ಏಳು ರಾಜ್ಯಗಳ ಚಿನ್ನ ಬೆಳ್ಳಿ ಖನಿಜಗಳ I ಭಾಗ-21

By admin


ಏಳು ರಾಜ್ಯಗಳ ಚಿನ್ನ ಬೆಳ್ಳಿ ಖನಿಜಗಳI
ನಡುಗಡ್ಡೆ ‘ಯವ’ದಲ್ಲಿ ಹುಡುಕಿರಿ ಸೀತೆಯನ; II
ಯವ ದಾಟಿ ಶಿಶಿರ ನಾಮ ಗಗನಚುಂಬಿ ಪರ್ವತವಿದೆ: ಜಲಪಾತI
ದೇವ ದಾನವರ ತಾಣ, ಎಲ್ಲರೂ ಜತೆಯಾಗಿ ಹುಡುಕಿರಿ; II
ಅಲ್ಲಿಂದ ಕೆಂಪು-ಜಲ ವೇಗದೀ ಹರಿವ ಶೋಣನದಿI
ಮುಖಜ ಸಮುದ್ರ ತೀರದಲಿ ಹುಡಿಕಿರಿ; II
ಶೋಣನದಿ ಸುಂದರ ಅರಣ್ಯ ಘಾಟಗಳ ಸುತ್ತಿ I
ಸಾಗಿರ ಹುಡುಕುತ ಪ್ಲಕ್ಷ ನಡುಗಡ್ಡೆಯತ್ತ; II
ಕಣ್ಮನ ಸೇಳೆವ ವನ ಜಿನಗುವ ನದಿ ತೀರಗಳI
ಪ್ಲಕ್ಷ ದ್ವೀಪದಲಿ ಹುಡುಕಿ ಸಮುದ್ರದತ್ತ ಸಾಗಿರಿ; II
ಸಮುದ್ರದಲಿ ದ್ವೀಪಗಳ ಸಮೂಹ, ಭಯಾನಕ ಅಲೆI
ಬಿರುಗಾಳಿ ತುಂಬಿದ ಉಪ್ಪು-ಸಮುದ್ರ ಹಿತ ಕಣ್ಣಿಗೆ; II
ಕಾರ್ಮೋಡಿನಂತೆ ಘಟಸರ್ಪದಂತೆ ಅಬ್ಬರಿಸುವI
ಸಮುದ್ರದಲೆಗಳ, ಮಹಾಕಾಯಗಳ ಅಸುರರ ತಾಣ; II
ಅಲ್ಲಿಂದ ಕೆಂಪು-ಜಲ ಲೋಹಿತ ನಾಮ ಸಮುದ್ರದತ್ತ ಸಾಗಿರಿ, I
ಕಾಣಿಸುವವು ಕೂಟ-ಶಾಲ್ಮಲಿಮ ಗಿಡಗಳ ದ್ವೀಪ; II
ಭವ್ಯ ಅರಮನೆ, ವಿಶ್ವಕರ್ಮ ನಿರ್ಮಿತ ಕೈಲಾಸದಂತೆ ಕಾಣುವI
ಆಭರಣಾಲಂಕೃತ ವಿನತಪುತ್ರ ಗರುಡನಿರವನಲ್ಲಿ; II
ನಿರ್ದಯಿ ಭಯಾನಕ ವಿಭಿನ್ನ ಕಾಯ ರಾಕ್ಷಸರು ನಿತ್ಯI
ಪರ್ವತಶಿರದಿ ಬಿದ್ದು ಮೇಲೆಳುವರು: II
ಜಲಕ್ಕೆ ಬೀಳುವರು ಸೂರ್ಯೋದಯದಿ,I
ಪರ್ವತ ಮೇಲೆರುವರು ಸೂರ್ಯಾಸ್ತದಿ; II
ದಾಟಿ ಮುಂದೆ ಶುಭ್ರ ಮೋಡ-ವರ್ಣ ಸಮುದ್ರ ದ್ರಶ್ಯI
ಮೋಡಗಳ ಮುತ್ತಿನ ಹಾರದಂತೆ ಕಾಣುವಿರಿ; II
ಮೋಡಗಳ ಸ್ರೇಣಿ ಮಧ್ಯೆ ವೃಷಭ ನಾಮ ಪರ್ವತI
ದಿವ್ಯ ಸುಗಂಧ ಪರಿಮಳದ ತಾಣ; II
ಸುದರ್ಶನ ನಾಮ ಸರೋವರ ಶ್ವೇತ ಕಮಲಗಳಿಂದ ತುಂಬಿದೆ, I
ಯಕ್ಷ,ಅಪ್ಸರೆ ದೇವತೆ ಕಿನ್ನರರು ಭೇಟಿ ಅಲ್ಲಿದೆ;II
ಕ್ಷೀರ-ಸಮುದ್ರದಾಚೆ ಮೃದುಜಲ ಸಮುದ್ರ ಪ್ರದೇಶದಲಿI
ಭಯಾನಕ ಜೀವಿಗಳ ದರ್ಶನ, ತಕ್ಷಣ; II
ಅಶ್ವ-ಮುಖದಿ ಹೊರಹೊಮ್ಮುವ ವಿಷ್ಮಯ ಜ್ವಾಲೆ,I
ಸಮುದ್ರ ಗರ್ಭದಿ ಹೊರಮೊಮ್ಮುವ ಭಯಾನಕ ಶಬ್ದ; II
ಜಾತರೂಪ ನಾಮ ಸ್ವರ್ಣ ಶಿಲೆ ಪರ್ವತ ಹರಡಿದೆ I
ಹದಿಮೂರು ಯೋಜನೆ, ಮೃದುಜಲ-ಸಮುದ್ರೋತ್ತರಕ್ಕೆ; II
ಸೂರ್ಯ ಉದಯಿಸಿದಾಗ ಈ ಪರ್ವತಗಳಲ್ಲಿ ಉತ್ತರಮಾರ್ಗದಿ I
ಕಿರಣ ಸುತ್ತುವರೆಯುವದು ಜಂಬುದ್ವೀಪ; II
ಸೂರ್ಯ ಉದಯಿಸುವ ತಾಣ ಶ್ರೇಷ್ಠ,I
ಇಲ್ಲಿಂದಲೇ ಗಗನಕ್ಕೆ ಹೋಗುವ ಮಾರ್ಗ;II
ಅದರಾಚೆ ಏನೂ ಇಲ್ಲ, ವಾನರರುI
ಅಲ್ಲಿವರೆಗೆ ಮಾತ್ರ ಹೋಗಲು ಸಾಧ್ಯ; II
ಆ ಪರ್ವತ ಗಿರ ಶಿಖರಗಳಿ ರಾವಣನ ಗುಹೆಗಳಿವೆ,I
ಮೂಲೆ ಮೂಲೆ ಸುತ್ತಿ ಹುಡಿಕಿ ಸೀತೆಯನು; II
ಒಂದು ಮಾಸದೊಳಗೆ ಹಿಂದಿರುಗಲೇ ಬೇಕು ರಾವಣ ಸೀತೆI
ಹುಡುಕಿ, ಸೂರ್ಯೋದಯ ಪರ್ವತದಿ”.II
ಕಿಷ್ಕಿಂಧಕಾಂಡ ರಾಮಾಯಣ

ವಿನತನಿಗೆ ಸುಗ್ರೀವನು ಜಂಬುದ್ವೀಪದ ಪೂರ್ವ ದಿಕ್ಕಿನ ಪ್ರದೇಶಗಳ ವರ್ಣನೆಯನ್ನು ಮುಂದುರೆಸಿದನ್ನು ಆದಿಕವಿ ವಿವರಿಸಿರುವರು:(1) ಏಳು ರಾಜ್ಯಗಳ ಚಿನ್ನ ಬೆಳ್ಳಿ ಖನಿಜಗಳ ನಡುಗಡ್ಡೆ ‘ಯವ’ದಲ್ಲಿ (ಜಾವಾ, ಸುಮತ್ರ, ಬಾಲಿ ಇಂಡೋನೇಷಿಯಾ ಇತ್ಯಾದಿ ನಡುಗಡ್ಡೆಗಲಳಿ)) ಸೀತೆಯನ್ನು ಹುಡುಕಿರಿ; ಯವ ನಡುಗಡ್ಡೆ ಪ್ರದೇಶ ದಾಟಿ ಶಿಶಿರ ನಾಮ ಗಗನಚುಂಬಿ ಪರ್ವತವಿದೆ ಅದು ಜಲಪಾತಗಳ ಮತ್ತುದೇವ ದಾನವರ ತಾಣ, ಆ ಪ್ರದೇಶಗಳಲ್ಲಿ ಎಲ್ಲರೂ ಜೊತೆಯಾಗಿ ಸೀತೆಯನ್ನು ಹುಡುಕಿರಿ; ಅಲ್ಲಿಂದ, ವೇಗದಿಂದ ಹರಿವ ಕೆಂಪು-ಜಲದ ಶೋಣನದಿ ಮುಖಜ ಸಮುದ್ರ ತೀರದಲ್ಲಿ ಸೀತೆಯನ್ನು ಹುಡುಕಿರಿ; ಶೋಣನದಿಯ ಸುಂದರ ಅರಣ್ಯ ಘಾಟಗಳನ್ನು ಸುತ್ತಿ ಸೀತೆಯನ್ನು ಹುಡುಕುತ ಪ್ಲಕ್ಷ ನಡುಗಡ್ಡೆಯತ್ತ ಸಾಗಿರಿ; ಕಣ್ಮನ ಸೇಳೆವ ವನಗಳ, ಜಿನಗುವ ನದಿಗಳ ತೀರಗಳ ಪ್ಲಕ್ಷ ದ್ವೀಪದಲಿ ಸೀತೆಯನ್ನು ಹುಡುಕಿ ಮುಂದೆ ಸಮುದ್ರದತ್ತ ಸಾಗಿರಿ; ಸಮುದ್ರದಲಿ ದ್ವೀಪಗಳ ಸಮೂಹ, ಭಯಾನಕ ಅಲೆಗಳು ಮತ್ತು ಬಿರುಗಾಳಿಯಿಂದ ತುಂಬಿದ ಕಣ್ಣಿಗೆ ಹಿತ ಉಂಟುಮಾಡುವ ಉಪ್ಪು-ಸಮುದ್ರ, ಅದು ಕಾರ್ಮೋಡಿನಂತೆ ಘಟಸರ್ಪದಂತೆ ಅಬ್ಬರಿಸುವ ಸಮುದ್ರದಲೆಗಳ, ಮಹಾಕಾಯಗಳ ಅಸುರರು ವಾಸಿಸುವ ತಾಣ; ಅಲ್ಲಿಂದ ಕೆಂಪು-ಜಲದ ‘ಲೋಹಿತ’ ನಾಮ ಸಮುದ್ರದತ್ತ ಸಾಗಿರಿ, ಅಲ್ಲಿ ನಿಮಗೆ ಕೂಟ-ಶಾಲ್ಮಲಿಂ (ಹಿಪ್ಪು ನೇರಳ) ಗಿಡಗಳ ದ್ವೀಪ ಮತ್ತು ವಿಶ್ವಕರ್ಮ ನಿರ್ಮಿಸಿದ ಕೈಲಾಸದಂತೆ ಕಾಣುವ ಭವ್ಯ ಅರಮನೆಯಿದೆ, ಆ ಅರಮನೆಯಲ್ಲಿ ಆಭರಣಾಲಂಕೃತ ವಿನತಪುತ್ರ ಗರುಡನಿರುವನು; ನಿರ್ದಯಿ ಭಯಾನಕ ವಿಭಿನ್ನ ಕಾಯದ ರಾಕ್ಷಸರು ನಿತ್ಯ ಪರ್ವತಶಿರದಿಂದ ಸೂರ್ಯೋದಯ ಕಾಲದಲ್ಲಿ ಜಲಕ್ಕೆ ಬೀಳುವರು ಮತ್ತು ಸೂರ್ಯಾಸ್ತ ಕಾಲದಲ್ಲಿ ಜಲದಿಂದ ಮೇಲೆದ್ದು ಪರ್ವತ ಮೇಲೆರುವರು; ಆ ಪ್ರದೇಶ ದಾಟಿ ಮುಂದೆ ಶುಭ್ರ ಮೋಡ-ವರ್ಣ ಸಮುದ್ರ ದ್ರಶ್ಯ ಹಾಗು ಮೋಡಗಳನ್ನು ಮುತ್ತಿನ ಹಾರದಂತೆ ಕಾಣುವಿರಿ ಮತ್ತು ಆ ಮೋಡಗಳ ಹಾರ ಮಧ್ಯೆ ಕಾಣುವ ವೃಷಭ ನಾಮ ಪರ್ವತವು ದಿವ್ಯ ಸುಗಂಧ ಪರಿಮಳದ ತಾಣ; ಅಲ್ಲಿದ್ದ ಸುದರ್ಶನ ನಾಮ ಸರೋವರವು ಶ್ವೇತ ಕಮಲಗಳಿಂದ ತುಂಬಿರುತ್ತದೆ; ಆ ಸರೋವರ ಪ್ರದೇಶದಲ್ಲಿ ಯಕ್ಷ, ಅಪ್ಸರೆ, ದೇವತೆ, ಕಿನ್ನರರು ಭೇಟಿಯಾಗುವರು; ಆ ಕ್ಷೀರ-ಸಮುದ್ರದಾಚೆ ಮೃದುಜಲ ಸಮುದ್ರ ಪ್ರದೇಶದವಿದೆ ಅಲ್ಲಿ ತಕ್ಷಣ ನಿಮಗೆ ಭಯಾನಕ ಜೀವಿಗಳ ದರ್ಶನವಾಗುವದು; ಅಲ್ಲಿ ಜಾತರೂಪ ನಾಮ ಸ್ವರ್ಣ ಶಿಲೆ ಪರ್ವತವಿದೆ ಅದು ಮೃದುಜಲ-ಸಮುದ್ರೋತ್ತರಕ್ಕೆ ಹದಿಮೂರು ಯೋಜನೆ ಹರಡಿದೆ (ಇಂದಿನ ಜಪಾನ ನಡುಗಡ್ಡೆ ದೇಶ); ಅಲ್ಲಿ ಅಶ್ವ-ಮುಖಪರ್ವತದಿಂದ ಹೊರಹೊಮ್ಮುವ ವಿಷ್ಮಯ ಜ್ವಾಲೆ, ಸಮುದ್ರ ಗರ್ಭದಿಂದ ಹೊರಮೊಮ್ಮುವ ಭಯಾನಕ ಶಬ್ದ ಕೇಳಿಬರುತ್ತವೆ; ಈ ಪರ್ವತಗಳಲ್ಲಿ ಸೂರ್ಯ ಉದಯಿಸಿದಾಗ ಉತ್ತರಮಾರ್ಗದಿಂದ ಸೂರ್ಯ ಕಿರಣ ಜಂಬುದ್ವೀಪ ಸುತ್ತುವರೆಯುವದು; ಸೂರ್ಯ ಉದಯಿಸುವ ಶ್ರೇಷ್ಠ ತಾಣವದು ಮತ್ತು ಇಲ್ಲಿಂದಲೇ ಗಗನಕ್ಕೆ ಹೋಗುವ ಮಾರ್ಗವಿದೆ ಆದರೆ ಅದರಾಚೆ ಏನೂ ಇಲ್ಲ, ವಾನರರು ಅಲ್ಲಿವರೆಗೆ ಮಾತ್ರ ಹೋಗಲು ಸಾಧ್ಯ; ಆ ಪರ್ವತ ಗಿರ ಶಿಖರಗಳಿ ರಾವಣನ ಗುಹೆಗಳಿವೆ, ಪ್ರದೇಶದ ಮೂಲೆ ಮೂಲೆ ಸುತ್ತಿ ಸೀತೆಯನ್ನು ಹುಡಿಕಿರಿ; ಕಿಷ್ಕಿಂಧದಿಂದ ಸೂರ್ಯೋದಯ ಪರ್ವತದವರೆಗೆ ರಾವಣ ಮತ್ತು ಸೀತೆಯನ್ನು ಹುಡುಕಿ ಒಂದು ಮಾಸದೊಳಗೆ ಕಿಷ್ಕಿಂಧಕ್ಕೆ ಹಿಂದಿರುಗಲೇ ಬೇಕು” ಎಂದು ಕಟ್ಟಪ್ಪಣೆ ನೀಡುತ ಸುಗ್ರೀವನು ವಾನರ ಸೇನೆಯನ್ನು ಬೀಳ್ಕೊಟ್ಟನು,(2) ಆದಿ ಬೌಗೋಳಶಾಸ್ತ್ರಜ್ಞ ವಾಲ್ಮೀಕಿಯು ಜಂಬುದ್ವೀಪದ ಪೂರ್ವ ದಿಕ್ಕಿನ ಪ್ರದೇಶಗಳು ಗೋದಾವರಿ ನದಿ ಉತ್ತರ ದಡದಿಂದ ಕಾಶಿ, ಅಯೋಧ್ಯ, ಜನಕಪುರ(ಇಂದಿನ ನೇಪಾಳ), ಬಹ್ಮದೇಶ(ಇಂದಿನ ಮ್ಯಾನ್ಮಾರ), ಇಂದಿನ ನೈಋತ್ಯ ಮತ್ತು ಪೂರ್ವ ಏಷಿಯಾ ದೇಶ ಮತ್ತು ನಡುಗಡ್ಡೆಗಳ ಪ್ರದೇಶ ಗಳು, ಜಪಾನ ಜ್ವಾಲಾ ಮುಖಿ ಪರ್ವತಗಳ ವರೆಗಿನ ಭೂ ಪ್ರದೇಶಗಳ ವರ್ಣನೆ ನೀಡಿರುವರು., ಅವು ಜಂಬುದ್ವೀಪದ ಭಾಗವಾಗಿದ್ದವು ಈ ಕಾರಣದಿಂದಾಗಿ ಆ ದೇಶಗಳ್ಲಿ ವಾಲ್ಮೀಕಿ ರಾಮಾಯಣವು ಇಂದಿಗೂ ಪ್ರಸಿದ್ದಿಯನ್ನು ಹೊಂದಿದೆ, ಥಾಯಲ್ಯಾಂಡವು ವಾಲ್ಮೀಕಿ ರಾಮಾಯಣವನ್ನು ರಾಷ್ಟ್ರೀಯ ಮಹಾಕಾವ್ಯವೆಂದು ಗೌರವಿಸುವರು, ಮೂಲ ವಾಲ್ಮೀಕಿ ರಾಮಾಯಣವು ಕ್ರಿ.ಶ. ಒಂದನೆ ಶತಮಾನದಲ್ಲಿ ಸುವ್ಯವಸ್ಥಿತ ಪುಸ್ತಕ ರೂಪದಲ್ಲಿ ಚೀನಿ ಭಾಷೆಯಲ್ಲಿ ಚೀನಾದೇಶದಲ್ಲಿ ಪ್ರಕಟಣೆಯಾದದ್ದು ಆಶ್ಚರ್ಯಕರ ಸಂಗತಿ, ಭಾರತದಲ್ಲಿ ಶ್ರೀ ರಾಮನನ್ನೇ ಬಂಡವಾಳ ಮಾಡಿಕೊಂಡು ಎಲ್ಲ ಸುಖಗಳನ್ನು ಅನುಭವಿಸುವರು, ಆದರೆ ಭಗವಾಲ ವಾಲ್ಮೀಕಿಯವರಿಗಾಗಲಿ, ಅವರ ರಾಮಾಯಣಕ್ಕಾಗಾಗಿ ನೈರತ್ಯ ದೇಶಗಳು ಕೊಡುವ ಗೌರವವನ್ನು ಕೊಡದೇ ಇದದ್ದು ಅವಮಾನಕರ ಸಂಗತಿ, ಅವುಗಳನ್ನು ಸಂದೇಹ ದೃಷ್ಠಿಯಿಂದ ನೋಡುವ ಹುಸಿ ವೈಚಾರಿಕ ವಿದ್ವಾಂಸರೆ ಹೆಚ್ಚು, ಭಗವಾನ ವಾಲ್ಮೀಕಿಯ ಆಧ್ಯಾತ್ಮ ಬೋಧನೆಯು ಕ್ರಿ.ಶ. ಪೂರ್ವ 6ನೇ ಶತಮಾನದ ಗೌತಮ ಬುದ್ಧ, ಮಹಾವೀರ ಮಹಾ ಸಂತರಿಂದ 12ನೇ ಶತಮಾನದ ಬಸವಣ್ಣ ಮತ್ತು ನಂತರದ ನಿಜಗುಣ ಶಿವಯೋಗಿ, ಶಿವಭಕ್ತರು, ದಾಸರು, ಸಂತರು ಮುಂತಾದವರಿಗೆ ಜನ್ಮ ನೀಡಿತು, ಆದರೆ ಅಂತಹ ದಾರ್ಶನಿಕರಿಗೆ ಜನ್ಮಕೊಟ್ಟ ಆಧ್ಯಾತ್ಮಗುರು ವಾಲ್ಮೀಕಿಯನ್ನೆ ಗೌಣವಾಗಿರಿಸಿದ್ದು, ದೇಶ ಮತ್ತು ಸಂಸ್ಕೃತಿ ಕಂಡ ದೊಡ್ಡ ದುರಂತ.
ಡಾ. ಅರ್ಜುನ ಯ. ಪಂಗಣ್ಣವರ ವಾಲ್ಮೀಕಿ ಸಾಹಿತ್ಯ ಚಿಂತಕ