ಸುಂದರಕಾಂಡ ರಾಮಾಯಣ ಭಾಗ-102

By admin


ಆದರದ ಸೀತೆಗೆ ವಿದಾಯ ಹೇಳಿ ಹನುಮI
ಮನಸಿನಲಿ ಮಾತನಾಡಿಕೊಂಡ ಹನುಮ: “ಇನ್ನೂ ಉಳಿದಿದೆ II
ಸ್ವಲ್ಪ ಕಾರ್ಯ,ನೇರೆವೆರಿಸುವೆ ಈ ಕ್ಷಣI
ತ್ಯಜಿಸಿರುವೆ ಯಶಸ್ಸಿನ ಮೂರು ಉಪಾಯ , ಉಳಿದಿದೆ ನಾಲ್ಕನೇಯ ; II
ರಾಕ್ಷಸರಿಗೆ ಸಾಮ ಅಭ್ಯಾಸವಿಲ್ಲ, ಅಲ್ಲ ಧನ ಯೋಗ್ಯ,I
ಭೇಧ ಸರಿಯಲ್ಲಾ ಅಹಂಕಾರಿಗಳಿಗೆ, ದಂಡವೊಂದೇ ಯೋಗ್ಯ; II
ಶೌರ್ಯ ಹೊರತು ಯಾವುದೇ ಉಪಾಯ ಯೋಗ್ಯ I
ಈ ಸಂದರ್ಭದಲಿ, ಯುದ್ಧ ರಾಕ್ಷಸರ ದೌರ್ಭಲ್ಯ; II
ಸಾಧಿಸಿ ಮುಖ್ಯ ಕಾರ್ಯ, ಅದಕ್ಕೆ ಚ್ಯುತಿಬಾರದಂತೆ I
ಮತ್ತೊಂದು ಕಾರ್ಯದ ಸಾಧನೆಯೇ ಉದ್ಧೇಶ ಪೂರ್ಣಗೊಂಡಂತೆ; II
ಇರದು ಒಂದೇ ಉಪಾಯ ಸಾಧಿಸಲು ಎಷ್ಟೇ ಸಣ್ಣ ಕಾರ್ಯ I
ಬಹು ಉಪಾಯಗಳಿಂದ ಕಾರ್ಯ ಸಾಧಿಸಿದವನೇ ಸಾಧಕ; II
ಪರೀಕ್ಷಿಸದೇ ವೈರಿ ಬಲ ನಾ ಹಿಂದಿರುಗಿದರೆ ಸುಗ್ರೀವನಲ್ಲಿI
ಸಾಧ್ಯವೇ ಎನಗೆ ಸಾಧಿಸಲು ಸುಗ್ರೀವನ ಕಾರ್ಯ? II
ರಾಕ್ಷಸರ ಯುದ್ಧದಲಿ ಎನಗೆ ಜಯ ಹೇಗೆ? ಫಲಕಾರಿಯೇ? I
ಎನ್ನ ಬಲ ಯುದ್ಧದಲಿ ರಾವಣ ಎನ್ನ ಪ್ರಶಂಸಿಸುವನೇ?II
ನಾ ತಿಳಿಯಲೇಬೇಕು ರಾವಣ ಸೈನ್ಯ ಬಲ ರಣತಂತ್ರ,I
ನೋಡಿಯೇ ಹಿಂದಿರುಗುವೆ ಮಂತ್ರಿಬಲ, ಸೈನ್ಯ ವ ರಾವಣನ; II
ಎಷ್ಟೊಂದು ಅಂದವಾಗಿದೆ ರಾವಣನ ತಾಣI
ಕಣ್ಮನ ಸೇಳೆಯುವದು ಗಿಡ ಹೂ ಬಳ್ಳಿವನ; II
ಕಾಡಾಗ್ನಿ ಅರಣ್ಯ ಧ್ವಂಸಿಸಿದಂತೆ ನಾಶಮಾಡುವೆ ಈ ವನI
ಕಂಡು ನಾಶ ರಾವಣ ಸಿಡಿದೇಳುವನು; II
ಯುದ್ಧಕ್ಕೆ ಬರುವವು ರಾವಣನ ಆಜ್ಞೆಯಂತೆI
ಕುದುರೆ ರಥಗಳು ಆನೆಗಳು ರಾಕ್ಷಸರು ಆಯುಧದೊಂದಿಗೆ;II
ಯುದ್ಧದಲಿ ಸಂಹರಿಸಿ ರಾವಣನ ರಾಕ್ಷಸರನುI
