
ಕಂಡನು ಹನುಮ ಸ್ಪಟಿಕ ರತ್ನ ಅಲಂಕೃತ ಮಂಚದI
ವಿಶೇಷ ಕೊಠಡಿ ರಾವಣ-ಅಂತಪುರ ಆವರಣದ, II
ಹಸ್ತದಂತ ಚಿನ್ನದ ಮಂಚ ವಜ್ರ ವೈಢೂರ್ಯ ಭೂಷಿತ, I
ಚಂದ್ರನ ಹೊಲುವ ಅಲಂಕೃತ ಛತ್ರ ಕಂಡವು ಕೊಠಡಿಯಲಿ,II
ಸುಗಂಧ ಧೂಪ ಪರಿಮಳ ತುಂಬಿತ್ತು I
ಕೊಠಡಿಯಲಿ ಚಾಮರ ಬೀಸುತ ನಿಂತಿದ್ದರು ಸ್ತ್ರೀಯರು ನಾಲ್ಕೂ ದೆಸೆಯಲಿ, II
ಅತ್ಯುತ್ತಮ ಕುರಿ-ಚರ್ಮದ ಹಾಸಿಗೆ,I
ಹೂ ಮಾಲೆಗಳಿಂದ ಕಂಗೊಳಿಸಿತು ಮಂಚ, ಅಜಾನುಬಾಹುII
ಕಿವಿ-ಉಂಗುರ, ಚಿನ್ನ-ಉಡುಪು ಧರಿಸಿ ಮಂಚದ ಮೇಲೆ ಮಲಗಿದ I
ಕೆಂಗಣ್ಣಿನ ರಾವಣನ ಕಂಡನು,II
ಮೋಡಗಾತ್ರದ ರಾವಣ ರಕ್ತಚಂದನ ಲೇಪನದಲಿI
ಸೂರ್ಯಾಸ್ತದ ಕೆಂಪು ಮೋಡದಂತೆ ಕಂಡನು, II
ಒಡಿವೆ ಆಭರಣಗಳ ಮಧ್ಯೆ ಮಲಗಿದ ರಾಮಣ ಕಂಡನು I
ಗಿಡ ಮರಗಳ ಮಧ್ಯೆ ಮಲಗಿದಂತೆ ಮಂದಾರ-ಪರ್ವತ, II
ಅತೀ ಪ್ರೀಯನು ರಾಕ್ಷಸ ಯುವತಿಯರಿಗೆ ರಾವಣ,I
ನಿತ್ಯರಾತ್ರಿ ಸುಖ ಪಡೆಯುತಿದ್ದರು ರಾವಣನ;II
ಮತ್ತದಲಿ ಮಹಾ ಶೂರ ರಾಕ್ಷಸ ರಾಜ ಮಲಗಿದ್ದನುI
ಐಶ್ವರ್ಯ ಮಂಚದಲಿ; ಹೆಡೆ ಸರ್ಪದಂತೆ ವೀರ ವಾನರ II
ಬಳಿ ಬಂದನು ಭಯಾನಕ ರಾವಣನ, ಮಹಾಸರೋವರದಲಿI
ನೀರಿಗೆ ಬಿದ್ದ ಸುಗಂಧಿತ ಆನೆಯಂತೆ ಕಂಡ ರಾವಣ II
ಶಯನದಲಿ, ದೇಹಕ್ಕೆ ತಕ್ಕಂತೆ ಬಲಿತ ಕೈಗಳು ಸಬಲ ಭುಜ
ಉತ್ತಮ ಮೊಳಕಾಲು,ಹೆಬ್ಬೆಟ್ಟು, ಬೆರಳು ವ ಹಸ್ತಗಳು, II
ಯಕ್ಷ ಗಂಧರ್ವ ನಾಗ ದೇವ ದಾನವ ಸ್ತ್ರೀಯುರು ಲೇಪಿಸಿದI
ಮೊಲ-ರಕ್ತ ವರ್ಣ ಶ್ರೀಗಂಧ, ಪರಿಮಳ-ದ್ರವ್ಯ ಸವರಿತ್ತು II
ಮೈತುಂಬ, ಕಂಡವು ರಾವಣನ ಭುಜಗಳು I
ಮಂದಾರದ ಅವಳಿ ಶಿಖರಗಳಂತೆ, ಕೈಗಳು ಮಲಗಿದ ಸರ್ಪಗಳಂತೆ, II
