ಕಿಷ್ಕಿಂದಕಾಂಡ ರಾಮಾಯಣ ಭಾಗ-22

By admin


ಕಳುಹಿಸಿ ಪೂರ್ವದತ್ತ ವಾನರನ ಸುಗ್ರೀವ ದಕ್ಷಿಣದತ್ತ ಕಳುಹಿಸಲುI
ವಾನರ ಸೇನೆ ಸಿದ್ಧ ಪಡಿಸಿದ; ಅಗ್ನಿಸುತ ನೀಲ, II
ಹನುಮಾನ, ಮಹಾತೇಜಿ ಜಾಂಬವಂತ, ಸುಹೋತ್ರ, ಶರಾರಿ,I
ಶರಗುಲ್ಮ, ಗಜ, ಗವಾಕ್ಷ, ಗವಯ, ಸುಷೇಣ, II
ವೃಷಭ, ಮೈಂದ, ದ್ವಿವಿದ, ಗಂಧಮಾದ, ಉಲ್ಕಾಮುಖ,I
ಅನಂಗ, ಶೂರ ಮೇಧಾವಿ ಸಾಹಸಿ ವಾನರ ಸೇನೆ, II
ಅಂಗದನ ನೇತೃತ್ವದಡಿ ಹೊರಡಿಸಲು ಸಿದ್ಧ ಪಡಿಸಿI
ದಕ್ಷಿಣದತ್ತ ಹೊರಡುಲು ಆದೇಶಿಸಿದ ಸುಗ್ರೀವ; II
ಸುಗ್ರೀವ ನೀಡಿದ ದಕ್ಷಿಣದ ಮಾರ್ಗ ದರ್ಶನ ವಾನರಿಗೆ:I
ಸಹಸ್ರ ಸಹಸ್ರ ಶಿಖರ ವಿಭಿನ್ನ ಗಿಡಬಳ್ಳಿದಿ ತುಂಬಿದ ವಿಂಧ್ಯ, II
ರಮ್ಯ ನರ್ಮದಾನದಿ,ಮಹಾ ಸರ್ಪಗಳ ಬೀಡು;I
ರಮ್ಯ ಗೋಧಾವರಿ, ಮಹಾನದಿ ಕೃಷ್ಣವೇಣಿ, II
ವರ್ದಾನದಿ, ಮಹಾ ಸರ್ಪಗಳ ಬೀಡು; ಮಹಾನದಿ ವಂಗ I
ಉತ್ಕಲ ನಾಡು,ಕಲಿಂಗ, ಕೌಶಿಕ ರಾಜ್ಯ ಬೀಡು; ದಂಡಕಾರಣ್ಯ,II
ಮೇಕಲ , ಉತ್ತಲ ನಾಡುಗಳ ನಗರಗಳು: ಅಬ್ರವಂತಿ,I
ಅವಂತಿ, ವಿಧರ್ಭ ರಮ್ಯ ಮೋಹಕ ರಾಜ್ಯಗಳ ದೃಶ್ಯ; II
ದಾಟಿದಾಗ, ಮೋಹಕ ಮಹಿಷಕ-ರಾಜ್ಯ ನಾಡು ದೃಶ್ಯ,I
ಆಂಧ್ರ , ಪುರಂದ್ರ , ಚೋಳ , ಪಾಂಡ್ಯ ಕೇರಲ II
ನಾಡುಗಳ ದೃಶ್ಯ; ಅಯೋಮುಖ , ಕಬ್ಬಿನದಿರು ಪರ್ವತಗಳುI
ಶ್ರೀಗಂಧವೃಕ್ಷ, ಘಮಘಮಿಸುವ ಹೂ ಬಳ್ಳಿಗಳಿಂದ II
ತುಂಬಿವೆ; ಅದರಾಚೆ ಪವಿತ್ರ ಜಲ ಝಳಝಳಿಸುವ ಕಾವೇರಿ ನದಿI
ಬರುವರು ಅಪ್ಸರೆಯರು ವಿಹಾರಕ್ಕೆ ನದಿತಿರದಿ; II
ಮಲಯ ಪರ್ವತ ದ ಶಿಖರದಲಿ ಅಗಸ್ತ್ಯರ ಆಶ್ರಮ,I
ಅಗಸ್ತ್ಯರಿಂದ ಅಪ್ಪಣೆ ಪಡೆದು ಮುಂದೆ ಸಾಗಿದರೆ ತಾಮ್ರಪರ್ಣಿನದಿ;II
