
ಪಂಚಕೋಟಿ ವಾನರ ಸೇನೆಯೊಂದಿಗೆ ಸ್ವರ್ಣ ಪರ್ವತ ಕಾಯದI
ಗವಯಾ ನಾಮ ವಾನರ ಯುವ ವೀರ ಪ್ರತ್ಯಕ್ಷನಾದ; II
ಕೋಟಿಸಹಸ್ರ ವಾನರ ದಂಡಿನೊಂದಿಗೆ ಯುವ ಬಲಶಾಲಿI
ದರೀಮುಖ ಬಂದು ನಿಂತ ಸುಗ್ರೀವ ಬಳಿ; II
ಅಶ್ವಿಪುತ್ರರು, ಮೈಂದ ವ ದ್ವಿವಿದ ಮಹಾಬಲರುI
ಕೋಟಿ ಕೋಟಿ ವಾನರ ಜತೆ ಪ್ರತ್ಯಕ್ಷರಾದರು,;II
ಮುಕ್ಕೋಟಿ ವಾನರ ಜತೆ ಬಲಶಾಲಿ ಗಜI
ಸುಗ್ರೀವನ ಬಳಿ ಪ್ರತ್ಯಕ್ಷನಾದ; II
ಹತ್ತುಕೋಟಿ ಕರಡಿ ಸೇನೆಯೊಂದಿಗೆI
ಸುಗ್ರೀವನ ಬಳಿ ನಿಂತ ಮಹಾಮೇಧಾವಿ ಜಾಂಬವಂತ; II
ಶತಕೋಟಿ ವಾನರರೊಂದಿಗೆ ಬಂದನುI
ಜ್ವಾಲೆ-ತೇಜಿ ಮಹಾಸಾಹಸಿ ರುಮಣ; II
ದಶ ಶತ ಸಹಸ್ರಕೋಟಿ ವಾನರ ಹಿಂಬಾಲಿಸಿಕೊಂಡುI
ಮಹಾವೀರ ಗಂಧಮಾದನ ಸುಗ್ರೀವನ ಬಳಿ ಬಂದನು; II
ತಂದೆಗೆ ಸಮ ಸಾಹಸಿ ವಾಲಿಪುತ್ರ ಯುವರಾಜ ಅಂಗದI
ಸಹಸ್ರಶತ ವಾನರೊಂದಿಗೆ ಸುಗ್ರೀವನ ಬಳಿ ಬಂದ; II
ಬಂದ ಏಕದಶಕೋಟಿ ವಾನರ ವೀರರೊಂದಿಗೆI
ಯುವ ಕಪಿವೀರ ಇಂದ್ರಜಾನು ಸುಗ್ರೀವ ಬಳಿಗೆ; II
ಬಂದ ಸಹ್ರ ಸಹಸ್ರ ವಾನರ ಸೇನೆಯೊಂದಿಗೆI
ಸೂರ್ಯತೇಜಿ ರಂಭ ಸುಗ್ರೀವ ಬಳಿಗೆ; II
ಬಂದ ದ್ವಿಕೋಟಿ ವಾನರ ವೀರರೊಂದಿಗೆI
ಮಹಾಬಲಿ ದರ್ಮುಖ ಸುಗ್ರೀವ ಬಳಿಗೆ; II
ಕೋಟಿವಾನರಿಗೆ ಸಮ ಕೈಲಾಸಪರ್ವತದಂತಹ ಭೀಮಕಾಯದI
ಪರಾಕ್ರಮಿ ಮಹಾಬಲ ಹನುಮಾನ ಪ್ರತ್ಯಕ್ಷನಾದ; II
ಬಂದ ಏಕ ಕೋಟಿ ಏಕ ಸಹಸ್ರ ಏಕ ಶತ ವಾನರರೊಂದಿಗೆI
ಮಹಾಪರಾಕ್ರಮಿ ಸಾಹಸಿ ನಲ ಸುಗ್ರೀವ ಬಳಿಗೆ; II
ಬಂದ ದಶಕೋಟಿ ವಾನರರೊಂದಿಗೆ ಮುಖ್ಯಸ್ಥ I
ಪರಾಕ್ರಮಿ ದಧಿಮುಖ ಸುಗ್ರೀವನ ಬಳಿ; II
ಶರಭ, ಕುಮುದ, ವಹಿನ ನಾಮ ಇಚ್ಚಾರೂಪಧಾರಕI
ವಾನರರು ಬಂದರು ಸುಗ್ರೀವನ ಬಳಿ;II
ಬಂದು ಸೇರಿದ ವಾನರ, ಕರಡಿಗಳ ಸೇನೆ ಅಗಣಿತ ತುಂಬಿತು ಭೂಪ್ರದೇಶ,I
ಅರಣ್ಯ ಬೆಟ್ಟಗಳು; ಬಂದ ಸೇನೆ II
ಸುತ್ತುವರೆಯಿತು ಸುಗ್ರೀವನ ವಿಭನ್ನ ಆಯುಧಗಳೊಂದಿಗೆI
ಸೂರ್ಯನನ್ನು ಮೋಡಗಳು ಸುತ್ತಿದಂತೆ; II
ರಾಮನಿಗೆ ಪರಿಚಯಿಸಿದ ಸುಗ್ರೀವI
ಒಬ್ಬೊಬ್ಬರಂತೆ ವಾನರ ಮುಖಂಡರನು. II
ಕಿಷ್ಕಿಂಧಕಾಂಡ ರಾಮಾಯಣ
ವಾನರ ಸೈನ್ಯ ಮತ್ತು ಶೂರ ನಾಯಕರು ಜಮಾವಣೆ ಆಗುವ ಸನ್ನಿವೇಶವನ್ನು ಆದಿಕವಿ ವಾಲ್ಮೀಕಿಯು ವಿವರಿಸಿರುವರು: (1) ವಾನರ ಸೈನ್ಯ ಜಮಾವಣೆ ಮತ್ತು ರಾಮನಿಗೆ ಅವರ ಪರಿಚಯ: ಪಂಚಕೋಟಿ ವಾನರ ಸೇನೆಯೊಂದಿಗೆ ಸ್ವರ್ಣ ಪರ್ವತ ಕಾಯದ ‘ಗವಯಾ’ ನಾಮ ವಾನರ ಯುವ ವೀರನು ಪ್ರತ್ಯಕ್ಷನಾದನು; ಕೋಟಿಸಹಸ್ರ ವಾನರ ದಂಡಿನೊಂದಿಗೆ ಯುವ ಬಲಶಾಲಿ ‘ದರೀಮುಖ’ನು ಸುಗ್ರೀವ ಬಳಿ ಬಂದು ನಿಂತನು; ಅಶ್ವಿಪುತ್ರರು (ನಾಗರರಾಜನ ಪುತ್ರರು), ‘ಮೈಂದ’ ಮತ್ತು ‘ದ್ವಿವಿದ’ ನಾಮ ಮಹಾಬಲರು ಕೋಟಿ ಕೋಟಿ ವಾನರ ಜತೆ ಪ್ರತ್ಯಕ್ಷರಾದರು,ಮುಕ್ಕೋಟಿ ವಾನರ ಜತೆ ಬಲಶಾಲಿ ‘ಗಜ’ನು ಸುಗ್ರೀವನ ಬಳಿ ಪ್ರತ್ಯಕ್ಷನಾದನು; ಹತ್ತುಕೋಟಿ ನರಕರಡಿ ಸೇನೆಯೊಂದಿಗೆ ಮಹಾಮೇಧಾವಿ ಜಾಂಬವಂತನು ಸುಗ್ರೀವನ ಬಳಿ ನಿಂತನು; ಶತಕೋಟಿ ವಾನರರೊಂದಿಗೆ ಜ್ವಾಲೆ-ತೇಜಿ ಮಹಾಸಾಹಸಿ ‘ರುಮಣ’ನು ಬಂದನು; ದಶ ಶತ ಸಹಸ್ರಕೋಟಿ ವಾನರ ಹಿಂಬಾಲಿಸಿಕೊಂಡು ಮಹಾವೀರ ‘ಗಂಧಮಾದನ’ನು ಸುಗ್ರೀವನ ಬಳಿ ಬಂದನು; ತಂದೆಗೆ ಸಮ ಸಾಹಸಿ ವಾಲಿಪುತ್ರ ಯುವರಾಜ ಅಂಗದನು ಸಹಸ್ರಶತ ವಾನರೊಂದಿಗೆ ಸುಗ್ರೀವನ ಬಳಿ ಬಂದನು; ಏಕದಶಕೋಟಿ ವಾನರ ವೀರರೊಂದಿಗೆ ಯುವ ಕಪಿವೀರ ‘ಇಂದ್ರಜಾ’ನು ಸುಗ್ರೀವನ ಬಳಿಗೆ ಬಂದನು; ಸಹ್ರ ಸಹಸ್ರ ವಾನರ ಸೇನೆಯೊಂದಿಗೆ ಸೂರ್ಯತೇಜಿ ‘ರಂಭ’ನು ಸುಗ್ರೀವನ ಬಳಿಗೆ ಬಂದನು; ದ್ವಿಕೋಟಿ ವಾನರ ವೀರರೊಂದಿಗೆ ಮಹಾಬಲಿ ‘ದರ್ಮುಖ’ನು ಸುಗ್ರೀವ ಬಳಿಗೆ ಬಂದನು; ಕೋಟಿವಾನರಿಗೆ ಸಮ ಕೈಲಾಸ ಪರ್ವತದಂತಹ ಭೀಮಕಾಯದ ಮಹಾಪರಾಕ್ರಮಿ ಮಹಾಬಲ ‘ಹನುಮಾನ’ನು ಪ್ರತ್ಯಕ್ಷನಾದನು; ಏಕ ಕೋಟಿ ಏಕ ಸಹಸ್ರ ಏಕ ಶತ ವಾನರರೊಂದಿಗೆ ಮಹಾಪರಾಕ್ರಮಿ ಸಾಹಸಿ ‘ನಲ’ನು ಸುಗ್ರೀವನ ಬಳಿಗೆ ಬಂದನು; ದಶಕೋಟಿ ವಾನರರೊಂದಿಗೆ ಮುಖ್ಯಸ್ಥ ಪರಾಕ್ರಮಿ ‘ದಧಿಮುಖ;ನು ಸುಗ್ರೀವನ ಬಳಿ ಬಂದನು; ಶರಭ, ಕುಮುದ, ವಹಿನ ನಾಮ ಇಚ್ಚಾರೂಪಧಾರಕ ವಾನರರು ಸುಗ್ರೀವನ ಬಳಿ ಬಂದರು; ವಾನರ, ಕರಡಿಗಳ ಸೇನೆಗಳು ಅಗಣಿತವಾಗಿ ಬಂದು ಸೇರಿದರಿಂದ ಭೂಪ್ರದೇಶ, ಅರಣ್ಯ, ಬೆಟ್ಟಗಳು ತುಂಬಿದವು; ವಿಭನ್ನ ಆಯುಧಗಳೊಂದಿಗೆ ಬಂದ ಸೇನೆಯು ಸೂರ್ಯನನ್ನು ಮೋಡಗಳು ಸುತ್ತಿದಂತೆ ಸುಗ್ರೀವನನ್ನು ಸುತ್ತುವರೆಯಿತು; ಸುಗ್ರೀವನು ವಾನರ ಮುಖಂಡರನನ್ನು ಒಬ್ಬೊಬ್ಬರಂತೆ ರಾಮನಿಗೆ ಪರಿಚಯಿಸಿದನು ಆದಿಕವಿ ವಾಲ್ಮೀಕಿಯು ವಿವರಿಸಿರುವರು, (2) ಸುಗ್ರೀವನ ಸಂಘಟಣಾ ಸಾಮರ್ಥ್ಯ: ಆದಿಕವಿ ವಾಲ್ಮೀಕಿಯು ‘ಓ ಸುಗ್ರೀವಾ, ನಿನ್ನಲ್ಲಿ ಸಹಜ ಸಂಘಟನಾ- ವ್ಯವಸ್ಥೆ ಸಾಮರ್ಥ್ಯ ಅದ್ಭುತವಾಗಿದೆ” ಎಂಬ ರಾಮನ ನುಡಿಗಳ ಮುಖೇನ ಸುಗ್ರೀವನ ಅದ್ಭುತ ಸೈನ್ಯದ ಪರಿಚಯವನ್ನು ಈ ಸಂದರ್ಭದಲ್ಲಿ ವರ್ಣಿಸಿರುವರು ಮತ್ತು ಸಕಲ ಜೀವ-ಪ್ರಭೇಧಗಳ ಸೂಚಕ ಪ್ರಾತಿನಿಧ್ಯ ಸೈನ್ಯದ ವಿವರಣೆಯು ಆದಿಕವಿ ವಾಲ್ಮೀಕಿಯ ಸ್ಥಳೀಯ ರಾಜ್ಯವಂಶಗಳ ಪ್ರಜ್ಞೆಯನ್ನು ತಿಳಿಸುವದು.
ಡಾ. ಅರ್ಜುನ ಯ. ಪಂಗಣ್ಣವರ ವಾಲ್ಮೀಕಿ ಸಾಹಿತ್ಯ ಚಿಂತಕ
