ಅವಳಿ ಗಂಡು ಮಕ್ಕಳಿಗೆ ಜನ್ಮನೀಡಿದ ಸೀತಾಮಾತೆ…

By admin


ಅತ್ತ ಗುಡಿಸಲಲಿ ಪ್ರವೇಶಿಸಿದ ಶತ್ರುಘ್ನ I
ಇತ್ತ ಮಧ್ಯರಾತ್ರಿ ಸೀತೆ ಜನ್ಮ ಕೊಟ್ಟಳು ಇರ್ವಗಂಡು ಮಕ್ಕಳಿಗೆ; II
ಮಕ್ಕಳ ಜನ್ಮದ ಸಂತೋಷ ಸುದ್ದಿಯನುI
ಮುನಿ ವಾಲ್ಮೀಕಿಗೆ ಮುನಿ ಪತ್ನಿ ಅರುಹಿದಳು:II
“ ಓ ಸುದೈವಿ, ರಾಮನ ಪತ್ನಿ ಜನ್ಮ ನೀಡಿದಳುI
ಅವಳಿ ಜವಳಿ ಗಂಡು ಮಕ್ಕಳಿಗೆ, II
ತಾಯಿ ಮಕ್ಕಳಿಗೆ ಕೆಟ್ಟದಿಟ್ಟಿ ತಗಲದಂತೆ ಪೂಜೆ-ಕಾರ್ಯ ನೆರವೇರಿಸು, I
ರಕ್ಷಿಸು ದುಷ್ಟಾತ್ಮಗಳಿಂದ” II
ಮಡದಿ ರತ್ನಮಾಲಳಿಂದ ತಿಳಿದು ಸುದ್ಧಿ ಮುನಿ ವಾಲ್ಮೀಕಿ I
ನೋಡಲು ಕಂದಮ್ಮಗಳನ್ನು ಹಾತೋರೆದು ಬಂದರು; II
ನೋಡಿ ಸೀತೆ ಬಳಿ ಇದ್ದ ಅವಳಿ ಕಂದಮ್ಮಗಳನ್ನು I
ಸಂತೋಷಪಟ್ಟ ವಾಲ್ಮೀಕಿ ಆಚರಿಸಿದ ಮಕ್ಕಳ ರಕ್ಷಣಾರ್ಥಕಾರ್ಯ:II
ಪಠಿಸುತ ಮಂತ್ರ ವಾಲ್ಮೀಕಿ ಮೊದಲು ಜನಿಸಿದI
ಕಂದನನ್ನು ಕುಶ-ಹುಲ್ಲಿನಿಂದ ಸವರಿದ, ಕುಶನೆಂದು ಕರೆದ,II
ಮುನಿ ಪತ್ನಿ ನಂತರ ಜನಿಸಿದ ಕಂದನನ್ನು ಲವಂಚಿ ಹುಲ್ಲುI
ಬೇರುಗಳಿಂದ ಸವರಿದಳು, ಲವನೇಮದು ಕರೆದು; II
ಮುಗಿಯಿತು ಅವಳಿ ಮಕ್ಕಳಿಗೆ ವಾಲ್ಮೀಕಿ ಮುನಿ ದಂಪತಿಗಳಿಂದI
ಕುಶ, ಲವ, ಎಂದು ನಾಮಕರಣ ವಿಧಿ ವಿಧಾನ;II
ಮುನಿ ಮೊಮ್ಮಕ್ಕಳು ಕುಶಜ ವ ಗೋಮಿತಿ ಸಂತೋಷದಿ I
ಆಚರಿಸಿದರು ಆಶ್ರಮವಾಸಿಗಳ ಜತೆ ನಾಮಕರಣ ವಿಧಿ;II
ವಾಲ್ಮೀಕಿ ಆಶ್ರಮ ತಾಣದಲ್ಲಿ ಎಲ್ಲೆಡೆ ಸಂಭ್ರಮ, I
ಕೇಳಿದ ಸಂಭ್ರಮ ಸದ್ದು ಶತ್ರುಘ್ನ ಗುಡಿಸಲಲಿದ್ದು; ಶ್ರಾವಣ ಮಾಸದ II
ಮಳೆ ರಾತ್ರಿ ಗುಡಿಸಿಲಲ್ಲಿ ಕಳೆದು ಶತ್ರುಘ್ನ ಮುಂಜಾವಿನಲ್ಲಿ, I
ಸಜ್ಜಾಗಿ ಮುನಿಗಳಿಗೆ ನಮಸ್ಕರಿಸಿ ಬೆಳಿಸಿದ ಪಯಣ;II
ನಿರಂತರ ಏಳು ದಿನಗಳ ಪಯಣ ಮುಗಿಸಿI
ತಲುಪಿದ ಯಮುನಾನದಿ ದಡ ಶತ್ರುಘ್ನ; II
ಬಂದು ಭೃಗುಕುಲಜ ಚ್ಯವನ ಮುನಿ ಆಶ್ರಮಕ್ಕೆ ಶತ್ರುಘ್ನ, I
ಕಳೆದನು ರಾತ್ರಿ ಆಶ್ರಮದಲಿ ಮುನಿಗಳೊಂದಿಗೆ. II
ಉತ್ತರಕಾಂಡ

ಶತ್ರುಘ್ನು ವಾಲ್ಮೀಕಿ ಆಶ್ರದಲ್ಲಿ ವಾಸವಾದ ರಾತ್ರಿಯೇ ಸೀತೆಯು ಕುಶ ಮತ್ತು ಲವರಿಗೆ ಜನ್ಮಕೊಟ್ಟ, ನಾಮಕರಣ ಸಂಭ್ರಮದ ಸದ್ದು ತಿಳಿದ ಶತ್ರುಘ್ನ ಮತ್ತು ಮಾರನೆಯ ದಿನ ಶತ್ರುಘ್ನ ಪುನಃ ಪಯಣ ಬೇಳೆಸಿ ಯುಮುನಾ ನದಿ ದಡ ತಲುಪಿದ ಪ್ರಸಂಗವನ್ನು ವಿವರಿಸಿರುವರು, ಇಲ್ಲಿ ಕುಶ ಮತ್ತು ಲವ ಇಬ್ಬರೂ ಶ್ರಾವಣ ಮಾಸದಲಿ ಹುಟ್ಟಿದ ಉಲ್ಲೇಖವನ್ನು ಆದಿಕವಿ ವಾಲ್ಮೀಕಿಯು ಹೀಗೆ ನೀಡಿರುವರು: ಅತ್ತ ಗುಡಿಸಲಲಿ ಶತ್ರುಘ್ನ ಪ್ರವೇಶಿಸಿದನು, ಇತ್ತ ಮಧ್ಯರಾತ್ರಿ ಸೀತೆಯು ಎರಡು ಗಂಡು ಮಕ್ಕಳಿಗೆ ಜನ್ಮಕೊಟ್ಟಳು; ಸೀತೆಯು ಮಕ್ಕಳಿಗೆ ಜನ್ಮ ನೀಡಿದ ಸಂತೋಷದ ಸುದ್ದಿಯನ್ನು ಮುನಿ ಪತ್ನಿಯು ವಾಲ್ಮೀಕಿಗೆ ಮುನಿ ಅರುಹಿದಳು “ ಓ ಸುದೈವಿ, ರಾಮನ ಪತ್ನಿ ಅವಳಿ ಜವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದಳು, ತಾಯಿ ಮಕ್ಕಳಿಗೆ ಕೆಟ್ಟದಿಟ್ಟಿ ತಗಲದಂತೆ ಪೂಜೆ-ಕಾರ್ಯ ನೆರವೇರಿಸು, ರಕ್ಷಿಸು ದುಷ್ಟಾತ್ಮಗಳಿಂದ”. ಮಡದಿ ರತ್ನಮಾಲಳಿಂದ ಸುದ್ಧಿಯನ್ನು