ಶ್ರೀಗಂಧ ಮರಗಳು,ನಡುಗಡ್ಡೆಗಳು, ಮೊಸಳೆಗಳುI
ಅಲಂಕರಿಸಿಹವು ತಾಮ್ರಪರ್ಣಿ ನದಿ, ದಡಗಳನು; II
ತಾಮ್ರಪರ್ಣಿ ಓಡೋಡಿ ಸೇರುವಳು ಸಾಗರI
ಸೇರಿದಂತೆ ಯುವ ಪ್ರೇಯಸಿ ಪ್ರೀತಮನ; II
ಓ ವಾನರರೆ, ಮಹಾಸಾಗರ ದಡದಿ ಖಡಿದಾದ I
ಮಹೇಂದ್ರ ಪರ್ವತವಿದೆ, ಶ್ರೇಷ್ಠೋತ್ತಮ ಪರ್ವತ; II
ಹತ್ತಿರವೇ ಪಾಂಡ್ಯರಾಜ್ಯದ ದಿವ್ಯಹೇಮ ಅಲಂಕೃತI
ದ್ವಾರದಾಚೆ ದಕ್ಷಿಣದಲಿ ಕಾಣುವದು ಮಹಾಸಾಗರ; II
ರಾಜ್ಯ, ಪರ್ವತ ಮೂಲೆ ಮೂಲೆಗಳಲಿ ಹುಡುಕಿರಿ, ಸೀತೆ ವ ರಾವಣನು;I
ಝಗಮಗಿಸುವ ದ್ವೀಪ ವಿದೆ II
ಮಹೇಂದ್ರ-ಪರ್ವತ ಕಡಲತೀರದಾಚೆ ಒಂದುನೂರು I
ಯೋಜನೆ ವಿಶಾಲ ಮಹಾಸಾಗರದಾಚೆ; II
ಮನುಷ್ಯರಿಗೆ ಅಸಾಧ್ಯ ದಾಟಲು ಮಹಾಸಾಗರI
ಅದರ ಕೊನೆ ತನಕ ಹೋಗಿ ಹುಡಿಕಿ ಸೀತೆಯನ; II
ಆ ದ್ವೀಪವೇ ರಾಕ್ಷಸ-ರಾಜ ರಾವಣನ ತಾಣ,I
ಅದರ ಮೂಲೆ ಮೂಲೆ ಹುಡಿಕಿರಿ ಸೀತೆಯನ; II
ಆದರೆ ಎಚ್ಚರ, ಮಹಾಸಾಗರ ಮಧ್ಯೆ ‘ಅಂಗಾರಕ ’ ನಾಮI
ರಾಕ್ಷಸಿಯಿಹಳು, ಹಾರಿ ದಾಟುವವರನು ನುಂಗುವಳು; II
ಎಲ್ಲ ತಾಣಗಳನು ಹುಡುಕಿರಿ ನಿಮ್ಮ ಸಂದೇಹ ಸ್ಪಷ್ಟವಾಗು ತನಕ,I
ಸೀತೆ ಸುಳಿಯು ಸಿಗುವತನಕ, ಸಂದೇಹ ತಾಣಗಳಲಿ; II
ಕಿಷ್ಕಿಂಧಕಾಂಡ ರಾಮಾಯಣ

ಸೀತೆಯನ್ನು ದಕ್ಷಿಣದಿಕ್ಕಿನಲಿ ಹುಡುಕಲು ಸುಗ್ರೀವನು ಅದರ ಮಾರ್ಗ ಸೂಚಿಸಿ ವಾನರ ನಾಯಕರೊಂದಿಗೆ ವಾನರ ಸೇನೆಕಳಿದನ್ನು ಆದಿಕವಿ ವಾಲ್ಮೀಕಿಯು ವಿವರಿಸಿರುವರು: (1) ಸುಗ್ರೀವನು ದಕ್ಷಿಣದತ್ತ ಸೀತೆಯನ್ನು ಹುಡುಕಲು ವಾನರ ಸೇನೆ ಸಿದ್ಧ ಪಡಿಸಿದನು; ಅಗ್ನಿಸುತ ನೀಲ, ಹನುಮಾನ, ಮಹಾತೇಜಿ ಜಾಂಬವಂತ, ಸುಹೋತ್ರ, ಶರಾರಿ, ಶರಗುಲ್ಮ, ಗಜ, ಗವಾಕ್ಷ, ಗವಯ, ಸುಷೇಣ, ವೃಷಭ, ಮೈಂದ, ದ್ವಿವಿದ, ಗಂಧಮಾದ, ಉಲ್ಕಾಮುಖ, ಅನಂಗ ವಾನರ ವೀರರನ್ನು ಒಳಗೊಂಡ ಶೂರ ಮೇಧಾವಿ ಸಾಹಸಿ ವಾನರ ಸೇನೆಯನು ಅಂಗದನ ನೇತೃತ್ವದಲ್ಲಿ ಅವರಿಗೆ ದಕ್ಷಿಣದತ್ತ ಹೊರಡುಲು ಸುಗ್ರೀವನು ಆದೇಶಿಸಿದನು, (2) ದಕ್ಷಿಣ ಪ್ರದೇಶಗಳತ್ತ ಹೊರಡುವ ಸೈನ್ಯಕ್ಕೆ ಸುಗ್ರೀವನು ದಕ್ಷಿಣ-ಪ್ರದೇಶಗಳ ಮಾರ್ಗ ಸೂಚಿಯನ್ನು ಹೀಗೆ ನೀಡಿದನು “ದಕ್ಷಿಣ-ಪ್ರದೇಶವು ಸಹಸ್ರ ಸಹಸ್ರ ಶಿಖರ ವಿಭಿನ್ನ ಗಿಡಬಳ್ಳಿಗಳಿಂದ ತುಂಬಿದ ವಿಂಧ್ಯ ಪರ್ವತಗಳ ರಮ್ಯ ನರ್ಮದಾನದಿ, ರಮ್ಯ ಗೋಧಾವರಿ, ಮಹಾನದಿ, ಕೃಷ್ಣವೇಣಿ, ವರ್ದಾನದಿ ಮಹಾ ಸರ್ಪಗಳ ಬೀಡು ( ವಿದರ್ಭ-ಪ್ರದೇಶ); ಅದು ಮಹಾನದಿಯ ವಂಗ(ಬಂಗಾಳ), ಉತ್ಕಲ (ಒರಿಸಾ) ನಾಡುಗಳ ಕಲಿಂಗ ಮತ್ತು ಕೌಶಿಕ ರಾಜ್ಯಗಳ ಬೀಡು; ಮೇಕಲ ನರ್ಮದಾನದಿ ಕೊಳ್ಳ ಪರ್ವತ ಪ್ರದೇಶ –ಇಂದಿನ ಅಮರಕಂಟ ಪರ್ವತ ವಲಯ; ಉತ್ತಲ (ಇಂದಿನ ಮಧ್ಯಪ್ರದೇಶ ವಲಯ) ಒಳಗೊಂಡ ದಂಡಕಾರಣ್ಯದ ನಾಡು ಮತ್ತು ನಗರಗಳ ಪ್ರದೇಶಗಳು (ಇಂದಿನ ಅಬ್ರವಂತಿ, ಅವಂತಿ, ವಿಧರ್ಭ ರಮ್ಯ ಮನಮೋಹಕ ರಾಜ್ಯಗಳ ದೃಶ್ಯಗಳು); ದಂಡಕಾರಣ್ಯ ಪ್ರದೇಶಗಳನ್ನು ದಾಟಿದಾಗ, ಮನಮೋಹಕ ಮಹಿಷಕ-ರಾಜ್ಯ (ಇಂದಿನ ಕರ್ನಾಟಕ ರಾಜ್ಯದ ತುಮಕೂರು, ಮೈಸೂರು, ಚಾಮರಾಜನಗರ ಜಿಲ್ಲೆಯ ಪ್ರದೇಶಗಳು) ನಾಡು ದೃಶ್ಯ, ಆಂಧ್ರ (ಇಂದಿನ ಆಂಧ್ರ ಪ್ರದೇಶ ಮತ್ತು ತೆಲಂಗಾಣ ಪ್ರದೇಶಗಳು), ಪುರಂದ್ರ (ಗುಡ್ಡಗಾಡ ಬೇಡರ ಪ್ರದೇಶ— ಇಂದಿನ ಆಂಧ್ರ ರಾಯಲ ಸೀಮೆ ಮತ್ತು ತಮಿಳನಾಡ ಪ್ರದೇಶಗಳು), ಚೋಳ (ಇಂದಿನ ಆಂಧ್ರ ಮತ್ತು ತಮಿಳನಾಡ ಹೊಂದಿಕೊಂಡ ಪ್ರದೇಶಗಳು ), ಪಾಂಡ್ಯ (ಇಂದಿನ ತಮಿಳನಾಡ ಕನ್ಯಾಕುಮಾರಿ ಜಿಲ್ಲೆಯ ಪ್ರದೇಶಗಳು) ಕೇರಲ (ಇಂದಿನ ಕೇರಳರಾಜ್ಯನೊಳಗೊಂಡು ಕರ್ನಾಟಕದ ಗೋಕರ್ಣದಿಂದ ಕನ್ಯಾಕುಮಾರಿ ವರೆಗಿನ ಪ್ರದೇಶ, ಅದಕ್ಕೆ ‘ಚೇರ’ ರಾಜ್ಯವೆಂಬ ಐತಿಹಾಸಿಕ ಹೆಸರು ) ನಾಡುಗಳ ದರ್ಶವಾಗುವದು; ಅಲ್ಲಿಯೇ ಅಯೋಮುಖ ಕಬ್ಬಿಣದಿರು ಪರ್ವತಗಳು (ಕಬ್ಬಿನದರಿನ ಮಲಯ ಪರ್ವತಗಳು-ಪಶ್ಚಿಮ ಘಟ್ಟಗಳು ) ತುಂಬಿವೆ; ಅಲ್ಲಿಯೇ ಶ್ರೀಗಂಧವೃಕ್ಷ, ಘಮಘಮಿಸುವ ಹೂ ಬಳ್ಳಿಗಳಿಂದ ಮತ್ತು ಪವಿತ್ರ ಜಲ ಝಳಝಳಿಸುವ ಕಾವೇರಿ ನದಿ ಪ್ರದೇಶವಿದೆ (ಇಂದಿನ ಮೈಸೂರು-ಪ್ರಾಂತ್ಯ ಪ್ರದೇಶ) ಕಾವೇರಿನದಿ ನದಿತಿರದಲ್ಲಿ ಅಪ್ಸರೆಯರು ವಿಹಾರಕ್ಕೆ ಬರುವರು; ಮಲಯ ಪರ್ವತ (ಇಂದಿನ ತಮಿಳ ನಾಡಿನ ಪಶ್ಚಿಮ ಘಟ್ಟಗಳು )ದ ಶಿಖರದಲಿ ಅಗಸ್ತ್ಯರ ಆಶ್ರಮ (ಅಗಸ್ತ್ಯ ಮಲಯ); ಅಲ್ಲಿಂದ ಅಗಸ್ತ್ಯರಿಂದ ಅಪ್ಪಣೆ ಪಡೆದು ಮುಂದೆ ಸಾಗಿದರೆ ತಾಮ್ರಪರ್ಣಿನದಿ ಪ್ರದೇಶ ಸಿಗುವದು, ತಾಮ್ರಪರ್ಣಿ ನದಿ ದಡಗಳನ್ನು ಶ್ರೀಗಂಧ ಮರಗಳು, ನಡುಗಡ್ಡೆಗಳು, ಮೊಸಳೆಗಳು ಅಲಂಕರಿಸಿರುತ್ತವೆ, ಯುವ ಪ್ರೇಯಸಿ ಪ್ರೀತಮನ ಸೇರಿದಂತೆ ತಾಮ್ರಪರ್ಣಿನದಿಯು ಓಡೋಡಿ ಸಾಗರವನ್ನು ಸೇರುವಳು; ಮಹಾಸಾಗರ ದಡದಲ್ಲಿ(ಇಂದಿನ ಹಿಂದೂಮಹಾಸಾಗರ) ಖಡಿದಾದ ಮಹೇಂದ್ರ ಪರ್ವತವಿದೆ (ತಮಿಳನಾಡಿನ ಮಹೇಂದ್ರಗಿರಿ), ಅದು ಶ್ರೇಷ್ಠೋತ್ತಮ ಪರ್ವತವು; ಮಹೇಂದ್ರ-ಪರ್ವತದ ಹತ್ತಿರವೇ ಪಾಂಡ್ಯರಾಜ್ಯದ ದಿವ್ಯ ಹೇಮ ಅಲಂಕೃತ ದ್ವಾರದಾಚೆ ದಕ್ಷಿಣದಲ್ಲಿ ಮಹಾಸಾಗರ (ಹಿಂದೂ ಮಹಾಸಾಗರ) ಕಾಣುವದು; ಈ ದಕ್ಷಿಣ-ಪ್ರದೇಶಗಳ ರಾಜ್ಯ ಮತ್ತು ಪರ್ವತ ಮೂಲೆ ಮೂಲೆಗಳಲ್ಲಿ ಸೀತೆ ವ ರಾವಣರನ್ನು ಹುಡುಕಿರಿ; ಮಹೇಂದ್ರ-ಪರ್ವತದ ಕಡಲತೀರದಾಚೆ ಒಂದುನೂರು ಯೋಜನೆ ವಿಶಾಲ ಮಹಾಸಾಗರದಾಚೆ (ಮಹಾಸಾಗರದಲ್ಲಿ) ಝಗಮಗಿಸುವ ದ್ವೀಪ (ಲಂಕಾದ್ವೀಪ )ವಿದೆ— ಮನುಷ್ಯರಿಗೆ ಆ ಮಹಾಸಾಗರವನ್ನು ದಾಟಲು ಅಸಾಧ್ಯ; ನೀವು ಅದರ ಕೊನೆ ತನಕ ಹೋಗಿ ಸೀತೆಯನ ಹುಡುಕಿರಿ; ಆ ದ್ವೀಪವೇ ರಾಕ್ಷಸ-ರಾಜ ರಾವಣನ ಸಾಮ್ರಾಜ್ಯ,ಅದರ ಮೂಲೆ ಮೂಲೆಯಲ್ಲಿ ಸೀತೆಯನ್ನು ಹುಡಿಕಿರಿ, ಆದರೆ ಎಚ್ಚರವಿರಲಿ, ಮಹಾಸಾಗರ ದಾಟುವಾಗ ಅದರ ಮಧ್ಯೆ ‘ಅಂಗಾರಕ’(ಅವಳ ಮತ್ತೊಂದು ಹೆಸರು‘ಸಿಂಹಿಕಾ’) ನಾಮದ ರಾಕ್ಷಸಿಯಿರುವಳು, ಹಾರಿ ಸಮುದ್ರ ದಾಟುವವರನು ಅವಳು ನುಂಗುವಳು; ಸಂದೇಹ ತಾಣಗಳಲ್ಲಿ ನಿಮ್ಮ ಸಂದೇಹ ಸ್ಪಷ್ಟವಾಗು ತನಕ, ಸೀತೆ ಸುಳಿಯು ಸಿಗುವತನಕ, ಎಲ್ಲ ತಾಣಗಳನ್ನು ಹುಡುಕಿರಿ” ಎಂದು ಮಾರ್ಗ ಸೂಚಿ ನೀಡುತ ಜಾಗರೂಕತೆಯಿಂದ ಸೀತೆಯನ್ನು ಹುಡುಕಲು ಸುಗ್ರೀವನು ಅಂಗದನ ನೇತೃತ್ವದ ವಾನರರಿಗೆ ದಕ್ಷಿಣ ಪ್ರದೇಶಗಳ ಮಾರ್ಗದ ವಿವರಣೆಯನ್ನು ನೀಡುವನು, ಸುಗ್ರೀವನ ಮುಖೇನ ಆದಿ ಭೌಗೋಲಿಕಶಾಸ್ತ್ರಜ್ಞ ವಾಲ್ಮೀಕಿಯು ಜಂಬುದ್ವೀಪದ ದಕ್ಷಿಣದ ಭೌಗೋಳಿಕ ಅಂಶಗಳ, ರಾಜ್ಯ, ನದಿ, ಪರ್ವತ ಇತ್ಯಾದಿಗಳ ವಿವರಣೆ ನೀಡಿರುವರು, ಅವರು ಆಗಲೇ ಜಂಬುದ್ವೀಪದ ಪರ್ಯಟಣ ಮಾಡಿದ್ದರು, ಅವುಗಳನ್ನು ಪ್ರತ್ಯಕ್ಷ ಕಂಡಿದ್ದರು ಎಮಬ ಸತ್ಯವು ಅವರು ನೀಡಿದ ವಿವರಣೆಗಳಿಂದ ಸುಸ್ಪಷ್ಟ. ಕೆವಲ ಕಲ್ಪನೆ ಮಾಡಿಕೊಂಡು ಬರೆಯಲು ಇಲ್ಲವೆ ಬೇರೆಯವರಿಂದ ಕೇಳಿ ಹೀಗೆ ಬರೆಯಲು ಅಸಾಧ್ಯ. ಮಹಾ ಆದಿಚಿಂತಕ ವಾಲ್ಮೀಕಿಯ ಭೌಗೋಲಿಕ ಜ್ಞಾನವು ಅದ್ಭುತ ಮತ್ತು ಅದ್ವಿತೀಯ.
ಡಾ. ಅರ್ಜುನ ಯ. ಪಂಗಣ್ಣವರ ವಾಲ್ಮೀಕಿ ಸಾಹಿತ್ಯ ಚಿಂತಕ‌