ಮೂಕ ಹಕ್ಕಿಯ ಹಾಡು(ಪುಸ್ತಕ ಕುರಿತ ಬರಹ)

By admin

ಪೂಜಾ ಎಸ್, ಕಲಬುರಗಿ

ಮೂಕ ಹಕ್ಕಿಯ ಹಾಡು

ಇದೊಂದು ಪಂಜಾಬ್ ರಾಜ್ಯದ ಮಹಿಳೆಯ ಆತ್ಮ ಕಥನ . ಅತ್ಯಾಚಾರ ಹೆಣ್ಣಿನ ಮೇಲೆ ನಿರಂತರವಾಗಿ ನಡೆಯುವ ಹಿಂಸೆ , ದೌರ್ಜನ್ಯವಾಗಿದೆ. ‘ಅತ್ಯಾಚಾರ ‘ಅನ್ನೊ ಪದ ತೀರ ಹೊಸತೇನಿಲ್ಲ. ದಿನನಿತ್ಯವು ಇಂತಹ ಕೃತ್ಯಕ್ಕೆ ಸಿಲುಕಿ ಮಹಿಳೆಯರು, ಮಕ್ಕಳು ತಮ್ಮ ಜೀವವನ್ನೆ ಕಳೆದುಕೊಂಡಿದ್ದಾರೆ ಹಾಗೂ ಕಳೆದು ಕೊಳ್ಳತ್ತಲೇ ಇದ್ದಾರೆ. ಅತ್ಯಾಚಾರಕ್ಕೆ ಒಳಗಾದರೆ ಅವಳಿಗೆ ಬಾಳೆ ಇಲ್ಲ ಎಂದು ನೋಡುವ ಸಮಾಜ ಇಂದಿಗೂ ಇದೇ ಮನಸ್ಥಿತಿಯಲ್ಲಿ ಮುಂದುವರಿಯುತ್ತಿದೆ. ಅತ್ಯಾಚಾರಕ್ಕೆ ಒಳಗಾದವರು, ಅವರಿಗಾದ ಅವಮಾನ ಸಹಿಸಿಕೊಳ್ಳದೆ ಆತ್ಮಹತ್ಯೆ ಮಾಡಿಕೊಂಡ ಏಷ್ಟೊ ಉದಾಹರಣೆಗಳು ಇವೆ. ಹೀಗಿರುವಾಗ ಮುಕ್ತರ್ ಳ ಧೈರ್ಯ ಮೆಚ್ಚುವಂತಹದ್ದು. ಮುಕ್ತರ್ ಳ ತಮ್ಮ ಶಕೂರ ಮೇಲ್ಜಾತಿಯ ಎನಿಸಿಕೊಂಡಿರುವ ಸಲ್ಮಾಳನ್ನು ಮಾತಾಡಿಸಿದೆ ಘೋರ ತಪ್ಪೆಂದು ಬಿಂಬಿಸಿ ಆತನನ್ನು ಹೊಡೆದು ಪೋಲಿಸ್ ಠಾಣೆಯಲ್ಲಿ ಅರೆಸ್ಟ ಮಾಡಿ ಚನ್ನಾಗಿ ಹಿಗ್ಗಾ ಮುಗ್ಗಾ ಥಳಿಸುತ್ತಾರೆ. ಮಸ್ತೋಯ್ ಎಂಬ ಮೇಲ್ಜಾತಿಯ ಎಂದು ಕರೆಸಿಕೊಳ್ಳುವ ಒಂದು ಸಮುದಾಯ.

