚ ಆಕಾಶದಲಿ ನಕ್ಷತ್ರಗಳಂತೆ ಕಾಣುತಿದ್ದರು, ಆ ಸುಂದರ ಸ್ತ್ರೀಯರ ಮಧ್ಯೆ ರಾಕ್ಷಸ-ರಾಜ ರಾವಣನು ನಕ್ಷತ್ರಗಳ ಮಧ್ಯೆ ಹೊಳೆವ ಚಂದ್ರನಂತೆ ಹನುಮನಿಗೆ ಕಂಡನು; ರಾವಣನ ಭವನ ಆವರಣದಲ್ಲಿ ನೆರೆದ ಸ್ತ್ರೀಯರನ್ನು ಕಂಡು “ಆಕಾಶದಿಂದ ಉದುರಿದ ಉಲ್ಕೆಗಳ ಗುಂಪೇ ಈ ಸ್ತ್ರೀಯರು?”ಎಂದು ಹನುಮನು ಸ್ವ-ಪ್ರಶ್ನಿಸಿಕೊಂಡನು. (2) ಸುಂದರ ಸ್ತ್ರೀಯರ ಅಸ್ತವ್ಯಸ್ತ ನೋಟ: ನಡುರಾತ್ರಿಯಲಿ ನಿದ್ರೆಯು ಮತ್ತಿನಲ್ಲಿ ಕುಣಿದು ಉಡುಪು ಆಭರಣಗಳು ಅಸ್ತವ್ಯಸ್ತಗೊಂಡ ಭಂಗಿಯಲ್ಲಿ ಸ್ತ್ರೀಯರ ಪ್ರಜ್ಞೆಯನ್ನು ಕದ್ದಂತೆ ಕಂಡಿತು; ಕದಡಿದ ಹಣೆ ಕುಂಕುಮ, ದಿಕ್ಕೆಟ್ಟು ಚಿಲ್ಲಾಪಿಲ್ಲಿಯಾದ ಕಾಲ-ಸರಗಳು, ಕೊರಳಿನಿಂದ ಹೊರಬಿದ್ದ ಆಭರಣಗಳು ಮೈ-ಪ್ರಜ್ಞೆಯಿಲ್ಲದೇ ನಿದ್ರಾವಸ್ಥೆಯಲಿದ್ದರು ಸಂದರಿಯರು; ಕೊರಳಲಿ ರತ್ನಗಳ ಹಾರ, ಗೆಜ್ಜೆ ನಡುಪಟ್ಟಿಯ ಕೆಲವು ಸುಂದಿರಿಯರು ಬಹಳ ನಡೆದು ದಣಿದ ಹೆಣ್ಣು ಯುವ ಅಶ್ವದಂತೆ ಕಂಡರು, ಕಿವಿ ಆಭರಣ ಧರಿಸಿದ ಕೆಲವು ಸುಂದರಿಯರು ಆನೆ ಸಂಹರಿಸಿದ ಹೂ-ಬಳ್ಳಿಗಳಂತೆ ಕಂಡರು; ನಿದ್ರಾ-ಮುದ್ರೆಯಲಿ ಹೊರಳಾಡುವ ಸ್ತ್ರೀಗಳ ಆಭರಣಗಳ ಸದ್ದು ಆಗಾಗ ಹಂಸ ಭ್ರಮರಗಳು ಕಮಲಗಳೊಂದಿಗೆ ಆಡಿದ ಸದ್ದಿನಂತೆ ಕೇಳುತಿತ್ತು; ಹಂಸದಂತೆ ನಿದ್ರಿಸುವ ಸುಂದರಿಯರ ಸ್ತನಗಳ ಮಧ್ಯೆ ಚಂದ್ರ ಬೆಳಕಿನಂತೆ ರತ್ನದ ಹಾರಗಳು ಹೊಳೆಯುತಿದ್ದವು; ಕೆಲ ಸುಂದರಿಯರ ಪೃಷ್ಠಗಳು ಹಂಸ ಚಕ್ರವಾಕ ಪಕ್ಷಿಗಳ ತುಂಬಿದ ನದಿ ದಡದ ಮರಳು ರಾಶಿಯಂತೆ ಕಂಡವು; ಸುಂದರಿಯರ ನಿದ್ರೆ- ಮಂದಸ್ಮಿತವು ನದಿ ದಡದಲಿಯ ಮೊಸಳೆಗಳ ನಡೆಯಂತೆ ಕಂಡಿತು; ಕೆಲವು ಸುಂದರಿಯರ ಕೋಮಲಾಂಗ ಮತ್ತು ಸ್ತನಗಳು ಶುಭ ಭೂಷಿತ ಆಭರಣಗಳಂತೆ ಕಂಡವು; ಕೆಲ ಸುಂದರಿಯರ ಉಸಿರಾಟ ಗಾಳಿಯಿಂದ ಇನ್ನು ಕೆಲ ಸುಂದರಿಯರ ಮೈಮೇಲಿನ ಉಡುಪು ಪದೇ ಪದೇ ಎತ್ತುವ ದೃಶ್ಯ ಕಂಡರೆ ಉಸಿರು-ರಭಸಕ್ಕೆ ಇನ್ನು ಕೆಲವರ ಕುತ್ತಿಗೆಯ ಬಣ್ಣ ಬಣ್ಣದ ಉಡುಪುಗಳು ದ್ವಜದಂತೆ ಹಾರುತಿದ್ದ ದೃಶ್ಯ ಕಂಡಿತು; ಕೆಲ ಸುಂದರಿಯರು ಉಸಿರಾಟದಿಂದ ಮದ್ಯ-ವಾಸನೆ ಪದೇ ಪದೇ ತೆಲಿ ಬರುತಿತ್ತು; ಅದೇ ಸಂದರ್ಭದಲ್ಲಿ ಕೆಲವು ರಾವಣ-ಪತ್ನಿಯರು ಮತ್ತಿನಲ್ಲಿ ರಾವಣನ ಮುಖವೆಂದು ಭಾವಿಸಿ ಪರಸ್ಫರರನ್ನು ಮುತ್ತಾಡುತಿದ್ದರು; ಕೆಲವು ಸುಂದರಿಯರು ತಮ್ಮ ತೋಳ್ದಿಂಬಳ ಮೇಲೆ ತಲೆ ಇಟ್ಟು ನಿದ್ರಿಸುತಿದ್ದರು, ಇನ್ನು ಕೆಲವು ಸುಂದರಿಯರು ಪರಸ್ಪರರ ತೋಳ, ಎದೆ, ತೊಡೆಗಳ ಮೇಲೆ ತಲೆಯಿಟ್ಟು ನಿದ್ರಿಸುತಿದ್ದರು; ಕೆಲವು ಸ್ತ್ರೀಯರು ಕಾಮಾತುರದಲಿ ಪರಸ್ಪರರ ತೋಳ, ಎದೆ, ತೊಡೆ, ನಡ, ಬೆನ್ನುಗಳನ್ನು ಅಪ್ಪಿಕೊಳ್ಳುತಿದ್ದರು. ಅದಿಕವಿ ವಾಲ್ಮೀಕಿಯು ರಾವಣನ ಅಂತಪುರದ ವಿಶಾಲ ಆವರಣದಲ್ಲಿ ಒಂದೆಡೆ ದ್ವೀಪಗಳು ಮತ್ತೊಂದೆಡೆ ಪ್ರತಿಬಿಂಬಿಸುವ ಅಲಂಕಾರಗಳು ಹೊಂಗಿರಣ, ಅವು ಜೂಜಾಟದಲಿ ಮಹಾ ಜೂಜುಕೋರನು ಜೂಜುಕೋರರನ್ನು ಸೋಲಿಸಿದಂತೆ ಹೊಂಗಿರಣ ದ್ವೀಪಗಳು ಚಿಂತನೆಯಲ್ಲಿ ಸ್ತಬ್ಧವಿದಂತೆ ಹನುಮಗೆ ಕಂಡನ್ನು ಕಾವ್ಯಾಲಂಕಾರದಲ್ಲಿ ಬಣ್ಣಿಸಿದ್ದು ಅದ್ಭುತ; ಅದೇ ಸಂದರ್ಭದಲ್ಲಿ ರಾವಣನ ಪತ್ನಿಯು ವಿಭಿನ್ನ ಭಂಗಿಗಳಲ್ಲಿ ಮಲಗಿದ ದೃಶ್ಯ ಮತ್ತು ಕೆಲವು ರಾವಣ-ಪತ್ನಿಯರು ಮತ್ತಿನಲ್ಲಿ ರಾವಣನ ಮುಖವೆಂದು ಭಾವಿಸಿ ಪರಸ್ಫರರನ್ನು ಮುತ್ತಾಡುತಿದ್ದ ದೃಶ್ಯಗಳನ್ನು ಆದಿಕವಿಯು ತಮ್ಮ ಕಾವ್ಯಚಲನಚಿತ್ರದಲ್ಲಿ ಬಂಧಿಸಿರುವರು.
.ಡಾ. ಅರ್ಜುನ ಯ. ಪಂಗಣ್ಣವರ ವಾಲ್ಮೀಕಿ ಸಾಹಿತ್ಯ ಚಿಂತಕ