

ಭರತ ಸೈನಿಕರೊಂದಿಗೆ ಸಕಲರನ್ನು ಕರೆದುಕೊಂಡು I
ನೈಮಿಶ ಅರಣ್ಯದತ್ತ ಸಾಗಿದ,ಅಶ್ವಮೇಧ ಯಜ್ಞ ಸಿದ್ದತೆಗೆ;II
ಅಜಾನುಬಾಹು ಭರತ ಯಜ್ಞದ ಸುಂದರ ಸ್ಥಳ ಬಳಿ ಬಂದ, I
ಕಂಡು ಅದನ್ನು” ಎಷ್ಟೊಂದು ಅದ್ಭುತ!” ಉಧ್ಗರಿಸಿದ;II
ಭರತನು ನೈಮಿಶ ಅರಣ್ಯಕ್ಕೆ ಬರುವಾಗ ಯಜ್ಞಕ್ಕೆ ಬೇಕಾಗುವ I
ಎಲ್ಲ ಸಾಮಗ್ರಿ ಸರಂಜಾಮಗಳನ್ನು,ನಿಪುಣರನ್ನು ತಂದನು; II
ಸದಾ ಸಿದ್ದರಾದರು ಭರತ ವ ಶತ್ರುಘ್ನರು ರಾಮನ ಸೇವೆಗೆ, I
ಬಂದರು ಸುಗ್ರೀವ, ವಿಭೀಷಣರು ತಮ್ಮ ಸಂಬಂಧಿಕರು, II
ವೀರರು, ಸೇನೆಗಳೊಂದಿಗೆ;ಬ್ರಾಹ್ಮಣ, ಸ್ತ್ರೀ, I
ಮಕ್ಕಳು ವೃದ್ಧರು ಕಲಾಕಾರರು ಸಕಲ ಸಿದ್ದತೆಯೊಂದಿಗೆ II
ಭರತನೊಂದಿಗೆ ಬಂದರು ನೈಮಿಶ ಅರಣ್ಯಕ್ಕೆ, I
ಅಶ್ವಮೇಧಯಜ್ಞಕ್ಕಾಗಿ; ಇಟ್ಟಿದ ಲಕ್ಷ ಲಕ್ಷ್ಮಣನು II
ಬರುವ ಹೋಗುವ ಕುದುರೆ ಸವಾರರ ಮೇಲೆ, I
ಯಾವುದೇ ಅನಾಹುತವಾಗದಂತೆ; ಎಲ್ಲವೂ ನೆರವೇರಿತು II
ರಾಮನ ಇಚ್ಚೆಯಂತೆ ಅಶ್ವಮೇಧ ಯಜ್ಞ ಏರ್ಪಟ್ಟಿತು ರಾಮನ ಇಚ್ಚೆಯಂತೆ; I
ಬಂದ ವಾನರ, ರಾಕ್ಷಸ, ಎಲ್ಲ ಅತಿಥಿಗಳಿಗೆ II
ನೀಡಿದರು ಮನ ತುಂಬುವ ಚಿನ್ನಾಭರಣಗಳ ಕಾಣಿಕೆ; I
“ಶುಕ್ರ, ಸೋಮ, ಯಮ, ವರುಣ, ಯಾರಿಂದನೂII
ಆಗದಂತಹ ಅಶ್ವಮೇಧ ಯಜ್ಞ ರಾಮನಿಂದಾಯಿತು!”I
ಹೀಗೆ ಉಧ್ಗರಿಸಿದರು ಋಷಿ ಮುನಿಗಳು ಬ್ರಾಹ್ಮಣII
ಪುರೋಹಿತರು, ನೆರೆದ ಎಲ್ಲ ಅತಿಥಿಗಳು; I
ಸಕಲ ಪರಂಪರೆಯಂತೆ ಏರ್ಪಟ್ಟಿತು II
ರಾಮನಿಂದ ಅಶ್ವಮೇಧ ಯಜ್ಞ ನೈಮಿಶ I
ಅರಣ್ಯದ ಗೋಮತಿನದಿ ದಡದಲ್ಲಿ. II
ಉತ್ತರಕಾಂಡ
