ಸುಂದರಕಾಂಡ ರಾಮಾಯಣ ಭಾಗ-65

By admin


ಕೆಲ ಸುಂದರಿಯರು ನಿದ್ರಿಸುತಿದ್ದರುI
ತಮ್ಮ ತೋಳ್ದಿಂಬಳ ಮೇಲೆ ತಲೆ ಇಟ್ಟು; II
ಕೆಲ ಸುಂದರಿಯರು ನಿದ್ರಿಸುತಿದ್ದರು ಪರಸ್ಪರರI
ತೋಳ, ಎದೆ, ತೊಡೆಗಳ ಮೇಲೆ ತಲೆಯಿಟ್ಟು;II
ಕಾಮಾತುರದಲಿ ಅಪ್ಪಿಕೊಳ್ಳುತಿದ್ದರು ಪರಸ್ಪರರI
ತೋಳ, ಎದೆ, ತೊಡೆ, ನಡ, ಬೆನ್ನುಗಳನ್ನು ಸ್ತ್ರೀಯರು; II
ಕಂಡನು ಹನುಮ ನೃತ್ಯ ವಾದ್ಯ ನಿಪುಣತೆಯI
ರಾವಣನ ಪತ್ನಿಯರನು ಆವರಣದಲಿ, II
ಬಳಕು ಸೊಂಟದ ಸುಂದರ ಪತ್ನಿಯಿಂದI
ಕಾಮತೃಷೆ ತಣಿಸಿಕೊಳ್ಳುತಿದ್ದ ರಾವಣ, ಮೊದಲು, II
ಬಳಕು ನಡದ ನೃತ್ಯ ನಿಪುಣಿI
ದಣಿದು ನೃತ್ಯ ಭಂಗಿಯಲಿ ಮಲಗಿದ್ದಳು ಸುಂದರಿ, II
ಕಿತ್ತೆಸೆದ ಕಮಲದಂತೆ ಹೊಳೆವ ಸುಂದರಿI
ಮಲಗಿದ್ದಳು ತನ್ನ ವೀಣೆ ಅಪ್ಪಕೊಂಡು, II
ಓರ್ವ ಕಪ್ಪು-ಕಣ್ಣಿನ ಸುಂದರಿ ಮಗುವನ್ನು ಅಪ್ಪಿದಂತೆI
ಮದ್ದಳೆ-ವಾದ್ಯ ಅಪ್ಪಿಕೊಂಡು ಮಲಗಿದ್ದಳು,II
ಒರ್ವ ಸುಂದರ ವಕ್ಷ-ಸುಂದರಿ ಪ್ರತಮನ ಅಪ್ಪಿಕೊಂಡಂತೆI
ಪತಹ-ವಾದ್ಯ ಎದೆಗೆ ಬಿಗಿದಪ್ಪಿ ಮಲಗಿದ್ದಳು,II
ರಹಸ್ಯದಲಿ ಕಾಮತೃಷೆ ತಣಿಸುವ ಕಮಲಾಕ್ಷಿ ಸುಂದರಿI
ಕೊಳಲನ್ನು ಅಪ್ಪಿಕೊಂಡು ಮಲಗಿದ್ದಳು, II
ಮಾದಕ ಕಣ್ಣಿನ ಒರ್ವ ಚಲುವೆ ಅಂಗಾಂಗಗಳಿಂದI
ಮೃದಂಗವನು ಅಪ್ಪಿಕೊಂಡು ಮಲಗಿದ್ದಳು, II
ಕಾಮಕ್ಕೆ ದಣಿದು ಒರ್ವ ಬಳಕು ನಡ ಚಲುವೆI
ಪದಮ-ವಾದ್ಯವನು ಬಾಹುಗಳಲಿ ಅಪ್ಪಿ ಮಲಗಿದ್ದಳು, II
ಪತಿ ವ ಮಗುವನ್ನು ಅಪ್ಪಿದಂತೆ ಡಿಂಡಿಮ-ವಾದ್ಯI
ಅಪ್ಪಿಕೊಂಡು ಮಲಗಿದ್ದಳು ಮತ್ತೊರ್ವ ಚಲುವೆ, II
