ನಗರದ ಶ್ರೀಮತಿ ವೀರಮ್ಮಾ ಗಂಗಸಿರಿ ಮಹಿಳಾ ಮಹಾವಿದ್ಯಾಲಯ ಕಲಬುರಗಿ.ರಾಷ್ಟ್ರೀಯ ಸೇವಾ ಯೋಜನಾ ಘಟಕಗಳ ಆಶ್ರಯದಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 148 ನೇ ಜನ್ಮದಿನದ ಅಂಗವಾಗಿ “ರಾಷ್ಟ್ರೀಯ ಏಕತಾ ದಿವಸ” ಅಂಗವಾಗಿ ಪ್ರತಿಜ್ನಾ ವಿಧಿಯನ್ನು ಸ್ವೀಕರಿಸುವ ಮೂಲಕವಾಗಿ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಪ್ರಾಚಾರ್ಯರಾದ ಡಾ.ರಾಜೇಂದ್ರ ಕೊಂಡಾ ,ಉಪ ಪ್ರಾಚಾರ್ಯರಾದ ಡಾ.ವೀಣಾ ಹೆಚ್. ಪ.ಪೂ.ಕಾಲೇಜಿನ ಪ್ರಾಚಾರ್ಯರಾದ ಡಾ.ನಾಗೇಂದ್ರ ಮಸೂತಿ. ರಾ.ಸೇ.ಯೋ.ಘಟಕಗಳ ಕಾರ್ಯಕ್ರಮ ಅಧಿಕಾರಿಗಳು ಹಾಗೂ ಮಹಾವಿದ್ಯಾಲಯದ ಬೋಧಕ – ಬೋಧಕೇತರ ಸಿಬ್ಬಂದಿ ವರ್ಗದವರು ಮತ್ತು ರಾ.ಸೇ.ಯೋ ಸ್ವಯಂಸೇವಕರು ,ವಿದ್ಯಾರ್ಥಿನಿಯರು ಭಾಗವಹಿಸಿದ್ದರು ಪ್ರತಿಜ್ನಾ ವಿಧಿಯನ್ನು ಕನ್ನಡ ವಿಭಾಗದ ಉಪನ್ಯಾಸಕರಾದ ಶ್ರೀಮತಿ ದಾನಮ್ಮ ಇವರು ಬೋಧಿಸಿದರು .ಡಾ.ಮಹೇಶ ಗಂವ್ಹಾರ ಸ್ವಾಗತಿಸಿದರು ,ಶ್ರೀಮತಿ ಸುಷ್ಮಾ ಕುಲಕರ್ಣಿ ವಂದಿಸಿದರು ಎಂದು ಮಹಾವಿದ್ಯಾಲಯದ ನ್ಯಾಕ್ ಸಂಯೋಜಕರಾದ ಡಾ. ಮೋಹನರಾಜ್ ಪತ್ತಾರ ಪತ್ರಿಕಾ ಪ್ರಕಟಣೆಗಾಗಿ ತಿಳಿಸಿದ್ದಾರೆ.
