ಕೇಳಿ ವಿರಹಪೀಡಿತ ರಾಮನ ಕೋಪ, ಕಿಷ್ಕಿಂಧಕಾಂಡ ರಾಮಾಯಣ ಭಾಗ-8

By admin


ಕೇಳಿ ವಿರಹಪೀಡಿತ ರಾಮನ ಕೋಪ I
ತಾಪದ ನುಡಿಗಳ ನುಡಿದ ಲಕ್ಷ್ಮಣ: II
“ವಾಲಿ-ಹತ್ಯೆದಿ ರಾಜ್ಯ ಮಡದಿ ಸುಖ ಹಿಂಪಡೆದಿಹನುI
ಸುಗ್ರೀವ, ಅವುಗಳು ಅವನಿಗೆ ಇನ್ನು ಸಿಗವು, II
ಸುಖಭೋಗಗಳಲಿ ಮತಿಹೀನನಾಗಿಹನು ಸುಗ್ರೀವI
ವಾಲಿ ಗತಿಕಾಣಲಿ, ಕೃತಘ್ನರಿಗೆ ರಾಜ್ಯ ಸಲ್ಲದು, II
ಅಸತ್ಯ ಸುಗ್ರೀವನ ವಧಿಸಿ, ಪಟ್ಟಗಟ್ಟುವೆ ಅಂಗದನ,I
ಸೀತೆಯನು ಅರಸೋಣ,ಸಹಾಯದಿ ಅಂಗದನ”; II
ಕೇಳಿ ಲಕ್ಷ್ಮಣನ ಕೋಪದ ನುಡಿಗಳ ರಾಮ ನುಡಿದ:I
“ಇಲ್ಲ ಲೋಕದಲಿ ಇಂತಹ ಪಾಪ ಮಾಡುವ ನಿನ್ನಂತಹ ವ್ಯಕ್ತಿ, II
ಸಭ್ಯತೆದಿ ಕೋಪಗೆದ್ದ ವೀರನೇ ಪುರುಷೋತ್ತಮ,I
ಓ ಲಕ್ಷ್ಮಣಾ, ನಿನಗೆ ಸಲ್ಲದೀ ನಡತೆ, II
ಸೇರಿಕೊಂಡು ಸುಗ್ರೀವನೊಂದಿಗೆ ಸ್ನೇಹದಿI
ಬಗೆಹರಿಸಿಕೊಳ್ಳೋಣ ನಮ್ಮ ವ್ಯವಹಾರ, II
ಹಿತವಾಗಿ ಮಾತನಾಡು ಸುಗ್ರೀವನಿಗೆI
ಪಡೆದುಕೋ ನಮ್ಮ ಕಾರ್ಯ ಸಮಯ ಚೌಕಟ್ಟು”;II
ಲಕ್ಷ್ಮಣನಿಗೆ ಹಿತದ ಪಾಠ ಕಲಿಸಿI
ಕಿಷ್ಕಿಂಧಕ್ಕೆ ಕಳಿಸಿದ ರಾಮ, II