ರಾವಣನ ಉಸಿರಿನಿಂದ ನಾಗಕೇಸರಿ ಹೂ ಪರಿಮಳI
ಅನ್ನ-ಸುವಾಸನೆ, ಮದ್ಯ-ವಾಸನೆಗಳು ಸೂಸುತಿದ್ದವು, II
ವೀಕ್ಷಿಸಿದ ಹನುಮ ಸುತ್ತುಮುತ್ತI
ಮತ್ತೊಂದು ಶಯನ ಇರಬಹುದೆಂದು, II
ಕಂಡನು ಹನುಮ ರಾವಣನ ಪಾದಬಳಿI
ರಾವಣನ ಪ್ರೀಯ ಧರ್ಮ ಪತ್ನಿ, II
ಬಿದಿಗೆ ಸರಿದ ವಜ್ರ ರತ್ನ ಖಚಿತ ಮುಕುಟ I
ಮುಖ-ಅಂದ ಹೆಚ್ಚಿಸಿದ ಕಿವಿಯೋಲೆಗಳು, II
ಎದೆಯ ಮಧ್ಯೆ ಹೊಳೆವ ಚಿನ್ನ ವಜೃ ಹಾರಗಳು,I
ಬಿಳೆ ರೇಷ್ಮೆ-ಸೀರೆ ಉಡುಗೆ, ಮೈ ಚಂದನ ಲೇಪಿತ, II
ಕೆಂಪು ಕಣ್ಣುಗಳು, ಬಗಿದ ಎದೆಕಟ್ಟು,I
ಹಾವಿನಂತೆ ಬುಸಗುಡುವ ಉಸಿರಾಟ,II
ನಾಲ್ಕೂ ದೆಸೆ ದೀಪಗಳ ಹೊಂಗಿರಣದಲಿI
ಕಂಡಳು ಮಲಗಿದ ಆನೆಯಂತೆ ಗಂಗಾನದಿಯಲಿ,II
ಪ್ರತ್ಯೇಕ ಪವಿತ್ರ ಶಯನದಲಿ ಮಲಗಿದ ಸುಂದರ ಸ್ತ್ರೀI
ರಾವಣನ ಧರ್ಮ ಪತ್ನಿ ಮಂಡೋದರಿ, II
ಅವಳೇ ಸೀತೆಯೆಂದು ಭಾವಿಸಿದ ಹನುಮI
ಕಂಡು ಮಂಡೋದರಿಯ ಯವ್ವನ ವ ಸಂಪನ್ನತೆ,II
ತನ್ನ ಬಾಲ ಮುತ್ತುತ, ಕಂಬಗಳೇರುತ,I
ಕುಣಿದಾಡಿದನು ಸಂತೋಷದಿ ಹನುಮ. II
ಸುಂದರ ಕಾಂಡ
ರಾವಣನ ಅಂತಪುರದಲ್ಲಿ ಸೀತೆಯನ್ನು ಹುಡುಕುತ ಹನುಮಾನನು ಮಂಡೋದರಿ ಅಂತಪುರ ಪ್ರವೇಶಿಸಿದನ್ನು ಮತ್ತು ಅವಳ ಸೌಂದರ್ಯವನ್ನು ಆದಿಕವಿ ವಾಲ್ಮೀಕಿಯು ಹೀಗೆ ಬಣ್ಣಿಸಿರುವರು ” ರಾವಣ-ಅಂತಪುರ ಆವರಣದಲ್ಲಿ ಸ್ಪಟಿಕ ರತ್ನಗಳ ಅಲಂಕೃತ ಮಂಚದ ವಿಶೇಷ ಕೊಠಡಿಯನ್ನು ಹನುಮ ಕಂಡನು, ಆ ಕೊಠಡಿಯಲಿ ಹಸ್ತದಂತ ಚಿನ್ನದ ಮಂಚ, ವಜ್ರ ವೈಢೂರ್ಯ ಭೂಷಿತ ಚಂದ್ರನ ಹೊಲುವ ಅಲಂಕೃತ ಛತ್ರಗಳು ಕಂಡವು, ಕೊಠಡಿಯಲಿ ಸುಗಂಧ ಧೂಪ ಪರಿಮಳ ತುಂಬಿತ್ತು ಮತ್ತು ಸ್ತ್ರೀಯರು ನಾಲ್ಕೂ ದೆಸೆಯಲಿ ಚಾಮರ ಬೀಸುತ ನಿಂತಿದ್ದರು, ಆ ಕೊಠಡಿಯಲಿದ್ದ ಮಂಚವು ಅತ್ಯುತ್ತಮ ಕುರಿ-ಚರ್ಮದ ಹಾಸಿಗೆ ಮತ್ತು ಹೂ ಮಾಲೆಗಳಿಂದ ಕಂಗೊಳಿಸುತಿತ್ತು. ಅಜಾನುಬಾಹು, ಕಿವಿ-ಉಂಗುರ, ಚಿನ್ನ-ಉಡುಪು ಧರಿಸಿ ಕೆಂಗಣ್ಣಿನ ರಾವಣನ ಆ ಮಂಚದ ಮೇಲೆ ಮಲಗಿದ್ದನು: ಮೋಡಗಾತ್ರದ ರಾವಣನು ರಕ್ತಚಂದನ ಲೇಪನದಲಿ ಸೂರ್ಯಾಸ್ತದ ಕೆಂಪು ಮೋಡದಂತೆ ಕಂಡನು, ಒಡಿವೆ ಆಭರಣಗಳ ಮಧ್ಯೆ ಮಲಗಿದ ರಾಮಣನು ಗಿಡ ಮರಗಳ ಮಧ್ಯೆ ಮಲಗಿದ ಮಂದಾರ-ಪರ್ವತದಂತೆ ಕಂಡನು, ರಾವಣನು ರಾಕ್ಷಸ ಯುವತಿಯರಿಗೆ ಅತೀ ಪ್ರೀಯನು ಆದ್ದರಿಂದ ಅವರು ಅವನಿಂದ ನಿತ್ಯರಾತ್ರಿ ಸುಖ ಪಡೆಯುತಿದ್ದರು; ನಶೆಯಲ್ಲಿ ಮಹಾ ಶೂರ ರಾಕ್ಷಸ ರಾಜ ರಾವಣನು ಐಶ್ವರ್ಯ ಮಂಚದಲಿ ಮಲಗಿದ್ದನು; ಹೆಡೆ ಸರ್ಪದಂತೆ ವೀರ ವಾನರನು ಭಯಾನಕ ರಾವಣನ ಬಳಿ ಬಂದನು ಹಾಗು ಶಯನದಲಿ ರಾವಣನು ಹನುಮನಿಗೆ ಮಹಾಸರೋವರದಲಿ ನೀರಿಗೆ ಬಿದ್ದ ಸುಗಂಧಿತ ಆನೆಯಂತೆ ಕಂಡನು; ರಾವಣನು ತನ್ನ ದೇಹಕ್ಕೆ ತಕ್ಕಂತೆ ಬಲಿತ ಕೈಗಳು, ಸಬಲ ಭುಜಗಳು, ಉತ್ತಮ ಮೊಳಕಾಲು, ಹೆಬ್ಬೆಟ್ಟು, ಬೆರಳು ಮತ್ತು ಹಸ್ತಗಳನ್ನು ಹೊಂದಿದ್ದನು, ರಾವಣನ ಮೈತುಂಬ ಯಕ್ಷ ಗಂಧರ್ವ ನಾಗ ದೇವ ದಾನವ ಸ್ತ್ರೀಯುರು ಲೇಪಿಸಿದ ಮೊಲ-ರಕ್ತ ವರ್ಣ ಶ್ರೀಗಂಧ, ಪರಿಮಳ-ದ್ರವ್ಯ ಸವರಿತ್ತು, ಅವುಗಳ ಮಧ್ಯೆ ರಾವಣನ ಭುಜಗಳು ಮಂದಾರದ ಅವಳಿ ಶಿಖರಗಳಂತೆ, ಕೈಗಳು ಮಲಗಿದ ಕೋಪದ ಸರ್ಪಗಳಂತೆ ಹನುಮನಿಗೆ ಕಂಡವು; ರಾವಣನ ಉಸಿರಿನಿಂದ ನಾಗಕೇಸರಿ ಹೂ ಪರಿಮಳಅನ್ನ-ಸುವಾಸನೆ, ಮದ್ಯ-ವಾಸನೆಗಳು ಸೂಸುತಿದ್ದವು. ಮತ್ತೊಂದು ಶಯನ ಇರಬಹುದೆಂದು ಹನುಮನು ರಾವಣನ ಮಂಚದ ಸುತ್ತುಮುತ್ತ ವೀಕ್ಷಿಸಿದನು, ಹನುಮನು ರಾವಣನ ಪಾದ ಬಳಿ ರಾವಣನ ಪ್ರೀಯ ಧರ್ಮ ಪತ್ನಿಯನು ಕಂಡನು; ಅವಳ ತಲೆ ಬದಿಗೆ ಸರಿದ ವಜೃ ರತ್ನ ಖಚಿತ ಮುಕುಟ, ಕಿವಿಯೋಲೆಗಳು ಮತ್ತು ಎದೆಯ ಮಧ್ಯೆ ಹೊಳೆವ ಚಿನ್ನ ವಜೃ ಹಾರಗಳು ಅವಳ ಮುಖ-ಅಂದ ಹೆಚ್ಚಿಸಿದ್ದವು; ಬಿಳೆ ರೇಷ್ಮೆ-ಸೀರೆ ಉಡುಗೆ, ಮೈಗೆ ಚಂದನ ಲೇಪಿನ, ಕೆಂಪು ಕಣ್ಣುಗಳು, ಬಿಗಿದ ಎದೆಕಟ್ಟು,ಹಾವಿನಂತೆ ಬುಸಗುಡುವ ಉಸಿರಾಟ, ನಾಲ್ಕೂ ದೆಸೆ ದೀಪಗಳ ಹೊಂಗಿರಣದಲಿ ಗಂಗಾನದಿಯಲಿ ಮಲಗಿದ ಆನೆಯಂತೆ ಕಂಡಳು ರಾವಣನ ಪತ್ನಿ; ಹೀಗೆ ಪ್ರತ್ಯೇಕ ಪವಿತ್ರ ಶಯನದಲಿ ಮಲಗಿದ ಸುಂದರ ಸ್ತ್ರೀಯು ರಾವಣನ ಧರ್ಮ ಪತ್ನಿ ಮಂಡೋದರಿ ಆಗಿದ್ದಳು; ಅವಳೇ ಸೀತೆಯೆಂದು ಭಾವಿಸಿದ ಹನುಮನು ಮಂಡೋದರಿಯ ಯವ್ವನ ಮತ್ತು ಸೌಂರ್ಯ ಸಂಪನ್ನತೆಯನ್ನು ಕಂಡು ಸಂತೋಷದಿಂದ ತನ್ನ ಬಾಲವನ್ನು ಮುತ್ತಿಡುತ್ತ, ಕಂಬಗಳೇರುತ ಕುಣಿದಾಡಿದನು. ಒಟ್ಟಿನಲ್ಲಿ ಆದಿಕವಿ ವಾಲ್ಮೀಕಿಯುಈ ಸನ್ನಿವೇಶದಲ್ಲಿ ಒಂದೆಡೆ ರಾವಣನ ಕೊಠಡಿ, ಅವನ ಮಂಚದಲಂಕಾರಗಳನ್ನು ಮತ್ತು ಅವನ ಮೈಕಟ್ಟನ್ನು ಬಣ್ಣಿಸಿದೆರೆ ಮತ್ತೊಂದೆಡೆ ಅವನ ಪತ್ನಿ ಮೊಂದೋದರಿ ಮೈಕಟ್ಟು, ಅಲಂಕಾರ ಹಾಗು ನಿದ್ರಾಭಂಗಿಯನ್ನು ಉಪಮಾಲಂಕಾರಗಳಿಂದ ಬಣ್ಣಿಸಿರುವರು, ಅದರಂತೆ ಮಂದೋದರಿ ಯವ್ವನ, ಸೌಂದರ್ಯಗಳು ಹನುಮನಲ್ಲಿ ಅವಳು ಸೀತೆಯೆಂದು ಭ್ರಮೆ ಮೂಡಿಸಿದನ್ನು ಆದಿಕವಿ ಹೇಳಿರುವರು.
ಡಾ. ಅರ್ಜುನ ಯ. ಪಂಗಣ್ಣವರ ವಾಲ್ಮೀಕಿ ಸಾಹಿತ್ಯ ಚಿಂತಕ
