ಹೆಣ್ಣನ್ನು ಕೇವಲ ಬೋಗದ ವಸ್ತುವಂತೆ ಕಂಡವರು ನೀವು

By admin

ಹೆಣ್ಣನ್ನು ಕೇವಲ ಬೋಗದ ವಸ್ತುವಂತೆ ಕಂಡವರು ನೀವು

ನೇಹಾ ಸಜ್ಜನ್, ಮಾಲಗತ್ತಿ, ಕಲಬುರಗಿ.

ಯಾರಿಗೆ ಬೇಕು ಹೆಣ್ಣು ..? ಮೀಸೆ ಹೋತ್ತ ಗಂಡಸರಿಗಾ, ಅಧಿಕಾರದ ಗರ್ವದಿ ಮೇರೆದ ಆ ಅತ್ತೆಯ ಅಹಂಕಾರಕ್ಕ , ಅಥವಾ ಕಟ್ಟೆ ಮೇಲೆ ಕುಳಿತು ಹಣೆ ಪಟ್ಟಿಕಟ್ಟುವ ಜನರಿಗಾ, ಮುಟ್ಟಾದಗಾಮುಟ್ಟಿಸಿಕೊಳ್ಳದವರಿಗಾ ,ಪ್ರಶ್ನಿಸಿದಾಗ ಹೇಮ್ಮಾರಿ ಎಂದವರಿಗಾ, ಬಲವಂತದಿ ಅತ್ಯಾಚಾರ ಮಾಡಿ ಮಾನಗೆಟ್ಟವಳೂ ಅಂದವರಿಗಾ , ಅವಳ ಭಾವನೆಗಳನ್ನು ಕೊಂದು ತಾಂತ್ರಿಕ ಯಂತ್ರದಂತೆ ಮಾಡಿದವರಿಗಾ, ಹೊಟ್ಟೆಯಲಿ ಹೆಣ್ಣಿದೆ ಎಂದಾಗ ಕೊಂದುತೆಗಿ ಆ ಪಿಂಡವನ್ನು ಎಂದವರಿಗಾ ,ಹೇಳಿ ಯಾರಿಗೆ ಬೇಕು ಹೆಣ್ಣು .

ಪದೆ ಪದೆ ಹೆಣ್ಣಿನ ಮಾನ, ಪ್ರಾಣ, ಗೌರವಕ್ಕೆ ಧಕ್ಕೆ ತಂದು ಅವಳ ಮೇಲೆ ದಿನನಿತ್ಯ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದಿರಿ . ಅವಳ ವ್ಯಕ್ತಿತ್ವವೆ ಅಳಿಸಿ ಹೋಗುವ ಸ್ಥಾನಕ್ಕೆ ತಂದು ನಿಲ್ಲಿಸಿದ್ದಿರಿ ,ಪ್ರತಿವರ್ಷ ಹೆಣ್ಣಿನ ಮೇಲೆನ ಅತ್ಯಾಚಾರ ಪ್ರಕರಣಗಳು ಗಗನಕ್ಕೆರುತ್ತಿವೆ. ಇದರಂದಾಜು ನಿಮಗ್ಯಾರಿಗೂ ಇಲ್ಲಾ.

ಕಿರು ಮಾಹಿತಿ 2021-2022ರಲ್ಲಿ ನಡೆದ ಅತ್ಯಚಾರದ ಪ್ರಕರಣಗಳು ಇಡಿ ಹೆಣ್ಣಿನ ನಡುಕ ಹುಟ್ಟಿಸಿದೆ.ರಾಷ್ಟ್ರಿಯ ಅಪರಾಧ ದಾಖಲೆಗಳ ಬ್ಯೂರೋ ( ಎನ್‌ಸಿಆರ್‌ಬಿ) ಅಂಕಿ-ಅಂಶಗಳ ಪ್ರಕಾರ ಕಳೆದ ವರ್ಷ ದೇಶದಲ್ಲಿ ಪ್ರತಿದಿನ ಕನಿಷ್ಠ 90 ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ನಡೆದಿವೆ. ಈ ಅತ್ಯಾಚಾರದ ದಾಖಲೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376 ಅತ್ಯಾಚಾರ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಅಂದರೆ ಪೋಕ್ಸೊ ಕಾಯಿದೆಯಡಿಯಲ್ಲಿ ಸೆಕ್ಷನ್ 4 ಪ್ರಕಾರ (ಸಾಮಾನ್ಯ ಲೈಂಗಿಕ ದೌರ್ಜನ್ಯಕ್ಕೆ ಶಿಕ್ಷೆ ) ಮತ್ತು ಸೆಕ್ಷನ್ 6 ಪ್ರಕಾರ( ಉಗ್ರವಾದ ಲೈಂಗಿಕ ದೌರ್ಜನ್ಯಕ್ಕೆ ಶಿಕ್ಷೆ ) ಈ ಕಾಯಿದೆಯಡಿಯಲ್ಲಿ ಪ್ರಕರಣಗಳು ದಾಖಲಿಸಲಾಗಿದೆ.

