ಪ್ರಶಸ್ತಿಗೆ ವಿಶ್ವನಾಥರೆಡ್ಡಿ ದರ್ಶನಾಪುರ ಅತ್ಯಂತ ಅರ್ಹ ವ್ಯಕ್ತಿ: ಸ್ವಾಮೀಜಿ

By admin

ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ತಾಲೂಕು ಘಟಕ ಸೇರಿ ನಾನಾ ಸಂಘಗಳಿAದ ಅಭಿನಂದನಾ ಸಮಾರಂಭ | ಅದ್ಧೂರಿ ಕಾರ್ಯಕ್ರಮದಲ್ಲಿ ವಿಶ್ವನಾಥರೆಡ್ಡಿ ದರ್ಶನಾಪುರಗೆ ಸನ್ಮಾನದ ಸುರಿಮಳೆ | ಮಠದ ಪೂಜ್ಯ ಶ್ರೀ ಗುರುಪಾದ ಮಹಾಸ್ವಾಮೀಜಿ ಅಭಿಮತ

ಪ್ರಶಸ್ತಿಗೆ ವಿಶ್ವನಾಥರೆಡ್ಡಿ ದರ್ಶನಾಪುರ ಅತ್ಯಂತ ಅರ್ಹ ವ್ಯಕ್ತಿ: ಸ್ವಾಮೀಜಿ


ಸೆಕ್ಯುಲರ್ ವಾಯ್ಸ್ ನ್ಯೂಸ್ ಶಹಾಪುರ

ಸಹಕಾರ ಕ್ಷೇತ್ರದಲ್ಲಿ ಶ್ರೇಷ್ಠ ಸೇವೆ ಸಲ್ಲಿಸುತ್ತಿರುವ ಜಿಲ್ಲೆಯ ವಿಶ್ವನಾಥರೆಡ್ಡಿ ದರ್ಶನಾಪುರಗೆ ರಾಜ್ಯ ಸರಕಾರ ನೀಡುವ ಸಹಕಾರ ರತ್ನ ಪ್ರಶಸ್ತಿ ಬಂದಿರುವುದು ಸಗರನಾಡಿಗೆ ಹರ್ಷ ತಂದಿದೆ. ಅತ್ಯಂತ ಅರ್ಹ ವ್ಯಕ್ತಿಗೆ ಈ ಪ್ರಶಸ್ತಿ ಲಭಿಸಿದೆ ಎಂದು ಫಕೀರೇಶ್ವರ ಮಠದ ಪೂಜ್ಯ ಶ್ರೀ ಗುರುಪಾದ ಮಹಾಸ್ವಾಮೀಜಿ ನುಡಿದರು.
ನಗರದ ಫಕೀರೇಶ್ವರ ಮಠದಲ್ಲಿ ಶನಿವಾರ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ತಾಲೂಕು ಘಟಕ ಸೇರಿ ನಾನಾ ಸಂಘಗಳಿಂದ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ವಿಶ್ವನಾಥರೆಡ್ಡಿ ದರ್ಶನಾಪುರ ಅವರಿಗೆ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದರು.


