ಅಲ್ಲಿಂದ ಅರವತ್ತ್ನಾಲ್ಕು ಯೋಜನೆ ದೂರದಲಿ ‘ವರಾಹ’ನಾಮ I ಭಾಗ-25

By admin


ಅಲ್ಲಿಂದ ಅರವತ್ತ್ನಾಲ್ಕು ಯೋಜನೆ ದೂರದಲಿ ‘ವರಾಹ’ನಾಮ I
ಪರ್ವತವಿದೆ, ಹೊನ್ನಶಿಖರ ವರುಣಾಲಯ ; II
ಪ್ರಾಕ-ಜ್ಯೋತಿಷ್ಯ ನಾಮ ಹೊನ್ನ-ನಗರದಲಿI
‘ನರಕ’ ನಾಮ ದುಷ್ಟ ದಾನವನಿರುವನಲ್ಲಿ; II
ಶೋಧಿಸಿರಿ ರಾವಣ ಸೀತೆಯನ, ಓ ವಾನರರೇI
ವರಾಹ-ಪರ್ವತ ವ ಪ್ರಾಕ-ಜ್ಯೋತಿಷ್ಯ-ನಗರದಲಿ; II
ಅಲ್ಲಿಂದಾಚೆ ಬರಿಗಣ್ಣಿಗೆ ಕಾಣುವ ಚಿನ್ನಗಣಿ ಗವಿ I
ಜಲಪಾತಗಳ ಮೇಘವಂತ ನಾಮ ಪರ್ವತ ಕಾಣುವದು; II
ಕಿವಿಗಡಚುವ ಜಲಪಾತ ಶಬ್ದಗಳೊಂದಿಗೆ ಕೇಳಿಸುವದು I
ಕ್ರೂರ ಹುಲಿ ಸಿಂಹ ಗಜ ಕಾಡು ಹಂದಿ ವನ್ಯಮೃಗಗಳ ಗದ್ಧರಿಕೆ; II
ಜಲಪಾತ ವನ್ಯಮೃಗಗಳ ಗದ್ಧರಿಕೆ ಬಾಸವಾಗುವದುI
ಮೇಘವಂತ ಪರ್ವತ ಗದ್ಧರಿಸಿದಂತೆ; ದೈತ ಪಾಕಶಾಸನ II
ಜಯಸಿದ ಹಸಿರು ಹಯಗಳ ಮಹಾನ ಮಹೇಂದ್ರ ನಾಮಬಲದಿI
ಪರ್ವತಕ್ಕೆ ಮೇಘವಂತ ನಾಮ; II
ಮೇಘವಂತ ಪರ್ವತದಾಚೆ ಅರವತ್ತುಸಹಸ್ರ ಹೇಮ ಪರ್ವತI
ಶ್ರೇಣಿವಿದೆ,ಸೂರ್ಯ-ಹೊಂಗಿರಣಗಳಿಂದ ಹೊಳೆವವು; II
ರಾಜಾ ಮೇರು-ಸವರ್ಣಿ ನಾಮ ಪರ್ವತವಿದೆ ಶ್ರೇಣಿಮಧ್ಯೆI
ವಿಭಿನ್ನ ಗಿಡಮರಗಳ ತಾಣ, ಸೂರ್ಯನ ವರದಾನ; II
ದಿನ ರಾತ್ರಿ ಹೊಂಬಣ್ಣ ಹೊಳಪುಮಯI
ವಿಭಿನ್ನ ಹೂ ಬಳ್ಳಿ ಗಿಡ ಮರಗಳ ರಮ್ಯ ತಾಣ; II
‘ನನ್ನಿಂದಲೆ ನಿನ್ನ ವೈಭವ’ವೆನ್ನುವನು ಸೂರ್ಯI
ನಿತ್ಯ ಪರ್ವತೇಂದ್ರ ಮೇರು-ಸವರ್ಣ ಪರ್ವತಕೆ; II
ಅಸ್ತಗಿರಿ ಪರ್ವತದಲಿ ಸೂರ್ಯ ಅಸ್ತನಾದಾಗI
ದಿನದ ವೈಭವ ಸೂರ್ಯನೊಂದಿಗೆ ಅಸ್ತವಾಗುವದು; II
ಮೇರು-ಸವರ್ಣಿ ಪರ್ವತದಿಂದ ಹತ್ತುಸಹಸ್ರಯೋಜನೆI
