
ಕೇಳಿ ಬ್ರಾಹ್ಮಣ ಮುನಿ ನಾರದರ ಪರಾಮರ್ಶೆI
ರಾಮನು ಲಕ್ಷ್ಮಣನಿಗೆ ಆದೇಶಿಸಿದ:” ಓ ಸ್ನೇಹಿತನೆ, II
ನೀನು ವಚನ ಪಾಲಕ, ಹೋಗಿ ಆ ಮುದಿ ಸಾಂತ್ವನ ಹೇಳಿ,I
ತೈಲ ಪಾತ್ರೆಯಲ್ಲಿ ಇಡು ಮೃತ ಬಾಲಕನ ಶವ,II
ಶವ ಕೊಳೆಯದಂತೆ ಸುಗಂಧ ದ್ರವ್ಯಗಳಲಿಟ್ಟುI
ಬಾಲಕನ ಶವ ಸುರಕ್ಷತೆದಿ ಕಾಪಾಡಲು ವ್ಯವಸ್ಥಿಸು”. II
ಲಕ್ಷ್ಮಣನಿಗೆ ಹೇಳುತ ಜ್ಞಾಪಿಸಿಕೊಂಡ ಆದೇಶಿಸಿದ I
ಪುಷ್ಪಕವಿಮಾನ ತನ್ನ ಬಳಿ ಬರುವಂತೆ ರಾಮ;II
ತಕ್ಷಣ ಪುಷ್ಪಕ ವಿಮಾನ ಹಾಜರಾಯಿತು ರಾಮನ ಸೇವೆಗೆ, I
ತನ್ನೊಂದಿಗೆ ಬರಲು ಮುನಿಗಳನ್ನು ಅರುಹಿದ ರಾಮ; II
ರಾಮನ ಕೋರಿಕೆಯಂತೆ ಮುನಿಗಳು ಏರಿದರುI
ಪುಷ್ಪಕವಿಮಾನ, ರಾಮನೊಂದಿಗೆ ಹೋರಡಲು ಸಜ್ಜಾಗಿ;II
ಎರಡು ಬೆತ್ತಳಿಕೆ ಧರಿಸಿಧನುಷ್ಯ ಧರಿಸಿ ಖಡ್ಗ ಹಿಡಿದು I
ರಾಮ ಏರಿದ ಪುಷ್ಪಕ ವಿಮಾನ; ಭರತ ವ ಲಕ್ಷಣನಿಗೆ ರಾಜ್ಯ II
ರಕ್ಷಿಸಿಕೊಂಡು ಹೋಗುವಂತೆ ಆದೇಶಿಸಿದ, I
ಹೇಳಿದ ಪಶ್ಚಿಮದತ್ತ ಪಯಣಿಸಲು ಪುಷ್ಪಕ ವಿಮಾನಕ್ಕೆ ರಾಮ;II
ಪಶ್ಚಿಮಕ್ಕೆ ಚಲಿಸುತಿದ್ದಂತೆ ಆದೇಶಿಸಿದ ರಾಮI
ವಿಮಾನಕ್ಕೆ ಉತ್ತರಕ್ಕೆ ಹಿಮಾಲಯದತ್ತ ಹೊರಡಲು;II
ವೀಕ್ಷಿಸಿದ ಪಶ್ಚಿಮ ಉತ್ತರ ಪ್ರದೇಶಗಳಲ್ಲಿ, ತಿಳಿಯಲುI
ಎಲ್ಲಾದರೂ ಪಾಪದ ಕೃತ್ಯಗಳು ನಡೆದಿವೆಯೆಂದು; II
ಪೂರ್ವದತ್ತ ಹೊರಡುತ ವೀಕ್ಷಿಸಿದ ರಾಮI
ಜನರ ಚಟುವಟಿಕೆಗಳನ್ನು, ಮುನಿಗಳೊಂದಿಗೆ; II
ಮುಂದೆ ಪಯಣಿಸಿದರು ದಕ್ಷಿಣ ಪ್ರದೇಶಗಳತ್ತ ವೀಕ್ಷಿಸಲುI
ಜನರ ಚಟುವಟಿಕೆಗಳನ್ನು, ಪಾಪಕೃತ್ಯಗಳನು;II
ಕಂಡರು ದಕ್ಷಿಣ ವಲಯದಲ್ಲಿ ಶೈವಲ ಪರ್ವತ,I
