
ಮುಂದುವರೆಸಿ ಅಗಸ್ತ್ಯ “ಕವಿದ ಕತ್ತಲಲ್ಲಿI
ರಾಕ್ಷಸರು, ದೇವತೆಗಳು ಕಾದಾಡಿದರು ಪರಸ್ಪರ; II
ಕೋಪದಿ ಮೇಘನಾದ ಘರ್ಜಿಸಿದನು ಸಾರಥಿಗೆ:I
ʻರಥ ಒಯ್ಯು ವೈರಿ ಪಡೆಯತ್ತ,II
ವೈರಿ ವೀರರ ಪರಾಕ್ರಮ ಸ್ಥಾನಮಾನದಂತೆ, I
ಅವರೆಲ್ಲರನ್ನು ಇಂದೇ ಸಂವಹರಿಸುವೆ; II
ಇಂದ್ರ, ಧನದ,ವರುಣ,ಯಮ ಅವರ್ಮೇಲೇರಗಿI
ಒರೆಸಿ ಬಿಡುವೆ ಅವರನ್ನು ಎನ್ನ ಪಾದದಡಿ; II
ತಡಮಾಡದೇ ಓಡಿಸು ರಥ ಅವರತ್ತI
ಇಲ್ಲವೆ ವಧಿಸುವೆ ನಿನ್ನನು ಇಲ್ಲಿಯೆ; II
ಇರುವೆವು ನಾವು ಈಗ ನಂದನವನದಲ್ಲಿ I
ಉದಯ ಪರ್ವತದತ್ತ ಒಯ್ಯು ರಥ!ʼ.II
ವೈರಿಯತ್ತ ಶೀಘ್ರ ಒಯ್ಯದನು ಸಾರಥಿ ರಥ,
ವೈರಿ ವೀರರ ಪರಾಕ್ರಮ ಸ್ಥಾನಮಾನದಂತೆ;II
ತಿಳಿದು ಮೇಘನಾದನ ಉದ್ಧೇಶ,ಇಂದ್ರI
ದೇವತೆಗಳಿಗೆ ನುಡಿದ:ʻ ಓ ದೇವತೆಗಳೇ, II
ತಡಮಾಡದೆ ಮೇಘನಾದನನ್ನು ಬಂಧಿಸಿರಿ,I
ಬರುತಿದ್ದಾನೆ ನಮ್ಮ ಬಳಿ ಅತೀ ವೇಗದಿ; II
ವಿಶೇಷ ವರವಿದ್ದ ಕಾರಣ ನಾವು ಅವನ ವಧಿಸಲಾರೆವು, I
ಮೇಘನಾದನ ಬಂಧಿಸಿಬಹುದು;II
ವಾಲಿಯನು ಬಂಧಿಸಿ ನಾನು ತ್ರಿಲೋಕ ಸುಖ ಅನುಭವಿಸಿದ್ದೆ, I
ಬಂಧಿಸಬೇಕು ಹಾಗೇ ಇಂದ್ರಜಿತನʼ. II
ಹೀಗೆ ಹೇಳುತ ಬಂದು ಇಂದ್ರ ಬೇರೆಡೆI
ಹುಟ್ಟಿಸಿದ ಭೀತಿ ರಾಕ್ಷಸ ವೀರರಲಿ; II
ವೈರಿಪಡೆ ಏಡಗಡೆ ದಶಾನನವಿದ್ದರೆI
ಇಂದ್ರ ದೇವತೆ ಪಡೆಯ ಬಲಗಡೆಯಿದ್ದ,II
ಸುತ್ತುವರೆದು ರಾಕ್ಷಸ ವೀರರುI
ಸುರಿಸಿದರು ಬಾಣಗಳ ಮಳೆ ದೇವತೆಗಳ್ಮೇಲೆ; II
ಇಂದ್ರ ದೇವತೆಗಳೊಂದಿಗೆ ಸುತ್ತುವರೆದI
ಇಂದ್ರಜಿತನ, ಕಂಡು ರಾಕ್ಷಸರು ಭಯಭೀತರಾದರು, II
ʻಅಯ್ಯೋ, ನಾವು ಕಳೆದುಕೊಂಡೆವುʼ ಎಂದುI
ಭಯದಿ ಕೂಗಿದರು ರಾಕ್ಷಸ ವೀರರು; II
ಆದರೆ ರಾವಣ ನಿಂತು ರಥದಲಿ ಪಶುಪತಿ ನೀಡಿದI
ವರದಂತೆ ಭ್ರಮೆ ಸೃಷ್ಠಿಸಿ ನುಗ್ಗುದ ದೇವತೆಗಳ ಮಧ್ಯೆ; II
ಇಂದ್ರ ಬಳಿ ಬರುತಿದ್ದಂತೆ ಮೇಘನಾದ, ಗಾಯಗೊಳಿಸಿದರುI
ಭೀಕರವಾಗಿ ಆಯುಧಗಳಿಂದ ಅವನನ್ನು ದೇವತೆಗಳು; II
ಧೈರ್ಯದಿ ತಕ್ಷಣ ಇಂದ್ರಜಿತ ತನ್ನತ ಬರುವ I
ರಥದ ಸಾರಥಿ ಮತಾಲಿಯನು ಗಾಯಗೊಳಿಸಿದ ತನ್ನ ಬಾಣಗಳಿಂದ; II
ಇಳಿದು ರಥದಿಂದ ಇಂದ್ರ ಎರಿದ ಐರಾವತ ಆನೆI
ಇಂದ್ರಜಿತನ ಬಳಿ ಧಾವಿಸಿದ ಬಂಧಿಸಲು; II
ಅದೃಶ್ಯನಾಗಿ ಮೇಘನಾದ ಸುತ್ತುತಿದ್ದ ಆಕಾಶದಲಿI
ಸುರಿಸುತ್ತ ಬಾಣಗಳ ಮಳೆ ಇಂದ್ರನ್ಮೇಲೆ, II
ಪರದಾಡಿ ದಣಿಯುವಂತೆ ಮಾಡಿದ ಇಂದ್ರನ,I
ಬಂಧಿಸಿದ ಇಂದ್ರನ ತನ್ನ ಮಾಟವಿದ್ಯೇದಿ; II
ಇಂದ್ರನ ಬಂಧಿಸಿ ಮೇಘನಾದ ಒಯ್ದನಂತರI
ದೇವತೆಗಳು ʼಏನಾಯಿತು?ʼ ಎಂದು ಕಿರುಚಿದರು; II
ಕೋಪದಿ ದೇವತೆಗಳು ಪ್ರಯೋಗಿಸಿದರುI
ಅಸ್ತ್ರಗಳನ್ನು ರಾವಣನ್ಮೇಲೆ, ನಿರರ್ಥಕವಾಯಿತು; II
ಮೇಘನಾದನೊಂದಿಗೆ ಸೆಣಸಾಡುತ ವಸು ವ I
ಆದಿತ್ಯರು ದಣಿದರು, ನಿಂತಿತು ಯುಧ್ಧ; II
ಅದೃಶ್ಯರೂಪದಲಿ ಇಂದ್ರಜಿತ ನುಡಿದ:ʻ ಓ ತಂದೆ, ಬಾI
ಇಂದ್ರನನ್ನು ಬಂದಿಸಿರುವೆ, ತಿಲೋಕ ಬಂಧಿಸಿರುವೆ; II
ಇನ್ನು ದೇವತೆಗಳು ಯುದ್ಧಮಾಡಿ ದಣಿಯುವ ಅಗತ್ಯವಿಲ್ಲʼ.I
ಕೇಳಿ ಮೇಘನಾದನ ನುಡಿ ದೇವತೆಗಳು ರಾಕ್ಷಸರು, II
ಮಾಡಿದರು ಯುದ್ಧ ತ್ಯಾಗ, ಪುತ್ರನI
ದ್ವನಿ ಗುರುತಿಸಿ ರಾವಣ ನುಡಿದ: II
ʻನಿನ್ನ ಶೌರ್ಯ ಮಹಾರಥಿಗಳಿಗೆ ಸಮ,I
ನಮ್ಮ ವಂಶ ಕುಲೋಧಾರಕ ನೀನು, II
ದೇವತೆಗಳ ದೇವನನ್ನು ಬಂಧಿಸಿದ ನಿನ್ನ I
ಸಾಮರ್ಥ್ಯ ಅಮೌಲ್ಯಾಂಕೀಯ, ಓ ರಾಜಕುಮಾರನೇ,II
ನಗರದತ್ತ ಹೊರಡು ವಾಸವ ರಥದಲಿI
ನಿನ್ನ ಸೇನೆಯೊಂದಿಗೆ, ಭದ್ರತೆಯಲಿ; II
ಬರುವೆ ನಿನ್ನ ಜೊತೆ ನನ್ನ ಸಕಲI
ರಾಕ್ಷಸ, ದಾನವ ಸೇನೆಯೊಂದಿಗೆ ಸಂಭ್ರಮದಿ; II
ಇಂದ್ರನನ್ನು ಸರಪಳಿಯಲ್ಲಿ ಬಂಧಿಸಿ ಇಂದ್ರಜಿತI
ತನ್ನ ಸೇನೆಯೊಂದಿಗೆ ಕೊಂಡೋಯ್ದ ನಗರಕೆ”.II
ಉತ್ತರಕಾಂಡ
