ಹೆಣ್ಣಿನ ಒಳ ತಲ್ಲಣವ ಎಂದರಿಯುವುದುಂಟು ಈ ಪುರುಷ ಸಮಾಜ

By admin

ಹೆಣ್ಣಿನ ಒಳ ತಲ್ಲಣವ ಎಂದರಿಯುವುದುಂಟು ಈ ಪುರುಷ ಸಮಾಜ

ಲೇಖಕಿ-ರಮಾ ದೊಡ್ಡಮನಿ, ಕಲಬುರಗಿ

ನಿನ್ನ ಹೆತ್ತವಳು ಹೆಣ್ಣು ನಿನ್ನ ಜೀವನ ಸಂಗಾತಿಯು ಹೆಣ್ಣು
ನಿನ್ನ ಮಗಳು ಹೆಣ್ಣು…

ಹೆಣ್ಣಿನ ಉದರದಲ್ಲಿ ಜನಿಸಿ ಬಂದು ಅದೇ ಹೆಣ್ಣಿಗೆ ಮಗನಾದೆ …ಯೌವನ ಅವಸ್ಥೆಯಲ್ಲಿ ನಿನ್ನ ಜೊತೆ ಬದುಕ ನಡೆಸುವಳು ಹೆಣ್ಣು ,,ನಿಮ್ಮಿಬ್ಬರ ಮಿಲನದಿಂದ ಜನ್ಮತಾಳುವವಳು ಹೆಣ್ಣು .‌ ಹೇಗೆ ನಿನ್ನ ಹುಟ್ಟಿಂದ ಸಮಾದಿಯವರೆಗೆ ಹೆಣ್ಣು ತಾಯಿಯಾಗಿ ಹೆಂತಿಯಾಗಿ ಸಹೋದರಿಯಾಗಿ ಮಗಳಾಗಿ ಸುಳಿದಾಡುವಳು….ಊಹಿಸಿದರೆ ಬಹು ಎತ್ತರದ ,ಅಗಲದ , ಬಾರದ ಬದುಕ ಬಂಡಿ ಸಾಗಿಸಲು ನಿನ್ನ ಜೊತೆಗೂಡಿ ನಿನಗಿಂತಲೂ ಅಧಿಕ ಬಾರ ಹೊರುವಳು ಹೆಣ್ಣು….ಸಂಸಾರದ ಬಾರ , ಮಕ್ಕಳ ಲಾಲನೆ ಪಾಲನೆ, ನಿನ್ನ ಕಪಟತನದ ಬೈಗುಳವ ಸಹಿಸಿಕೊಂಡು ದಿನಗಳಿಯುವಳು ಹೆಣ್ಣು…..ಮನಸ್ಸಿಗೆ ಬಾರ ಎನಿಸಿದಾಗ ಕೂಡಿಟ್ಟ ಕಣ್ಣೊಳಗಿನ ಕಂಬನಿಯನ್ನು ಯಾರು ಕಾಣದ ಮರೆಯಲ್ಲಿ ದಾರಕಾರವಾಗಿ ಸುರಿಸುವಳು….ಹೆಣ್ಣು ಹೆಣ್ಣೆಂದರೆ ಅಡುಗೆ ಮನೆ , ಭೋಗದ ವಸ್ತು, ಹೆರುವ ಯಂತ್ರ ಹೀಗೆ ಅನೇಕ ಪದಗಳಿಗೆ ಸೀಮಿತಗೊಳಿಸಿ ಮೇಲೇಳದಂತೆ ಮಾಡಲಾಗಿದೆ….ಹೆಣ್ಣೆಂದರೆ ಸಹಾನುಭೂತಿ, ಕರುಣಾಮಯಿ, ತ್ಯಾಗಮಯಿ ಸಹನೆಯುಳ್ಳವಳು ಎಂಬ ಇತ್ಯಾದಿ ಹೆಣ್ಣನ್ನ ಹೊಗಳಿ ಕುಗ್ಗಿಸುವ ಪದಗಳಲ್ಲಿ ಕಟ್ಟಿ ಹಾಕಿದ್ದಾರೆ.‌‌…ಹೆಣ್ಣು ಹೆಣ್ಣಿಗೆ ಶತ್ರು, ಹೆಣ್ಣಿನ ಬುದ್ಧಿ ಮೊಳಕಾಲ ಕೆಳಗೆ ಹೀಗೆಹೆಣ್ಣಿಗೆ ಸಂಬಂಧ ಪಟ್ಟ ಅನೇಕ ಗಾದೆ ಮಾತುಗಳು ಹೆಣ್ಣು ಪುರುಷನಿಗಿಂತ ತಳಮಟ್ಟದಲ್ಲಿದ್ದಾಳೆ ಎಂದು ಸೂಚಿಸುತ್ತವೆ , ಹೆಣ್ಣು ಸಂಸಾರದ ಕಣ್ಣು ಈ ರೀತಿಯ ಗಾದೆ ಮಾತುಗಳು ಹೆಣ್ಣನ್ನು ಮಾನಸಿಕ & ದೈಹಿಕವಾಗಿ ಹಲವು ರೀತಿಯಲ್ಲಿ ಕಟ್ಟಲ್ಪಟ್ಟಿವೆ…ತೀರ ಹೊಗಳಿಕೆಗಳಿಂದ ಹೆಣ್ಣನ್ನು ಕುಗ್ಗಿಸುವ ಪುರುಷ ಸಮಾಜದ ಹುನ್ನಾರವ ಅರಿಯಬೇಕಿದೆ , ಈ ಬಗೆಗೆ ಅಗಾಧ ಜ್ಞಾನ ಪಡೆಯಬೇಕಿದೆ , ಎಲ್ಲರೂ ಒಂದುಗೂಡಿ ಅದಕ್ಕೊಂದು ಕಡಿವಾಣ ಹಾಕಲೇಬೇಕಿದೆ….

*ರಮಾ ದೊಡ್ಡಮನಿ, ಕಲಬುರಗಿ