ಅಂತರದಿ ಇಹುದು ಅಸ್ತಗಿರಿ ಪರ್ವತ; II
ವಿಶ್ವಕರ್ಮ ನಿರ್ಮಿಸಿಹನು ಅಸ್ತಗಿರಿಯಲ್ಲೂ ಭವ್ಯ I
ಬಹುಮಹಡಿ ಅರಮನೆ, ಸೂರ್ಯನಂತೆ ಹೊಳೆವ; II
ವಿಭಿನ್ನ ಮಧುರ ಇಂಚರ ಹಕ್ಕಿನಾದ ಹೂ ಗಿಡ ಬಳ್ಳಿಗಳಿಂದI
ಕಂಗೊಳಿಸುವ ಅರಮನೆ, ವರುಣಾಲಯ;II
ಮೇರು-ಸವರ್ಣೀ ಅಸ್ತಗಿರಿ ಪರ್ವತ ಮಧ್ಯೆ, ದಶಶಿರ I
ಅದ್ಭುತ ಖಜೂರ-ವೃಕ್ಷಗಳು,ಹೊನ್ನವರ್ಣ ಹಣ್ಣುಗೊಂಚಲ;II
ಶೋಧಿಸಿ ಸೀತೆ ರಾವಣರನ್ನ ಸರೋವರI
ನದಿಕೊಳ್ಳ, ಎಲ್ಲ ಪರ್ವತ ವಲಯಗಳಲಿ;II
ಅದು ಸೂರ್ಯತೇಜಿ ಮೇರುಸಾವರ್ಣಿ ಮುನಿ ತಾಣ,I
ಕೇಳಿರಿ ಸೀತೆಯ ಸುಳಿವು, ಮಹಾಮುನಿಯಲ್ಲಿ; II
ಓ ವಾನರರೇ, ನಿಮಗೆ ಸಾಧ್ಯ, ಹೋಗಿರಿ ಪರ್ವತಗಳವರೆಗೆ;I
ಅದರಾಚೆ ಪ್ರದೇಶ ತಿಳಿದಿಲ್ಲೆಮಗೆ, ನೀಗೂಢ ಕತ್ತಲ; II
ಶೋಧಿಸಿ ಸೀತೆ ರಾವಣರನ್ನು ಅಸ್ತಗಿರಿ ಪರ್ವತ ವಲಯದಲಿI
ಹಿಂದಿರುಗಿರಿ ಕಿಷ್ಕಿಂಧಕ್ಕೆ ಒಂದು ಮಾಸದೊಳಗೆ; II
ಓ ವಾನರರೇ, ಸುಶೇಣನ ನೇತೃತ್ವದಲಿ ಸಾಗಿರಿI
ಪಶ್ಚಿಮಕ್ಕೆ , ಪಾಲಿಸಿ ಅವನಾಜ್ಞೆ ಕಟ್ಟುನಿಟ್ಟಾಗಿ; II
ಪುರಸ್ಕಾರ ಸಿಗುವದು ಸೀತೆಯನ ಅರಸಿದವನಿಗೆ,I
ದಂಡಿಸಲಾಗುವದು ಆಜ್ಞೆ ಉಲ್ಲಂಘಿಸಿದವನಿಗೆ; II
ಸಮಯ ಸಂದರ್ಭ ನೋಡಿ ಯೋಗ್ಯ ಕಾರ್ಯವೆಸಗಿ ಅಗತ್ಯ ವಿದ್ದಲಿ, I
ಸೀತೆ ಶೋಧಕಾರ್ಯದಲಿ” ಕೇಳಿ ಸುಗ್ರೀವನII
ಮಾರ್ಗದರ್ಶನ, ಸಾಗಿದರು ಪಶ್ಚಿಮದತ್ತ ಸೀತೆಶೋಧನೆಗೆ, I
ಸುಶೇಣರ ನೇತೃತ್ವದಲಿ, ವಾನರ ದಂಡ.II
ಕಿಷ್ಕಿಂಧಕಾಂಡ ರಾಮಾಯಣ

