
ಕಾಶಿನಾಥ ಮುದ್ದಾಗೋಳ ಕಲಬುರಗಿ
ಪುಸ್ತಕ: ಛತ್ರಪತಿ ಶಾಹೂ ಜನರ ನೋವಿಗೆ ಮಿಡಿದ ಪ್ರಾಣಮಿತ್ರ, ಲೇಖಕಿ ಡಾ. ಎಚ್.ಎಸ್. ಅನುಪಮಾ
ಈ ಪುಸ್ತಕವು 2014ರಲ್ಲಿ ಲಡಾಯಿ ಪ್ರಕಾಶನವು ಪ್ರಕಟಿಸಿದೆ. ಸಮ ಸಮಾಜದ ಕನಸ್ಸು ಹೊತ್ತು,ಕನ್ನಡ ಸಾಹಿತ್ಯದಲ್ಲಿ ಪ್ರಗತಿಪರತೆಯನ್ನ ಜಿವಂತವಾಗಿ ಉಳಿಸುವ ನಿಟ್ಟಿನಲ್ಲಿ ಹಾಗೂ ಯುವಪಿಳಿಗೆಗೆ ಓದಿನ ಉತ್ತಮ ಮಾರ್ಗತೊರುವಲ್ಲಿ ಲಡಾಯಿ ಪ್ರಕಾಶನದ ಕಾರ್ಯಮಹತ್ತರವಾದದ್ದು.
“ಧರ್ಮ ಎಂದರೇನು? ದೇವರ ಬಳಿಗೆ ಹೋಗುವ ಮಾರ್ಗ.ವಿವಿಧ ಹೆಸರಿನಲ್ಲಿ ಹುಟ್ಟಿಕೊಂಡ ಎಲ್ಲ ಧರ್ಮಗಳ ಉದ್ಧೇಶವೂ ಒಂದೇ ಆಗಿದೆ.ನಗರ ತಲುಪಲು ಹಲವು ರಸ್ತೆಗಳಿವೆ.ಬೇರೆ ಬೇರೆ ರಸ್ತೆಯಿಂದ ನಗರಕ್ಕೆ ತಲುಪುವವರನ್ನು ದ್ವೇಷಿಸಲಾಗುತ್ತದೆಯೇ? ಇಂದು ಯಾವುದೇ ಧರ್ಮ ಆಚರಿಸಿ ಮನುಷ್ಯ ದೇವರಬಳಿ ಹೋದ ಪ್ರತ್ಯಕ್ಷ ಉದಾಹರಣೆ ಇಲ್ಲ. ಅಂಥ ಮಾರ್ಗದರ್ಶಕ ದೊರಕುವವರೆಗೆ ನಮ್ಮದಷ್ಟೇ ಒಳ್ಳೆಯದು ಎಂಬ ಟೊಳ್ಳು ಅಭಿಮಾನ ಬೆಳೆಸಿಕೊಳ್ಳವುದು ಯಾರಿಗೂ ಒಳ್ಳೆಯದಲ್ಲ.ದೇಶಬಂಧುವಿನ ಸೇವೆ ಕೈಗೊಳ್ಳುವುದು,ಮನುಷ್ಯರಲ್ಲಿ ದೇವರನ್ನು ಕಾಣುವುದೇ ಈಗ ನಿಜವಾದ ಧರ್ಮ”.
-ಶಾಹೂ.

ದಲಿತ,ದಮನಿತ,ಅಸ್ಪೃಶ್ಯರ ಉದ್ದಾರಕ್ಕೆ ಜನ್ಮವೆತ್ತ ಶಾಹೂ ಮಹಾರಾಜರ ಈ ಮಾತು ಪ್ರಸ್ತುತ ದಿನಮಾನಗಳಿಗೆ ಬಹುಅವಶ್ಯಕ ಮತ್ತು ಔಷಧಿಯ ಮಾತುಗಳು ಎಂದರೇ ತಪ್ಪಾಗದು.
ಈ ಒಂದು ಕಿರು ಹೋತ್ತಿಗೆಯಲ್ಲಿ ಶಾಹೂ ಮಹಾರಾಜರ ಜಿವನ ಸಾಧನೆಯನ್ನು ಮತ್ತವರ ಅಭಿವೃದ್ದಿಕಾರ್ಯವನ್ನು ವಿವರಿಸುವಲ್ಲಿ ಲೇಖಕಿ ಇಲ್ಲಿ ಯಶಸ್ವಿಗೊಂಡಿದ್ಧಾರೆ.
ಶತಶತಮಾನಗಳಿಂದ ತುಳಿತಕ್ಕೂಳತಟ್ಟ ಸಮಾಜ ದೊರಿಕರಿಸಿದ ಜನಸಮೂದಾಯದ ಪರವಾಗಿ ಧನಿಯತ್ತಿ ತನಗಿರುವ ಸವಾಲೂಗಳನ್ನು ಮೀರಿ “ಆ ಜನರು ನನ್ನವರೇ ನಾವೇಲ್ಲಾ ಒಂದೇ” ಎಂದು ಆ ಕಾಲದಲ್ಲಿಯೇ ಇಂತ್ತಹ ಜನಪರ ಜೀವಪರ ಚಿಂತನೆ ಉಳ್ಳರಾಜ ಶಾಹೂ ಮಹಾರಾಜ ಇಂದಿನ ರಾಜಕೀಯ ನಾಯಕರಿಗೆ ಮಾದರಿಯಾಗಬೇಕು.
