ತುಟಿಯಂಚಿನಲ್ಲಿ ನಗು- ಕಣ್ಣಂಚಿನಲ್ಲಿ ನೀರು ತರಿಸಿದವನು ಚಾರ್ಲಿ ಚಾಪ್ಲಿನ್

By admin

ತುಟಿಯಂಚಿನಲ್ಲಿ ನಗು- ಕಣ್ಣಂಚಿನಲ್ಲಿ ನೀರು ತರಿಸಿದವನು ಚಾರ್ಲಿ ಚಾಪ್ಲಿನ್

ಲೇಖಕಿ-ಆಶಾ ಎನ್. ಬಳ್ಳಾರಿ

ತಲೆ ಬಗ್ಗಿಸಿ ನಡೆದರೆ ಕಾಮನಬಿಲ್ಲು ಕಾಣುವುದಾದರೂ ಹೇಗೆ ಎಂದ ಚಾಪ್ಲಿನ್! Comedy is a very serious business ಎಂಬ ಮಾತಿದೆ. ಜನರನ್ನು ಸುಲಭವಾಗಿ ಅಳಿಸಿ ಬಿಡಬಹುದು. ಅದರೆ ಈ ನಗಿಸುವ ವ್ಯ ವಹಾರ ಸುಲಭದ್ದಲ್ಲ. ಯಾರಲ್ಲಿ ತುಂಬಾ ನೋವು ತುಂಬಿರುತ್ತದೆ. ಅವರಲ್ಲಿ ಮಾತ್ರ ನಗೂ ಸದಾ ಕಾಲ ತುಂಬಿರುತ್ತದೆ. ಈ ಮಾತು ಯಾಕೆ ಹೇಳುತ್ತೀರುವೆ ಎಂದು ನೀವೂ ಯೋಚಿಸುತ್ತೀರ ಅಲ್ವ ಚಾಪ್ಲಿನ್ ಒಬ್ಬ ಹಾಸ್ಯ ಕಲಾವಿದ. ಈತನ ಹಾಸ್ಯದಿಂದ ಪ್ರತಿಯೋಬ್ಬ ವ್ಯಕ್ತಿಯ ಮುಖದಲ್ಲಿ ನಗೂ ತುಂಬಿರುತ್ತದೆ. ಆದ್ರೆ ಇವರಿಗೆ ಏನೂ ನೋವು ಇರಲು ಸಾಧ್ಯ ಎಂದು ನೀವು ಕೇಳಬಹುದು. ಇದಕ್ಕೆ ಉತ್ತರ ಮುಂದೆ ತಿಳಿಯುತ್ತದೆ.
ಬರಹದ ಮೂಲಕ ನಗೆ ಉಕ್ಕಿಸುವುದು ಸ್ವಲ್ಪ ಮಟ್ಟಿಗೆ ಸುಲಭ ಎನ್ನಬಹುದು. ಆದರೆ ನಟೆನೆಯಲ್ಲಿ ಹಾಸ್ಯವನ್ನು ನೋಡುಗರಿಗೆ ಮುಟ್ಟಿಸಲು ಅದ್ಬುತವಾದ ಬಾಡಿ ಲಾಂಗ್ವೇಜ್, ಹಾಸ್ಯದ ಟೈಮಿಂಗ್ ಮತ್ತು ನಗೆ ಉಕ್ಕಿಸುವ ಮಾತು ಎಲ್ಲವೂ ಒಟ್ಟಾಗಿ ಮೇಳೈಸಬೇಕು. ಆಗ ಮಾತ್ರ ಎದುರಿಗಿರುವ ವ್ಯಕ್ತಿಯನ್ನು ನಗಿಸಲು ಸಾಧ್ಯ. ಮಾತೇ ಇಲ್ಲದೇ ಹಾಸ್ಯವನ್ನು ಮುಟ್ಟಿಸುವುದು ಸಾಧ್ಯವೇ? ಹೀಗೆಲ್ಲ ಯಾರಾದರೂ ಕೇಳಿದರೆ ‘ಏ ಸುಮ್ನಿರಿ ತಮಾಷೆ ಮಾಡಬೇಡಿ’ ಎನ್ನುವ ಉತ್ತರ ಕೊಡಬೇಕಾಗುತ್ತಿತ್ತೇನೋ ಈ ಒಬ್ಬ ನಟ ಜಗತ್ತಿನಲ್ಲಿ ಜನ್ಮ ತಾಳದಿದ್ದರೆ! ಹೀಗೆ ಮಾತೇ ಇಲ್ಲದ. ತುಟಿಯಂಚಿನಲ್ಲಿ ನಗು ಹಾಗೂ ಕಣ್ಣಂಚಿನಲ್ಲಿ ನೀರು ಎರಡನ್ನೂ ಏಕಕಾಲಕ್ಕೆ ತರಿಸಿದವನ ಹೆಸರು ಅಸಮಾನ್ಯ ಚಾರ್ಲಿ ಚಾಪ್ಲಿನ್ ಅವನು ಈಗ ಭೌತಿಕವಾಗಿ ಇಲ್ಲವಾದರು 134 ವರ್ಷಗಳ ನಂತರವೂ ಜಗತ್ತು ಅವನ ಬಗ್ಗೆ ಮಾತನಾಡುತ್ತಲೇ ಇದೆ. ಅವನ ಬಗ್ಗೆ ಓದುತ್ತಲೇ ಇದೆ ಮತ್ತು ಅವನ ಸಿನಿಮಾಗಳನ್ನು ನೋಡುತ್ತಲೇನ ಇದೆ. ಏಪ್ರಿಲ್ 16 ಚಾರ್ಲಿ ಚಾಪ್ಲಿನ್ 134ನೆಯ ಹುಟ್ಟುಹಬ್ಬ. ಯುಗಯುಗಾದಿ ಕಳೆದರೂ ಯುಗಾದಿ ಮರಳಿ ಬರುತ್ತಲೇ ಇರುವಂತೆ, ಇವರ ಹುಟ್ಟಿದ ದಿನದ ನೆಪದಲ್ಲಿ ಮತ್ತೊಮ್ಮೆ ಅವನ ವಿಷಯ ಒಂದಿಷ್ಟು ನೆನಪು ಮಾಡಿಕೊಳ್ಳೋಣ.
ಎಲ್ಲ ಮಕ್ಕಳ ಜೀವನ ಶುರುವಾಗುವುದೇ ಅಳುವಿನಿಂದ . ಆದರೆ ಕೆಲವು ನತದೃಷ್ಟರಿಗೆ ಅ ಅಳು ಬಾಲ್ಯದುದ್ದಕ್ಕೂ ಹಿಂಬಾಲಿಸಿಕೊಂಡೇ ಬಂದುಬಿಡುತ್ತದೆ. ಅಂಥ ನತದೃಷ್ಟರಲ್ಲಿ ಒಬ್ಬ ಚಾಪ್ಲಿನ್. ಅವನ ಅಪ್ಪ ಚಾರ್ಲಿಸ್ಸ್ ಚಾಪ್ಲಿನ್ ಸೀನಿಯರ್ ಅವನ ತಾಯಿ ಹ್ಯಾನಾ ಇಬ್ಬರೂ ರಂಗಸ್ಥಳದ ಜೊತೆ ನಂಟು ಇದ್ದವರೇ .ಅಪ್ಪ ಒಳ್ಳೆಯ ನಟ ಮತ್ತು ಹಾಡುಗಾರನಾಗಿದ್ದರೆ ಅಮ್ಮ ಕೂಡಾ ಒಳ್ಳೆಯ ಹಾಸ್ಯ ನಟಿ ಮತ್ತು ಹಾಡುಗಾರ್ತಿ ಚಾಪ್ಲಿನ್ ಸೀನಿಯರ್‌ಗೆ ಹ್ಯಾನಾಳ ಮೇಲೆ ಪ್ರೇಮವಾಯಿತು.ಅ ನಂತರ ಮದುವೆಯಾದರು. ಹ್ಯಾನಾಗೆ ಮದುವೆಗೆ ಮೊದಲು ಸಿಡ್ನಿ ಎನ್ನುವ ಮಗ ಹುಟ್ಟಿದ್ದ. ಮದುವೆಯಾದ ನಂತರ ಅಪ್ಪ ಚಾಪ್ಲಿನ್ ಸಿಡ್ನಿಯ ಗಾರ್ಡಿಯನ್ ಆದ. ಮದುವೆಯಾದ ನಾಲ್ಕು ವರ್ಷಗಳ ಬಳಿಕ ಲಂಡನ್ ನ ವಾಲ್‌ವರ್ಥ್ ನಲ್ಲಿ ಚಾರ್ಲಿ ಚಾಪ್ಲಿನ್ ಹುಟ್ಟಿದ.