ತಳ ಸಮುದಾಯದವರಿಂದ ತಪ್ಪುಗಳು ಆದರೆ ಅಲ್ಲಿನ ಮುಖಂಡರು ಸೇರಿ ‘ಜಿರ್ಗ'( ಪಂಚಾಯಿತಿ) ಕರೆದು ಮಾತಾಡುತ್ತಾರೆ. ಆದ್ರೆ ಇಲ್ಲಿ ನಡೆದುದ್ದೆ ಬೇರೆ . ಸೇಡು ತಿರಿಸಿಕೊಳ್ಳಬೇಕು ಅಂದ್ರೆ ಅವರಿಗೆ ಮೊದಲ ಅಸ್ತ್ರ ಹೆಣ್ಣು. ಆ ಮನೆಯ ಹೆಣ್ಣುಮಕ್ಕಳನ್ನು, ಅತ್ಯಾಚಾರ ಮಾಡುವುದು, ಹಿಂಸೆ ಕೊಡುವುದು, ಬಲತ್ಕಾರ ಮಾಡುವುದು, ಒಟ್ಟಿನಲ್ಲಿ ಹೇಳುವುದಾದರೆ, ಹೆಣ್ಣನ್ನು ಸಂಭೋಗದ ವಸ್ತುವಂತೆ ಕಾಣುತ್ತಾರೆ. ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವುದಿಲ್ಲ. ಹಾಗೇ ಗಂಡು ಮಕ್ಕಳ ಜೊತೆ ಮಾತಾಡಬಾರದು , ಆಟ ಆಟಬಾರದು ಎನ್ನುವ ಆಚರಣೆಗಳು. ಮುಕ್ತರ ಜೀವನ ತುಂಬಾ ಸರಳ. ಅವರ ಮನೆಯಲ್ಲಿ ಏನು ಹೇಳುತ್ತಿದ್ದರು ಹಾಗೆ ಬದುಕಿದವರು , ಯಾರಿಗೂ ನೋವು ಕೊಡದ ಹೆಣ್ಣು. ಹಾಗೇ ಅವಳು ತನ್ನ ಮನೆಯಲ್ಲಿಯೇ ಕುರಾನ್ ಶ್ಲೋಕಗಳನ್ನು ಮಕ್ಕಳಿಗೆ ಹೇಳಿಕೊಡುತ್ತಿದ್ದಳು. ಅವಳಿಗೆ ಓದೊದು ಬರ್ತಿರಲಿಲ್ಲ. ಆದರೆ ಅವಳು ಕುರಾನ್ ಶ್ಲೋಕಗಳನ್ನು ಕಂಠಪಾಠ ಮಾಡಿದ್ದಳು. ಅವಳ ಮನೆಯಲ್ಲಿ ಗಂಡು ನೋಡಿ ಮದುವೆ ಮಾಡುವ ನಿರ್ಧಾರಕ್ಕೆ ಬಂದರು .ಅವರ ಸಂಪ್ರದಾಯದಂತೆ ಮದುವೆಯ ಸಮಯದಲ್ಲಿ ನಿನಗೆ ಹುಡುಗ ಒಪ್ಪಿಗೆ ನಾ? ಎಂದು ಕೇಳಿದಾಗ ಅವಳು ಉತ್ತರಿಸುವುದೇ ಇಲ್ಲ. ಗುಂಪಿನಲ್ಲಿ ತುಂಬಾ ಜನರಿರುತ್ತಾರೆ ಅವರೇ ‘ಒಪ್ಪಿಗೆ ಇದೆ’ ಎಂದು ಹೇಳುತ್ತಾರೆ. ಅವಳ ಸ್ವ ಇಚ್ಛೆಯಿಂದ ಮದುವೆಯಾಗುವುದಿಲ್ಲ. ಅವನು ಕುಂಟ ಇರುತ್ತಾನೆ ಹಾಗಿದ್ದರು