
ಉಪಹಾರ ಕಾಣಿಕೆ ಸಲ್ಲಿಸಿ ಸುಗ್ರೀವನಿಗೆ ವಿಸರ್ಜಸಿದರುI
ಬೇರೆ ಬೇರೆ ಕಡೆಗಳಿಂದ ಬಂದ ವಾನರರು, ಸಂತೋಷ ಪಟ್ಟ II
ಸುಗ್ರೀವ ತನ್ನ ವ ರಾಮನ ಕಾರ್ಯ ನೆರವೇರಿಸಲು ಕರೆಮೇರೆಗೆ ಬಂದI
ವಾನರ ದಂಡು ನೋಡಿ, ನೋಡಿ ಸಬಲ II
ವಾನನರ ದಂಡು ಲಕ್ಷ್ಮಣ ಸಂತೋಷದಿ ಸುಗ್ರೀವನಿಗೆ ಕೋರಿದI
“ಕಿಷ್ಕಿಂಧ ತೊರೆಯೋಣವೇ?” ಲಕ್ಷ್ಮಣನ ನುಡಿ ಕೇಳಿ II
ಮೆಚ್ಚುಗೆದಿ ಸುಗ್ರೀವ ಪ್ರತಿನುಡಿದ: ”ಹಾಗೆಯಾಗಲಿ,I
ನಿಮ್ಮ ನೇತೃತ್ವದಲಿ ಎಲ್ಲರೂ ಹೋಗೋಣ” II
ತಾರಾ ವ ವಾನಾರಿಯರಿಗೆ ವಿದಾಯ ಹೇಳಿ ಸುಗ್ರೀವ ನಡೆದ,I
ಲಕ್ಷ್ಮಣನ ನುಡಿ ಕೇಳಿ, “ಎಲ್ಲರೂ ನಡೆಯಿರಿ II
” ಗಟ್ಟಿ ದ್ವನಿಯಲಿ ಕರೆ ನೀಡಿದ ಸುಗ್ರೀವ, ಮಡದಿ ಮಕ್ಕಳಿಗೆ I
ಸಂಬಂಧಿಗಳಿಗೆ ವಿದಾಯ ಹೇಳಿದರು ವಾನರರು, II
ನೆರೆದ ವಾನರವೀರರಿಗೆ ನುಡಿದ ಸುಗ್ರೀವ: “ತನ್ನಿರಿI
ಸಜ್ಜಾದ ರಥ ನಮಗೆ, ತಕ್ಷಣ ಹೊರಡಲು”;II
ತನ್ನ ಬಳಿ ಬಂದ ಸಜ್ಜಾದ ರಥ ನೋಡಿ ಸುಗ್ರೀವI
ನುಡಿದ:”ಬೇಗ ರಥವೇರು ಲಕ್ಷ್ಮಣಾ”,II
ಸೂರ್ಯನಂತೆ ಹೊಳೆವ ಚಿನ್ನದ ರಥವೇರಿದ ಸುಗ್ರೀವ,I
ರಥವೇರಿದ ಲಕ್ಷ್ಮಣ ಸುಗ್ರೀವನೊಂದಿಗೆ, II
ನೆರವೇರಿಸಲು ಸತ್ಕಾರ್ಯ ಶಂಖ ವಾದ್ಯನಿನಾದI
ಜಯಘೋಷಣೆಗಳೊಂದಿಗೆ ಹೊರಟಿತು ದಂಡ,II
ಶುಭ್ರ ಗಗನ,ಬಿಳಿ ಕಿರಣದಲಿ ಬಿಳಿ ಗರಿ ತುಪ್ಪುಳI
ಅಲಂಕೃತ ಚಿನ್ನದ ರಥ ಸಾಗಿತು ದಂಡದೊಂದಿಗೆ, II
ಮುಟ್ಟಿದರು ರಾಮನಿದ್ದ ಸ್ಥಳ ವಾನರI
ದಂಡಿನೊಂದಿಗೆ ಸುಗ್ರೀವ ಲಕ್ಷ್ಮಣರು,II
ರಥದಿಂದಿಳಿದು ಕರಮುಗಿದು ಸುಗ್ರೀವ ರಾಮನಿಗೆ ನಿಂತನು,I
ನಿಂತಿತು ವಾನರ ಸೇನೆ ಕೈಮುಗಿದು ರಾಮನಿಗೆ, II
ಕಿಷ್ಕಿಂಧಕಾಂಡ ರಾಮಾಯಣ
ಬೇರೆ ಬೇರೆ ಪ್ರದೇಶಗಳಿಂದ ಬಂದ ವಾನರರು ಉಪಹಾರ ಕಾಣಿಗೆಗಳನ್ನು ಸುಗ್ರೀವನಿಗೆ ಸಲ್ಲಿಸಿ ಅಲ್ಲಿಂದ ಚದುರಿದ ಮತ್ತು ತನ್ನ ಮತ್ತು ರಾಮನ ಕಾರ್ಯ ನೆರವೇರಿಸಲು ತನ್ನ ಕರೆಮೇರೆಗೆ ಬಂದ ವಾನರರ ದಂಡನ್ನು ನೋಡಿ ಸುಗ್ರೀವನು ಸಂತೋಷ ಪಟ್ಟ ಸಂದರ್ಭವನ್ನು ಆದಿಕವಿ ವಾಲ್ಮೀಕಿಯು