ಸುಗ್ರೀವನು ವಾನರ ಸೈನ್ಯಕ್ಕೆ ಪಶ್ಚಿಮ ದಿಕ್ಕಿನ ಪ್ರದೇಶಘಲ ಮಾರ್ಗ ಸೂಚಿ ಮುಂದೆವರಿಸಿದನ್ನು ಆದಿಕವಿ ವಾಲ್ಮೀಕಿಯು ಹೀಗೆ ವಿವರಿಸಿರುವರು (1) ಚಕ್ರವಾನ ಪರ್ವತದಾಚೆ ಅರವತ್ತ್ನಾಲ್ಕು ಯೋಜನೆ ದೂರದಲಿ ‘ವರಾಹ’ ನಾಮ ಪರ್ವತ (ಅದನ್ನು ಹೊನ್ನಶಿಖರ ವರುಣಾಲಯ/ವರುಣದೇವ/ವೆಂದು ಕರೆಯುವರು)— ಅಲ್ಲಿಯೇ ‘ಪ್ರಾಕ-ಜ್ಯೋತಿಷ್ಯ’ ನಾಮ ಹೊನ್ನ-ನಗರವು ‘ನರಕ’ ನಾಮ ದುಷ್ಟ ದಾನವರ ತಾಣ, (2) ವರಾಹ-ಪರ್ವತದಾಚೆ ಬರಿಗಣ್ಣಿಗೆ ಕಾಣುವ ಚಿನ್ನಗಣಿ-ಗವಿಗಳ, ಜಲಪಾತಗಳ ‘ಮೇಘವಂತ’ ನಾಮ ಪರ್ವತ—ಜಲಪಾತ ಮತ್ತು ವನ್ಯಮೃಗಗಳ ಗದ್ಧರಿಕೆಯು ಮೇಘವಂತ ಪರ್ವತ ಗದ್ಧರಿಸಿದಂತೆ ಬಾಸವಾಗುವದು, (3) ಮೇಘವಂತ-ಪರ್ವತ: ಈ ಪ್ರದೇಶದಲ್ಲಿ ‘ಪಾಕ’ ಹೆಸರಿನ ದೈತ ದಾನವನ ಆಡಳಿತ ರಾಜ್ಯವನ್ನು ಜಯಸಿದ ಹಸಿರು ಹಯಗಳ ಮಹಾನ ಮಹೇಂದ್ರನ ನಾಮಬಲದಿಂದ ಆ ಪರ್ವತಕ್ಕೆ ಮೇಘವಂತ ನಾಮ ಬಂದಿದೆ, (4) ಮೇಘವಂತ ಪರ್ವತದಾಚೆ ಅರವತ್ತು ಸಹಸ್ರ ಹೇಮ ಪರ್ವತಗಳ ಶ್ರೇಣಿವಲಯದ ಮೇರು-ಸವರ್ಣ ಪರ್ವತವಿದೆ (ಇಂದಿನ ಇರಾಕದ ಯುಪ್ರಟಿಸ್ ನದಿಕೊಳ್ಳ ಮತ್ತು ಕುರದಸ್ತ್ನ ವಲಯ), ಅವು ಸೂರ್ಯ-ಹೊಂಗಿರಣಗಳಿಂದ ಹೊಳೆವವು; ಆ ಪರ್ವತಗಳ ಶ್ರೇಣಿಮಧ್ಯೆ ರಾಜಾ ಮೇರು-ಸವರ್ಣಿ ನಾಮ ಸೂರ್ಯನ ವರದಾನ ಪರ್ವತವಿದೆ ಮತ್ತು (5) ಮೇರು-ಸವರ್ಣಿ ಪರ್ವತದಿಂದ ಹತ್ತುಸಹಸ್ರಯೋಜನೆ ಅಂತರದಲ್ಲಿ ಅಸ್ತಗಿರಿ (ಸೂರ್ಯ ಅಸ್ತನಾಗುವ ಪರ್ವತ ) ಪರ್ವತವಿದೆ, ದಶಶಿರ ಅದ್ಭುತ ಖಜೂರ-ವೃಕ್ಷಗಳು, ಹೊನ್ನವರ್ಣ ಹಣ್ಣುಗೊಂಚಲ ಗಿಡಗಳು ಮೇರು-ಸರ್ವಣೀ ಅಸ್ತಗಿರಿ ಪರ್ವತಗಳ ಮಧ್ಯೆ ವಲಯದಲ್ಲಿ ಕಾಣುವವು(ಇವು ಇಂದಿನ ಇರಾನದ ಇಲ್ಬುರ್ಝ-ಪರ್ವತಗಳ ಪ್ರದೇಶವಾಗಿದೆ) ಹಾಗು ನಾಗರಿಕತೆಗಳ ವಿವರಣೆಗಳನ್ನು ನೀಡಿರುವರು. (6) ಹುಡುಕಿದವರಿಗೆ ಪುರಸ್ಕಾರ: ಸುಗ್ರೀವನು ವಾನರರಿಗೆ ಹೀಗೆ ಆದೇಶಿಸಿದನು” ಜಂಬುದ್ವೀಪದ ಪಶ್ಚಿಮದಿಕ್ಕಿನ ಪ್ರದೇಶಗಳ ಎಲ್ಲ ಸರೋವರ ನದಿಕೊಳ್ಳ, ಪರ್ವತ ವಲಯಗಳಲ್ಲಿ ಸೀತೆ ಮತ್ತು ರಾವಣರನ್ನು ಶೋಧಿಸಿರಿ; ಆ ಪರ್ವತಗಳವರೆಗೆ ಹೋಗಿರಿ ಆದರೆ ಅದರಾಚೆ ಪ್ರದೇಶವು ನಮಗೂ ತಿಳಿದಿಲ್ಲ ಅದು ನೀಗೂಢ ಕತ್ತಲ ವಲಯ; ಸೀತೆಯನ್ನು ಹುಡುಕಿ ಒಂದು ಮಾಸದ ಅವಧಿ ಮುಗಿಯುವದರೊಳಗೆ ಕಿಷ್ಕಿಂಧಕ್ಕೆ ಹಿಂದಿರುಗಿರಿ; ಓ ವಾನರರೇ, ನಿವೆಲ್ಲರೂ ಸುಶೇಣನ ನೇತೃತ್ವದಲ್ಲಿ ಪಶ್ಚಿಮಕ್ಕೆ ಸಾಗಿರಿ ಮತ್ತು ಅವನ ಆಜ್ಞೆಯನ್ನು ಕಟ್ಟುನಿಟ್ಟಾಗಿ ಪಾಲಿಸಿರಿ; ಸೀತೆಯನ್ನು ಹುಡುಕಿದವನಿಗೆ ಪುರಸ್ಕಾರ ಸಿಗುವದು ಆದರೆ ಅವನ ಆಜ್ಞೆಯನ್ನು ಉಲ್ಲಂಘಿಸಿದವನಿಗೆ ದಂಡಿಸಲಾಗುವದು; ಸೀತೆ ಶೋಧಕಾರ್ಯದಲ್ಲಿ ನಿಮಗೆ ಅಗತ್ಯವಿದ್ದಲ್ಲಿ ಸಮಯ ಸಂದರ್ಭನೋಡಿ ಯೋಗ್ಯ ಕಾರ್ಯವೆಸಗಿರಿ” ಎಂದು ಮಾರ್ಗ ಸೂಚಿ ಮತ್ತು ಎಚ್ಚರಿಕೆಯ ಮಾತುಗಳನ್ನು ಹೇಳಿದನು. ಸುಗ್ರೀವನ ಮಾರ್ಗದರ್ಶನ ಮಾತುಗಳನ್ನು ಕೇಳಿ ವಾನರ ದಂಡ ಸುಶೇಣರ ನೇತೃತ್ವದಲ್ಲಿ ಸೀತೆಯ ಶೋಧನೆಗೆ ಪಶ್ಚಿಮದತ್ತ ಸಾಗಿದರು. ಒಟ್ಟಿನಲ್ಲಿ ಭಾರತದ ಇಂದಿನ ಗುಜರಾತ, ಪಾಕಿಸ್ತಾನದ ಸಿಂಧ, ಅಪಘಾನಿಸ್ತಾನ, ಇರಾನ ಇರಾಕ ದೇಶಗಳನ್ನು ಒಳಗೊಂಡ ಭೌಗೋಲಿಕ ಅಂಶಗಳ, ನಾಗರಿಕತೆಗ ಮತ್ತು ಘಟನೆಗಳ ಉಲ್ಲೇಖಗಳ್ನು ಆದಿಕವಿ ವಾಲ್ಮೀಕಿ ಈ ಸರ್ಗದಲ್ಲಿ ವಿವರಿಸಿರುವರು.
-ಡಾ. ಅರ್ಜುನ ಯ. ಪಂಗಣ್ಣವರ ವಾಲ್ಮೀಕಿ ಸಾಹಿತ್ಯ ಚಿಂತಕ‌