ರಕ್ತಹೀನತೆ ತಡೆಗಟ್ಟುವಲ್ಲಿ ಯುವಕರ ಪಾತ್ರ ಮುಖ್ಯ : ಡಾ.ಮಮತಾ ಪಾಟೀಲ

By admin


ಕಲಬುರಗಿ: ಇಂದು ರಾಜ್ಯ ಮತ್ತು ಕೇಂದ್ರ ಸರಕಾರಗಳು ರಕ್ತಹೀನತೆ ಮುಕ್ತ ರಾಷ್ಟ್ರ ನಿರ್ಮಾಣಕ್ಕೆ ಪಣತೊಟ್ಟಿದ್ದು ಸರಕಾರದ ಕಾರ್ಯಕ್ರಮಗಳು ಯಶಸ್ವಿಯಾಗಿಸುವಲ್ಲಿ ಯುವಕ- ಯುವತಿಯರ ಪಾತ್ರ ಬಹಳ ಮುಖ್ಯವಾದದ್ದು ಎಂದು ಹೇಳಿದರು.ಮನುಷ್ಯ ಆರೋಗ್ಯವಂತನಾಗಿರಲು ಪೌಷ್ಟೀಕ ಆಹಾರ ಸೇವನೆಯ ಅವಶ್ಯಕತೆ ಇದೆ.ಎಂದು ಗುಲಬರ್ಗಾ ವೈದ್ಯಕೀಯ ಮಹಾವಿದ್ಯಾಲಯ ಕಲಬುರಗಿಯ ರಕ್ತ ನಿಧಿ( ಬ್ಲಡ್ ಬ್ಯಾಂಕ) ನ ಮುಖ್ಯಸ್ಥರಾದ ಡಾ.ಮಮತಾ ಪಾಟೀಲ ಅವರು ಮಿಲೇನಿಯಂ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದ ರಾ.ಸೇ.ಯೋ.ಘಟಕಗಳು ಮತ್ತು UNICEF ಯುನಿಸೆಫ್ ಹಾಗೂ ಮಹಾದೇವಪ್ಪ ರಾಂಪುರೆ ವೈದ್ಯಕೀಯ ಮಹಾವಿದ್ಯಾಲಯದ ನಗರ ಸಮುದಾಯ ಆರೋಗ್ಯ ಕೇಂದ್ರ ರಾಜಾಪುರ ಕಲಬುರಗಿ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ “ರಕ್ತಹೀನತೆ ಮುಕ್ತ ಪೌಷ್ಟಿಕ ಕರ್ನಾಟಕ” ಕಾರ್ಯಕ್ರಮದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಮಾತನಾಡಿದರು ಮುಂದುವರೆದು ಮಾತನಾಡಿದ ಅವರು ಇಂದು ಯುವಕ ಯುವತಿಯರು ಪೌಷ್ಟಿಕ ಆಹಾರ ಸೇವನೆ ಬಿಟ್ಟು ಝಂಕ್ ಪದಾರ್ಥಗಳ ಹಿಂದೆ ಬಿದ್ದು ತಮ್ಮ‌ಆರೋಗ್ಯವನ್ನು ಕೆಡಿಸಿಕೊಳ್ಳುತ್ತಿದ್ದಾರೆ ಅದರಲ್ಲೂ ವಿಶೇಷವಾಗಿ ಯುವಕ- ಯುವತಿಯರು ಹೆಚ್ಚಾಗಿ ಚಹಾ,ಕಾಫಿ ಸೇವನೆ ಮಾಡುವುದರಿಂದ ಹಸಿರು ತರಕಾರಿಗಳನ್ನು ಸೇವಿಸದೆ ಇರುವುದರಿಂದ ಹದಿಹರೆಯದ ವಯೋಮಾನದವರಲ್ಲಿ ರಕ್ತಹೀನತೆಯಂತಹ ತೊಂದರೆ ಜೊತೆಗೆ ಮಾನಸಿಕ ಮತ್ತು ದೈಹಿಕ ದುರ್ಬಲತೆ ಹೆಚ್ಚಾಗುತ್ತಿವೆ ಎಂದು ಹೇಳಿದರು .