ಸುಗ್ರೀವನಲಿ ಸಂತೋಷದಿ ಮರಳುವೆನು”;II
ಕೋಪದಿ ಹನುಮ ಕಿತ್ತೇಸೆದ ಗಿಡ ಮರI
ಅಲ್ಲಾಡಿದವು ಗಿಡ ಮರ, ಸಿಕ್ಕಂತೆ ಬಿರುಗಾಳಿಗೆ; II
ನಾಶವಾಯಿತು ಅಂತಪುರ ವನದೋಟ,I
ಚಿಲಿಪಿಲಿ ಅರುಚಿದವು ಭಯದಲಿ ಹಕ್ಕಿಗಳು; II
ನಾಶ ಪಡಿಸಿದ ಗಿರಿ ಶಿಖರ ಹೊಂಡ ವನ ಹನುಮI
ಕಂಡಿತು ಅಪ್ರೀಯ ದೃಶ್ಯ ಹಾಳಾದ ವನವು; II
ಕಂಡಿತು ವನ ನೊಂದ ಹೆಣ್ಣಿನಂತೆI
ಎಲ್ಲಿಂದಲೂ ಪ್ರಾಣಿ ಪಕ್ಷಿಗಳ ಕಿರುಚಾಟ; II
ನೆಲಕ್ಕುರುಳಿದು ಕಮಾನು ಶಿಲ್ಪಿಗಳು, ನಾಶವಾಯಿತುI
ರಾವಣನ ರಾಣಿಯರು ವಿಹರಿಸುವ ಅಂದದ ವನ; II
ಹನುಮನ ಬಲವಂತಕೆಗೆ ಸಿಕ್ಕ ಅಂದದ ವನI
ಕಂಡಿತು ಬಲತ್ಕೃತ ಸುಂದರ ಸ್ತ್ರೀಯಂತೆ; II
ರಾವಣನ ಮನಸ್ಸಿಗೆ ಅಹಿತ ಮಾಡಿI
ರಾಕ್ಷಸರ ಜತೆ ಯುದ್ಧಕ್ಕೆ ಸಿದ್ಧನಾದ ಹನುಮ. II
ಸುಂದರ ಕಾಂಡ

ಆದಿಕವಿ ವಾಲ್ಮೀಕಿಯು ಹನುಮಾನನು ಸೀತೆಯನ್ನು ಹುಡುಕುವ ಕಾರ್ಯದಲ್ಲಿ ಯಶಸ್ವಿಯಾಗಿ, ವೈರಿಯ ಬಲ ಪರೀಕ್ಷಿಸಲು ರಾವಣನ ಅಂತಪುರದ ವನವನ್ನು ನಾಶ ಪಡಿಸಿ ರಾಕ್ಷಸರೊಂದಿಗೆ ಯುದ್ಧಕ್ಕೆ ಸಜ್ಜಾಗಿ ನಿಂತ ಪ್ರಸಂಗವನ್ನು ವಿವರಿಸಿರುವರು ಹಾಗು ಯಾವುದೇ ಕಾರ್ಯ ಸಾಧಿಸಲು ಅದಕ್ಕೆ ಅನೇಕ ಉಪಾಯ/ಮಾರ್ಗಗಳು ಇರುತ್ತವೆ, ‘ಬಹು ದಾರಿಯಿಂದ ಕಾರ್ಯ ಸಾಧಿಸಿದವನೇ ಸಾಧಕ’ ಎಂಬ ಚಿಂತನೆಯನ್ನು ಇಲ್ಲಿ ಆದಿಕವಿ ಮಂಡಿಸಿರುವರು. ಅದರಲ್ಲಿಯ ಮುಖ್ಯಾಂಶಗಳು: (1) ಹನುಮಾನನಿಂದ ವೈರಿ ಬಲ ಪರೀಕ್ಷೆ ಚಿಂತನೆ: ಆದರದ ಸೀತೆಗೆ ವಿದಾಯ ಹೇಳಿ ಹನುಮನು ತನ್ನ ಮನಸಿನಲಲ್ಲಿ ಹೀಗೆ ಮಾತನಾಡಿಕೊಂಡ “ಇನ್ನೂ ಉಳಿದಿದೆ ಸ್ವಲ್ಪ ಕಾರ್ಯ, ಈ ಕ್ಷಣ ಅದನ್ನು ನೇರೆವೆರಿಸುವೆ, ಯಶಸ್ಸಿನ ನಾಲ್ಕು ಉಪಾಯಗಳಲ್ಲಿ [1. ಭಿನ್ನಭಿಪ್ರಾಯ ತೋರಿಸು (ಭೇಧ), 2.