ಉಚಿತ ಬಸ್ ಘೋಷಣೆ ಸರಿ. ಆದರೆ ಬಸ್ ವ್ಯವಸ್ಥೆ ಯಾವಾಗ..?

By admin

ಉಚಿತ ಬಸ್ ಘೋಷಣೆ ಸರಿ. ಆದರೆ ಬಸ್ ವ್ಯವಸ್ಥೆ ಯಾವಾಗ..?

ನೇಹಾ ಸಜ್ಜನ್, ಮಾಲಗತ್ತಿ, ಕಲಬುರಗಿ

ಇದು ಇಂದಿನ ಸಮಸ್ಯೆ ಅಲ್ಲಾ. ದಿನ ನಿತ್ಯವೂ ಬಸ್ ಗಳಿಲ್ಲದೆಸಾರ್ವಜನಿಕರು ಪರದಾಡುವಂತಾಗಿದೆ. ಕೆಲಸಕ್ಕೆ ಹೋಗುವವರಿಗೆ, ಶಾಲೆಗೆ ಹೋಗುವ ಮಕ್ಕಳಿಗೆ, ಕಾಲೇಜಿಗೆ ಹೋಗುವ ಯುವಜನರಿಗೆ, ಸರಿಯಾದ ಬಸ್ಸುಗಳ ವ್ಯವಸ್ಥೆಯೆ ಇಲ್ಲಾ. ಬಸ್ಸುಗಳಲ್ಲಿ ಪ್ರಯಾಣಿಸುವವರು ಸಾಮಾನ್ಯ ಜನರು ಮಾತ್ರ ಯಾಕಂದ್ರೆ ಅವರಿಗೆ ಆಟೋ ರಿಕ್ಷದಲ್ಲಿ ತಿರುಗಾಡುವಷ್ಟು ಹಣವಿಲ್ಲದ ಕಾರಣ ಅವರು ಬಸ್ಸಿಗಾಗಿ ಗಂಟೆಗಟ್ಟೆಲೆ ಕಾಯುತ್ತಾರೆ. ಅವುಗಳ ಕೂಡ ಸರಿಯಾದ ಸಮಯಕ್ಕೆ ಬರದೆ ಹೋದರೆ ಅವತ್ತಿನ ಕೆಲಸ ಕಳೆದುಕೊಂಡು ಮನೆಗೆ ಹೋಗುತ್ತಾರೆ. ದಿನನಿತ್ಯ ದುಡಿದು ತಿನ್ನುವ ಜನರಿಗೆ ಒಂದು ದಿನ ಕೆಲಸವಿಲ್ಲದೆ ಹೋದರೆ ಅವರ ಪರದಾಟ ನೋಡಲಿಕ್ಕೆ ಆಗುವುದಿಲ್ಲ. ಕಲಬುರಗಿಯ ಸ್ಟೇಷನ್ ಬಜಾರ್, ರಿಂಗ್ ರೋಡ್, ಐವನಶಾಹಿ, ಈ ಜಾಗದಲ್ಲಿ ಹೋಗಿ ನೋಡಿ ಎಷ್ಟು ಜನ ಕೆಲಸಕ್ಕೆ ಹೋಗಲು ಬಸ್ಸಿಗಾಗಿ ಕಾಯುತ್ತಾರೆ ಸರಿಯಾದ ಸಮಯಕ್ಕೆ ಬಸ್ ಬರದ ಕಾರಣ ಸಪ್ಪೆ ಮುಖ ಮಾಡಿ ವಾಪಾಸ್ ಮನೆಗೆ ಹೋಗಲು ತಯಾರಾದರೂ ಅಲ್ಲು ಬಸ್ ಬರುವುದೇ ಇಲ್ಲಾ.

ಇನ್ನು ವಿದ್ಯಾರ್ಥಿಗಳ ಅಂದ್ರೆ ಯುವಜನರ ಕಡೆಗೆ ಹೋಗೋಣ ಕಲಬುರಗಿಯ ಸುತ್ತಮುತ್ತಲಿನ ಹಳ್ಳಿಗಳಿಂದ ಶಾಲಾ, ಕಾಲೇಜಿಗೆ ವಿದ್ಯಾರ್ಥಿಗಳು ಬರುತ್ತಾರೆ ಕನಿಷ್ಠ 5-10 ರೂಪಾಯಿ ಮಾತ್ರ ಖರ್ಚಿಗೆ ತರುತ್ತಾರೆ. ಬೆಳ್ಳಿಗೆ ಏನೊ ಊರಿಂದ 6 ಗಂಟೆಗೆ ಬಸ್ ಇರುತ್ತದೆ ಆದರೆ ಸಿಟಿಗೆ ಬಂದ ಮೇಲೆ ಅಲ್ಲಿಂದ ಕಾಲೇಜಿಗೆ ಹೋಗಲು ಬಸ್ ಬರುವುದಿಲ್ಲ ಬಂದರು ಬಸ್ ಪಾಸ್ ಇರುವ ಕಾರಣಕ್ಕೆ ಅವರನ್ನು ಬಸ್ ನಲ್ಲಿ ಹತ್ತಿಸಿ ಕೊಳ್ಳುವುದಿಲ್ಲಾ. ಏಕೆಂದರೆ ಪಾಸ್ ಗಳನ್ನು ಗಮನಿಸಲು ಬಸ್ ನಲ್ಲಿ ಜಾಗವೇ ಇರುವುದಿಲ್ಲ ಅಷ್ಟೊಂದು ಜನಗದ್ದಲ ವಿರುತ್ತದೆ. ಚೆಕ್ಕಿಂದಾರ್ ಬಂದರೆ ಕಂಡೆಕ್ಟರ್ ನ ಕೆಲಸಕ್ಕೆ ಕುತ್ತು ಬರುತ್ತದೆ ಎನ್ನುವ ಕಾರಣಕ್ಕೆ ವಿದ್ಯಾರ್ಥಿಗಳಿಗೆ ಬಸ್ ಗಳಲ್ಲಿ ಹತ್ತಿಸುವುದಿಲ್ಲ. ಈ ಬಸ್ ಕಾರಣಕ್ಕೆ ಪರೀಕ್ಷೆ ಶುರುವಾದಾಗ ಸರಿಯಾದ ಸಮಕ್ಕೆ ಪರೀಕ್ಷೆಗೆ ಹೋಗಲು ಸಾಧ್ಯವಾಗುವುದಿಲ್ಲ ಇದರಿಂದ ವಿದ್ಯಾಭ್ಯಾಸಕ್ಕೂ ತೊಂದರೆ ಆಗುತ್ತಿದೆ. ಇದನ್ನು ಯಾರು ಗಮನಿಸುವುದೇ ಇಲ್ಲಾ.

ಒಮ್ಮೆ ಕಲಬುರಗಿಯಲ್ಲಿ ಬಂದು ನೋಡಿ ಸಾರ್ವಜನಿಕರ ಪರದಾಟ. ಇದು ಕಲಬುರಗಿ ಒಂದರ ಸಮಸ್ಯೆ ಅಲ್ಲಾ ಕರ್ನಾಟಕದಲ್ಲಿ ಎಷ್ಟು ಜಿಲ್ಲೆಗಳಿವೆಯೋ ಅಷ್ಟರ ಸಮಸ್ಯೆಯುವೂ ಹೌದು. ಬಸ್ ಗಳ ಬಗ್ಗೆ ಸುದ್ಧಿ ಎರಡು ಮೂರು ತಿಂಗಳಿಗೊಮ್ಮೆ ಪತ್ರಿಕೆಗಳಲ್ಲಿ ಹರಿದಾಡುತ್ತಲೇ ಇರುತ್ತದೆ. ಆದರೆ ಪರಿಹಾವಂತು ದೊರಕಿಲ್ಲ. ಮತ್ತೆ ಉಚಿತ ಬಸ್ಸಿನ ಘೋಷಣೆ ಕೂಗ್ಗಿದ್ದಾರೆ. ಅಲ್ಲಾ ಸ್ವಾಮಿ ಮೊದಲು ಬಸ್ ಗಳ ಸಂಖ್ಯೆ ಕಮ್ಮಿ ಇದೆ ಅದರ ವ್ಯವಸ್ಥೆ ಮಾಡಿ. ಆಮೇಲೆ ಘೋಷಣೆ ಕೂಗಿ.
ನೇಹಾ ಸಜ್ಜನ್, ಮಾಲಗತ್ತಿ, ಕಲಬುರಗಿ