“ಕಲಬುರಗಿ| ನ. 17ರಂದು ಜಿಲ್ಲಾ ಸವಿತಾ ಸಮಾಜ ಆಶ್ರಯದಲ್ಲಿ ಉಚಿತ ರಾಷ್ಟ್ರೀಯ ಕೇಶವಿನ್ಯಾಸ ತರಬೇತಿ ಕಾರ್ಯಾಗಾರ”
• ಸೆಕ್ಯುಲರ್ ವಾಯ್ಸ್ ನ್ಯೂಸ್ ಕಲಬುರಗಿ :
ಇಲ್ಲಿನ ಜಿಲ್ಲಾ ಸವಿತಾ ಸಮಾಜ ಆಶ್ರಯದಲ್ಲಿ, ಜಿಲ್ಲಾ ಘಟಕದ ಅಧ್ಯಕ್ಷ ಆನಂದ ವಾರಿಕ ಅವರ ನೇತೃತ್ವದಲ್ಲಿ ಕನ್ನಡ ಭವನದಲ್ಲಿ ಇದೇ ನ. 17, ರಂದು ಸೋಮವಾರ ಬೆಳಗ್ಗೆ 9 ಗಂಟೆಗೆ ರಾಷ್ಟ್ರೀಯ ಮಟ್ಟದ ಒಂದು ದಿನದ ಉಚಿತ ಕೇಶವಿನ್ಯಾಸ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಈ ಕುರಿತು ಶುಕ್ರವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ಈ ಕಾರ್ಯಾಗಾರದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಕೇಶವಿನ್ಯಾಸ ಕ್ಷೇತ್ರದಲ್ಲಿ ಅನುಭವ ಹೊಂದಿದ ಮತ್ತು ರಾಷ್ಟ್ರ ಮಟ್ಟದಲ್ಲಿ ಖ್ಯಾತಿ ಗಳಿಸಿದ ಬಹುಮಾನಗಳನ್ನು ಪಡೆದ ಕಲಾವಿದರಾದ ಭರತ, ತರುಣ್, ಮಂಜುನಾಥ ಬಾಣಸವಾಡಿ ಮತ್ತು ಮಂಜುನಾಥ ಹುಬ್ಬಳ್ಳಿ ತಮ್ಮ ಅನುಭವ ಮತ್ತು ತಾಂತ್ರಿಕ ಕೌಶಲ್ಯವನ್ನು ಹಂಚಿಕೊಳ್ಳಲಿದ್ದಾರೆ ಎಂದರು.
ಕ್ಷೌರಿಕ ವೃತ್ತಿ ಮಾಡುತ್ತಿರುವ ಪುರುಷ ಮತ್ತು ಮಹಿಳಾ ಸದಸ್ಯರು ಈ ವಿಶೇಷ ತರಬೇತಿಯ ಸದುಪಯೋಗ ಪಡೆದುಕೊಳ್ಳುವಂತೆ ಸಂಘಟಕರು ಮನವಿ ಮಾಡಿದ್ದಾರೆ.
ವಿಶೇಷವಾಗಿ, ಕಲಬುರಗಿ ಜಿಲ್ಲೆಯ ನೂತನ ಸದಸ್ಯತ್ವ ನೋಂದಾಯಿಸಿಕೊಂಡವರಿಗೆ ಉಚಿತ ಪ್ರವೇಶ ನೀಡಲಾಗಿದ್ದು, ಆಸಕ್ತರು ಹೆಸರುಗಳನ್ನು ನೋಂದಾಯಿಸಲು ಸಂಘಟಕ ಸದಸ್ಯ ಮಹೇಶ್ ಪಾಣೇಗಾಂವ – 9980550971 ಅವರನ್ನು ಸಂಪರ್ಕಿಸಬಹುದು ಎಂದು ಪತ್ರಿಕಾ ಮೂಲಕ ಕೋರಿದ್ದಾರೆ.