
ಕೇಳಿ ಲಕ್ಷ್ಮಣನ ಸ್ನೇಹದ ನುಡಿ ಸುಗ್ರೀವI
ಬಳಿಯಿದ್ದ ಹನುಮಾನನಿಗೆ ನುಡಿದ: II
“ಮಹೇಂದ್ರ, ಹಿಮಾಲಯ, ವಿಂಧ್ಯ, ಕೈಲಾಸ, ಮಂದರI
ಪಂಚ ಪರ್ವತಗಳಿದ್ದ ಶೂರ ವಾನರರನು ಕರೆಯಿಸು, II
ಸಮುದ್ರತೀರದ ಪೂರ್ವದ ಸೂರ್ಯೋದಯ ಪರ್ವತಗಳುI
ಪಶ್ಚಿಮದ ಸೂರ್ಯಾಸ್ತ ಪರ್ವತಗಳು, ಕಡಲತೀರಗಳು, II
ಪದ್ಮ ಸರೋವರ, ಪರ್ವತಗಳಲಿಯ ಕಾರ್ಮೋಡಗಳಂತಹ ವ I
ಆನೆಬಲದ ಸುವರ್ಣ ಪ್ರಳಯಕಾರಿ ವಾನರ ಕರೆಯಿಸು,II
ಕಾರ್ಮೋಡಿನಂತಹ ಅಂಜನ-ಪರ್ವತ, ಮಹಾಶೀಲೆ ಗುಹೆ, I
ಸುವರ್ಣ–ಪರ್ವತ, ಧೂಮ್ರಾ-ಪರ್ವತಗಳಲಿ, II
ಮೈರೆ ಶೇಂದಿ-ಮಧು ಮಸ್ತಿಯಲಿ ಲೀನವಿದ್ದ I
ಅತೀವೇಗದಿ ಜಿಗಿಯುವ ಹಾರುವ ವಾನರರನು ಕರೆಯಿಸು, II
ಸುಗಂಧ-ವನ, ಆಶ್ರಮ, ಭೂಮಂಡಳ ಮೂಲೆ ಮೂಲೆಯಲಿ ವಾಸಿಸವI
ಎಲ್ಲ-ಪ್ರಭೇಧ ವಾನರ ಕೂಡಿಸು, ಹನುಮಾನ, II
ಮೊದಲು ನನ್ನ ನೇತೃತ್ವದಡಿ ಕೂಡಿಸುI
ಅತೀ ವೇಗದ ವಾನರ ನಾಯಕರನು, II
ಉಳಿದೆಲ್ಲ ವಾನರ ವೀರರ ನೇತೃತ್ವ ವಹಿಸು ನೀ, ಮರಣದಂಡನೆ ನೀಡು,I
ಆಜ್ಞೆಯ ಹತ್ತುದಿನಗಳಲ್ಲಿ ಬಾರದವರಿಗೆ ನೀ, II
ಕೂಡಿಸು ಭೂಮಂಡಲದ ಕಪಿಸಿಂಹರನು,I
ಶತ ಸಹಸ್ರ ಕೋಟಿಗಳಲ್ಲಿ ನನ್ನ ನಿರ್ದೇಶದಂತೆ”; II
ಕೇಳಿ ಸುಗ್ರೀವನ ಆದೇಶ ಅಂಜನಿ ಪುತ್ರI
ಎಲ್ಲದೆಸೆಗಳಿಗೂ ಕಳಿಸಿದ ವಾನರನ ಸೈನ್ಯ ಕೂಡಿಸಲು, II
ಕ್ಷಣಾರ್ದದಲಿ ಚದುರಿದರು ವಾನರ ವೀರರು ನೆಗೆದಾಗ I
ಆಕಾಶದತ್ತ ತುಂಬಿದ ಹಕ್ಕಿ-ಸಾಲುಗಳಂತೆ ಕಂಡರು, II
ತಲುಪಿ ಕಡಲ ಪರ್ವತ ಗುಹೆ ದ್ವೀಪ ಸರೋವರಗಳನ್ನು,I
ಕರೆತಂದರು ವಾನರ ಸೇನೆ ರಾಮನ ಸೇವೆಗೆ, II
ಮೂವತ್ತು ಕೋಟಿ ಪ್ಲವಂಗಾನರು ಬಂದರುI
ರಾಮನ ಬಳಿ ಅಂಜನ-ಪರ್ವತದಿಂದ, II
ಸಹಸ್ರಕೋಟಿ ಸಿಂಹ-ವರ್ಣವಾನರರು ಬಂದರುI