2021ರಲ್ಲಿ ಭಾರತ ದೇಶಾದಂತ್ಯ 33,186 ಅಪ್ರಾಪ್ತ ಬಾಲಕಿಯರು ಅತ್ಯಾಚಾರಕ್ಕೆ ಒಳಗಾಗಿದ್ದಾರೆ.ಹಾಗೂ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಬಾಲಕಿಯರ ಸಂಖ್ಯೆ , ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ಒಟ್ಟು 3,522 .ತಮಿಳುನಾಡಲ್ಲಿ ( 3,435) ಉತ್ತರ ಪ್ರದೇಶದಲ್ಲಿ ( 2,749) ಹಾಗೂ 2,093 ಪ್ರಕರಣಗಳೊಂದಿಗೆ ಕರ್ನಾಟಕ ಐದನೇ ಸ್ಥಾನದಲ್ಲಿದೆ.

2021 ರಲ್ಲಿ ಕರ್ನಾಟಕದಲ್ಲಿ ಪ್ರತಿದಿನ ಕನಿಷ್ಠ ಐವರು ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ನಡೆದಿದೆ.
ಉತ್ತರ ಪ್ರದೇಶದಲ್ಲಿ ( 96 ), ಕೇರಳದಲ್ಲಿ ( 74 ) , ಹರಿಯಾಣದಲ್ಲಿ ( 61) ತಮಿಳುನಾಡಲ್ಲಿ ( 34 ),ಪಶ್ಚಿಮ ಬಂಗಾಳದಲ್ಲಿ ( 22 ), ಉತ್ತರ ಖಂಡಲ್ಲಿ (8) ನೋಡಿ ಹೇಗೆ ಕ್ರಮಬಧ್ದವಾಗಿ ,ಇಷ್ಟು ಪ್ರಮಾಣದಲ್ಲಿ ಹೆಣ್ಣಿನ ನಾಶವಾಗಿದೆ. ಇದಕೆಲ್ಲ ಹೊಣೆ ಯಾರು ಸರಕಾರ ನಾ, ಸಮಾಜನ ,ಹೇಳಿ ಯಾರು ಹೋಣೆ ..?ಎಂತಹ ಕಾನೂನುಗಳು ಬಂದರು ಈ ಅತ್ಯಾಚಾರ ತಡೆಯಲು ಸಾಧ್ಯವಾಗುತ್ತಿಲ್ಲ. ಇನ್ನು ಹೆಣ್ಣು ಹಸುಗೂಸನ್ನೆ ಕಿತ್ತು ತಿನ್ನುವ ಕಟುಕ ಮನಸ್ಥಿತಿಯನ್ನು ಹೊತ್ತವರು ನಮ್ಮ ಸುತ್ತಲು ಹದ್ದಿನಂತೆ ಸುತ್ತಿರುವಾಗ ಹೆಣ್ಣು ಎಲ್ಲಿ ಹೊಗಿ ಬದುಕಲು ಸಾಧ್ಯ ..?
23/೦2/23 ರಂದು ಯುವಕರು ಮಲೆ ಮಾದಪ್ಪನ ಬಳಿ ಹೆಣ್ಣು ಸಿಗುತ್ತಿಲ್ಲ ಎಂದು ಪಾದ ಯಾತ್ರೆಗೆ ಹೋಗಿದರು ,ಅವರು ಒಬ್ಬರಾದರು ಯೋಚಿಸಿದ್ದಾರ ಹೆಣ್ಣು ಯಾಕೆ ಸಿಗುತ್ತಿಲ್ಲ ಅಂತ , ಹೆಣ್ಣನ್ನು ಹುಣ್ನೆಂದು ಭ್ರೂಣ ಹತ್ಯೆ ಮಾಡುತಿರುವಾಗ ಹೆಣ್ಣು ಎಲ್ಲಿಂದ ಸಿಗುತ್ತಾಳೆ.ಈ ಅತ್ಯಚಾರ, ಭ್ರೂಣ ಹತ್ಯೆ ,ಲೈಂಗಿಕ ಕಿರುಕುಳ ನಿಲ್ಲಿಸದೆ ಹೋದರೆ ,ಮುಂದೊಂದು ದಿನ ಹೆಣ್ಣು ಸಂರ್ಪೂವಾಗಿ ಭೂಮಿಯ ಮೇಲಿಂದ ನಸಿಸಿ ಹೋಗುತ್ತಾಳೆ.