ಅದರ ಬದಿ ವಿಶಾಲ ಸರೋವರವಿತ್ತು; II
ಸರೋವರದಡದಲಿ ಮುನಿಯೊಬ್ಬ ನಿರತನಾಗಿದ್ದ ತಪಸ್ಸಿನಲಿ I
ತಲೆ ಕೆಳಗಡೆ ಮಾಡಿ ಜೋತುಬಿಟ್ಟು ,ಆಕಾಶದತ್ತ II
ಪಾದಮಾಡಿ; ನಡೆಸಿದ್ದ ದೀರ್ಘ ಕಠೋರ ತಪಸ್ಸು ವಿಲೋಮನಾಗಿI
ತಪಸ್ವಿ, ಅವನ ಬಳಿ ಬಂದು ನುಡಿದ ರಾಮ: II
“ಓ ತಪಸ್ವಿಯೇ, ನಿನ್ನ ವಿಶ್ವಾಸಿಕರು ಯಾರು?I
ತಪಸ್ಸಿನಲ್ಲಿಯೇ ನೀನು ವೃದ್ಧನಾಗಿರುವಿ, ಯಾವ ನೇತಾರಿಗಾಗಿ? II
ನಾನು ಧಶರಥಪುತ್ರ ರಾಮ,ತಿಳಿಯಬೇಕಾಗಿದೆI
ನಿನ್ನ ವಿಷಯ, ನಿನ್ನ ತಪಸ್ಸಿನ ಉದ್ಧೇಶಗಳೇನು? II
ಸ್ವರ್ಗ ಇಲ್ಲವೇ ಮತ್ತೇನಾದರು ವರ ಬಯಸುವೇಯಾ?I
ನಿನ್ನ ತಪಸ್ಸಿನ ಗುಟ್ಟು ಎನಗೆ ತಿಳಿಯಬೇಕಾಗಿದೆ; II
ಓ ತಪಸ್ವಿಯೇ! ನೀನು ಸಮೃದ್ಧನಾಗು, ಸತ್ಯ ಹೇಳುI
ಎನಗೆ ನೀನ್ಯಾರು? ನಿನ್ನ ತಪಸ್ಸಿನ ಗುಟ್ಟೇನು?” II
ಕೇಳಿ ದಶರಥಪುತ್ರ ಅಯೋಧ್ಯಾಪತಿ ರಾಮನI
ಕುತೂಹಲದ ಪ್ರಶ್ನೆಗಳನ್ನು ತಪಸ್ವಿ ನಸು ನಕ್ಕನು. II
ಉತ್ತರಕಾಂಡ
ರಾಮನು ಮುನಿಗಳೊಂದಿಗೆ ತನ್ನ ರಾಜ್ಯದಲ್ಲಿ ಎಲ್ಲಾದರೂ ಕುಕೃತ್ಯ, ಪಾಪದ ಕೃತ್ಯಗಳು ನಡೆದಿರುವವೇ, ಅವು ಬ್ರಾಹಣ ಬಾಲಕನ ಸಾವಿಗೆ ಕಾರಣವೇ, ತಿಳಿಯಲು ಪುಷ್ಪಕವಿಮಾನದಲ್ಲಿ ಪೂರ್ವ, ಪಶ್ಚಿಮ, ಉತ್ತರ ಮತ್ತು ದಕ್ಷಿಣ ಪ್ರದೇಶಗಳಲ್ಲಿ ವೈಮಾನಿಕ ವೀಕ್ಷಣೆ ನಡೆಸಿದ ಹಾಗು ದಕ್ಷಿಣದಲ್ಲಿ ಸೈವಲ ಪರ್ವತದ ಬಳಿ ತಲೆ ಕೇಳಗೆ ಮಾಡಿ ತಪಸ್ಸು ಮಾಡುವ ತಪಸ್ವಿಯನ್ನು ಕಂಡು ರಾಮನು ಅವಳ ಬಳಿ ಬಂದು ಅವನ ಬಗ್ಗೆ ತಿಳಿದು ಕೊಳ್ಳುವ ಪ್ರಯಾಸವನ್ನು ಆದಿಕವಿ ವಾಲ್ಮೀಕಿಯು ಹೀಗೆ ವಿವರಿಸಿರುವರು. ಸಭೆಯಲ್ಲಿ ಬ್ರಾಹ್ಮಣ ಮುನಿ ನಾರದರ ಪರಾಮರ್ಶೆ ಕೇಳಿ ರಾಮನು ಲಕ್ಷ್ಮಣನಿಗೆ ಆದೇಶಿಸಿದನು” ಓ ಸ್ನೇಹಿತನೆ, ನೀನು ವಚನ ಪಾಲಕ, ಹೋಗಿ ಆ ಮುದಿ ಬ್ರಾಹ್ಮಣನಿಗೆ ಸ್ವಾಂತನ ಹೇಳಿ, ತೈಲ ಪಾತ್ರೆಯಲ್ಲಿ ಮೃತ ಬಾಲಕನ ಶವ ಇಡು, ಶವ ಕೊಳೆಯದಂತೆ ಸುಗಂಧ ದ್ರವ್ಯಗಳಲಿಟ್ಟು ಬಾಲಕನ ಶವ ಸುರಕ್ಷತೆಯಿಂದ ಕಾಪಾಡಲು ವ್ಯವಸ್ಥಿಸು”. ರಾಮನು ಲಕ್ಷ್ಮಣನಿಗೆ ಆದೇಶಿಸುತ್ತ ತಾನು ಪುಷ್ಪಕವಿಮಾನವನ್ನು ಜ್ಞಾಪಿಸಿಕೊಂಡನು ಹಾಗು ಪುಷ್ಪಕವಿಮಾನಿಗೆ ತನ್ನ ಬಳಿ ಬರುವಂತೆ ಆದೇಶಿಸಿದ; ತಕ್ಷಣ ಪುಷ್ಪಕ ವಿಮಾನವು ರಾಮನ ಸೇವೆಗೆ ಹಾಜರಾಯಿತು, ರಾಮನು ಮುನಿಗಳನ್ನು ತನ್ನೊಂದಿಗೆ ಪುಷ್ಪಕವಿಮಾನದಲ್ಲಿ ಬರಲು ಅರುಹಿದನು; ರಾಮನ ಕೋರಿಕೆಯಂತೆ ಮುನಿಗಳು ರಾಮನೊಂದಿಗೆ ಹೊರಡಲು ಸಜ್ಜಾಗಿ ಪುಷ್ಪಕವಿಮಾನವನ್ನು ಏರಿದರು; ಎರಡು ಬೆತ್ತಳಿಕೆ ಮತ್ತು ಧನುಷ್ಯ ಧರಿಸಿ, ಖಡ್ಗ ಹಿಡಿದು ರಾಮನು ಪುಷ್ಪಕ ವಿಮಾನವನ್ನು ಏರಿದನು; ಭರತ ಮತ್ತು ಲಕ್ಷಣನಿಗೆ ರಾಜ್ಯ ರಕ್ಷಿಸಿಕೊಂಡು ಹೋಗುವಂತೆ ಆದೇಶಿಸಿದನು; ರಾಮನು ಪುಷ್ಪಕ ವಿಮಾನಕ್ಕೆ ಪಶ್ಚಿಮದತ್ತ ಪಯಣಿಸಲು ಆದೇಶಿಸಿದನು, ಪುಷ್ಪಕ ವಿಮಾನವು ಪಶ್ಚಿಮಕ್ಕೆ ಚಲಿಸುತಿದ್ದಂತೆ ಅಲ್ಲಿ ವೈಮಾನಿಕ ವೀಕ್ಷಣೆ ನಡೆಸಿ ರಾಮನು ವಿಮಾನಕ್ಕೆ ಉತ್ತರಕ್ಕೆ ಹಿಮಾಲಯದತ್ತ ಹೊರಡಲು ಆದೇಶಿಸಿದನು; ಎಲ್ಲಾದರೂ ಪಾಪದ ಕೃತ್ಯಗಳು ನಡೆದಿವೆಯೆಂದು ತಿಳಿಯಲು ಪಶ್ಚಿಮ ಮತ್ತು ಉತ್ತರ ಪ್ರದೇಶಗಳಲ್ಲಿ ರಾಮನು ವೀಕ್ಷಿಸಿದನು; ನಂತರ ಪೂರ್ವದತ್ತ ಹೊರಡುತ ಮುನಿಗಳೊಂದಿಗೆ ರಾಮನು ಜನರ ಚಟುವಟಿಕೆಗಳನ್ನು ವೀಕ್ಷಿಸಿದನು; ಅಲ್ಲಿಂದ ಮುಂದೆ ಜನರ ಚಟುವಟಿಕೆಗಳನ್ನು, ಪಾಪಕೃತ್ಯಗಳನು ವೀಕ್ಷಿಸಲು ದಕ್ಷಿಣ ಪ್ರದೇಶಗಳತ್ತ ಪಯಣಿಸಿದರು; ದಕ್ಷಿಣ ವಲಯದಲ್ಲಿ ಶೈವಲ ಪರ್ವತದ ಬಳಿ ವಿಶಾಲ ಸರೋವರದಡದಲಿ ಮುನಿಯೊಬ್ಬ ತಪಸ್ಸಿನಲಿ ನಿರತನಾಗಿದ್ದನ್ನು ಕಂಡರು; ಆ ಮುನಿಯು ತನ್ನ ತಲೆ ಕೆಳಗಡೆ ಮಾಡಿ ಜೋತುಬಿಟ್ಟು, ಆಕಾಶದತ್ತ ಪಾದ ಮಾಡಿ ದೀರ್ಘ ಕಠೋರ ತಪಸ್ಸು ಮಾಡುತಿದ್ದನು; ರಾಮನು ಅವನ ಬಳಿ ಬಂದು ವಿಚಾರಿಸಿದನು “ ಓ ಸುದೈವಿ ತಪಸ್ವಿಯೇ, ನಿನ್ನ ಯಾರ ದರ್ಶನಕ್ಕಾಗಿ ತಪಸ್ಸು ಮಾಡುತ್ತಿರುವಿ? ತಪಸ್ಸಿನಲಿಯೇ ನೀನು ವೃದ್ಧನಾಗಿರುವಿ, ನೀನು ಯಾರಿಗಾಗಿ ತಪಸ್ಸು ಮಾಡುತ್ತಿರುವಿ? ನಾನು ಧಶರಥಪುತ್ರ ರಾಮನು, ನಿನ್ನ ವಿಷಯ ತಿಳಿಯಬೇಕಾಗಿದೆ, ನಿನ್ನ ತಪಸ್ಸಿನ ಉದ್ಧೇಶಗಳೇನು? ಸ್ವರ್ಗ ಇಲ್ಲವೇ ಮತ್ತೇನಾದರು ವರ ಬಯಸುವೇಯಾ? ನಿನ್ನ ತಪಸ್ಸಿನ ಗುಟ್ಟು ನನಗೆ ತಿಳಿಯಬೇಕಾಗಿದೆ; ಓ ತಪಸ್ವಿಯೇ! ನೀನು ಸಮೃದ್ಧನಾಗು, ಸತ್ಯ ಹೇಳು ನನಗೆ ನೀನ್ಯಾರು? ನಿನ್ನ ತಪಸ್ಸಿನ ಗುಟ್ಟೇನು?” ದಶರಥಪುತ್ರ ಅಯೋಧ್ಯಾಪತಿ ರಾಮನ ಕುತೂಹಲದ ಪ್ರಶ್ನೆಗಳನ್ನು ಕೇಳಿ ತಪಸ್ವಿ ನಸು ನಕ್ಕನು. ಸಕಲವಿದ್ಯೆಯನ್ನು ಬಲ್ಲ ಮತ್ತು ಸ್ವತಃಕ್ಕೆ ಆತ್ಮಜ್ಞಾನಿಯಾದ ರಾಮನ ಪ್ರಶ್ನೆಗಳನ್ನು ಕೇಳಿ ಶಂಬೂಕ ನಕ್ಕಿದ್ದರ ಮೂಲಕ ವಾಲ್ಮೀಕಿಯು ತಪಸ್ವಿ ಶಂಬೂಕನ ಉಧಾರತೆಯನ್ನು ತಿಳಿಸಿರುವರು
-ಡಾ. ಅರ್ಜುನ ಯ. ಪಂಗಣ್ಣವರ ವಾಲ್ಮೀಕಿ ಸಾಹಿತ್ಯ ಚಿಂತಕ.
