ಕಿಷ್ಕಿಂದಕಾಂಡ ರಾಮಾಯಣ ಭಾಗ-26

By admin


ಕಳುಹಿಸಿ ವಾನರ ದಂಡು ಪಶ್ಚಿಮದತ್ತ ಸುಶೇಣ ನೇತೃತ್ವದಲಿ,I
ಸುಗ್ರೀವ ನುಡಿದನು ವಾನರ ಶೂರ ಶತಬಲಿಗೆ: II
“ಓ ಶತಬಲಿ, ಸೀತೆ ಅರಿಸಲು ಹೊರಡು ಉತ್ತರದತ್ತ , I
ಯಮಪುತ್ರರಂತಹ ನಿನ್ನ ಪ್ರಭೇಧದ II
ಶತಸಹಸ್ರ ವಾನರರೊಂದಿಗೆ; ಓ ಸಾಹಸಿ ಶತಬಲ, I
ಸೀತೆಯ ಕೀರಿಟಿನಂತಿದ್ದ ಹಿಮದ ಹಿಮಾಲಯ ಪರ್ವತಗಳತ್ತII
ಬೆಳೆಸು ದಂಡಯಾತ್ರೆ, ಓ ವಾನರ ವೀರನೇ, I
ಅಸ್ಮತ ಕಾರ್ಯ ಮುಗಿಸಿ ಮುಕ್ತವಾಗೋಣ ರಾಮನ ಋಣದಿ; II
ಮಹಾತ್ಮ ರಘು ತೋರಿಹನು ಕೃಪೇಮಗೆ,I
ಪ್ರತ್ಯುಪಕಾರ ತೋರಿ ಸಫಲರಾಗೋಣ ಬುದುಕಿ;II
ಸಮಚಿತ್ತದಿ ಸ್ವಸ್ಥ ಬುದ್ಧಿದಿ ಅರಿಸಿ ಸೀತೆಯ,I
ಕರ್ತವ್ಯವೆಸಗೋಣ ಕಾರ್ಯ ಸಾಧಿಸಿ ಹಿತೈಸಿಯ; II
ಕೂಡಿಸಿ ನಿಮ್ಮ ಜಾಣ್ಮೆ ಶೌರ್ಯ ಹುಡಿಕಿI
ಸೀತೆಯನು ನದಿಕೊಳ್ಳ ಪರ್ವತಗಳಲಿ; II
ಉತ್ತರದಲಿ ಹಿಮಾಲಯದ ಶಕ ದರದ ನಗರ ಸಮೇತ ಮ್ಲೀಚ,I
ಪುಲ್ಲಿಂದ , ಶುರಶೇನ, ಪ್ರಸ್ಥಲ, ಭರತ, ಕುರು,II
ಮದ್ರಕ, ಕಾಂಭೋಜ, ಯವನ, ಶೋಧಿಸಿ I
ಸೀತೆಯನೀ ಪ್ರದೇಶಗಳಲಿ, ಲೊಧರ, ಪದ್ಮಕ ಅಲ್ಲಿ: II
ದೇವ ಗಂಧರ್ವರಿಂದ ಭರಿತ ಸೋಮಾಶ್ರಮದಲಿI
ಕಾಲ ನಾಮ ಮಹಾಪರ್ವತದಲಿ ಸೀತೆಯ ಶೋಧಿಸಿ; II
ದೇವದಾರ ವೃಕ್ಷಗಳರಣ್ಯದಲಿ, ಶೋಧಿಸಿ ರಾವಣನ;I
ಕಾಲದಾಚೆ ಸಾಗಿರಿ ಹೊಂಬಣ್ಣಿನ ಸುದರ್ಶನ ನಾಮ II
ಪರ್ವತದತ್ತ, ಅಲ್ಲಿ:ದೇವಶಕ ವೃಕ್ಷ, ವಿಭಿನ್ನ ಪಕ್ಷಿಗಳ I
ಸುದರ್ಶನ ಪರ್ವತ; ಅಲ್ಲಿ: ಜಲಪಾತ, ಪ್ರಪಾತ, II
ದಟ್ಟಾರಣ್ಯದ ಸುದರ್ಶದಲಿ ರಾವಣ ಸೀತೆಯರನ್ನುI
ಮೂಲೆ ಮೂಲೆ ಶೋಧಿಸಿ; ಅಲ್ಲಿಂದ: ದೆವಸ್ಖ–ಪರ್ವತದಾಟಿ II
ನದಿ ವೃಕ್ಷ ಪರ್ವತ ಬೇರ್ಪಡಿಸುವ ಶತ ಯೋಜನೆ I
ವಿಶಾಲ ಬಯಲು ಪ್ರದೇಶವಿದೆ ನಿರ್ಜನ; ಕಂಡುII
ಬಂಜರ ಭೂಮಿ ವಿಶಾಲತೆ ರೋಮಾಂಚನದಿ ಸಾಗಿರ ಕೈಲಾಸ-ಪರ್ವತದತ್ತ,I
ಕುಬೇರನಂತಪುರ; ರಚಿಸಿಹನು ವಿಶ್ವಕರ್ಮII
ಬೆಳ್ಳಿ ಚಿನ್ನಗಳದಿ, ಮನಮೋಹಕ ಕುಬೇರನಂತಪುರ, ಅಲ್ಲಿ; I
ತುಂಬಿಹದು ಸರೋವರ ಹಂಸ ನೀರಗೋಳಿ ಕಮಲದಿII
ನಿರ್ಮಲ ಜಲದಲಿ ವಿಹರಿಸಲ್ಬರುವರು ಅಪ್ಸರೆಯರು; I
ವೈಶ್ರವನ್ ಮುನಿ ಪುತ್ರ ಯಕ್ಷರಾಜ ಸಂಪತ್ತು ದೇವತೆ ನಾಡು, II
ನೀಡುವನು ಸಂಪತ್ತು ಸಕಲ ಜೀವಿಗಳಿಗೆ; I
ಚಂದ್ರ-ಹೊಳಪಿನ ಕೈಲಾಸ ಪರ್ವತದ ಬಳಿ ಗುಹೆ ಪರ್ವತಗಳಲಿ II
ಶೋಧಿಸಿ ಸೀತೆ ರಾವಣನ;ಅದರಾಚೆ ಕ್ರೌಂಚ-ಪರ್ವತವಿದೆ, I
ದುರ್ಭೇದ್ಯದಾರಿ ಶೋಧಿಸಿ ಸೀತೆಯನಲ್ಲಿ ಎಚ್ಚರದಿ; II
ದಾರಿ ದಾರಿಗಳಲಿ ಇಹರು ಸೂರ್ಯತೇಜ ಮುನಿಗಳು,I
ಶೋಧಿಸಿ ಸೀತೆಯನಲ್ಲಿ ಎಚ್ಚರದಿ; II
ಕ್ರೌಂಚಪರ್ವತ ತುದಿಯಲಿ ಇಹವು ಗುಹೆ ಕಂದಕಗಳುI
ಶೋಧಿಸಿ ಸೀತೆಯನಲ್ಲಿ ಎಚ್ಚರದಿ; II
ಜೀವಿಗಳಿಗೆ ಹೋಗಲಸಾಧ್ಯ ವೃಕ್ಷಹೀನ ಕಾಮ-ಪರ್ವತ,I
ಪಕ್ಷಿಹೀನ ಮಾನಸ-ಪರ್ವತ, ಶೋಧಿಸಿ ಸೀತೆಯನ; II
ಕ್ರೌಂಚ-ಪರ್ವತದಾಚೆ ಸಾಗಿ ಮೈನಾಕ-ಪರ್ವತದತ್ತ,I
ದೈತ ದಾನವ ‘ಮಯ’ನ ಭವನ ಇಹದು ಮೈನಾಕದಲಿ; II
ಹಯಮುಖ-ಸ್ತ್ರೀಯರಿಹರು ಮೈನಾಕದಲಿ,I
ಶೋಧಿಸಿ ಸೀತೆಯ ಕಂದಕ ಗವಿ ಮೂಲೆಗಳಲಿ; II
ಕಿಷ್ಕಿಂಧಕಾಂಡ ರಾಮಾಯಣ

ಶತಬಲಿ ನೇತೃತ್ವದಲಿ ವಾನರ ದಂಡವನ್ನು ಜಂಬುದ್ವೀಪದ ಉತ್ತರದಿಕ್ಕಿಣ ಪ್ರದೇಶಗಳದತ್ತ ಕಳುಹಿಸಿ ವಾನರ ಶೂರ ಶತಬಲಿಗೆ ಸುಗ್ರೀವನು ಆ ಪ್ರದೇಶಗಳ ಮಾರ್ಗ ಸೂಚಿಯನ್ನು ನೀಡಿದನ್ನು ಆದಿಕವಿ ವಾಲ್ಮೀಕಿಯು ವಿವರಿಸಿರುವರು, ಅದರಲ್ಲಿಯ ಮುಖ್ಯ ಅಂಶಗಳು (1) ಶತಬಲಿಯ ಯಮಪುತ್ರರಂತಹ ವಾನರ ಪ್ರಭೇಧದ ವಿವರಣೆಯನ್ನು ನೀಡಲಾಗಿದೆ, ಶತಬಲಿ ಪ್ರಭೇದದ ಅಂದರೆ ದೈತಬಲಶಾಲಿ ವಾನರ ಪ್ರಭೇದ , ಅಂತಹ ಶತಸಹಸ್ರ ವಾನರರು ಸೀತೆಯನ್ನು ಹುಡುಕಲು ಉತ್ತರದತ್ತ ಹೊರಡುವರು,(2) ಹಿಮಾಲಯ ಪರ್ವತ ವಲಯದ ವರ್ಣನೆ: ಹಿಮದ ಹಿಮಾಲಯ ಪರ್ವತಗಳನ್ನು ಸೀತೆಯ ಕೀರಿಟಿಗೆ ಹೋಲಿಸಲಾಗಿದೆ ,(3) ರಾಮನ ಋಣದಿಂದ ಮುಕ್ತಿಹೊಂದುವ ಇಚ್ಚೆ: ಸೀತೆಯನ್ನು ಹುಡುಕುವ ಕಾರ್ಯ ಮುಗಿಸಿ ರಾಮನ ಋಣದಿಂದ ಮುಕ್ತರಾಗೋಣ, ರಘು ತಮಗೆ ಉಪಕಾರ ಮಾಡಿರುವನು, ಅವನಿಗೆ ಪ್ರತ್ಯುಪಕಾರ ತೋರಿ ಬದುಕಿನಲ್ಲಿ ಸಫಲರಾಗೋಣ; ಸಮಚಿತ್ತದ ಸ್ವಸ್ಥ ಬುದ್ಧಿಯಿಂದ ಸೀತೆಯನ್ನು ಹುಡುಕೋಣ, ತಮ್ಮ ಹಿತೈಸಿ ರಾಮನ ಕಾರ್ಯ ಸಾಧಿಸಿ ಕರ್ತವ್ಯವೆಸಗೋಣ ಕಾರಣ ನಿಮ್ಮ ಜಾಣ್ಮೆ ಶೌರ್ಯ ಕೂಡಿಸಿ ನದಿಕೊಳ್ಳ ಪರ್ವತಗಳಲ್ಲಿ ಸೀತೆಯನ್ನು ಹುಡಿಕಿರಿ ಎಂದು ಸುಗ್ರೀವನು ವಾನರರಿಗೆ ಹೇಳುವನು, (4) ಈ ಸಂದರ್ಭದಲ್ಲಿ ಆದಿಕವಿ ವಾಲ್ಮೀಕಿಯು ಇಂದಿನ ಉತ್ತರ ಭಾರತದ ಹಿಮಾಲಯ-ಪ್ರದೇಶದಲ್ಲಿ ತ್ರೇತಾಯುಗದ ಶಕ, ದರದ, ಮ್ಲೀಚ, ಪುಲ್ಲಿಂದ (ಪುಳಿಂದ/ವ್ಯಾಧ/ ಬೇಡರ), ಶುರಶೇನ, ಪ್ರಸ್ಥಲ, ಭರತ, ಕುರು, ಮದ್ರಕ, ಕಾಂಭೋಜ, ಯವನ, ನಗರ-ರಾಜ್ಯಗಳ ಉಲ್ಲೇಖ ನೀಡಿರುವರು ಅದರಂತೆ ಭಾರತದ ಉತ್ತರಕ್ಕಿರುವ ಹಿಮಾಲಯ ಪರ್ವತ ಶ್ರೇಣಿಗಳಲ್ಲಿಯ ಅಂದಿನ ನಾಮಾಂಕಿತ ‘ಕಾಲ’ ನಾಮ ಮಹಾಪರ್ವತ, ಹೊಂಬಣ್ಣಿನ ‘ಸುದರ್ಶನ’-ಪರ್ವತ, ದೆವಸ್ಖ –ಪರ್ವತಗಳ ಮತ್ತು ಶತ ಯೋಜನೆ ವಿಶಾಲ ನಿರ್ಜನ ಬಯಲು ಪ್ರದೇಶದ ಬಂಜರ ಭೂಮಿ ( ಇಂದಿನ ಲೇಹ ಲದ್ದಾಖ ಮರುಭೂಮಿ) ವಿಶಾಲತೆಯ ವಿವರಣೆಯನ್ನು ಉಲ್ಲೇಖಿಸಿರುವರು; ಅದೇ ವಲಯದಲ್ಲಿಯ ಕೈಲಾಸ-ಪರ್ವತ ಮತ್ತು ನಿರ್ಮಲ ಜಲದ ಸರೋವರದ ( ಇಂದಿನ ಚೀನಾ ದೇಶದಲ್ಲಿರುವ ಮಾನಸ ಸರೋವರ) ಹಾಗು ಅದರಾಚೆ ಉತ್ತರಕ್ಕೆ ಕ್ರೌಂಚ-ಪರ್ವತ, ವೃಕ್ಷಹೀನ ಕಾಮ-ಪರ್ವತ, ಪಕ್ಷಿಹೀನ ಮಾನಸ-ಪರ್ವತ ಮತ್ತು ಮೈನಾಕ-ಪರ್ವತಗಳ (ಇಂದಿನ ಕಜಕಿಸ್ತಾನ, ಚೀನಾ ಮತ್ತು ಮಂಗೋಲ ದೇಶಗಳ ಪರ್ವತಗಳು)ವಿವರಣೆ ನೀಡಿರುವರು ಅದರಂತೆ ಮೈನಾಕದಲ್ಲಿ ( ಕಜಕಿಸ್ತಾನ/ಮಂಗೋಲ) ಕುದುರೆ ಮುಖ-ಸ್ತ್ರೀಯರು (ಕಿನ್ನರಿಯರು) ಇರುವರು ಎಂದು ಉತ್ತರದಿಕ್ಕಿನ ಪ್ರದೇಶಗಳ ವಿವರಣೆ ನೀಡಿರುವರು,(5) ಕೈಲಾಸ ಪರ್ವತದ ವರ್ಣನೆ: ಕೈಲಾಸ-ಪರ್ವತ ಪ್ರದೇಶದಲ್ಲಿ ವಿಶ್ವಕರ್ಮನು ಬೆಳ್ಳಿ ಚಿನ್ನಗಳಿಂದ ಮನಮೋಹಕ ‘ಕುಬೇರನ ಅಂತಪುರ ನಿರ್ಮಿಸಿರುವನು; ಆ ಪ್ರದೇಶದ ಸರೋವರವು ಹಂಸ ನೀರಗೋಳಿ ಕಮಲಗಳಿಂದ ತುಂಬಿದೆ, ಆ ಸರೋವರದ ನಿರ್ಮಲ ಜಲದಲಿ ವಿಹರಿಸಲು ಅಪ್ಸರೆಯರು ಬರುವರು, ಅದು ವೈಶ್ರವನ್ ಮುನಿ ಪುತ್ರ ಸಂಪತ್ತು ದೇವತೆ ಯಕ್ಷರಾಜನ ನಾಡು, ಅವನು ಸಕಲ ಜೀವಿಗಳಿಗೆ ಸಂಪತ್ತು ನೀಡುವನು; ಚಂದ್ರನಂತೆ ಹೊಳೆಯುವ ಕೈಲಾಸ ಪರ್ವತದ ಬಳಿ ಇರುವ ಗುಹೆ ಪರ್ವತಗಳಲ್ಲಿ ಸೀತೆ ರಾವಣನರನ್ನು ಶೋಧಿಸಿರಿ ಎಂದು ಸುಗ್ರೀವನ ಮಾತುಗಳ ಮೂಲಕ ಕೈಲಾಸ ಪರ್ವತಪ್ರದೇಶದ ವಿವರಣೆಯನ್ನು ಆದಿಕವಿ ನೀಡಿರುವರು,(6) ಕೈಲಾಸ ಪರ್ವತದಾಚೆ ಕ್ರೌಂಚ-ಪರ್ವತವಿದೆ,ಅದಕ್ಕೆ ಹೋಗುವ ದಾರಿಯು ದುರ್ಗಮವಾಗಿದೆ, ಆ ದಾರಿಯುದ್ದಕ್ಕೂ ಎಚ್ಚರದಿಂದ ಸೀತೆಯನ್ನು ಹುಡುಕಿರಿ; ಆ ಪ್ರದೇಶದ ದಾರಿ ದಾರಿಗಳಲಿ ಸೂರ್ಯತೇಜ ಮುನಿಗಳು ಇರುವರು, ಅವರಿಗೆ ತೊಂದರೆಯಾಗದಂತೆ ಅಲ್ಲಿ ಸೀತೆಯನ್ನು ಹುಡುಕಿರಿ ಎಂದು ಸುಗ್ರೀವನು ವಾನರರಿಗೆ ಹೇಳಿದ ಮಾತುಗಳ ಮೂಲಕ ಅದು ಋಷಿ ಮುನಿಗಳ ತಪೋಭೂಮಿಯೆಂದು ಆದಿಕವಿ ತಿಳಿಸಿರುವರು, ಯುಗ ಯುಗಗಳಿಂದ ಹಿಮಾಲಯ ಪರ್ವತ ವಲಯವು ತಪೋಭೂಮಿ ಎಂಬ ಅಂಶವು ಸುಸ್ಪಷ್ಟ, ಈ ಎಲ್ಲ ಪರ್ವತ, ಗುಹೆಗಳಲ್ಲಿ ರಾವಣ ಮತ್ತು ಸೀತೆಯನ್ನು ಹುಡುಕಲು ಸುಗ್ರೀವನು ವಾನರರಿಗೆ ಆದೇಶನೀಡಿದನ್ನು ಆದಿಕವಿ ವಾಲ್ಮೀಕಿಯು ವಿವರಿಸಿರುವರು.
ಡಾ. ಅರ್ಜುನ ಯ. ಪಂಗಣ್ಣವರ ವಾಲ್ಮೀಕಿ ಸಾಹಿತ್ಯ ಚಿಂತಕ