ಸೀತೆಯ ವಿರಹ ಪೀಡಿತ ರಾಮನ ಕೋಪ ತಾಪದ ಮಾತುಗಳನ್ನು ಕೇಳಿ ಲಕ್ಷ್ಮಣನು ಕೆರಳಿದ ಮತ್ತು ಅವನನ್ನು ರಾಮನು ಸಮಾದಾನ ಪಡಿಸಿದ ಸನ್ನಿವೇಶವನ್ನು ಆದಿಕವಿ ವಾಲ್ಮೀಕಿಯು ಮಾರ್ಮಿಕವಾಗಿ ವಿವರಿಸಿರುವರು: (1) ಕೃತಘ್ನರಿಗೆ ರಾಜ್ಯ ಸಲ್ಲದು— ಉಪಕಾರಕ್ಕೆ ಪ್ರತ್ಯುಪಕಾರ ಮಾಡದ ಸ್ವಭಾವದ ವ್ಯಕ್ಯಿ ನಂಬಲರ್ಹನು ಅಂತವನು ರಾಜ್ಯ ಆಳಲು ಅಯೋಗ್ಯನು, ವಾಲಿ-ಹತ್ಯೆದಿಂದ ಸುಗ್ರೀವನು ತನ್ನ ರಾಜ್ಯ ಮತ್ತು ಮಡದಿ ಸುಖವನ್ನು ಹಿಂಪಡೆದು ಸುಖಭೋಗಗಳಲ್ಲಿ ಮಿಂದ ಮತಿಹೀನನಾಗಿರುವನು, ಅವನು ತನ್ನ ವಚನ ಮರೆತಿರುವನು, ವಾಲಿ ಕಂಡ ಸ್ಥಿತಿಯನ್ನೇ ಅವನಿಗೂ ಕಾಣಿಸಬೇಕು ಕೃತಘ್ನರಿಗೆ ರಾಜ್ಯ ಸಲ್ಲದು, ಅಸತ್ಯ ಸುಗ್ರೀವನನ್ನು ಕೊಂದು ಅಂಗದನಿಗೆ ಪಟ್ಟಗಟ್ಟುವೆ ಮತ್ತು ಅಂಗದನ ಸಹಾಯದಿಂದ ಸೀತೆಯನು ಹುಡುಕೋಣ ಎಂದು ಸಿಡಿಮಿಡಿಗೊಂಡು ಕೋಪದಲ್ಲಿ ಲಕ್ಷ್ಮಣನು ಮಾತಾಡುವನು, ವಚನ ಕೊಟ್ಟು ಅದನ್ನು ನಡೆಸಿ ಕೊಡುವದನ್ನು ಮರೆತರೆ ಅಂತಹವರ ವಿರುದ್ಧ ಕೋಪ ಬರುವದು ಸಹಜ ಎಂಬ ಆಲೋಚನೆಯನ್ನು ಆದಿಕವಿ ವಾಲ್ಮೀಕಿಯು ಲಕ್ಷ್ಮಣನ ಮೂಲಕ ವ್ಯಕ್ತ ಪಡಿಸಿರುವರು,(2) ಲಕ್ಷ್ಮಣನ ಕೋಪದ ಮಾತುಗಳನ್ನು ಕೇಳಿದ ರಾಮನು ಪಾಪದ ಕಾರ್ಯ ನಡತೆ ಸಲ್ಲವದಿಲ್ಲ, ಒಂದು ವೇಳೆ ಸುಗ್ರೀವನ ಹತ್ಯೆ ಮಾಡಿದರೆ ಲೋಕದಲಿ ನಿನ್ನಂತಹ ಪಾಪ ಮಾಡುವ ವ್ಯಕ್ತಿ ಇನ್ನೊಬ್ಬ ಇಲ್ಲ, ;ಸಭ್ಯತೆಯಿಂದ ಕೋಪಗೆದ್ದ ವೀರನೇ ಪುರುಷೋತ್ತಮನು—ಸಿಟ್ಟು ತನ್ನ ವೈರಿ ಶಾಂತಿ ಪರರ ವೈರಿ ಎಂಬ ನಾಣ್ನುಡಿಯಂತೆ ಸಾಂತಚಿತ್ತದಿಂದ ಲೋಕದೊಂದಿಗೆ ವ್ಯವಹರಿಸುವವನೇ ಪುರುಷೋತ್ತಮ, (3) ಸುಗ್ರೀವನೊಂದಿಗೆ ಸೇರಿಕೊಂಡು ಸ್ನೇಹದಿಂದ ನಮ್ಮ ವ್ಯವಹಾರ ಬಗೆಹರಿಸಿಕೊಳ್ಳೋಣ, ಹಿತವಾಗಿ ಮಾತನಾಡು ಸುಗ್ರೀವನೊಂದಿಗೆ ನಮ್ಮ ಕಾರ್ಯ ಮಾತನಾಡಲು ಸಮಯ ಚೌಕಟ್ಟುಪಡೆದುಕೋ ಎಂದು ಲಕ್ಷ್ಮಣನಿಗೆ ಹಿತದ ಪಾಠ ಕಲಿಸಿದನು ಹಾಗು ಅವನನ್ನು ಕಿಷ್ಕಿಂಧಕ್ಕೆ ಕಳಿಸಿದನು. ಯುದ್ಧ ಲೋಕಕ್ಕೆ ಹಿತಕರ ಅಲ್ಲ, ಯಾವುದೇ ಸಮಸ್ಯೆಗಳಿದ್ದರೆ ಅವುಗಳನ್ನು ಸ್ನೇಹದಿಂದ ಬಗೆ ಹರಿಸಿಕೊಳ್ಳುವದು ಉತ್ತಮ ಮಾರ್ಗೋಪಾಯ, ಹೀಗೆ ಲೋಕಹಿತ ಉಪದೇಶ ಮತ್ತು ಸಂದೇಶಗಳನ್ನು ಆದಿಕವಿ ವಾಲ್ಮೀಕಿಯು ರಾಮನ ಮುಖೇನ ನೀಡಿರುವರು.

-ಡಾ. ಅರ್ಜುನ ಯ. ಪಂಗಣ್ಣವರ ವಾಲ್ಮೀಕಿ ಸಾಹಿತ್ಯ ಚಿಂತಕ