ತಿಳಿದು ಮುನಿ ವಾಲ್ಮೀಕಿಯು ಕಂದಮ್ಮಗಳನ್ನು ನೋಡಲು ಹಾತೋರೆದು ಬಂದರು; ಸೀತೆ ಬಳಿಯಲ್ಲಿಯೆ ಇದ್ದ ಅವಳಿ ಕಂದಮ್ಮಗಳನ್ನು ನೋಡಿ ಸಂತೋಷಪಟ್ಟ ವಾಲ್ಮೀಕಿಯು ಮಕ್ಕಳ ರಕ್ಷಣಾರ್ಥಕಾರ್ಯ ಆಚರಿಸಿದರು: ಪಠಿಸುತ ಮಂತ್ರ ವಾಲ್ಮೀಕಿಯು ಮೊದಲು ಜನಿಸಿದ ಕಂದನನ್ನು ಕುಶ-ಹುಲ್ಲಿನಿಂದ ಸವರಿ ʻಕುಶʼನೆಂದು ನಾಮಕರಣ ಮಾಡಿದರ; ಮುನಿ ಪತ್ನಿಯು ನಂತರ ಜನಿಸಿದ ಕಂದನನ್ನು ಲವಂಚಿ ಹುಲ್ಲು ಬೇರುಗಳಿಂದ ಸವರಿ ʻಲವʼ ಎಂದು ನಾಮಕರಣ ಮಾಡಿದರು;ಅವಳಿ ಮಕ್ಕಳಿಗೆ ವಾಲ್ಮೀಕಿ ಮುನಿ ದಂಪತಿಗಳಿಂದ ಕುಶ, ಲವ, ಎಂದು ನಾಮಕರಣ ಮಾಡಿದ ವಿಧಿ ವಿಧಾನ ಮುಗಿಯಿತು; ವಾಲ್ಮೀಕಿ ಮುನಿಯ ಮೊಮ್ಮಕ್ಕಳು ಕುಶಜ ಮತ್ತು ಗೋಮಿತಿ ಸಂತೋಷದಿಂದ ಆಶ್ರಮವಾಸಿಗಳ ಜತೆ ನಾಮಕರಣ ವಿಧಿ ಆಚರಿಸಿದರು; ವಾಲ್ಮೀಕಿ ಆಶ್ರಮ ತಾಣದಲ್ಲಿ ಎಲ್ಲೆಡೆ ನಾಮಕರಣ ಸಂಭ್ರಮ ನಡೆದಿತ್ತು, ಗುಡಿಸಲಲಿದ್ದ ಶತ್ರುಘ್ನನಿಗೆ ಸಂಭ್ರಮ ಸದ್ದು ಕೇಳಿಸಿತು; ಶತ್ರುಘ್ನನು ಶ್ರಾವಣ ಮಾಸದ ಮಳೆ ರಾತ್ರಿಯನ್ನು ಗುಡಿಸಿಲಲ್ಲಿ ಕಳೆದನು, ಮುಂಜಾವಿನಲ್ಲಿ ಎದ್ದು ಸಜ್ಜಾಗಿ ಮುನಿಗಳಿಗೆ ನಮಸ್ಕರಿಸಿ ತನ್ನ ಪಯಣವನ್ನು ಬೆಳಿಸಿದನು; ನಿರಂತರ ಏಳು ದಿನಗಳ ಪಯಣ ಮುಗಿಸಿ ಶತ್ರುಘ್ನನು ಯಮುನಾನದಿ ದಡ ತಲುಪಿದನು ಹಾಗು ಭೃಗುಕುಲಜ ಚ್ಯವನ ಮುನಿ ಆಶ್ರಮಕ್ಕೆ ಬಂದು ಶತ್ರುಘ್ನನು ರಾತ್ರಿಯನ್ನು ಆಶ್ರಮದಲಿ ಮುನಿಗಳೊಂದಿಗೆ ಕಳೆದನು.
-ಡಾ. ಅರ್ಜುನ ಯ. ಪಂಗಣ್ಣವರ ವಾಲ್ಮೀಕಿ ಸಾಹಿತ್ಯ ಚಿಂತಕ‌.