
ಅದರಾಚೆ ಸಿದ್ದರ ದೇಶ: ವೈಖಾನಸ ವ ವಾಲಖಿಲ್ಯಾ ಸಿದ್ದರು,I
ಸಿದ್ದಿ-ಸಾಧಕರ ಆಶ್ರಮಗಳ ಪ್ರದೇಶವದು; II
ವಿದೇಯಕರಾಗಿ ಅವರಿಗೆ, ವಿನಮ್ರತೆದಿI
ಸೀತೆ ರಾವಣರ ಸುಳಿವು ಲಾಲಿಸಿ; II
ವೈಖಾನಸ ಮುನಿಯ ಸರೋವರ ಇಹದಲ್ಲಿI
ತುಂಬಿದೆ ಹಂಸ ಕಮಲ ಹೊಂಬಣ್ಣ ಜಲದಿ; II
‘ಸಾರ್ವಭೌಮ’ ನಾಮ ಕುಬೇರನ ಆನೆI
ಸರೋವರಕ್ಕೆ ಸದಾ ಬರುತಿಹದು, ಜತೆ ಹೆಣ್ಣಾನೆ; II
ಸರೋವರದಾಚೆ, ಸೂರ್ಯ ಚಂದ್ರ ನಕ್ಷತ್ರI
ಮೋಡಗಳಿಲ್ಲದ ನಿಶಬ್ದಅಂತರಿಕ್ಷ; II
ಅಲ್ಲಿಹರು,ಸ್ವತೇಜಿ ಮುನಿಗಣ ತಪಸ್ಸನಿರತರುI
ಸಿದ್ಧಿ ಸಾಧನೆಗೆ, ದೇವಸಮಾನರು; II
ಅದರಾಚೆ ಸಾಗಿದಾಗ ಶೈಲೊದಾನದಿ ದೃಶ್ಯ I
ಬಿದಿರುಮೇಳ ತುಂಬಿದ ನದಿ ದಡಗಳು; II
ಬಿದಿರು-ವೇಣು ತೆಪ್ಪ ಸಹಾಯದಿ ಸಿದ್ಧರುI
ದಡದಿಂದ ದಡಕ್ಕೆ ನದಿ ದಾಟುವ ನಿತ್ಯ ದೃಶ್ಯ; II
ಉತ್ತರ ಕುರು ಪ್ರದೇಶವಿದೆ ಅಲ್ಲಿ,I
ಸುದೈವಿಗಳು ಜನ್ಮತಾಳಿ ಬದುಕುವರಲ್ಲಿ; II
ಸಾವಿರಾರು ನದಿಗಳ್ಹರಿದಿವೆ ಹೊಂಬಣ್ಣಜಲದ,I
ತುಂಬಿವೆ ನೀಲಿವರ್ಣದೆಲೆಯ ಕಮಲಗಳಿಂದ; II
ರಕ್ತಗೆಂಪು ಹೊಂಬಣ್ಣದ ವೃಕ್ಷಗಳ ನಾಡುI
ನೀಲಿಗಮಲಗಳಿಂದಲಂಕೃತ ಸರೋವರಗಳ್ನಾಡು; II
ಮುತ್ತು ರತ್ನ ಹವಳ ತುಂಬಿದ ಮರಳು ರಾಶಿI
ನದಿಗಳು ತಂದು ರಚಿಸಿದ ಮರಳು ರಾಶಿ; II
ನಿತ್ಯ ಹೂ ಹಣ್ಣು ದಿವ್ಯಗಂಧ ಆನಂದ ಸ್ಪರ್ಷ I
ಉಡುಗೆ ನೀಡುವ ಗಿಡ ವನಗಳ ತಾಣ; 4.43.36
ಉಡುಗೆ, ತೊಡಿಗೆ,ಮಂಚ ಮಾಡಲೋಗ್ಯ I
ಗಿಡಗಂಟಿಗಳ ವನ, ಆಹಾರ ತಾಣ; ಉತ್ತರ ಕುರು II
ಸ್ತ್ರೀಯರು ಹದಿಹರೆಯದ ರೂಪವತಿಯರು ಸುಖವಾಗಿಹರಿಲ್ಲಿ I
ಪತ್ನಿಯರೊಂದಿಗೆ ಗಂಧರ್ವ, ಕಿನ್ನರ, ಸಿದ್ದರು; II
ಸುಕರ್ಮ ಫಲದಿ ಜನ್ಮ ತಾಳುವರು ಸುದೈವಿಗಳು ಉತ್ತರ ಕುರುದಲ್ಲಿ, I
ಭಾವನೆ ಸಮೃದ್ಧಿ ಸ್ತ್ರೀ ಸುಖಾನುಭವಿಗಳು; II
ಕಿಲಿಕಿಲಿ ನಗು,ವಾದ್ಯಗಳ ಸಂಗೀತ, ಗಾಯಕರ ಇಂಚರ I