ಸಂಧಾನ (ಸಾಮ), 3. ಲಂಚ (ಧನ) ಮತ್ತು 4. ನೇರ ಹಲ್ಲೆ ಮಾಡುವದು (ದಂಡ)] ಮೂರು ಉಪಾಯಗಳನ್ನು ತ್ಯಜಿಸಿರುವೆ ಯಾಕೆಂದರೆ ಮೊದಲನೆಯದು ರಾಕ್ಷಸರಿಗೆ ಸಾಮ ಅಭ್ಯಾಸವಿಲ್ಲ, ಎರಡನೆಯದು ರಾಕ್ಷಸರಿಗೆ ಧನ ಯೋಗ್ಯ ಅಲ್ಲ ಮತ್ತು ಮೂರನೆಯದು ಅಹಂಕಾರಿಗಳಿಗೆ ಭೇಧ ಸರಿಯಲ್ಲಾ, ಹೀಗಾಗಿ ಉಳಿದಿದ್ದು ನಾಲ್ಕನೆಯ ಉಪಾಯ ಅದು ದಂಡ, ದಂಡವೊಂದೇ ಯೋಗ್ಯ; ಯುದ್ಧ ರಾಕ್ಷಸರ ದೌರ್ಭಲ್ಯ, ಈ ಸಂದರ್ಭದಲಿ ಶೌರ್ಯ ಹೊರತು ಯಾವುದೇ ಉಪಾಯ ಯೋಗ್ಯ, ಈಗಾಗಲೇ ನಾನು ಬಂದ ಮುಖ್ಯ ಕಾರ್ಯ ಸಾಧಿಸಿರುವೆ, ಅದಕ್ಕೆ ಚ್ಯುತಿಬಾರದಂತೆ ಮತ್ತೊಂದು ಕಾರ್ಯದ ಸಾಧಿಸಿದಲ್ಲಿ ನನ್ನ ಬಂದ ಕಾರ್ಯ ಉದ್ಧೇಶ ಪೂರ್ಣಗೊಂಡಂತೆ; ಎಷ್ಟೇ ಸಣ್ಣ ಕಾರ್ಯವಾಗಿದ್ದರೂ ಅದನ್ನು ಸಾಧಿಸಲು ಒಂದೇ ದಾರಿ ಇರುವದಿಲ್ಲ, ಬಹು ದಾರಿಯಿಂದ ಕಾರ್ಯ ಸಾಧಿಸಿದವನೇ ಸಾಧಕ; ನಾನು ವೈರಿ ಬಲವನ್ನು ಪರೀಕ್ಷಿಸದೇ ಹಿಂದಿರುಗಿದರೆ ಸುಗ್ರೀವನ ಕಾರ್ಯ ಸಾಧಿಸಲು ನನಗೆ ಸಾಧ್ಯವಾಗದು, ಯುದ್ಧದಲಿ ರಾಕ್ಷಸರ ಬಲ ತಿಳಿಯದೇ ನನಗೆ ಜಯ ಸಿಗದು, ನನ್ನ ಬಲವನ್ನು ಅದು ಫಲಕಾರಿಯೇ ಎಂದು ಪರೀಕ್ಷಿಸಿಕೊಳ್ಳಬೇಕು, ಯುದ್ಧದಲಿ ರಾವಣನು ನನ್ನ ಬಲ ಕಂಡು ಪ್ರಶಂಸಿಸುವನೇ? ನಾನು ರಾವಣನ ಸೈನ್ಯ ಬಲ ರಣತಂತ್ರವನ್ನು ತಿಳಿಯಲೇಬೇಕು: ರಾವಣನ, ಅವನ ಸೈನ್ಯದ ಮತ್ತು ಮಂತ್ರಿಬಲ ಪರೀಕ್ಷಿಸಿಯೇ ಕಿಷ್ಕಿಂದಕ್ಕೆ ಹಿಂದಿರುಗುವೆನು.” (2) ಹನುಮಾನನಿಂದ ಲಂಕೆಯ ಹೂದೋಟಗಳ ನಾಶ: ಹನುಮಾನನು ರಾವಣನ ಅರಮನೆಯತ್ತ ಬಂದು ಅಲ್ಲಿ ಹೂದೋಟಗಳನ್ನುನೋಡಉತ ಹೀಗೆ ನುಡಿದನು “ರಾವಣನ ಈ ತಾಣ ಎಷ್ಟೊಂದು ಅಂದವಾಗಿದೆ, ಗಿಡ ಹೂ ಬಳ್ಳಿವನ ಕಣ್ಮನ ಸೇಳೆಯುವದು; ಕಾಡಾಗ್ನಿ ಅರಣ್ಯ ಧ್ವಂಸಿಸಿದಂತೆ ನಾನು ನಾಶಮಾಡುವೆ ಈ ವನವನ್ನು, ಅದನ್ನು ಕಂಡು ರಾವಣ ಸಿಡಿದೇಳುವನು; ರಾವಣನ ಆಜ್ಞೆಯಂತೆ ಕುದುರೆ ರಥಗಳು ಆನೆಗಳು ರಾಕ್ಷಸರು ಆಯುಧದೊಂದಿಗೆ ನನ್ನೊಂದಿಗೆ ಯುದ್ಧಕ್ಕೆ ಬರುವವು; ಯುದ್ಧದಲಿ ರಾವಣನ ರಾಕ್ಷಸರನು ಸಂಹರಿಸಿ ಸಂತೋಷದಿಂದ ಸುಗ್ರೀವನತ್ತ ಮರಳುವೆನು”; ಕೋಪದಿಂದ ಹನುಮನು ಗಿಡ ಮರಗಳನ್ನು ಕಿತ್ತೇಸೆದನು, ಗಿಡ ಮರಗಳು ಬಿರುಗಾಳಿಗೆ ಸಿಕ್ಕಂತೆ ಹನುಮಾನನ ಅರ್ಭಟಕ್ಕೆ ಅಲ್ಲಾಡಿದವು, ರಾವಣನ ಅಂತಪುರದ ವನದೋಟವು ನಾಶವಾಯಿತು, ಹಕ್ಕಿಗಳು ಚಿಲಿಪಿಲಿಯೆಂದು ಅರುಚಿದವು; ಹನುಮಾನನು ಗಿರಿ ಶಿಖರ ಹೊಂಡ ವನಗಳನ್ನು ನಾಶ ಪಡಿಸಿದನು, ಹಾಳಾದ ವನದ ದೃಶ್ಯವು ಅಪ್ರೀಯ ಕಂಡಿತು, ವನವು ನೊಂದ ಹೆಣ್ಣಿನಂತೆ ಕಂಡಿತು, ಎಲ್ಲಿಂದಲೂ ಪ್ರಾಣಿ ಪಕ್ಷಿಗಳ ಕಿರುಚಾಟ ತುಂಬಿತ್ತು; ಕಮಾನು ಶಿಲ್ಪಿಗಳು ಹನುಮಾನನ ಹೊಡೆತಕ್ಕೆ ನೆಲಕ್ಕುರುಳಿದು, ರಾವಣನ ರಾಣಿಯರು ವಿಹರಿಸುವ ಅಂದದ ವನ ನಾಶವಾಯಿತು; ಹನುಮನ ಬಲವಂತಕೆಗೆ ಸಿಕ್ಕ ಅಂದದ ವನವು ಬಲತ್ಕೃತ ಸುಂದರ ಸ್ತ್ರೀಯಂತೆ ಕಂಡಿತು; ವನ ನಾಶಮಾಡುವ ಮೂಲಕ ರಾವಣನ ಮನಸ್ಸಿಗೆ ಅಹಿತ ಮಾಡಿ ರಾಕ್ಷಸರ ಜತೆ ಯುದ್ಧಕ್ಕೆ ಹನುಮನು ಸಿದ್ಧನಾದನು. ಸೀತೆಯನ್ನು ಹುಡುಕಿ ಹನುಮಾನನು ರಾಕ್ಷಸರ ಬಲ ತಿಳದು ಕೊಳ್ಳಲು ಅವರೊಂದಿಗೆ ಯುದ್ಧ ಮಾಡಲು ರಾವಣನ ಪ್ರೀತಿಯ ವನವನ್ನು ನಾಶ ಮಾಡಿದ ಸನ್ನಿವೇಸವನ್ನು ಆದಿಕವಿ ವಾಲ್ಮೀಕಿಯು ವಿವರಿಸುವಾಗ ಪರೋಕಷ್ವಾಗಿ ಹನುಮಾನ ಪರಾಕ್ರಮವನ್ನು ವ್ಯಕ್ತಪಡಿಸಿರುವರು.
..ಡಾ. ಅರ್ಜುನ ಯ. ಪಂಗಣ್ಣವರ ವಾಲ್ಮೀಕಿ ಸಾಹಿತ್ಯ ಚಿಂತಕ‌