ನಿರುದ್ಯೋಗಸ್ಥರು ರಾಮ್ಕಿ ಫೌಂಡಷನ್ ನ ಸದುಪಯೋಗ ಪಡೆದುಕೊಳ್ಳಿ, ವಿಜಯ ಪಾಟೀಲ್.

By admin

ಯಾದಗಿರಿ : ರಾಮ್ಕಿ ಸಹಯೋಗದಲ್ಲಿ ತರಬೇತಿಯನ್ನು ಪಡೆದು ಉನ್ನತ ಹುದ್ದೆಯನ್ನು ಪಡೆದು ಉತ್ತಮ ಜೀವನ ಮಟ್ಟವನ್ನು ಕಂಡುಕೊಳ್ಳಬೇಕು ಹಾಗೂ ಫೌಂಡೇಶನ್ ನ ಪ್ರತಿಯೊಂದು ಅವಕಾಶಗಳನ್ನು ಸದುಪಯೋಗ ಪಡೆಯಬೇಕು ಎಂದು ಕೌಶಲ್ಯ ಅಭಿವೃದ್ಧಿ ವಿಭಾಗ ವ್ಯವಸ್ಥಾಪಕ ನಿರ್ದೇಶಕ ವಿಜಯ್ ಕುಮಾರ್ ಪಾಟೀಲ್ ತಿಳಿಸಿದರು.
ಶುಕ್ರವಾರ ಬೆಳಿಗ್ಗೆ ನಗರದ ಚಿತ್ತಾಪುರ ರಸ್ತೆಯ ಹಳೆ ನಗರಸಭೆ ಪಕ್ಕದ ರಾಮ್ಕಿ ಫೌಂಡೇಶನ್ ಕೌಶಲ್ಯ ಅಭಿವೃದ್ಧಿ ತರಬೇತಿ ಕೇಂದ್ರದಲ್ಲಿ ನಡೆದ ಪ್ರಮಾಣ ಪತ್ರ ಹಾಗೂ ಉದ್ಯೋಗ ಖಾತ್ರಿ ಪತ್ರಗಳನ್ನು ನೀಡುವ
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಯಾದಗಿರಿ ನಗರದಲ್ಲಿ ಕಳೆದ ಎರಡು ತಿಂಗಳ ಹಿಂದೆಯಷ್ಟೇ ಆರಂಭಗೊಂಡ ರಾಮ್ಕಿ ಫೌಂಡೇಶನ್ ತರಬೇತಿ ಕೇಂದ್ರದಿಂದ ಇಂದು ಎರಡು ತಿಂಗಳ ಉಚಿತ ಅಭಿವೃದ್ಧಿಯ ತರಬೇತಿಯನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳು ರಾಮ್ಕಿ ಫೌಂಡೇಶನ್ ತರಬೇತಿಯಿಂದ ನೀಡುವ ಪ್ರಮಾಣಪತ್ರವು ತರಬೇತಿ ಪಡೆದ ವಿದ್ಯಾರ್ಥಿಗಳ ಜೀವನ ಮಟ್ಟವನ್ನು ಉತ್ತಮಗೊಳಿಸಿ ದೊಡ್ಡ ದೊಡ್ಡ ನಗರಗಳಲ್ಲಿನ ಉತ್ತಮ ಕಂಪನಿಗಳಲ್ಲಿ ಉದ್ಯೋಗ ಪಡೆದುಕೊಳ್ಳಿ ಎಂದರು.
ನೀತಿ ಆಯೋಗದ ಸಹಾಯಕ ವ್ಯವಸ್ಥಾಪಕ ಸುಮೀತ್ ಮೆಹೇತಾ ಮಾತನಾಡಿ ರಾಮ್ಕಿ ಫೌಂಡೇಶನ್ ತರಬೇತಿ ಕೇಂದ್ರದಿಂದ ಯಾದಗಿರಿಯಲ್ಲಿ ನಿರುದ್ಯೋಗಿ ಯುವಕ, ಯುವತಿಯರಿಗೆ ಉಚಿತ ತರಬೇತಿ ನೀಡಿ ಸೂಕ್ತ ಉದ್ಯೋಗ ಕಲ್ಪಿಸಿಕೊಡಲಾಗಿ ನಗರ ಸೇರಿದಂತೆ ವಿವಿಧ ವಲಯಗಳಲ್ಲಿ ತರಬೇತಿಯನ್ನು ಉಚಿತವಾಗಿ ನೀಡಿ ತರಬೇತಿ ಪಡೆದ ಅಭ್ಯರ್ಥಿಗಳಿಗೆ ವಿವಿಧ ಕಂಪನಿಗಳಲ್ಲಿ ಉದ್ಯೋಗಾವಕಾಶಗಳನ್ನು ಪಡೆಯಿರಿ.
ಅರ್ಹ ಅಭ್ಯರ್ಥಿಗಳು ಈ ಅಮೂಲ್ಯ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಉತ್ತಮ ಜೀವನ ನಿರ್ವಹಣೆ ಪಡೆದುಕೊಳ್ಳಿರಿ ಎಂದರು.
ಈ ಸಂಧರ್ಭದಲ್ಲಿ ರಾಮ್ಕಿ ಫೌಂಡೇಶನ್ ನ ಕೇಂದ್ರ ವ್ಯವಸ್ಥಾಪಕ ಶ್ರೀನಿವಾಸ್, ಉದ್ಯೋಗ ವ್ಯವಸ್ಥಾಪಕ ವಿಜಯ್ ಕುಮಾರ್ ಉಳಗೊಳ್, ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.