ಆಡಂಬರ-ವಾದ್ಯ ಅಪ್ಪಿ ಕಾಮ-ತೃಷೆ ಆಹ್ವಾನ ಸೂಚಕ ಭುಜI
ಭಂಗಿಯಲಿ ಮಲಗಿದ್ದಳು ಇನ್ನೊರ್ವ ಚಲುವೆ, II
ಸುಂದರಿಯರ ಪರಸ್ಪರ ಕೊರಳ-ಮಾಲೆಗಳ ಗಂಟುಗಳುI
ಷಟ್ಪದಿ ಮತ್ತ ದಂತೆ ಶೋಭಿಸುತಿದ್ದವು; II
ಸುಂದರಿಯರ ಕೊರಳ, ತೋಳ, ತಲೆಗೂದಲು ಹಾರಗಳು,I
ವೈಶಾಕದ ವಿಭನ್ನ ಹೂಗಳ ಕಾಡಿಂತೆ ಕಂಡವು;II
ಧರಸಿದ್ದರು ಸುಂದರಿಯರು ವರ್ಣನಾತೀತ ಉಡುಪು, I
ಆಭರಣ ವ ಹೂ ಮಾಲೆಗಳ; ಹೊಳಪಿನ ಪತ್ನಿಯರ ಮಧ್ಯೆ, II
ದೀಪದ ಹೊಂಬೆಳಕಿನಲಿ ಕಾಮಾನಂದ ಪಡುತಿದ್ದ I
ರಾವಣ ನಿತ್ಯ; ಮುನಿ, ಬ್ರಾಹ್ಮಣ, ಗಂಧ್ರವ, II
ರಾಕ್ಷಸರ ಸುಂದರ ಪತ್ನಿ, ಅವಿವಾಹಿತ ಯುವತಿಯರು I
ಬಲಿಯಾಗಿದ್ದರು ಕಾಮತೃಷೆಗೆ ರಾವಣನ; II
ರಾವಣ ತಂದಿದ್ದ ಈ ಎಲ್ಲ ಸುಂದರ ಸ್ತ್ರೀಯರನು I
ಯುದ್ಧದಲಿ ಗೆದ್ದು, ಅಪಹರಿಸಿ, ಬಲವಂತವಾಗಿ ತನ್ನ ಕಾಮತೃಷೆಗಾಗಿ; II
ಅಸಹಾಯಕ ಸುಂದರಿಯರು ವಿರೋಧಿಸದೇ ಅರ್ಪಿಸಿದ್ದರುI
ರಾವಣನಿಗೆ ತಮ್ಮನ್ನ ತಾವೇ, ಅವನ ಕಾಮಾಗ್ನಿಗೆ;II
ಎಲ್ಲರೂ ಅಪಹರಿತ ಸ್ತ್ರೀಯರು ಉತ್ತಮ ಕುಲದವರು,I
ರಾಜ ಮುನಿಗಳ ಪತ್ನಿಗಳು ವ ಮಕ್ಕಳು, ಬುದ್ಧಿವಂತರು; II
“ ಈ ಸ್ತ್ರೀಯರ ಪಾಡು ನೋಡಲು, ಸೀತೆಯನು ರಾಮನ ಪಾಡಿಗೆ ಬಿಟ್ಟದ್ದು I
ರಾವಣನಿಗೆ ಒಳ್ಳೆಯದು”ನೆಂದ ಹನುಮ; II
ಸದ್ಗುಣಿ ಸೀತೆ ಕಾಣದೆ ದುಃಖಿಸಿದ ಹನುಮI
ಹರುಷನಾದ ಸೀತೆಯೊಂದಿಗೆ ಅಹಿತವಾಗದನ್ನು ತಿಳಿದು. II
ಸುಂದರ ಕಾಂಡ

ರಾವಣನ ಅಂತಪುರ ರಾತ್ರಿ ರಹಸ್ಯದ ನೋಟಗಳನ್ನು ಆದಿಕವಿ ವಾಲ್ಮೀಕಿಯು ಹನುಮಾನ ಕಂಡಂತೆ ರಸವತ್ತಾಗಿ, ವಿಡಂಬನಾತ್ಮಕವಾಗಿ ಮುಂದೊರೆದು ಬಣ್ಣಿಸಿರುವರು: (1) ರಾವಣನ ಅತೃಪ್ತ ಲೈಂಗಿಕ ತೃಷೆ: ರಾವಣನು ಮೊದಲು ಬಳಕು ಸೊಂಟದ ಸುಂದರ ಪತ್ನಿಯಿಂದ ಕಾಮತೃಷೆ ತಣಿಸಿಕೊಳ್ಳುತಿದ್ದನು; ರಾವಣನು ನಿತ್ಯ ಹೊಳಪಿನ ಪತ್ನಿಯರ ಮಧ್ಯೆ, ದೀಪದ ಹೊಂಬೆಳಕಿನಲಿ ಲೈಂಗಿಕ ಆನಂದ ಪಡೆಯುತಿದ್ದನು; ರಾವಣನ ಲೈಂಗಿಕ ತೃಷೆ ತಿರಿಸಿದ ನಂತರ ನೃತ್ಯ ವಾದ್ಯ ನಿಪುಣತೆಯ ರಾವಣನ ಪತ್ನಿಯರು ಭವನ ಆವರಣದಲಿ ನಿದ್ರಾವಸ್ಥೆ ಅಸ್ತವ್ಯಸ್ತದಲಿ ಕಂಡರು: ಬಳಕು ನಡದ ನೃತ್ಯ ನಿಪುಣಿ ದಣಿದು ನೃತ್ಯ ಭಂಗಿಯಲಿ ಸುಂದರಿಯೊಬ್ಬಳು ಮಲಗಿದ್ದಳು; ಕಿತ್ತೆಸೆದ ಕಮಲದಂತೆ ಹೊಳೆವ ಮತ್ತೊಬ್ಬ ಸುಂದರಿ ತನ್ನ ವೀಣೆ ಅಪ್ಪಕೊಂಡು ಮಲಗಿದ್ದಳು; ಓರ್ವ ಕಪ್ಪು-ಕಣ್ಣಿನ ಸುಂದರಿ ಮಗುವನ್ನು ಅಪ್ಪಿದಂತೆ ಮದ್ದಳೆ ವಾದ್ಯ ಅಪ್ಪಿಕೊಂಡು ಮಲಗಿದ್ದಳು; ಒರ್ವ ಸುಂದರ ವಕ್ಷಗಳ ಸುಂದರಿ ಪ್ರತಮನ ಅಪ್ಪಿಕೊಂಡಂತೆ ಪತಹ-ವಾದ್ಯ ಎದೆಗೆ ಬಿಗಿದಪ್ಪಿ ಮಲಗಿದ್ದಳು; ರಹಸ್ಯದಲಿ ಕಾಮತೃಷೆ ತಣಿಸುವ ಕಮಲಾಕ್ಷಿ ಸುಂದರಿ ಕೊಳಲನ್ನು ಅಪ್ಪಿಕೊಂಡು ಮಲಗಿದ್ದಳು; ಮಾದಕ ಕಣ್ಣಿನ ಒರ್ವ ಚಲುವೆ ಅಂಗಾಂಗಗಳಿಂದ ಮೃದಂಗವನು ಅಪ್ಪಿಕೊಂಡು ಮಲಗಿದ್ದಳು; ಕಾಮಕ್ಕೆ ದಣಿದು ಒರ್ವ ಬಳಕು ನಡ ಚಲುವೆ ಪದಮ-ವಾದ್ಯವನು ಬಾಹುಗಳಲಿ ಅಪ್ಪಿಕೊಂಡು ಮಲಗಿದ್ದಳು; ಮತ್ತೊರ್ವ ಚಲುವೆಯು ಪತಿ ಮತ್ತು ಮಗುವನ್ನು ಅಪ್ಪಿದಂತೆ ಡಿಂಡಿಮ-ವಾದ್ಯವನ್ನು ಅಪ್ಪಿಕೊಂಡು ಮಲಗಿದ್ದಳು; ಇನ್ನೊರ್ವ ಚಲುವೆ ಆಡಂಬರ-ವಾದ್ಯ ಅಪ್ಪಿಕೊಂಡು ಕಾಮ-ತೃಷೆ ತಿರಿಸಿಕೊಳ್ಳಲು ಆಹ್ವಾನ ಸೂಚಕ ಭುಜ ಭಂಗಿಯಲಿ ಮಲಗಿದ್ದಳು; ಸುಂದರಿಯರ ಕೊರಳ, ತೋಳ, ತಲೆಗೂದಲು, ಹಾರಗಳು, ವೈಶಾಕ ಮಾಸದ ವಿಭನ್ನ ಹೂಗಳ ಕಾಡಿನಂತೆ ಕಂಡವು; ಸುಂದರಿಯರು ವರ್ಣನಾತೀತ ಉಡುಪು, ಆಭರಣ ಮತ್ತು ಹೂ ಮಾಲೆಗಳನ್ನು ಧರಸಿದ್ದರು. (2) ರಾವಣನ ಲೈಂಗಿಕ ದೌರ್ಜನ್ಯ: ಮುನಿ, ಬ್ರಾಹ್ಮಣ, ಗಂಧ್ರವ, ರಾಕ್ಷಸರ ಸುಂದರ ಪತ್ನಿಯರು ಮತ್ತು ಅವಿವಾಹಿತ ಯುವತಿಯರು ರಾವಣನ ಕಾಮತೃಷೆಗೆ ಬಲಿಯಾಗಿದ್ದರು; ರಾವಣ ಈ ಎಲ್ಲ ಸುಂದರ ಸ್ತ್ರೀಯರನು ಯುದ್ಧದಲಿ ಗೆದ್ದು, ಅಪಹರಿಸಿ, ಬಲವಂತವಾಗಿ ತನ್ನ ಲೈಂಗಿಕ ಸುಖಕ್ಕಾಗಿ ತಂದಿದ್ದನು; ಅಸಹಾಯಕ ಸುಂದರಿಯರು ವಿರೋಧಿಸದೇ ರಾವಣನಿಗೆ ತಮ್ಮನ್ನ ತಾವೇ ಅವನ ಕಾಮಾಗ್ನಿಗೆ ಅರ್ಪಿಸಿದ್ದರು, ಅವರೆಲ್ಲರೂ ನೃತ್ಯ, ವಾದ್ಯ, ವಿವಿಧ ವದ್ಯೆ ಕಲೆಯಲ್ಲಿ ನಿಪುಣರಾಗಿದ್ದರು; ಇಂತಹ ರಾವಣನ ಅರಮನೆ ಆವರಣದಲ್ಲಿ ಸದ್ಗುಣಿ ಸೀತೆ ಕಾಣದೆ ದುಃಖಿಸಿದ ಹನುಮನು “ ಈ ಸ್ತ್ರೀಯರ ಪಾಡು ನೋಡಲು, ಸೀತೆಯನು ರಾಮನ ಪಾಡಿಗೆ ಬಿಟ್ಟದ್ದು ರಾವಣನಿಗೆ ಒಳ್ಳೆಯದು” ಎಂದು ಮನದಲ್ಲಿ ನುಡಿದ ಹನುಮನು ಸೀತೆಯೊಂದಿಗೆ ಅಹಿತವಾಗದನ್ನು ತಿಳಿದು ಸಂತೋಷಪಟ್ಟ ಪ್ರಸಂಗವು ರಾವಣನ ಸ್ತ್ರೀಶೋಷಣೆ ಸ್ವಭಾವಕ್ಕೆ ಕೈಗನ್ನಡಿಯಾಗಿದೆ. ಕಾವ್ಯಾಲಂಕಾರಗಳ ಮಧ್ಯೆ ಅಲ್ಲಲ್ಲಿ ತಿಳಿಹಾಸ್ಯವನ್ನು ಉಣಬಡಿಸಿರುವರು ಆದಿಕವಿ ವಾಲ್ಮೀಕಿ.
ಡಾ. ಅರ್ಜುನ ಯ. ಪಂಗಣ್ಣವರ ವಾಲ್ಮೀಕಿ ಸಾಹಿತ್ಯ ಚಿಂತಕ‌