ಹಿಂದಿನಿಂದಲೂ ಹೇಣ್ಣನ್ನು ಅಬಲೆ , ಶಕ್ತಿಹಿನಳು, ಚಂಚಲೇ, ಲಜ್ಜೆಗೆಟ್ಟವಳು , ಹೀಗೆ ಕೀಳಾಗಿ ನೋಡಿ ಅವಳನ್ನು ಅವಳೆ ಕೀಳಾಗಿ ಕಾಣೂವ ಹಾಗೆ ಮಾಡಿದ್ದಿರಿ ,ಇಷ್ಟೆಲ್ಲಾ ಹಣೆಪಟ್ಟಿ ನೀಡುವುದರ ಜೋತೆಗೆ ದುರ್ಗಾ,ಜಗನ್ ಮಾತೆ ,ನಮ್ಮೆರ ಮಾತೆ ಎಂದು ನಿವೆ ಉಪ್ಪರಿಗೆ ಮೇಲೆ ಕುರಿಸಿ ಮೇಲಿಂದ ತಳ್ಳೀದ್ದಿರಿ , ಬೇರೋಬ್ಬರ ಮನೆಲಿ ಹೆಣ್ಣು ಹುಟ್ಟಲಿ ನಮ್ಮ ಮನೆಗೆ ಬೋಗದ ವಸ್ತುವಾಗಿ ಬರಲಿ ಎಂದಿದ್ದಿರಿ, ಹೀಗೆಂದು ಕುಳಿತರೆ ಹೆಣ್ಣಿನ ಸಂಕುಲ ಸ್ವಲ್ಪ ಪ್ರಮಾಣದಲಾದರು ಉಳಿಯುತ್ತಿತು.
ಆದರೆ ನಿವೆನು ಮಾಡಿದ್ದಿರಿ ಅವಳೂ ನಿಮ್ಮ ಮನೆಗೆ ಎಲ್ಲ ಬಿಟ್ಟು ಬರುವುದರ ಜೋತೆ ಅವಳ ತಾಯಿ ತಂದೆಯರ ಮೇಲೆ ಸಾಲದ ಹೋರೆಯನ್ನು ಹೊರಸಿಬರುವಂತೆ ಸಂದರ್ಭವನ್ನು ಸೃಷ್ಟಿ ಮಾಡಿದ್ದಿರಿ, ಒಂಟಿ ಸಿಕ್ಕ ಅವಳೊಂದಿಗೆ ಅಸಭ್ಯವಾಗಿ ವರ್ತಿಸಿ ಅವಳನ್ನು ಸಮೂಹಿಕವಾಗಿ ಅತ್ಯಚಾರ ಮಾಡಿ ಪ್ರಾಣ ತೆಗೆದಿದ್ದಿರಿ. ಇಷ್ಟೆಲ್ಲ ಮಾಡಿ ಹೇಣ್ಣು ಬೇಕು ಅಂತ ಕೇಳಿದರೆ ಅವಳು ಎಲ್ಲಿಂದ ಬರುತ್ತಾಳೆ, ಯಾವ ತಾಯಿ,ತಂದೆಯರು ಹೆಣ್ಣಿಗೆ ಜನ್ಮನೀಡದಂತೆ ಮಾಡಿದ್ದಿರಿ . ಇಗಾ ಹೆಣ್ಣು ಯಾಕೆ ಬೇಕು..? ಮದುವೆ ಮಾಡಿಕೊಂಡು ನಿಮ್ಮ ಮನೆಯ ಆಳಿನಂತೆ ದುಡ್ಡಿಯುವುದಕ್ಕಾ , ಗಂಡು ಮಕ್ಕಳನ್ನು ಹೇರುವುದಕ್ಕಾ, ಗಂಡನಿಂದ ಕಿರುಕುಳ ಅನುಭವಿಸಲಿಕ್ಕಾ,ಅತ್ತೆಯಿಂದ ಶೊಷಣೆ ಮಾಡಿಸಿಕೊಳ್ಳಲಿಕ್ಕಾ, ಪುಂಡರಿಂದ ಅತ್ಯಚಾರಕ್ಕೆ ಒಳಗಾಗುವುದಕ್ಕಾ, ಹೇಳಿ ಯಾಕೆ ಬೇಕು ಹೆಣ್ಣು .?ಇಷ್ಟೇಲ್ಲ ಆದರು ಇದ್ದರಿಂದ ನಮ್ಮ ಸಮಾಜದ ಮೇಲೆ ಯಾವ ಪರಿಣಾಮ ಬಿರಿದಂತೆ ಕಾಣುತಿಲ್ಲ. ಈ ಹೆಣ್ಣಿನ ಮೇಲೆ ನಡೆಯುವ ಅತ್ಯಚಾರ ,ಲೈಂಗಿಕ ಕಿರಿಕುಳ ,ಹೆಣ್ಣು ಭ್ರೂಣ ಹತ್ಯ ತಡೆಯಲು ಯಾರೊಬ್ಬರು ಪರ್ಯಾಯ ಮಾರ್ಗ ಹುಡುಕಿಲ್ಲ , ಬನ್ನಿ ಇನ್ನಾದರೂ ಹೆಣ್ಣನ್ನು ಉಳಿಸಿ .
ನೇಹಾ ಸಜ್ಜನ್, ಮಾಲಗತ್ತಿ, ಕಲಬುರಗಿ.