
ನೂರು ಯೋಜನೆ ಮಹಾಸಾಗರದಾಚೆ ದ್ವೀಪದI
ತೀರದ ದ್ವೀಪದಲಿದೆ ದೈತ ‘ಪುಷ್ಪಿತಾಕ’ ಪರ್ವತ; II
ಗಗನಚುಂಬಿ ಪುಷ್ಪಿತಾಕ ಹೊಳೆವದು ಒಂದೆಡೆ ಸೂರ್ಯI
ಮತ್ತೊಂದೆಡೆ ಚಂದ್ರನಂತೆ; ಪುಷ್ಪಿತಾಕ ಪರ್ವತದಲ್ಲಿ II
ಇಣುಕಿ ಇಣುಕಿ ನೋಡಿರಿ, ಅಲ್ಲಿಂದ ಹದಿನಾಲ್ಕು ಯೋಜನೆI
ದೂರದಲಿ ಸೂರ್ಯವಾನ-ಪರ್ವತವಿದೆ, II
ದುರ್ಗಮ ಮಾರ್ಗ; ಅದನು ಹುಡುಕಿ, ಅದರಾಚೆ ವೈಧ್ಯತ-ಪರ್ವತ ತಲುಪಿ, I
ಸರ್ವ ಋತು ಹೂ ಹಣ್ಣು ರಮ್ಯ ಪರ್ವತ; II
ಸೇವಿಸಿ ನಿಮ್ಮಿಷ್ಟದ ಜೇನು ಫಲ ಗೆಡ್ಡೆಗಳನು ವೈಧ್ಯೆತದಲಿ,I
ಅಲ್ಲಿಂದ ಮನಮೋಹಕ ‘ಕುಂಜರಾ-ಪರ್ವತ’ ತಲುಪಿ; II
ಅಗಸ್ತ್ಯರಿಗಾಗಿ ನಿರ್ಮಿಸಿಹನು ವಿಶ್ವಕರ್ಮ ಅರಮನೆI
ಕುಂಜರಾದಲಿ, ಮುತ್ತು ರತ್ನ ವೈಢ್ಯೂರಗಳಿಂದಲಂಕೃತ; II
ಹರಡಿದೆ ಅಗಸ್ತ್ಯರರಮನೆ ಕುಂಜರಾದಲಿI
ದಶಯೋಜನೆ ಎತ್ತರ,ಒಂದುಯೋಜನೆ ವಿಸ್ತಾರದಲಿ; II
ಅಲ್ಲಿಯೇ ವಿಷಕಾರಿ ಸರ್ಪಗಳಿಂದ ರಕ್ಷಿತ ‘ಭೋಗವತಿ-ನಗರ’ವಿದೆ,I
ಸರ್ಪಗಳ ರಾಜ ವಾಸುಕಿಯ ರಾಜ್ಯ ಭೋಗವತಿ; II
ಹುಡುಕಿರಿ ಸೀತೆಯನು ಭೋಗವತಿ ರಾಜ್ಯದಲಿ,I
ದಾಟಿ ಅದನ್ನು ‘ವೃಷಭ-ಪರ್ವತ ತಲುಪಿರಿ; II
ಗೂಳಿಯಾಕಾರದ ವೃಷಭ-ಪರ್ವತದಲಿ, ಶ್ರೀಗಂಧ-ವನ,I
ನೀಲಕಮಲ ಸರೋವರ ಕಂಗೋಳಿಸುವ ದೃಶ್ಯ; II
ಮುಟ್ಟದಿರಿ ಶ್ರೀಗಂಧ ವೃಕ್ಷಗಳನು, ರೋಹಿತ ನಾಮI
ಗಂಧರ್ವ ಅವುಗಳನು ರಕ್ಷಿಸುತಿಹನು; II
ಶೈಲೂಶ, ಗ್ರಮನಿ,ಶಿಕ್ಶ ಶುಕ ವ ಭಬ್ರು ನಾಮI
ಪಂಚ ಗಂಧರ್ವ ರಾಜರು ವಾಸಿಸುತಿಹರಲ್ಲಿ;II