ವಿವರಿಸಿರುವರು; (1) ಲಕ್ಷ್ಮಣನ ಸಂತೋಷ: ಸಬಲ ವಾನನರ ದಂಡು ಸೇರಿದ್ದನ್ನು ನೋಡಿ ಲಕ್ಷ್ಮಣನು ಸಂತೋಷ ಪಟ್ಟನು ಹಾಗು ಸುಗ್ರೀವನಿಗೆ ಕಿಷ್ಕಿಂಧ ತೊರೆದು ರಾಮನ ಬಳಿ ಹೋಗಲು ಲಕ್ಷ್ಮಣನನ್ನು ಕೋರಿದಾಗ ಸುಗ್ರೀವನು ಮೆಚ್ಚುಗೆಯಿಂದ ತಾರಾ ಮತ್ತು ವಾನಾರಿಯರಿಗೆ ವಿದಾಯ ಹೇಳಿ “ಎಲ್ಲರೂ ನಡೆಯಿರಿ” ಎಂದು ಗಟ್ಟಿ ದ್ವನಿಯಲಿ ವಾನರರಿಗೆ ಕರೆ ನೀಡಿದನು; ವಾನರರು ತಮ್ಮ ಮಡದಿ ಮಕ್ಕಳಿಗೆ ಮತ್ತು ಸಂಬಂಧಿಗಳಿಗೆ ವಿದಾಯ ಹೇಳಿ ಎಲ್ಲರೂ ರಾಮನತ್ತು ಬಂದರು,ಸೀತೆಯನ್ನು ಹುಡುಕುವ ಕಾರ್ಯಕ್ಕೆ ಚಾಲಣೆ ಸಿಕ್ಕದನ್ನು ಮನವರಿಕೆ ಮಾಡಿ ಕೊಂಡ ಲಕ್ಷ್ಮಣನ ಮಾನಸಿಕ ಸ್ಥಿತಿಯನ್ನು ಆದಿಕವಿ ವಾಲ್ಮೀಕಿಯು ವ್ಯಕ್ತ ಪಡಿಸಿರುವರು,(2) ರಾಮನ ಬಳಿ ಹೊರಡಲು ಸುಗ್ರೀವ ಮತ್ತು ಲಕ್ಷ್ಮಣರು ರಥ ಎರಿದರು: ಅಲ್ಲಿ ನೆರೆದಿದ್ದದ ವಾನರವೀರರಿಗೆ ಸುಗ್ರೀವನು ಸಜ್ಜಾದ ರಥ ತರಲು ಆದೇಶಿಸಿದಮತೆ ತಕ್ಷಣ ತನ್ನ ಬಳಿ ಬಂದ ಸೂರ್ಯನಂತೆ ಹೊಳೆವ ಚಿನ್ನದ ರಥವನ್ನು ಸುಗ್ರೀವನು ಲಕ್ಷ್ಮಣನೊಂದಿಗೆ ಏರಿದನು, ಸತ್ಕಾರ್ಯ ನೆರವೇರಿಸಲು (ಸೀತೆಯನ್ನು ಹುಡುಕುವ ಕಾರ್ಯ) ಶಂಖ ವಾದ್ಯನಿನಾದ ಜಯಘೋಷಣೆಗಳೊಂದಿಗೆ ವಾನರ ಸೈನ್ಯ ಹೊರಟಿತು; ದಂಡಯಾತ್ರೆಗೆ ಸೈನ್ಯದೊಂದಿಗೆ ಶುಭ್ರ ಗಗನ, ಬಿಳಿ ಕಿರಣದಲಿ ಬಿಳಿ ಗರಿ ತುಪ್ಪುಳ ಅಲಂಕೃತ ಚಿನ್ನದ ರಥ ಸಾಗಿತು, ಸುಗ್ರೀವ ಮತ್ತು ಲಕ್ಷ್ಮಣರು ವಾನರ ದಂಡಿನೊಂದಿಗೆ ರಾಮನಿದ್ದ ಸ್ಥಳ (ಪ್ರಸವನ-ಪರ್ವತ)ವನ್ನು ಮುಟ್ಟಿದರು; ಸುಗ್ರೀವನು ರಥದಿಂದಿಳಿದು ರಾಮನಿಗೆ ಕೈಮುಗಿದು ನಿಂತನು, ಅದರಂತೆ ರಾಮನಿಗೆ ವಾನರ ಸೇನೆ ಕೈಮುಗಿದು ನಿಂತಿತು. ಆದಿಕವಿ ವಾಲ್ಮೀಕಿಯು ಈ ಸಂದರ್ಭದಲ್ಲಿ ಸುಗ್ರೀವನ ಆಜ್ಞೆಮೇರೆಗೆ ತಮ್ಮ ಮಡದಿ ಮಕ್ಕಳು ಸಂಬಂಧಿಗಳನ್ನು ತೊರೆದು ದೂರದಿಂದ ಬಂದು ರಾಮ ಮತ್ತು ಸುಗ್ರೀವರಿಗೆ ಜೊತೆ ನೀಡುವ ವಾನರ ಮತ್ತು ಜಾಂಬವಂತರ ನಿಸ್ವಾರ್ಥ ಸೇವೆಯನ್ನು ಬಣ್ಣಿಸಿರುವರು
ಡಾ. ಅರ್ಜುನ ಯ. ಪಂಗಣ್ಣವರ ವಾಲ್ಮೀಕಿ ಸಾಹಿತ್ಯ ಚಿಂತಕ