ಪ್ರಸಕ್ತ ಸಂದರ್ಭದಲ್ಲಿ ಸಿಕ್ಕ ಸಿಕ್ಕವರಿಗೆ ಪ್ರಶಸ್ತಿಗಳು ನೀಡುತ್ತಿರುವುದರಿಂದ ಪ್ರಶಸ್ತಿಗಳ ಮೌಲ್ಯ ಕಡಿಮೆಯಾಗುತ್ತಿದೆ. ಪ್ರಶಸ್ತಿ ಪಡೆದವರಿಂದ ಪ್ರಶಸ್ತಿಗೂ ಗೌರವ ಬರಬೇಕು. ಅಂತಹ ವ್ಯಕ್ತಿಗಳನ್ನು ಆಯ್ಕೆ ಮಾಡಬೇಕಾಗಿದೆ ಎಂದರು.
ಇತ್ತೀಚಿನ ದಿನಮಾನಗಳಲ್ಲಿ ಹಲವು ರೀತಿ ಸನ್ಮಾನಗಳು ನಡೆಯುತ್ತಿವೆ. ಭಯ ಮೂಲ ಸನ್ಮಾನ, ಸ್ವಾರ್ಥ ಮೂಲ ಸನ್ಮಾನ, ಹಣ ಮೂಲ ಸನ್ಮಾನ, ಪ್ರೇಮ ಮೂಲ ಸನ್ಮಾನ ಹಾಗೂ ತ್ಯಾಗ ಸನ್ಮಾನ ನಡೆಯುತ್ತಿವೆ. ಈ ದಿನ ವಿಶ್ವನಾಥರೆಡ್ಡಿ ದರ್ಶನಾಪುರ ಅವರಿಗೆ ನಡೆದ ಸನ್ಮಾನ ಹೃದಯಪೂರ್ವಕ ಪ್ರೇಮ ಮತ್ತು ತ್ಯಾಗ ಮೂಲದ ಸನ್ಮಾನವಾಗಿದೆ ಎಂದು ಅಭಿಪ್ರಾಯಪಟ್ಟರು.
ರಾಷ್ಟ್ರ ಮಟ್ಟದ ಪ್ರಶಸ್ತಿ ಸಿಗಲಿ: ದರ್ಶನಾಪುರ ಅವರದ್ದು ಬಹುಮುಖ ವ್ಯಕ್ತಿತ್ವ, ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿ ಬಳಿಕ ಜನರಿಗೆ ಉಪಯೋಗವಾಗುವ ಸಹಕಾರ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಅತ್ಯುತ್ತಮವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಅವರಿಗೆ ರಾಷ್ಟç ಮಟ್ಟದ ಪ್ರಶಸ್ತಿ, ಪುರಸ್ಕಾರ ಹಾಗೂ ಗೌರವಗಳು ಸಿಗಲಿ ಎಂದು ಶ್ರೀಗಳು ಶುಭ ಹಾರೈಸಿದರು.
ಅತ್ಯಂತ ಚಾಣಾಕ್ಷ ವ್ಯಕ್ತಿ: ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಚನ್ನಬಸಪ್ಪ ಮುಧೋಳ ಮಾತನಾಡಿ, ವಿಶ್ವನಾಥರೆಡ್ಡಿಯವರು ಅತ್ಯಂತ ಚಾಣಾಕ್ಷ ವ್ಯಕ್ತಿಯಾಗಿದ್ದಾರೆ. ಶಿಕ್ಷಣ ಇಲಾಖೆಯಲ್ಲಿ ಅವಿರೋಧವಾಗಿ ಆಯ್ಕೆ ಮಾಡುವ ಸಾಂಪ್ರಾದಯವನ್ನು ಹುಟ್ಟುಹಾಕಿಕೊಟ್ಟಿದ್ದಾರೆ. ಆ ಮೂಲಕ ಮಾದರಿಯಾಗುವ ಕಾರ್ಯ ಮಾಡಿದ್ದಾರೆ ಎಂದರು.
ಯಾದಗಿರಿ ಜಿಲ್ಲಾ ಸಹಕಾರ ಒಕ್ಕೂಟದಿಂದ ಮುಂದಿನ ದಿನಗಳಲ್ಲಿ ಸರಕಾರಿ ಶಾಲಾ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಋಣ ಮರೆಯಲು ಅಸಾಧ್ಯ: ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ರಾಯಪ್ಪಗೌಡ ಹುಡೇದ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ತಾಲೂಕು, ಜಿಲ್ಲಾ, ಪ್ರಾಥಮಿಕ-ಪ್ರೌಢ ಶಾಲಾ ಶಿಕ್ಷಕರ ಸಂಘಕ್ಕೆ ಬೆನ್ನೆಲುಬಾಗಿ ನಿಂತಿರುವ ವಿಶ್ವನಾಥರೆಡ್ಡಿ ದರ್ಶನಾಪುರ ಕಾರ್ಯ ಶ್ಲಾಘನೀಯವಾಗಿದೆ. ನನ್ನನ್ನು ನೌಕರರ ಸಂಘದ ಜಿಲ್ಲಾಧ್ಯಕ್ಷರನ್ನಾಗಿ ಮಾಡಿದ ಅವರ ಋಣವನ್ನು ಮರೆಯಲು ಸಾಧ್ಯವಿಲ್ಲ. ಶಿಕ್ಷಕರ ಸಂಘಗಳ ಎಲ್ಲ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಪದಾಧಿಕಾರಿಗಳನ್ನು ಅವಿರೋಧದ ಆಯ್ಕೆ ಮಾಡುವಲ್ಲಿ ಇವರ ಶ್ರಮವಿದೆ ಎಂದು ಹೇಳಿದರು.
ಮತ್ತಷ್ಟು ಶಕ್ತಿ ಬಂದಿದೆ: ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿದ ವಿಶ್ವನಾಥರೆಡ್ಡಿ ದರ್ಶನಾಪುರ, ಸಹಕಾರ ಕ್ಷೇತ್ರಕ್ಕೆ ಬರಲು ಹಲವರ ಸಲಹೆ, ಮಾರ್ಗದರ್ಶನವಿದೆ. ಅವರ ಮಾರ್ಗದರ್ಶನದ ಫಲದಿಂದ ಈ ಕ್ಷೇತ್ರದಲ್ಲಿ ಸಾಧನೆ ಮಾಡಿರುವುದು ಹೆಮ್ಮೆ ತಂದಿದೆ. ಪ್ರಶಸ್ತಿ ಬಂದ ಹಿನ್ನೆಲೆಯಲ್ಲಿ ಇಷ್ಟೊಂದು ಅದ್ಧೂರಿಯಾಗಿ ಸನ್ಮಾನಿಸಿರುವುದು ನನಗೆ ಮತ್ತಷ್ಟು ಶಕ್ತಿ ಬಂದಂತಾಗಿದೆ. ನಿಮ್ಮೆಲ್ಲರ ವಿಶ್ವಾಸವನ್ನು ಉಳಿಸಿಕೊಂಡು ಅತ್ಯುತ್ತಮವಾಗಿ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಸಹಕಾರ ಸಂಘಗಳ ಉಪನಿಂಬಂಧಂಕರಾದ ಪವನಕುಮಾರ, ಸ.ಸಂ.ಲೆಕ್ಕ ಪರಿಶೋಧನಾ ಇಲಾಖೆ ಉಪನಿರ್ದೇಶಕ ಶರಣಬಸವ ಮಾಡೊಳೆ, ಜಿಲ್ಲಾ ಖಜಾನೆ ಉಪನಿರ್ದೇಶಕ ಮಾಳಿಂಗರಾಯ ಬಿದರಾಣಿ, ಜಿಪಂ ಮುಖ್ಯ ಯೋಜನಾಧಿಕಾರಿ ಕೆ.ಕುಮಲಯ್ಯ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಚನ್ನಬಸಪ್ಪ ಮುಧೋಳ, ತಾಪಂ ಇಒ ಬಸವರಾಜ ಶರಭ್ಯ, ಕ್ಷೇತ್ರ ಶಿಕ್ಷಣಾಧಿಕಾರಿ ವೈ.ಎಸ್.ಹರಗಿ ಉಪಸ್ಥಿತರಿದ್ದರು.
……….
ಎಂಟು ಸಂಘಗಳಿಂದ ಗೌರವ
ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಶಹಾಪುರ ತಾಲೂಕು ಘಟಕ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ತಾಲೂಕು ಘಟಕ, ಪ್ರೌಢ ಶಾಲಾ ಬಡ್ತಿ ಶಿಕ್ಷಕರ ಸಂಘ ಶಹಾಪುರ, ಆರ್.ಡಿ.ಪಿ.ಆರ್ ಇಲಾಖೆ ನೌಕರರ ಸಂಘ ಶಹಾಪುರ, ಕರ್ನಾಟಕ ರಾಜ್ಯ ಪ್ರೌಢ ಶಾಲಾ ಶಿಕ್ಷಕರ ಸಂಘ ಶಹಾಪುರ, ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಶಹಾಪುರ, ಅಖಿಲ ಕರ್ನಾಟಕ ಎನ್‌ಪಿಎಸ್ ನೌಕರರ ಸಂಘ ಶಹಾಪುರ ಹಾಗೂ ಆರೋಗ್ಯ ಇಲಾಖೆ ನೌಕರರ ಸಂಘ ಒಟ್ಟು ಎಂಟು ಸಂಘಗಳ ಅಧಿಕಾರಿಗಳು, ನೌಕರರು ಬೃಹತ್ ಪ್ರಮಾಣದ ಹೂವಿನ ಹಾರ ಹಾಕಿ ನೆನಪಿನ ಕಾಣಿಕೆ ನೀಡಿ ಗೌರವಿಸಿದರು.

ಸನ್ಮಾನಗಳ ಸುರಿಮಳೆ!
ಕರ್ನಾಟಕ ರಾಜ್ಯ ಸರಕಾರದಿಂದ ರಾಜ್ಯಮಟ್ಟದ ಸಹಕಾರ ರತ್ನ ಪ್ರಶಸ್ತಿಗೆ ಭಾಜನರಾದ ಯಾದಗಿರಿ ಜಿಲ್ಲಾ ಸಹಕಾರ ಒಕ್ಕೂಟ ಹಾಗೂ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷರಾದ ವಿಶ್ವನಾಥರೆಡ್ಡಿ ದರ್ಶನಾಪುರ ಅವರಿಗೆ ನೌಕರರು ಹಾಗೂ ಅಭಿಮಾನಿಗಳು ಸತತ ಒಂದು ತಾಸಿಗೂ ಹೆಚ್ಚು ಸಮಯ ಸರತಿ ಸಾಲಿನಲ್ಲಿ ಬಂದು ಸನ್ಮಾನಿಸಿರುವುದು ವಿಶೇಷವಾಗಿತ್ತು. ಸಮಾರಂಭದಲ್ಲಿ ವಿಶ್ವನಾಥರೆಡ್ಡಿ ದರ್ಶನಾಪುರ ಅವರಿಗೆ ಸನ್ಮಾನಗಳ ಸುರಿಮಳೆಯಾಯಿತು.
……..
ಸಮಾರಂಭದಲ್ಲಿ ಪಾಲ್ಗೊಂಡಿದ್ದ ಗಣ್ಯರು
ಕಾರ್ಯಕ್ರಮದಲ್ಲಿ ಪ್ರಮುಖರಾದ ದೇವಿಂದ್ರಪ್ಪ ರುದ್ರವಾರ, ಡಾ.ಮೊನಪ್ಪ ಶಿರವಾಳ, ಡಿ.ಎಂ.ಕೋರಬಾ, ಶಾಂತಗೌಡ ಪಾಟೀಲ್, ಅಮರೇಶ ಕುಂಬಾರ, ಮಹಾದೇವಿ ಶಿವಸಿಂಪಿ, ಎಂ.ನಾರಾಯಣ, ನಾಗಣ್ಣ ವೆಂಕಟಪುರ, ಮಲ್ಲಿಕಾರ್ಜುನ ಹನಗುಂಡಿ, ರಂಗನಾಥ ನಾಯಕ, ಬಸವರಾಜ ಕೆರೂಟಗಿ, ಅಶೋಕ ಕಲಾಲ, ಭೀಮನಗೌಡ ತಳೇವಾಡ, ಲಕ್ಷö್ಮಣ ಲಾಳಸೇರಿ, ಬಸನಗೌಡ ಬೆಳ್ಳಿಕಟ್ಟಿ, ನಿಂಗಪ್ಪ ಪುರ್ಲೆ, ಶಾಂತರೆಡ್ಡಿ ತುಂಬಗಿ, ರಜೀಯಾಬೇಗಂ, ರಾಮನಗೌಡ ಖಾನಾಪುರ, ಬಸವರಾಜ ಬಿರಾದಾರ, ಸಿದ್ದನಗೌಡ ಗೂಗಲ್, ಮಲ್ಲಣ್ಣಗೌಡ ಬಿರಾದಾರ, ಚಂದಪ್ಪ, ದೇವರಾಜ ಗೋನಾಲ, ಜಗದೀಶ ಗೋಟ್ಲಾ, ಮಲ್ಲಿಕಾರ್ಜುನ ಸಜ್ಜನ್, ಆದೇಪ್ಪ ಬಾಗಲಿ, ಮುರ್ತುಜಾ ಮುಲ್ಲಾ, ಮೈಲಾರಪ್ಪ ಪೂಜಾರಿ, ಪ್ರಶಾಂತ ಗುಗ್ಗರಿ, ರೇವಣಸಿದ್ದಪ್ಪ ಸಾಹು ಅಂಗಡಿ ಆಲ್ದಾಳ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ನೌಕರರು ಪಾಲ್ಗೊಂಡಿದ್ದರು.