ವೃಷಭ-ಪರ್ವತದಾಚೆ ಭೂ-ಶಿರದಾಚೆI
ಕತ್ತಲಾವರಿಸಿದೆ,ಅದೇ ಯಮನ ಲೋಕ;II
ಹೋಗಿ ನೀವು ಆ ಭೂ-ಶಿರದವರೆಗೆ ಮಾತ್ರI
ಎಲ್ಲ ಪ್ರದೇಶಗಳಲ್ಲಿ ಹುಡುಕಿರಿ ಸೀತೆಯನ; II
ಒಂದು ಮಾಸದಲಿ ಹುಡಿಕಿ ಸೀತೆ-ಮಾಹಿತಿ ನೀಡಿದವನಿಗೆ, I
ಕೊಡುವೆ ನನ್ನ ಸಮಾನ ಸೌಲಭ್ಯಗಳನು;II
ಸೀತೆ-ಅರುಸುವದಲ್ಲಿ ಪ್ರಮಾಣಿ ಪ್ರಯತ್ನI
ಮಾಡಿದವ ಎನಗೆ ಅತ್ಯಂತ ಪ್ರೀಯ, ಮಾಡದವ ಶತ್ರು; II
ಓ ವಾನರ ವೀರರೇ, ನೀವೆಲ್ಲರೂ ಸಾಹಸಿಗಳು,I
ಸಬಲರು, ಸಮರ್ಥರು, ಬಹುಬೇಗ ಸೀತೆ ಹುಡುಕಿ”.II
ಕಿಷ್ಕಿಂಧಕಾಂಡ ರಾಮಾಯಣ
ಅಂಗದನ ನೇತೃತ್ವದ ವಾನರ ವೀರರಿಗೆ ಸುಗ್ರೀವನು ಮಹಾಸಾಗರದಾಚೆಯ ಲಂಕಾದ್ವೀಪದ ಬಗ್ಗೆ ನೀಡಿದ ವಿವರಣೆಯನ್ನು ಆದಿಕವಿ ವಾಲ್ಮೀಕಿಯು ಹೀಗೆ ನೀಡಿರುವರು “ನೂರು ಯೋಜನೆ ಮಹಾಸಾಗರದಾಚೆ ದ್ವೀಪವಿದೆ (ಇಂದಿನ ಶ್ರೀಲಂಕಾ), ಅದರ ತೀರದ ದ್ವೀಪದಲಿದೆ ದೈತ ‘ಪುಷ್ಪಿತಾಕ’ ಪರ್ವತ; ಆ ಗಗನಚುಂಬಿ ಪುಷ್ಪಿತಾಕ ಪರ್ವತವು ಒಂದೆಡೆ ಸೂರ್ಯ ಮತ್ತೊಂದೆಡೆ ಚಂದ್ರನಂತೆ ಹೊಳೆವದು, ಆ ಪುಷ್ಪಿತಾಕ ಪರ್ವತದಲ್ಲಿ ಇಣುಕಿ ಇಣುಕಿ ನೋಡಿರಿ, ಅಲ್ಲಿಂದ ಹದಿನಾಲ್ಕು ಯೋಜನೆ ದೂರದಲಿ ದುರ್ಗಮ ಮಾರ್ಗದಲ್ಲಿ ಸೂರ್ಯವಾನ-ಪರ್ವತವಿದೆ, ಅದರಲ್ಲೂ ಸೀತೆಯನ್ನು ಹುಡುಕಿರಿ; ಮುಂದೆ ಸಾಗಿ ಸೂರ್ಯ-ಪರ್ವತದಾಚೆ ವೈಧ್ಯತ-ಪರ್ವತವಿದೆ ಅದನ್ನು ತಲುಪಿರಿ, ಅದು ಸರ್ವ ಋತು ಹೂ ಹಣ್ಣುಗಳ ರಮ್ಯ ಪರ್ವತ, ಅದರಲ್ಲಿ ಲಭ್ಯವಿರುವ ನಿಮ್ಮಿಷ್ಟದ ಜೇನು ಫಲ ಗೆಡ್ಡೆಗಳನ್ನು ಸೇವಿಸಿರಿ; ವೈಧ್ಯೆತ-ಪರ್ವತದಿಂದ ಮುಂದೆ ಸಾಗಿ ಮನಮೋಹಕ ‘ಕುಂಜರಾ-ಪರ್ವತ’ವನ್ನು ತಲುಪಿರಿ, ಕುಂಜರಾದಲ್ಲಿ ಅಗಸ್ಸ್ತ್ಯರಿಗಾಗಿ ವಿಶ್ವಕರ್ಮ ಅರಮನೆಯನ್ನು ನಿರ್ಮಿಸಿರುವನು, ಕುಂಜರಾದಲ್ಲಿ ಅಗಸ್ತ್ಯರರಮನೆಯು ಮುತ್ತು ರತ್ನ ವೈಢ್ಯೂರಗಳಿಂದಲಂಕೃತಗೊಂಡು ದಶಯೋಜನೆ ಎತ್ತರ ಮತ್ತು ಒಂದುಯೋಜನೆ ವಿಸ್ತಾರದಲ್ಲಿ ಹರಡಿದೆ, ಅದರ ಪರಿಸರದಲ್ಲಿಯೇ ವಿಷಕಾರಿ ಸರ್ಪಗಳಿಂದ ರಕ್ಷಿತ ‘ಭೋಗವತಿ-ನಗರ’ವಿದೆ, ಭೋಗವತಿಯು ಸರ್ಪಗಳ ರಾಜ ವಾಸುಕಿಯ ರಾಜ್ಯ, ಭೋಗವತಿ ರಾಜ್ಯದಲ್ಲಿಯೂ ಸೀತೆಯನ್ನು ಹುಡುಕಿರಿ; ಭೋಗವತಿ ರಾಜ್ಯ ದಾಟಿ ‘ವೃಷಭ-ಪರ್ವತವನ್ನು ತಲುಪಿರಿ, ಗೂಳಿಯಾಕಾರದ ವೃಷಭ-ಪರ್ವತದಲ್ಲಿ ಶ್ರೀಗಂಧ-ವನ, ನೀಲಕಮಲ ಸರೋವರಗಳಿಂದ ಕಂಗೋಳಿಸುವ ದೃಶ್ಯ ಕಾಣುವದು ಆದರೆ ನೀವು ಶ್ರೀಗಂಧ ವೃಕ್ಷಗಳನು ಮುಟ್ಟದಿರಿ, ರೋಹಿತ ನಾಮ ಗಂಧರ್ವನು ಅವುಗಳನು ರಕ್ಷಿಸುತಿರುನು, ಅಲ್ಲಿ ಶೈಲೂಶ, ಗ್ರಮನಿ, ಶಿಕ್ಶ, ಶುಕ ಮತ್ತು ಭಬ್ರು ನಾಮ ಪಂಚ ಗಂಧರ್ವ ರಾಜರು ವಾಸಿಸುತಿರುವರು; ವೃಷಭ-ಪರ್ವತದಾಚೆ ಭೂ-ಶಿರವಿದೆ, ಆ ಭೂಶಿರದಾಚೆ ಕತ್ತಲಾವರಿಸಿದೆ, ಅದೇ ಯಮನ ಲೋಕವು; ನೀವು ಆ ಭೂ-ಶಿರದವರೆಗೆ ಮಾತ್ರ ಹೋಗಿ ಅಲ್ಲಿಯ ಎಲ್ಲ ಪ್ರದೇಶಗಳಲ್ಲಿ ಸೀತೆಯನ್ನು ಹುಡುಕಿರಿ” ಎಂದು ವಾನರ ಸೇನೆಗೆ ಲಂಕಾದ್ವೀಪದ ಸಮಗ್ರ ಭೌಗೋಲಿಕ ಪರಿಚಯವನ್ನು ಸುಗ್ರೀವನು ನೀಡಿದನು, (3) ದಕ್ಷೀಣದಲ್ಲಿ ಸೀತೆಯನ್ನು ಹುಡುಕಿದವರಿಗೆ ಬಹುಮಾನ ಘೋಷಣೆ: ಸುಗ್ರೀವನು ವಾನರರಿಗೆ ಹೀಗೆ ಹೇಳುವನು “ಒಂದು ಮಾಸದ ಅವಧಿಯಲ್ಲಿ ಹುಡಿಕಿ ಸೀತೆ-ಮಾಹಿತಿಯನ್ನು ನೀಡಿದವನಿಗೆ ನನ್ನ ಸಮಾನ ಸೌಲಭ್ಯಗಳನ್ನು ಕೊಡುವೆ; ಅದರಂತೆ ಸೀತೆಯನ್ನು ಹುಡುಕುವದರಲ್ಲಿ ಪ್ರಮಾಣಿ ಪ್ರಯತ್ನ ಮಾಡಿದವನು ನನಗೆ ಅತ್ಯಂತ ಪ್ರೀಯನು, ಅಂತಹ ಪ್ರಯತ್ನ ಮಾಡದವನು ನನ್ನ ಶತ್ರು; ನೀವೆಲ್ಲರೂ ಸಾಹಸಿಗಳು, ಸಬಲರು, ಸಮರ್ಥರು, ಬಹುಬೇಗ ಸೀತೆಯನ್ನು ಹುಡುಕಿರಿ” ಎಂದು ವಾನರರಿಗೆ ಹೇಳುತ ಅವರನ್ನು ಪ್ರೋತ್ಸಾಹಿಸುತ್ತ ಅವರಿಗೆ ಬಹುಮಾನ ಘೋಸಿಸಿದನು ಹಾಗು ವಿದಾಯ ಹೇಳಿದನು. ಈ ಸಂದರ್ಭದಲ್ಲಿ ಆದಿಕವಿ ವಾಲ್ಮೀಕಿ ಇಂದಿನ ಸತ್ಪುಡ-ಪರ್ವತಗಳಿಂದ ಕನ್ಯಾಕುಮಾರಿ ಪ್ರದೇಶವರೆಗಿನ ದಕ್ಷಿಣ ಭಾರತದ ಒಂದೇಡೆಕೊಟ್ಟರೆ, ಮತ್ತೊಂದೆಡೆ ಸಂಪೂರ್ಣ ಲಂಕಾದ್ವೀಪದ ಭೌಗೋಲಿಕ ಅಂಶಗಳ ವಿವರಣೆಯನ್ನು ನೀಡಿರುವರು ಹಾಗು ಲಂಕೆಯ ಭೂಶಿರದಾಚೆ ದಕ್ಷಿಣದಲ್ಲಿ ಕತ್ತಲ ಪ್ರದೇಶವಿದೆ ಅದೇ ಯಮಲೋಕವಿದೆ ಎಂದು ಅಂದಿನ ಚಿಂತನೆಯನ್ನು ತಿಳಿಸಿರುವನು, ಇದು ವಾಲ್ಮೀಕಿಯ ಭೌಗೋಲಶಾಸ್ತ್ರದ ಪೂರ್ಣ ಪರಿಚಯ ನೀಡುವದು; ಸೀತೆಯನ್ನು ಹುಡುಕಲು ಪ್ರೋತ್ಸಾಹ ನೀಡಲು ಪುರ್ಸ್ಕಾರ ಘೋಸಿಸಿದ ಸುಗ್ರೀವನ ಚಾರುತುರ್ಯವು ರಾಮನಿಗೆ ಮಾಡುವ ಸಹಾಯದ ಗಾಢತೆಯನ್ನು ಆದಿಕವಿ ವಾಲ್ಮೀಕಿ ಈ ಸಂದರ್ಭದಲ್ಲಿ ವಿವರಿಸಿರುವರು.
-ಡಾ. ಅರ್ಜುನ ಯ. ಪಂಗಣ್ಣವರ ವಾಲ್ಮೀಕಿ ಸಾಹಿತ್ಯ ಚಿಂತಕ