ತಮ್ಮ ಜಿವಿತಾವಧಿಯಲ್ಲಿ ಬಡವರು,ಅಸ್ಪೃಶ್ಯರು,ನೊದ್ದವರು ಮಹಿಳೆಯರು, ಅಲ್ಪಸಂಖ್ಯಾತರ ಪರವಗಿ ದುಡಿದು ಸಮಾಜಿಕ ನ್ಯಾಯಕ್ಕಾಗಿ ಶ್ರಮಿಸಿದ ಕೀರ್ತಿ ಶಾಹೂ ಮಹಾರಾಜರಿಗೆ ಸಲ್ಲುತ್ತದೆ.
ಜಾತಿ ಪದ್ಧತಿ ನಿರ್ಮೂಲನೆಗಾಗಿ ತನ್ನ ಆಸ್ಥಾನದಲ್ಲಿ ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಶೂದ್ರರನ್ನ ಮತ್ತು ಅಸ್ಪೃಶ್ಯರನ್ನ ಸೇವಕರಾಗಿ ನೇಮಿಸಿಕೊಂಡು ಮಹಿಳೆಯರ ಜೀವನ ಭದ್ರತೆಗೆ ಬೇಕಾದ ಬಾಲ್ಯ ವಿವಾಹ ನಿಷೇಧಿಸಿ ವಿವಾಹದ ಆಯ್ಕೆ,ವಿವಾಹ ವಿಚ್ಛೇದನ ನೀತಿಯನ್ನು ಜಾರಿಗೊಳಿಸಿದರು. ಆ ಕಾಲದಲ್ಲಿದ್ದ ಚಿತ ಪದ್ಧತಿ,ವತನ್ ಪದ್ಧತಿಯನ್ನು ರದ್ದುಗೊಳಿಸುವ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮಗಳನ್ನು ಕೈಗೊಂಡರು ಜೊತೆಗೆ ಮಹಿಳೆ ಮತ್ತು ದಲಿತರ ಶಿಕ್ಷಣಕ್ಕೆ ಹೆಚ್ಚೆಚ್ಚು ಪ್ರೋತ್ಸಾಹ ನೀಡಿದರು ಹಾಗೂ ಓದುವ ವಿದ್ಯಾರ್ಥಿಗಳಿಗಾಗಿ ವಸತಿ ಸೌಲಭ್ಯ ಮತ್ತು ಶಿಷ್ಯವೇತನವನ್ನು ತಲುಪುವಂತೆ ಮಾಡಿದರು.ಇದೆ ಕಾಲಘಟ್ಟದಲ್ಲಿ ಬೆಳೆದು ಬಂದ ಶೋಷಿತ ವರ್ಗದ ನಾಯಕರುಗಳಾದ ಡಾ.ಬಿ ಆರ್.ಅಂಬೇಡ್ಕರ್, ಜಿ ಎ ಗವಾಯಿ, ಶಿವತಾರಕರ್,ವಿಠ್ಠಲ್ ರಾಮ್ ಜಿ ಶಿಂದೆ ಅವರಂಥಹ ಅನೇಕ ವಿದ್ವಾಂಸರಿಗೆ ಆಶ್ರಯ ವಾಗಿದ್ದರು. ಅಂತರ್ಜಾತಿ ವಿವಾಹ ಮತ್ತು ಸಾಮೂಹಿಕ ವಿವಾಹಕ್ಕೆ ಹೆಚ್ಚು ಹೊತ್ತು ಕೊಟ್ಟು ವಿವಾಹ ವ್ಯವಸ್ಥೆಯಲ್ಲಿನ ವಿಜೃಂಭಣೆಗೆ ನಿರಾಕರಿಸಿ ಅಲ್ಲಿ ವ್ಯಯ ಮಾಡುವ ಹಣ ಆಸ್ತಿ ಸಂಪತ್ತನ್ನು ಮಕ್ಕಳ ಶಿಕ್ಷಣಕ್ಕೆ ಖರ್ಚು ಮಾಡಿ ಎಂದು ಕರೆಕೊಟ್ಟರು. ಹೀಗೆ ಹತ್ತು ಹಲವಾರು ರೀತಿಯ ಸುಧಾರಣಾ ಕ್ರಮಗಳನ್ನು ಕೈಗೊಳ್ಳುತ್ತಾ ತಮ್ಮ ಅವಧಿಯನ್ನು ಸುವರ್ಣ ಯುಗವಾಗಿಸಿದ ಶಾಹೂ ಮಹಾರಾಜರು ನಿಜಕ್ಕೂ “ಜನರ ನೋವಿಗೆ ಮಿಡಿದ ಪ್ರಾಣ ಮಿತ್ರ”ರೇ ಸರಿ.
-ಕಾಶಿನಾಥ ಮುದ್ದಾಗೋಳ
ಕಲಬುರ್ಗಿ.
