
ಜಗತ್ತಿನಲ್ಲಿ ಅನೇಕ ರಾಷ್ಟ್ರಗಳು ತಮ್ಮದೇಯಾದ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದವು. ಅಂತಹ ದೇಶಗಳ ಅಬ್ಯುದಯಕ್ಕೆ ಹಲವು ಸುಧಾರಕರು ಅವತರಿಸಿ ಆಯಾ ಸಮಾಜದ ಪರಿವರ್ತನೆಗೆ ಕಾರಣವಾಗಿದ್ದು ಇತಿಹಾಸ. ನಮ್ಮ ದೇಶವು ಅಂತಹ ಹತ್ತುಹಲವು ಸಮಸ್ಯೆಗಳ ಆಗರವಾಗಿತ್ತು, ಇಂತಹ ಸಂಧರ್ಭದಲ್ಲಿ ಅನೇಕ ಸಮಾಜಸುಧಾರಕರು, ಚಿಂತಕರು, ಶಿವಶರಣರು, ಧಾರ್ಶನಿಕರು, ಇಲ್ಲಿ ಜನ್ಮವೆತ್ತಿ ಸಮಾಜದ ಅನೇಕ ಸಮಸ್ಯೆಗಳಿಗೆ ಪರಿಹಾರವನ್ನು ಕೊಟ್ಟಿರುವಂತದ್ದು ಎಲ್ಲರಿಗೂ ತಿಳಿದಿರುವ ವಿಚಾರ. ಅಂತಹ ಅನೇಕ ಶಿವಶರಣರು, ದಾರ್ಶನಿಕರಲ್ಲಿ ಕಡಕೋಳ ಮಡಿವಾಳಪ್ಪನವರು ಕೂಡ ಒಬ್ಬರು. ಮಡಿವಾಳಪ್ಪನವರು ಕೇವಲ ಸಾಹಿತ್ಯದ ದೃಷ್ಟಿಯಿಂದ ತತ್ವಪದಗಳನ್ನು ರಚಿಸದೆ, ಸಮಾಜದ ಪರಿವರ್ತನೆಯ ನೆಲೆಯಲ್ಲಿ ತತ್ವಪದಗಳನ್ನು ಸಮಾಜಕ್ಕೆ ನೀಡಿರುವದು ಸ್ಪಷ್ಟವಾಗುತ್ತದೆ. ಇವರ ತತ್ವಪದಗಳಲ್ಲಿ ಅನೇಕ ರೀತಿಯ ಮಾನವೀಯ ಮೌಲ್ಯಗಳು, ಆದರ್ಶಗಳು, ಸಂಸ್ಕಾರ,ಜೀವಪರನಿಲುವು ಮುಂತಾದವುಗಳು ಸಮೃದ್ಧವಾಗಿವೆ. ಇಂತಹ ಅನೇಕ ಮೌಲ್ಯಗಳು ಸಮಾಜದ ಪರಿವರ್ತನೆಗೆ ಕಾರಣವಾಗುತ್ತವೆ.ಸಾಮಾಜಿಕ ಬದ್ಧತೆ, ಕಾಳಜಿಗಳನ್ನು ಆರಂಭದಿಂದಲೆ ರೂಡಿಸಿಕೊಂಡ ಮಡಿವಾಳಪ್ಪನವರು ಯಾವಾಗಲೂ ಸಮಾಜದ ಕುರಿತು ಚಿಂತಿಸುತ್ತಿದ್ದರು, ಸಮಾಜದ ಒಳಿತು ಅವರ ಕನಸಾಗಿತ್ತು, ಈ ದೆಸೆಯಲ್ಲಿ ಸದಾ ಅವರು ಅನೇಕ ಕಾರ್ಯಗಳು ಕೈಗೊಳ್ಳುತ್ತಿದ್ದರು. ಮಡಿವಾಳಪ್ಪನವರ ಈ ರೀತಿಯ ಬದುಕು ಅವರ ಸಮಾಜಮುಖಿಯ ಚಿಂತನೆಯನ್ನು ಪ್ರತಿಬಿಂಬಿಸುತ್ತದೆ. ಹಾಗಾಗಿ ಮಡಿವಾಳಪ್ಪನವರನ್ನು ಸಮಾಜ ಸುಧಾರಕರ ನೆಲೆಯಲ್ಲಿ ಅರ್ಥಮಾಡಿಕೊಳ್ಳಬೇಕಿದೆ, ಆದ್ಯಾತ್ಮಿಕ ಮತ್ತು ತತ್ವಪದಿಯ ಕ್ಷೆತ್ರಗಳ ಆಚೆಯ ಅವರ ವ್ಯಕ್ತಿತ್ವದ ಪರಿಚಯ ಮಾಡಿಸಬೇಕಿದೆ. ಮಾನವ ಸಮೂಹದ ಅನೇಕ ಸಂವೇದನೆಗಳಿಗೆ ಅವರು ಧ್ವನಿಯಾಗಿದ್ದಾರೆ ಸಮಾಜಲ್ಲಿದ್ದಂತಹ ಅನೇಕ ಬೂಟಾಟಿಕೆಗಳಿಗೆ ತಿಕ್ಷಣವಾಗಿ ಪ್ರತಿಕ್ರಿಯಿಸಿದ್ದಾರೆ. ಅಂಧನುಚಾರಣೆಗಳನ್ನು ಬಲವಾಗಿ ವಿರೋಧಿಸಿದ್ದಾರೆ, ದೇವರು ದೈವದ ಬಗ್ಗೆ ಸ್ಪಷ್ಟವಾದ ನಿಲುವನ್ನು ಹೊಂದಿದ್ದರು. ದೇವರನ್ನು ಒಳಿಸಿಕೊಳ್ಳಲು ಪರಿಶುದ್ದವಾದ ಭಕ್ತಿಯೆ ಮುಖ್ಯ ಹೊರತು ಮತ್ತಾವ ವಿಧಿವಿಧಾನಗಳಲ್ಲ ಎನ್ನುವ ಅಂತಿಮ ಸತ್ಯವನ್ನು ಸಮಾಜಕ್ಕೆ ಸಾರಿದ್ದಾರೆ, ಮನುಷ್ಯನಲ್ಲಿರುವ ಅಜ್ಞಾನ, ಅಂಧಕಾರಗಳನ್ನು ಹೋಗಲಾಡಿಸುವಲ್ಲಿ ಇವರ ತತ್ವಪದಗಳು ಗಂಭೀರವಾಗಿ ಕೆಲಸ ಮಾಡಿವೆ.ಮಡಿವಾಳಪ್ಪನವರ ಸಾಹಿತ್ಯ ಕೆಲವೆ ವಿಷಯಗಳಿಗೆ ಸೀಮಿತವಾಗದೆ, ಹಲವು ಉಪಯುಕ್ತ ವಿಷಯಗಳ ಆಗರವಾಗಿದೆ. ಸಮಾಜದ ಅನೇಕ ಜ್ವಲಂತ ಸಮಸ್ಯೆಗನ್ನು ಹೋಗಲಾಡಿಸಿ, ವೈಚಾರಿಕ ಸಮಾಜವನ್ನು ಸ್ಥಾಪಿಸುವ ಮೂಲ ಆಶಯಗಳನ್ನು ಇವರ ಸಾಹಿತ್ಯ ಹೊಂದಿದ್ದು,ಇವರು ಸಮಾಜದ ಕುರಿತಾಗಿ ಹೊಂದಿರುವ ಕಾಳಜಿಯನ್ನು ತೋರಿಸುತ್ತದೆ.ಹಾಗಾಗಿ ಮಡಿವಾಳಪ್ಪನವರನ್ನು ಕೇವಲ ಕೆಲವೆ ನೆಲೆಗಳಲ್ಲಿ ಗ್ರಹಿಸಿಕೊಳ್ಳದೆ ಬಹುಮುಖಿ ನೆಲೆಗಳಲ್ಲಿ ಮಡಿವಾಳಪ್ಪನವರನ್ನು ಗ್ರಹಿಸಿಕೊಳ್ಳಬೇಕಾಗಿದೆ. ಆ ಮೂಲಕ ಇವರನ್ನು ಸಮಾಜ ಸುಧಾರಕರನ್ನಾಗಿ ಗ್ರಹಿಸಿಕೊಳ್ಳಬೇಕು, ಇವರ ಚಿಂತನೆಗಳು ಖಂಡಿತವಾಗಿ ಸಮಾಜದ ಪರಿವರ್ತನೆಗೆ ಕಾರಣವಾಗಿವೆ. ಇವರ ಎಲ್ಲಾ ಚಿಂತನೆಗಳನ್ನು ಜಾಗತಿಕ ಮುಟ್ಟಿಸಬೇಕಾದ ಅಗತ್ಯೆತೆ ಇದೆ. ಆ ಮೂಲಕ ಮಡಿವಾಳಪ್ಪ ನವರನ್ನು ಜಾಗತಿಕ ಚಿಂತಕರನ್ನಾಗಿ ಗ್ರಹಿಸುವ ಅವಶ್ಯಕತೆಯಿದೆ. ಈ ಮೂಲಕ ಮಡಿವಾಳಪ್ಪನವರ ಕೊಡುಗೆಗಳನ್ನು ಅಮರವಾಗಿಸೋಣ.ಮಹಾಜ್ಞಾನಿ, ತತ್ವಪದಕಾರರು ವೈಚಾರಿಕ ಚಿಂತಕರಾದ, ಕಡಕೋಳ ಮಡಿವಾಳಪ್ಪ ಅವರ ಕುರಿತು ಬಹುಮುಖಿ ನೆಲೆಯಲ್ಲಿ ಚರ್ಚೆಯಾಗಬೇಕಿದೆ, ಕನ್ನಡ ಸಾಹಿತ್ಯ ಮತ್ತು ಚರಿತ್ರೆಯಲ್ಲಿ ಅವರ ಅಚ್ಚಳಿಯದ ಹೆಜ್ಜೆಗುರುತುಗಳನ್ನು ಹೆಚ್ಚು ಪ್ರಚುರ ಪಡಿಸಬೇಕಿದೆ, ಕಡಕೋಳ ಮಡಿವಾಳಪ್ಪನವರ ತತ್ವಪದಗಳನ್ನು ಪ್ರೇರಣೆಯಾಗಿಸಿಕೊಂಡು ಕೆಲ ಸಾಹಿತಿಗಳು ಬಂಡಾಯದ ರೀತಿಯ ಕಾವ್ಯ, ಕಥನ ಸೃಷ್ಟಿಸಿ ಮುನ್ನೆಲೆಗೆ ಬಂದಿದ್ದಾರೆ. ಮಡಿವಾಳಪ್ಪ ತತ್ವಪದಗಳು ಸಮಾಜದಲ್ಲಿ ಹೊಸ ಪರಿವರ್ತನೆಗೆ ಕಾರಣವಾಗಿವೆ. ಇವು ಕೇವಲ ತತ್ವಪದಗಳಲ್ಲದೆ ಸಮಾಜದಲ್ಲಿ ಬೇರುರಿದ್ದ ಹಲವು ಜಾಡ್ಯಗಳನ್ನು ಹೋಗಲಾಡಿಸುವಲ್ಲಿ ಕೆಲಸ ಮಾಡಿವೆ, ಇದ್ದದ್ದನ್ನು ಇದ್ದ ಹಾಗೆ ಖಂಡಿಸಿದ ಇಂತಹ ಮೇಧಾವಿಯನ್ನು ಜಗತ್ತಿನಲ್ಲಿ ಎಲ್ಲಿಯೂ ಸಿಗುವದಿಲ್ಲ. ನವ ಸಮಾಜದ ಪರಿಕಲ್ಪನೆಗಳನ್ನು ಇವರ ಚಿಂತನೆಗಳಲ್ಲಿ ಕಾಣಬಹುದಾಗಿದೆ. ಸಮಾಜದ ಕುರಿತಾಗಿ ಇವರು ಹೊಂದಿದ್ದ ಮುನ್ನೊಟಗಳು ಇಂದಿಗೂ ಪ್ರಸ್ತುತವಾಗಿವೆ. ಬಹುಮುಖಿ ನೆಲೆಯಿಂದ ಸಮಾಜವನ್ನು ಗ್ರಹಿಸಿದ ಅಪರೂಪದtaಸಾಮಾಜಿಕ ಚಿಂತಕರನ್ನಾಗಿ ಇಂದು ಸಮಾಜ ಇವರನ್ನು ಅರ್ಥಮದುಕೊಳ್ಳಬೇಕಿದೆ. ಅಂದಶ್ರುದ್ದೆ, ಕಂಧಾಚಾರ, ಮೈಲಿಗೆ, ಮೂಡಿಚಟ್ಟು ಮುಂತಾದ ಮನಸಿನ ವ್ಯಾಸನಗಳನ್ನು ಮುಲಾಜಿಲ್ಲದೆ ಅವುಗಳನ್ನು ಕಡುವಾಗಿ ವಿರೋಧಿಸಿದ್ದಾರೆ. ಹಲವು ಸಾಮಾಜಿಕ ಅಂಶಗಳನ್ನು ಆದ್ಯಾತ್ಮಿಕ ನೆಲೆಯಲ್ಲಿ ಪರಿಶೋದಿಸಿದ್ದಾರೆ. ಆದ್ಯಾತ್ಮಿಕ ಕ್ಷೇತವು ಸಾಮಾಜಿಕ ಬದಲಾವಣೆಗಳಿಗೆ ತೆರೆದುಕೊಳ್ಳಬೇಕೆಂದು ಬಲವಾಗಿ ಹಂಬಲಿಸಿದ್ದವರ. ವಯಕ್ತಿಕ ಬದಲಾವಣೆ, ಸಮುದಾಯದ ಬದಲಾವಣೆಗೆ ಆ ಮೂಲಕ ಸಾಮಾಜಿಕ ಬದಲಾವಣೆಗೆ ಕಾರಣವಾಗುತ್ತದೆ ಎಂದು ಗ್ರಹಿಸಿದ್ದ ಒಬ್ಬ ಸಾಮಾಜಿಕ ತಜ್ಞರಾಗಿದ್ದರು. ಇವರ ಎಲ್ಲಾ ತತ್ವಪದಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಇವರು ಅತಿಯಾಗಿ ಕಾಳಜಿವಹಿಸುತ್ತಿದ್ದುದ್ದು ಏಣಿಶ್ರೇಣಿ ಮುಕ್ತ ಸಮಾಜ, ಕಂದಾಚಾರ ರಹಿತ ಸಮಾಜವನ್ನು, ಹಾಗಾಗಿ ಇವರ ಚಿಂತನೆಗಳು ಸಮುದಾಯಿಕ ಅಂಶಗಳನ್ನು ಪುಷ್ಟಿಕರಿಸುತ್ತವೆ. ಜಗತ್ತನ್ನು ಕವಿದಿರುವ ಅಂಧಕಾರವನ್ನು ಹೋಗಲಾಡಿಸುವಲ್ಲಿ ವೈಚಾರಿಕ ಮನಸ್ಥಿತಿ ಬಹಳ ಮುಖ್ಯವೆಂದು ನಂಬಿದ್ದರು. ವೈಚಾರಿಕತೆಯ ಪ್ರಸರಣವೆ ಪ್ರಧಾನ ಅಂಶವಾಗಿ ಇವರ ತತ್ವಪದಗಳನ್ನು ನಾವು ಗ್ರಹಿಸಬಹುದಾಗಿದೆ. ಮಡಿವಾಳಪ್ಪನವರು ಕೇವಲ ತತ್ವಪದಕಾರರಾಗಿ, ಸಾಹಿತ್ಯವನ್ನುಪ್ರಚುರಪಡಿಸುವ ವ್ಯಕ್ತಿಯಾಗಿ ಕಾಣಿಸದೆ, ಅವರೊಬ್ಬ ಸಮಾಜ ಸುಧಾರಕರಾಗಿ ಕಂಡುಬರುತ್ತಾರೆ. ಹೀಗೆ ಇಂದಿನ ನಾಡಿನ ವಿದ್ವತ್ತ ವಲಯ ಮಡಿವಾಳಪ್ಪನವರನ್ನು ಗ್ರಹಿಸಬೇಕಿದೆ. ಉತ್ತಮ ಸಮಜ ನಿರ್ಮಾಣದ ಹಲವು ಅಂಶಗಳನ್ನು ತಮ್ಮ ಚಿಂತನೆಗಳಲ್ಲಿ ದಾಖಲಿಸಿದ್ದಾರೆ. ಇಂತಹ ಅನೇಕ ಅಂಶಗಳನ್ನು ಸಾಮಾಜಿಕ ಅಭಿವೃದ್ಧಿಯಲ್ಲಿ ಇಂದಿನ ಸಮಾಜ ಬಳಸಿಕೊಳ್ಳಬೇಕಾಗಿದೆ.
-ಡಾ.ಸಾಯಿಬಣ್ಣ ಮುಡಬೂಳ