ರಾಮನ ಬಳಿ ಕೈಲಾಸ ಪರ್ವತದಿಂದ, II
ಹಣ್ಣು ಗೆಡ್ಡೆ ತಿನ್ನುವ ಸಹಸ್ರ ಸಹಸ್ರಕೋಟಿ ವಾನರರುI
ಬಂದರು ಹಿಮಾಲಯ ಪರ್ವತಗಳಿಂದ, II
ಮಂಗಳಗ್ರಹ-ವರ್ಣ ಭೀಮಬಲದ ದೈತವಾನರರುI
ಬಂದರು ಕೋಟಿಸಹಸ್ರದಲಿ ಕುದಿಯುವ ವಿಧ್ಯಗಳಿಂದ,II
ಅಗಣಿತ ಸಂಖ್ಯೆಯಲಿ ವಾನರರು ಬಂದರು ಕ್ಷೀರಜಲ ಸಮುದ್ರ,I
ತಮುಲವೃಕ್ಷ, ತೆಂಗುವೃಕ್ಷ ವನಗಳಿಂದ,II
ಜಿಗಿಯುತ್ತ ಹಾರುತ್ತ ಬರುವ ವಾನರI
ಸೇನೆ ಮಧ್ಯೆದಿವಾಕರನು ಮುಳಿಗಿಹೋದ, II
ಬರುವಾಗ ವಾನರರು ತಮ್ಮ ಬಳಿ ತಂದರುI
ಹಿಮಾಲಯ ಗಿಡಮೂಲಿಕೆ, ಮನಮೋಹಕ ಗೆಡ್ಡೆ ವ ಹಣ್ಣು , II
ಮನ ಮೆಚ್ಚಿಸಲು ಸುಗ್ರೀವನ ತಂದರು ಗಿಡಮೂಲಿಕೆ,ಗೆಡ್ಡೆ,ಹಣ್ಣು, I
ವಿಭಿನ್ನ ಸುಂದರ ಸುಗಂಧ ಪರಿಮಳ ಹೂಗಳನ್ನು, II
ಲಕ್ಷ್ಮಣ ಸುಗ್ರೀವನ ಬಳಿಯಿದ್ದಾಗಲೇI
ವಾನರ ಸೇನೆ ಬಂದಿಳಿಯಿತು ಕಿಷ್ಕಿಂಧಕ್ಕೆ, II
“ ಎಲ್ಲ ದಿಕ್ಕುಗಳಿಂದ ವಾನರ ವೀರರನು ಕರೆ ತಂದೆವು”I
ನುಡಿದರು ಸುಗ್ರೀವನಿಗೆ ನಾಯಕ ವಾನರರು, II
ಕೇಳಿ ವಾನರರ ನುಡಿ ಸಂತೋಷಪಟ್ಟ,I
ಪಡೆದನು ಕಾಣಿಕೆಗಳನು ಸುಗ್ರೀವ. II
ಕಿಷ್ಕಿಂಧಕಾಂಡ ರಾಮಾಯಣ
ವಾನರಸೇನೆ ಜಮಾವಣೆ ಸುಗ್ರೀವನು ಹನುಮಾನನಿಗೆ ಆದೇಶ ಮಅಡಿದ ಸನ್ನಿವೇಶನವನ್ನು ಆದಿಕವಿ ವಾಲ್ಮೀಕಿಯು ವಿವರಿಸಿರುವರು, ಅಲ್ಲಿ ಮೂಡಿಬಂದ ಮುಖ್ಯ ಅಂಶಗಳು (1) ವಾನರ ವೀರರನ್ನು ಕೂಡಿಸಲು ಹನುಮಾನನಿಗೆ ಆದೇಶ:
ಲಕ್ಷ್ಮಣನ ಸಮಾದಾನದ ಕ್ಷಮೆಯಾಚನೆಯ ಸ್ನೇಹದ ಮಾತುಗಳನ್ನು ಕೇಳಿದ ಸುಗ್ರೀವನು ತನ್ನ ಬಳಿ ನಿಂತಿದ್ದ ಹನುಮಾನನಿಗೆ ಮಹೇಂದ್ರ, ಹಿಮಾಲಯ, ವಿಂಧ್ಯ, ಕೈಲಾಸ, ಮಂದರ (ಸಮುದ್ರ ಮಂಥನಕ್ಕಾಗಿ ಬಳಸಿದ ಪರ್ವತ) ಪಂಚ ಪರ್ವತಗಳಿದ್ದ ಶೂರ ವಾನರರನು, ಸಮುದ್ರತೀರದ ಪೂರ್ವದ ಸೂರ್ಯೋದಯ ಪರ್ವತಗಳ, ಪಶ್ಚಿಮದ ಸೂರ್ಯಾಸ್ತ ಪರ್ವತಗಳ, ಕಡಲತೀರಗಳ, ಪದ್ಮ ಸರೋವರ ಪರ್ವತಗಳಲಿಯ ಕಾರ್ಮೋಡಿನಂತಹ ಮತ್ತು ಆನೆಬಲದ ಹೊಂಬಣ್ಣದ ಪ್ರಳಯಕಾರಿ ವಾನರರನು, ಕಾರ್ಮೋಡಿನಂತಹ ಅಂಜನ-ಪರ್ವತ, ಮಹಾಶೀಲೆ ಗುಹೆ, ಸುವರ್ಣ–ಪರ್ವತ, ಧೂಮ್ರಾ-ಪರ್ವತಗಳಲಿ ಮೈರೆ (ತಾಳೆಮರ)ಶೇಂದಿ-ಮಧು ಮಸ್ತಿಯಲಿ ಲೀನವಿದ್ದ ಅತೀವೇಗದಿಂದ ಜಿಗಿಯುವ ಹಾರುವ ವಾನರರನು, ಸುಗಂಧ-ವನ, ಆಶ್ರಮ, ಭೂಮಂಡಳದ ಮೂಲೆ ಮೂಲೆಯಲಿ ವಾಸಿಸವ ಎಲ್ಲ-ಪ್ರಭೇಧದ ವಾನರನ್ನು ಕೂಡಿಸು ಎಂದು ಆದೇಶ ಮಾಡಿದನು, ಅದರಂತೆ ಮೊದಲು ನನ್ನ ನೇತೃತ್ವದಡಿ ಅತೀ ವೇಗದಲ್ಲಿ ಜಿಗಿಯುವ ಹಾರುವ ವಾನರ ನಾಯಕರನು ಕೂಡಿಸು ಮತ್ತು ಅವರ ನೇತೃತ್ವ ವಹಿಸಿಕೊಳ್ಳಲು ಹನುಮಾನನಿಗೆ ತಿಳಿಸಿದನು ಹಾಗು ಆಜ್ಞೆ ಮಾಡಿದ ಹತ್ತುದಿನಗಳಲ್ಲಿ ಬಾರದವರಿಗೆ ಮರಣದಂಡನೆ ನೀಡು; ಬೇಗ ತನ್ನ ನಿರ್ದೇಶದಂತೆ ತಕ್ಷಣ ಭೂಮಂಡಲದ ಕಪಿಸಿಂಹರನು ಶತ ಸಹಸ್ರ ಕೋಟಿಗಳಲ್ಲಿ ಕೂಡಿಸು ಎಂದು ಹನುಮಾನನಿಗೆ ಸುಗರೀವನು ಆದೇಶ ಮಾಡುವನು,ಸುಗ್ರೀವನ ಮಾತುಗಳ ಮೂಲಕ ಆದಿಪ್ರಣಿಶಾಸ್ತ್ರಜ್ಞ ವಾಲ್ಮಿಕಿಯು ವಾನರರಲ್ಲಿಯ ಪ್ರಭೇದಗಳನ್ನು ಮತ್ತು ಅವು ವಾಸಿಸುವ ಆಯಾ ಪ್ರದೇಶಗಳ ಮಾಹಿತಿಗಳನ್ನು ತನ್ನ ಕಾವ್ಯದಲ್ಲಿ ದಾಖಲಿಸಿರುವರು; ಕಪಿ, ವಾನರ ಪ್ರಭೇದಗಳ ಬಗ್ಗೆ ಅದು ಉಪಯುಕ್ತ ಮಾಹಿತಿ, ಅದು ಕಾಲ್ಪನಿಕ ಸೃಷ್ಠಿ ಅಲ್ಲ, ಬಹಳಷ್ಟು ಬೌದ್ಧಿ ವರ್ಗದವರು ವಾಲ್ಮೀಕಿ ರಾಮಾಯಣದಲ್ಲಿ ನೀಡಿದ ಮಾಹಿತಿಗಳ ಬಗ್ಗೆ ಹಗುರಾಗಿ ಟೀಕಿಸುವದನ್ನು ತಮ್ಮ ಪಾಂಡಿತ್ಯವೆಂದು ತಮ್ಮ ಅಜ್ಞಾನವನ್ನು ಪ್ರದರ್ಶಿಸುವರು, ಕಾಲಗಟ್ಟದಲ್ಲಿ ಗರ್ಭಧರಿಸಿದ ಮಾಹಿತಿ ನಿಜಕ್ಕೂ ಪಳವಳಕೆಯಾಗಿ ಉಲಿಯುವದು; (2) ದೂತರನ್ನು ಕಳಿಸಿದ ಹನುಮಾನ: ಸುಗ್ರೀವನ ಆದೇಶವನ್ನು ಪಡೆದ ಅಂಜನಿ ಪುತ್ರ ಹನುಮಾನನು ತಮ್ಮ ಬಳಿಯಿದ್ದ ವಾನರಧೂತರನ್ನು ಸಬಲ ವಾನರ ಸೈನ್ಯ ಕೂಡಿಸಲು ಎಲ್ಲ ದೆಸೆಗಳಿಗೂ ಕಳಿಸಿದನು; ಆದೇಶ ಪಡೆದು ಕ್ಷಣಾರ್ಧದಲಿ ವಾನರ ವೀರರು ಎಲ್ಲ ದಿಕ್ಕೂಗಳತ್ತ ಚದುರಿದರು, ವಾನರರು ಆಕಾಶದತ್ತ ನೆಗೆದಾಗ ಅವರು ಆಕಾಶದಲ್ಲಿ ತುಂಬಿದ ಹಕ್ಕಿಗಳಸಾಲುಗಳಂತೆ ಕಂಡರು; ಕಿಷ್ಕಿಂಧ ವಾನರರು ಕಡಲ, ಪರ್ವತ, ಗುಹೆ, ದ್ವೀಪ ,ಸರೋವರಗಳನ್ನು, ತಲುಪಿ ರಾಮನ ಸೇವೆಗೆ ವಾನರ ಸೇನೆಯನ್ನು ಕರೆತಂದರು, ವಾನರರೂ ಜಿಗಿಯುವ ಸಾಮರ್ಥ್ಯದೊಂದಿಗೆ ಹಾರಾಡುವ ಸಾಮರ್ಥ್ಯವನ್ನೂ ಹೊಂದಿದ್ದರು ಎಂಬ ಮಾಹಿತಿಯನ್ನು ಆದಿ ಜೀವಶಾಸ್ತ್ರಜ್ಞ ವಾಲ್ಮೀಕಿಯು ನೀಡಿರುವರು, ಜೀವ ವಿಕಾಸದ ಹಂತಗಳಲ್ಲಿ ಜೀವರಾಶಿಗಳು ವಾತಾವರಣಕ್ಕೆ ತಕ್ಕಂತೆ ತಮ್ಮ ರೂಪ, ಶಕ್ತಿ ಮತ್ತುಸ್ವಭಾವಗಳನ್ನು ಬದಲಿಸಿಕೊಳ್ಳುವ ಜೈವಿಕ ಸಿದ್ಧಾಂತವನ್ನು ಆದಿಪ್ರಕೃತಿ ವಿಜ್ಞಾನಿ ವಾಲ್ಮೀಕಿಯು ಪ್ರತಿಪಾದಿಸಿರುವರು, ತ್ರೇತಾಯುಗದಲ್ಲಿ ಇಂತಹ ವಿಷಮಯಗಳ ಬಗ್ಗೆ ಉಲ್ಲೇಖಗಳು ಇವೆ, (3) ವಾನರ ಸೈನ್ಯ ಬಲದ ವಿವರಣೆ: ಅಂಜನ-ಪರ್ವತದಿಂದ ಮೂವತ್ತು ಕೋಟಿ ಪ್ಲವಂಗಾನರು ( ದೂರದ ವರೆಗೆ ಜಿಗಿಯುವ, ಹಾರುವ ಮಂಗರೂಪಿ ಮಾನವರು), ಕೈಲಾಸ ಪರ್ವತದಿಂದ ಸಹಸ್ರಕೋಟಿ ಸಿಂಹ-ವರ್ಣವಾನರರು, ಹಿಮಾಲಯ ಪರ್ವತಗಳಿಂದ ಹಣ್ಣು ಗೆಡ್ಡೆ ತಿನ್ನುವ ಸಹಸ್ರ ಸಹಸ್ರಕೋಟಿ ವಾನರರು, ಕುದಿಯುವ (ಬೇಸಿಗೆ ಕುದಿಯ/ ಜ್ವಾಲಾಮುಖಿಗ್ರಸ್ಥ)ಪರ್ವತಗಳಿಂದ ಮಂಗಳಗ್ರಹ-ವರ್ಣ ಭೀಮಬಲದ ಕೋಟಿಸಹಸ್ರ ದೈತವಾನರರು , ಅಗಣಿತ ಸಂಖ್ಯೆಯಲ್ಲಿ ಕ್ಷೀರಜಲ ಸಮುದ್ರ, ತಮುಲವೃಕ್ಷ, ತೆಂಗುವೃಕ್ಷ ವನಗಳಿಂದ ಜಿಗಿಯುತ್ತ ಹಾರುತ್ತ ಬರುವ ವಾನರ ಸೇನೆ ಮಧ್ಯೆ ದಿವಾಕರನು (ಸೂರ್ಯನು) ಮುಳಿಗಿ ಹೋದನು, ಹೀಗೆ ನೋಡು ನೋಡುತಿದ್ದಂತೆ ವಾಣರ ಸೇನೆ ಹದ್ದುಗಲಂತೆ ಹಾರಿ ಬಂದು ಸುಗ್ರೀವ ಮತ್ತು ರಾಮನ ಬಳಿ ಬಂದು ನಿಂತರು, ಆದಿಜೈವಿಕ ವಿಜ್ಞಾನಿ ವಾಲ್ಮೀಕಿಯು ವಿಭಿನ್ನ ವಾನರರ ಸಾಮರ್ಥ್ಯವನ್ನು ತಿಳಿಸಿರುವರು, (4) ಸುಗ್ರೀವನಿಗೆ ಕಾಣಿಕೆ: ಕಿಷ್ಕಿಂಧೆಗೆ ಬರುವಾಗ ಸುಗ್ರೀವನ ಮನ ಮೆಚ್ಚಿಸಲು ವಾನರರು ತಮ್ಮ ಬಳಿ ಹಿಮಾಲಯ ಗಿಡಮೂಲಿಕೆ, ವಿಶೇಷ ಮನಮೋಹಕ ಗೆಡ್ಡೆ ಮತ್ತು ಹಣ್ಣು ( ಒಂದು ಗೆಡ್ಡೆ/ಹಣ್ಣು ತಿಂದರೆ ಒಂದು ತಿಂಗಳ ಕಾಲ ಹಸಿವು ಆಗದು)ಗಳನ್ನು ಹಿಮಾಲಯದ ನರವಾನರರು ತಂದರು, ಅದರಂತೆ ಉಳಿದ ವಾನರರು ಗಿಡಮೂಲಿಕೆ, ಗೆಡ್ಡೆ, ಹಣ್ಣು, ವಿಭಿನ್ನ ಸುಂದರ ಸುಗಂಧ ಪರಿಮಳ ಹೂಗಳನ್ನು ತಂದರು; ಲಕ್ಷ್ಮಣನು ಇನ್ನೂ ಸುಗ್ರೀವನ ಬಳಿಯಿದ್ದಾಗಲೇ ಕಿಷ್ಕಿಂಧಕ್ಕೆ ವಾನರ ಸೇನೆ ಬಂದಿಳಿಯಿತು; ಎಲ್ಲ ದಿಕ್ಕುಗಳಿಂದ ವಾನರ ವೀರರನು ಕರೆ ತಂದೆವು ಎಂದು ನಾಯಕ ವಾನರರು ಸುಗ್ರೀವನಿಗೆ ತಿಳಿಸಿದರು ಮತ್ತು ಅವರು ತಂದ ಕಾಣಿಕೆಗಳನ್ನು ಪಡೆದು ಸುಗ್ರೀವನು ಸಂತೋಷಪಟ್ಟನು. ಈ ಸಂದರ್ಭದಲ್ಲಿ ಆದಿಕವಿ ವಾಲ್ಮೀಕಿಯು ಭರತಖಂಡದ ಪ್ರಮುಖ ಪರ್ವತಗಳನ್ನು, ವಾನರ ಪ್ರಭೇಧಗಳನ್ನು, ಅವುಗಳು ನೆಗೆಯುವ ಹಾರುವ ವಿಶೇಷ ಸಾಮರ್ಥ್ಯದ ಮತ್ತು ಹಿಮಾಲಯದ ವಿಶೇಷ-ಗೆಡ್ಡೆ ಮತ್ತು ಹಣ್ಣಿನ ಉಲ್ಲೇಖಗಳ ಮೂಲಕ ತನ್ನ ಪ್ರಾಚೀನ ಭೌಗೋಲಿಕಶಾಸ್ತ್ರ, ಪ್ರಾಣಿಶಾಸ್ತ್ರ ಮತ್ತು ಸಸ್ಯಶಾಸ್ತ್ರ ಅನುಭವ ಜ್ಞಾನದ/ವೇದಾಂತದ ಪರಿಚಯ ವ್ಯಕ್ತಪಡಿಸಿರುವರು.
ಡಾ. ಅರ್ಜುನ ಯ. ಪಂಗಣ್ಣವರ ವಾಲ್ಮೀಕಿ ಸಾಹಿತ್ಯ ಚಿಂತಕ