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಶ್ರೀ ಸಿದ್ಧರಾಮ ದಿಗ್ಗಿಕರ್ ಅವರು ವಹಿಸಿಕೊಂಡು ಮಾತನಾಡುತ್ತಾ ಇಂದಿನ ಯುವಕ ಯುವತಿಯರಿಗೆ ಊಟ ಮಾಡುವ ಬಗ್ಗೆ ಇಂತಹ ಜಾಗೃತಿ ಮುಡಿಸುವ ಕಾರ್ಯಕ್ರಮಗಳ ಅವಶ್ಯಕತೆ ಇದೆ ಎಂದು ಹೇಳಿದರು. ಮಿಲೆನಿಯಂ ಕಾಲೇಜಿನ ಪ್ರಾಚಾರ್ಯರಾದ ಶ್ರೀ ಸಂಗಮೇಶ ಕುಂಬಾರ ಅವರ ನೇತೃತ್ವದಲ್ಲಿ ಕಾರ್ಯಕ್ರಮ ಜರುಗಿತು.
.ರಾ.ಸೇ.ಯೋ.ಕಾರ್ಯಕ್ರಮಾಧಿಕಾರಿ ಡಾ.ಮಹೇಶ ಗಂವ್ಹಾರ ಪ್ರಾಸ್ತಾವಿಕ ಮಾತುಗಳನ್ನಾಡಿ ಎಲ್ಲರನ್ನೂ ಸ್ವಾಗತಿಸಿದರು,ರಾ.ಸೇ.ಯೋ.ಸ್ವಯಂ ಸೇವಕರಾದ ಕುಮಾರಿ ಸುಷ್ಮಾ ಬೆನುರ ಇವರು ಕಾರ್ಯಕ್ರಮ ನಿರುಪಿಸಿದರು .ಕುಮಾರಿ ಸುಮತಿ,ರುಚಿಕಾ,ಹಾಗೂ ನಂದಿನಿ ಪ್ರಾರ್ಥಿಸಿದರು ,ಕನ್ನಡ ಉಪನ್ಯಾಸಕರಾದ ಲಕ್ಚ್ಮೀಕಾಂತ ವಂದಿಸಿದರು.ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ನ್ಯಾಕ್ ಸಂಯೋಜಕರಾದ ಡಾ.ಮೋಹನರಾಜ್ ಪತ್ತಾರ ಪ್ರಾಧ್ಯಾಪಕರಾದ ಡಾ.ಪ್ರೇಮಚಂದ ಚವ್ಹಾಣ,ಉಪನ್ಯಾಸಕರಾದ ಶ್ರೀ ಸಂಗಮೇಶ ತುಪ್ಪದ,ಶ್ರೀ ಸಿದ್ದಲಿಂಗ ಬಾಶಟ್ಟಿ ಮಿಲೇನಿಯಂ ಮಹಾವಿದ್ಯಾಲಯದ ಉಪನ್ಯಾಸಕರಾದ ಶ್ರೀ ಮಹೇಶ ,ಶ್ರೀ ರೇವಣಸಿದ್ದಪ್ಪ ದೋತ್ರೆ,ಶ್ರೀ ನಾಗರಾಜ ಪಾಂಚಾಳ,ಶ್ರೀ ಹಾವೇಶ ಸಿಂಧೆ ,ಶ್ರೀ ಶ್ರೀಕಾಂತ ,ಶ್ರೀಮತಿ ರೇಣುಕಾ ಸಗರ,ಶ್ರೀಮತಿ ಜ್ಯೋತಿ ,ಶ್ರೀಮತಿ ಸುವರ್ಣ,ಕುಮಾರಿ ಶೃತಿಕಾ ಕುಮಾರಿ.ಅರ್ಚನಾ .ಬಿ.ವಿದ್ಯಾರ್ಥಿ – ವಿದ್ಯಾರ್ಥಿನಿಯರು ಭಾಗವಹಿಸಿದ್ದರು ಎಂದು ಉಪನ್ಯಾಸಕರಾದ ಶ್ರೀ ಸಂಗಮೇಶ ತುಪ್ಪದ  ತಿಳಿಸಿದ್ದಾರೆ.