ಅಪ್ಪ-ಅಮ್ಮ ಇಬ್ಬರಿಗೂ ಹೊಟ್ಟೆ ಬಟ್ಟೆಗೆ ಸಾಲುವಷ್ಷು ಆದಾಯವಿತ್ತು. ಒಟ್ಟಿನಲ್ಲಿ ನೋಡಿದರೆ ಅಪ್ಪ-ಅಮ್ಮ ಇಬ್ಬರು ಮಕ್ಕಳ ಸುಖ-ಸಂಸಾರ ಮೊದಲ ಎರಡು ವರ್ಷ ಚಾಪ್ಲಿನ್ ಬದುಕು ಆರಾಮವಾಗಿಯೇ ಕಳೆಯಿತು. ಆ ನಂತರ ಅವನ ಅಪ್ಪ-ಅಮ್ಮನ ಸಂಸಾರದಲ್ಲಿ ಬಿರುಕು ಉಂಟಾಯಿತು. ಒಟ್ಟಿನಲ್ಲಿ ಚಾಪ್ಲಿನ್ 2 ವರ್ಷದವನಿರುವಾಗ ಅವರಿಬ್ಬರೂ ಬೇರಾಗುತ್ತಾರೆ.ಹ್ಯಾನಾಗೆ ಉಳಿಯುವುದು ಮೊದಲೆರಡು ಮಕ್ಕಳು ಮಾತ್ರ ಹ್ಯಾನಾ ಚಾಪ್ಲಿನ್ ಸೀನಿಯರ್‌ನಿಂದ ಬೇರೆಯಾದ ನಂತರ ಅವನು ಕುಡಿತಕ್ಕೆ ದಾಸನಾಗುತ್ತಾನೆ.ಹಾಗಾಗಿ ಹ್ಯಾನಾಳಿಗೆ ಮಕ್ಕಳನ್ನು ಸಾಕಲು ಯಾವುದೇ ರೀತಿಯ ಸಹಾಯವನ್ನೂ ಮಾಡಲು ಅವನಿಂದ ಸಾಧ್ಯವಾಗುವುದಿಲ್ಲ.ಹ್ಯಾನಾ ಒಂಟಿಯಾಗಿ ಇಬ್ಬರು ಮಕ್ಕಳನ್ನು ಸಾಕಬೇಕಾಗುತ್ತದೆ.ಬರಬರುತ್ತ ಅವಳಿಗೂ ಕೆಲಸ ಸಿಗುವುದು ಕಡಿಮೆಯಾಗುತ್ತ ಹೋಗುತ್ತದೆ. ಆಗ ನರ್ಸ್ ಕೆಲಸ, ಬಟ್ಟೆ ಹೊಲಿಯುವುದು ಹೀಗೆ ಒಂದಿಷ್ಟು ಹಣ ಸಂಪಾದಿಸುತ್ತಾಳೆ. ಆದರೆ ಮೂರು ಜನರ ಸಂಸಾರಕ್ಕೆ ಅದು ಯಾತಕ್ಕೂ ಸಾಲದು.ಇದರಿಂದ ಇಬ್ಬರನ್ನು ಅನಾಥಾಶ್ರಮಕ್ಕೆ ಕಳಿಸಿ ಬಿಡುತ್ತಾಳೆ. ಆಗ ಚಾಪ್ಲಿನ್‌ಗೆ ಕೇವಲ 7 ವರ್ಷ ಅಲ್ಲಿ ಒಂದೂವರೆ ವರ್ಷ ಕಳೆದ ನಂತರ ಚಾಪ್ಲಿನ್ ಮತ್ತೆ ತಾಯಿಯ ಹತ್ತಿರ ಬರುತ್ತಾನೆ. ಅದಾದ ಎರಡು ತಿಂಗಳಿಗೆ ಅವಳು ಮಾನಸಿಕ ಸ್ವಾಸ್ಥ್ಯ ಕಳೆದುಕೊಂಡು ಮಾನಸಿಕ ರೋಗಿಗಳ ಆಸ್ಪತ್ರೆ ಸೇರುತ್ತಾಳೆ. ಪುಣ್ಯಕ್ಕೆ ಹ್ಯಾನಾ ಸ್ವಲ್ಪ ದಿನಗಳ ನಂತರ ಗುಣವಾಗಿ ಮನಗೆ ಬರುತ್ತಾಳೆ. ಮಕ್ಕಳಿಬ್ಬರೂ ಮತ್ತೆ ತಾಯಿಯ ಬಳಿಗೆ ಬರುತ್ತಾರೆ. ಅಲ್ಪ ಕಾಳ ಎಲ್ಲರೂ ಒಟ್ಟಿಗೆ ಇರುತ್ತಾರೆ. ಅಂಥ ಸ್ಥಿತಿಯಲ್ಲಿ ಚಾಪ್ಲಿನ್ ಹೊಟ್ಟೆಪಾಡಿಗೆ ರಂಗಭೂಮಿಯ ಮೊರೆ ಹೋಗುತ್ತಾನೆ. ಪುಟ್ಟ ಮಗುವೊಂದು ಜನರನ್ನು ರಂಜಿಸಿದಾಗ ಅತ್ಯಂತ ಖುಷಿಯಾದ ಪ್ರೇಕ್ಷಕರು ಒಂದಿಷ್ಟು ಹಣವನ್ನು ರಂಗದ ಮೇಲೆ ಎಸಿದಾಗ ಚಾಪ್ಲಿನ್ ನಾನು ಮೊದಲು ಆ ದುಡ್ಡನ್ನು ತೆಗೆದುಕೊಂ ಡು ನಂತರ ಕಾರ್ಯಕ್ರಮ ಮುಂದುವರೆಸಲಾ? ಎಂದು ಮುಗ್ದವಾಗಿ ಕೇಳಿದ್ದಕ್ಕೆ ನಗುತ್ತಾರೆ. ತನ್ನ ಈ ಅಭಿನಯಕ್ಕೆ ತಾಯಿಯ ಪ್ರೋತ್ಸಾಹ ತುಂಬಾ ಇರುತ್ತದೆ. ಇದರಿಂದ ಚಾಪ್ಲಿಗೆ ರಂಗಭೂಮಿಯ ಮೇಲೆ ಆಸಕ್ತಿ ಬಳೆದಿರುತ್ತದೆ. ಹೀಗೆ ಅವನ ಜೀವನ ರಂಗಭೂಮಿಯಲ್ಲಿ ಮುಂದುವರೆಯುತ್ತ ಮತ್ತೇ ಸಿನಿಮಾನದಲ್ಲಿ ಕೋನೆಗೊಳುತ್ತದೆ. ಅದ್ಬುತ ನಟನೆ ಜೀವನ ಚರಿತ್ರೆ ಕೂಡಾ ಒಂದು ಸಿನಿಮಾದಂತೆಯೇ ಇದೆಯಲ್ಲವೆ?
ಎಲ್ಲಯೋ ಹುಟ್ಟಿ ಎಲ್ಲಿಯೋ ಬೆಳೆದು. ಎಲ್ಲಿಯೋ ಬುದುಕು ಕಟ್ಟಿಕೊಂಡು ಪ್ರತಿಭೆಯ ಜೊತೆಗೆ , ಅನೇಕ ದೌರ್ಬಲ್ಯಗಳನ್ನೂ ಮೈಗೂಡಿಸಿಕೊಂಡು ಅಪಾರ ಯಶಸ್ಸಿನ ಜೊತೆಗೆ ಅಷ್ಟೇ ಸೋಲುಗಳನ್ನು ಉಂಡು ಚಾಪ್ಲಿನ್ ಬದುಕು ಕಷ್ಟದಲ್ಲೂ ಪ್ರೀತಿಯಂತೆ. ನಗಿಸುವರ ಜೀವನದ ಹಿಂದೆ ಇರುವ ನೋವು ಇದು.
ಆಶಾ ಎನ್. ಬಳ್ಳಾರಿ