ಸುಮ್ಮನಾಗುತ್ತಾಳೆ. ಮದುವೆಯಾಗಿ ಹೋದ ನಂತರ ಆಕೆಯ ಗಂಡ ಕೆಲಸ ಮಾಡದ ಸೋಮಾರಿ ಎಂಬುದು ಗೊತ್ತಾಗುತ್ತೆ ಅವನ ಜೊತೆ ಬಾಳುವುದಕ್ಕೆ ಆಗುವುದಿಲ್ಲ ಹಾಗಾಗಿ ಅವಳು ವಿಚ್ಛೇದನ ಪಡೆಯುತ್ತಾಳೆ. ನಂತರ ತನ್ನ ತವರು ಮನೆಯಲ್ಲಿ ಜೀವನ ನಡೆಸುತ್ತಿರುತ್ತಾಳೆ. ಅವಳ ತಮ್ಮ ಮಾಡಿದ ತಪ್ಪಿಗೆ ಮುಕ್ತರ್, ಅವಳ ಅಪ್ಪ & ಚಿಕ್ಕಪ್ಪರವರೊಂದಿಗೆ ಫೈಜಾ( ಮುಸ್ತೋಯ್ ಸಮುದಾಯದವನು) ಅವರ ಮನೆಗೆ ಹೋಗಿ ಕ್ಷಮೆ ಕೇಳಲಿಕ್ಕೆ ಹೊದಾಗ ಅವಳ ಮೇಲೆ ಇಡೀ ರಾತ್ರಿ ಮೃಗಗಳಂತೆ ಸಾಮೂಹಿಕ ಅತ್ಯಾಚಾರ ವೆಸುಗುತ್ತಾರೆ. ನಂತರ ಅವಳು ತುಂಡು ಬಟ್ಟೆ ಹೊದ್ದು ಮನೆಗೆ ಬಂದು ಅಮ್ಮನನ್ನು ತಬ್ಬಿ ಅಳುತ್ತಾಳೆ. ಅವಳ ಇಡಿ ಕುಟುಂಬ ದುಃಖವನ್ನಾಚರಿಸುತ್ತದೆ. ಇವರು ಏನು ಮಾಡುವಂತಿರಲಿಲ್ಲ‌ . ಏಕೆಂದರೆ ಅವರು ತುಂಬಾ ಬಲಿಷ್ಟರಿರುವುದರಿಂದ ಅವರನ್ನು ಎದುರಿಸುವ ಶಕ್ತಿ ಇವರಿಗಿರಲಿಲ್ಲ. ಅವಳ ಮೇಲೆ ನಡೆದ ಈ ಸಾಮೂಹಿಕ ಅತ್ಯಾಚಾರವು ಒಂದು ಪತ್ರಿಕೆಯಲ್ಲಿ ಪ್ರಕಟವಾಗುತ್ತದೆ. ಈ ಸುದ್ದಿ ಇಡೀ ಪ್ರಪಂಚದಾದ್ಯಂತ ಹಬ್ಬಿತ್ತು . ಇಲ್ಲಿ ಪತ್ರಿಕೆಗಳು ತುಂಬಾ ಮುಖ್ಯವಾದ ಪಾತ್ರವನ್ನು ವಹಿಸಿದೆ. ಪಂಜಾಬನಲ್ಲಿ ಇಂತಂದೊಂದು ಹಿಂಸೆ ಹೆಣ್ಣುಮಕ್ಕಳ ಮೇಲೆ ನಿರಂತರವಾಗಿ ನಡೆಯುತ್ತಲಿದೆ ಎಂಬುದನ್ನು ತರೆದಿಡಲಾಯಿತು.ನಂತರ ಅವಳು ಕಂಪ್ಲೇಟ್ ಮಾಡುತ್ತಾಳೆ ‌. ಕೊರ್ಟ ಮೆಟ್ಟಿಲು ಹತ್ತುತ್ತಾಳೆ. ಕೊನೆಗೆ ನ್ಯಾಯ ಸಿಗುತ್ತದೆ. ಅವಳ ಬದುಕು ದಿನನಿತ್ಯ ಒಂದು ಹೋರಾಟವಿದ್ದಂತೆ. ಅವಳು ತನಗಾದ ಅವಮಾನ , ಅತ್ಯಾಚಾರ ಮತ್ಯ್ತಾವ ಹೆಣ್ಣಿಗೂ ಆಗಬಾರದು ಎಂದು ಬಯಸುತ್ತಾಳೆ. ಅವಳು ಅನಕ್ಷರಸ್ಥೆ ಯಾಗಿದ್ದರಿಂದ ಅವಳು ಅನುಭವಿಸಿದ ನೋವುಗಳು ಇನ್ನಾರಿಗು ಆಗಬಾರದೆಂದು ಶಾಲೆ ತೆರೆಯುತ್ತಾಳೆ. ಅವಳೇ ಶಾಲೆಯ ಪ್ರಿಂಸಿಪಲ್ ಆಗುತ್ತಾಳ ಜೊತೆಗೆ ಅವಳು ಸಹ ಮಕ್ಕಳೊಂದಿಗೆ ಓದು ಬರಹ ಕಲಿಯುತ್ತಾಳೆ. ಶಾಲೆಯಲ್ಲಿ ಆ ಹೆಣ್ಣುಮಕ್ಕಳು ಶಾಲೆಯಲ್ಲಿ ಖುಷಿಯಿಂದ ಆಟವಾಡುತ್ತಿದ್ದರೆ , ಕಲಿಯುತ್ತಿದ್ದರೆ ಅವಳಿಗಾದ ನೋವಿಗೆ ಮುಲಾಮು ಹಚ್ಚಿದಂತೆ ಭಾಸವಾಗುತ್ತೆ. ಶಾಲೆ ನಡೆಸಲು ವಿದೇಶಗಳಿಂದ ತುಂಬಾ ಧನ ಸಹಾಯ ಸಿಗುತ್ತದೆ. ಅವಳೊಂದಿಗೆ ಸಂಘಟನೆಗಳು ಕೈ ಜೊಡಿಸುತ್ತವೆ‌ . ನಸೀಮ್ ಸಹ ಅವಳಿಗೆ ಒಳ್ಳೆಯ ಗೆಳತಿಯಾಗುತ್ತಾಳೆ. ಹಾಗೇ ಮುಕ್ತರ್ ಳಿಗೆ ಧೈರ್ಯ ತುಂಬುತ್ತಾಳೆ. ಹೀಗೆ ಅವಳ ಬಳಿ ತನ್ನ ಎಲ್ಲ ನೋವನ್ನು ಹಂಚಿಕೊಳ್ಳತ್ತಾಳೆ. ಕೊನೆಯಲಿ ಜಿರ್ಗ್ ಅನ್ನೊದು ನಿಷೇಧ ಮಾಡುತ್ತಾರೆ. ಅವಳಿಗೆ ನ್ಯಾಯ ಸಿಗುತ್ತದೆ. ನಂತರ ಅವಳು ಒಬ್ಬ ಪೋಲಿಸ್ ಪೇದೆಯೊಂದಿಗೆ ಮದುವೆಯಾಗಿ , ಶಾಲೆಯನ್ನು ಮುನ್ನಡೆಸಿಕೊಂಡು ಹೋಗುತ್ತದ್ದಾಳೆ. ಇದರಿಂದ ಅತ್ಯಾಚಾರಕ್ಕೊಳಗಾದ ಮಹಿಳೆಯರಿಗೆ ನಾಯಕಿಯಂತೆ ಬಿಂಬಿಸುತ್ತಾರೆ. ಹೆಣ್ಣು ಮಕ್ಕಳು ಮನಸ್ಸು ಮಾಡಿದ್ರೆ ಏನ್ನನ್ನು ಸಹ ಮಾಡಬಹುದು ಎಂಬುದನ್ನು ನೋಡಲು ಸಿಕ್ಕಿತು. ಈ ಪುಸ್ತಕ ಮೂಲತಃ ಇಂಗ್ಲಿಷ್ ನಲ್ಲಿದೆ ಇದನ್ನು ಕನ್ನಡಕ್ಕೆ ಡಾ.ಎನ್. ಜಗದೀಶ್ ಕೊಪ್ಪ ಅವರು ಅನುವಾದಿಸಿದ್ದಾರೆ.

ಪೂಜಾ ಎಸ್, ಕಲಬುರಗಿ