ನೈಮಿಶ ಅರಣ್ಯದ ಗೋಮತಿನದಿ ದಡದಲ್ಲಿ ರಾಮನ ಇಚ್ಚೆಯಂತೆ ಅಶ್ವಮೇಧಯಜ್ಞ ಏರ್ಪಟ್ಟ, ಯಜ್ಞಕ್ಕೆ ಎಲ್ಲ ಆಮಂತ್ರಿತರು ಆಗಮಿಸಿದ, ಅವರಿಗೆ ಸತ್ಕಾರ, ಕಾಣಿಕೆ ನೀಡಿದ ಸಂಗತಿಯನ್ನು ಆದಿಕವಿ ವಾಲ್ಮೀಕಿಯು ಹೀಗೆ ವಿವರಿಸಿರುವರು: ಅಶ್ವಮೇಧ ಯಜ್ಞ ಸಿದ್ದತೆಗೆ ಭರತ ಸೈನಿಕರೊಂದಿಗೆ ಸಕಲರನ್ನು ಕರೆದುಕೊಂಡು ನೈಮಿಶ ಅರಣ್ಯದತ್ತ ಸಾಗಿದನು; ಅಜಾನುಬಾಹು ಭರತನು ಯಜ್ಞದ ಸುಂದರ ಸ್ಥಳ ಬಳಿ ಬಂದು ಅದನ್ನು ಕಂಡು ಅದನ್ನು” ಎಷ್ಟೊಂದು ಅದ್ಭುತ!” ಎಂದು ಉಧ್ಗರಿಸಿದನು; ಭರತನು ನೈಮಿಶ ಅರಣ್ಯಕ್ಕೆ ಬರುವಾಗ ಯಜ್ಞಕ್ಕೆ ಬೇಕಾಗುವ ಎಲ್ಲ ಸಾಮಗ್ರಿ ಸರಂಜಾಮಗಳನ್ನು,ನಿಪುಣರನ್ನು ತಂದನು; ಭರತ ಮತ್ತು ಶತ್ರುಘ್ನರು ರಾಮನ ಸೇವೆಗೆ ಸದಾ ಸಿದ್ದರಾದರು, ಸುಗ್ರೀವ, ವಿಭೀಷಣರು ತಮ್ಮ ಸಂಬಂಧಿಕರು, ವೀರರು, ಸೇನೆಗಳೊಂದಿಗೆ ಯಜ್ಞ ಸ್ಥಳಕ್ಕೆ ಬಂದರು; ಬ್ರಾಹ್ಮಣ, ಸ್ತ್ರೀ, ಮಕ್ಕಳು ವೃದ್ಧರು ಕಲಾಕಾರರು ಸಕಲ ಸಿದ್ದತೆಯೊಂದಿಗೆ ಅಶ್ವಮೇಧಯಜ್ಞಕ್ಕಾಗಿ ನೈಮಿಶ ಅರಣ್ಯಕ್ಕೆ ಭರತನೊಂದಿಗೆ ಬಂದರು; ಲಕ್ಷ್ಮಣನು ಅಲ್ಲಿ ಯಾವುದೇ ಅನಾಹುತವಾಗದಂತೆ ಬರುವ ಹೋಗುವ ಕುದುರೆ ಸವಾರರ ಮೇಲೆ ಲಕ್ಷ ಇಟ್ಟಿದ; ರಾಮನ ಇಚ್ಚೆಯಂತೆ ಎಲ್ಲವೂ ನೆರವೇರಿತು,ಅಶ್ವಮೇಧ ಯಜ್ಞ ಏರ್ಪಟ್ಟಿತು; ಬಂದ ವಾನರ, ರಾಕ್ಷಸ, ಎಲ್ಲ ಅತಿಥಿಗಳಿಗೆ ಮನ ತುಂಬುವ ಚಿನ್ನಾಭರಣಗಳ ಕಾಣಿಕೆಗಳನ್ನು ನೀಡಿದರು; “ಶುಕ್ರ, ಸೋಮ, ಯಮ, ವರುಣ, ಯಾರಿಂದನೂ ಆಗದಂತಹ ಅಶ್ವಮೇಧ ಯಜ್ಞ ರಾಮನಿಂದಾಯಿತು!” ಎಂದು ಋಷಿ ಮುನಿಗಳು ಬ್ರಾಹ್ಮಣ ಪುರೋಹಿತರು, ನೆರೆದ ಎಲ್ಲ ಅತಿಥಿಗಳು ಉಧ್ಗರಿಸಿದರು; ನೈಮಿಶ ಅರಣ್ಯದ ಗೋಮತಿನದಿ ದಡದಲ್ಲಿ ರಾಮನಿಂದ ಅಶ್ವಮೇಧ ಯಜ್ಞ ಸಕಲ ಪರಂಪರೆಯಂತೆ ಏರ್ಪಟ್ಟಿತು.
-ಡಾ. ಅರ್ಜುನ ಯ. ಪಂಗಣ್ಣವರ ವಾಲ್ಮೀಕಿ ಸಾಹಿತ್ಯ ಚಿಂತಕ.