ತೇಲಿ ಬರುವವು ಉತ್ತರಕುರುದಿ, ಕದಿಯಲು ಹೃದಯ; II
ಸತ್ಕರಿಸದವರಿಲ್ಲ, ಅಸತ್ಯರಿಲ್ಲ, ನಿಷ್ಕಲ್ಮಷ ಹೃದಯಿಗಳ ತಾಣI
ನಿತ್ಯ ಸುಖ ಸಂತೋಷದಿ ಸಮೃದ್ಧ ಉತ್ತರಕುರು ತಾಣ; II
ಉತ್ತರಕುರುದಾಚೆ ಜಲರಾಶಿ ಉತ್ತರ ಮಹಾಸಾಗರI
ಸೋಮ ನಾಮ ದೈತ ಪರ್ವತವಿದೆ ಮಹಾಸಾಗರ ಮಧ್ಯೆ; II
ಅಂತರಿಕ್ಷದಿಂದಲೂ ಕಾಣುವದೀ ಪರ್ವತI
ಸೂರ್ಯನಿಲ್ಲದಿದ್ದರೂ ಕಾಣುವದು ಸೂರ್ಯಕಿರಣ; II
ಉತ್ತರಕುರು ಉತ್ತರಕ್ಕೆ ಹೋಗದಿರಿ,I
ಹೋಗಲಲ್ಲಿಗೆ ಸಾಧ್ಯವಿಲ್ಲ ಯಾರಿಂದಲೂ; II
ದೂರದಿಂದ ಸೋಮ-ಪರ್ವತ ಕಂಡುಕೊಂಡ I
ಹಿಂದಿರುಗಿ ಕಿಷ್ಕಿಂಧಕ್ಕೆ ಅರಸಿ ಸೀತೆಯನು; ಓ ವಾನರರೇ, II
ಹೋಗಬಹುದು ನೀವು ಉತ್ತರಕುರುವರೆಗೆ, ಅದರಾಚೆ ಸೂರ್ಯನಿಲ್ಲ,I
ನಮಗೂ ತಿಳಿಯದ ಅನಂತ ತಾಣ; II
ಶೋಧಿಸಿ ಸೀತೆ ರಾವಣರನು ನಾ ತಿಳಿಸಿದ,I
ತಿಳಸದ ಪ್ರದೇಶಗಳಲ್ಲಿ, ತಲುಪಿರಿ ನಮ್ಮ ಗುರಿ”.II
ಕಿಷ್ಕಿಂಧಕಾಂಡ ರಾಮಾಯಣ
ಶತಬಲಿ ನೇತೃತ್ವದಲಿ ವಾನರ ದಂಡವನ್ನು ಜಂಬುದ್ವೀಪದ ಉತ್ತರದಿಕ್ಕಿಣ ಪ್ರದೇಶಗಳದತ್ತ ಕಳುಹಿಸಿ ವಾನರ ಶೂರ ಶತಬಲಿಗೆ ಸುಗ್ರೀವನು ಆ ಪ್ರದೇಶಗಳ ಮಾರ್ಗ ಸೂಚಿಯ ವಿವರಣೆ ಮುಂದುವರೆಸಿದನ್ನು ಆದಿಕವಿ ವಾಲ್ಮೀಕಿಯು ವಿವರಿಸಿರುವರು, ಅದರಲ್ಲಿಯ ಮುಖ್ಯ ಅಂಶಗಳು (1) ಸಿದ್ದರ ನಾಡಿನ ವರ್ಣನೆ: “ಕೈಲಾಸ ಪರ್ವತ ವಲಯಗಳಾಚೆ ಸಿದ್ದರ (ಆತ್ಮವಿಮೋಚನೆ ಸಾಧಿಸಿದ ಸಾಧಕ-ಮುನಿಗಳ) ದೇಶವಿದೆ, ಅದು ಸಿದ್ದಿ-ಸಾಧಕರ ಆಶ್ರಮಗಳ ಪ್ರದೇಶವು ಅಲ್ಲಿ ವೈಖಾನಸ ಮತ್ತು ವಾಲಖಿಲ್ಯಾ ಹೆಸರಿನ ಸಿದ್ದರು ವಾಸಿಸುವರು, ಅವರಿಗೆ ನೀವು ವಿಧೇಯಕರಾಗಿರಿ ಹಾಗು ವಿನಮ್ರತೆಯಿಂದ ಅವರಿಗೆ ಸೀತೆ ರಾವಣರ ಸುಳಿವು ಕೇಳಿರಿ; ವೈಖಾನಸ ಮುನಿಯ ಆಶ್ರಮದ ಹತ್ತಿರ ಸರೋವರವಿದೆ, ಆ ಸರೋವರವು ಹಂಸ ಕಮಲ ಹೊಂಬಣ್ಣ ಜಲದಿಂದ ತುಂಬಿದೆ, ‘ಸಾರ್ವಭೌಮ’ ಹೆಸರಿನ ಕುಬೇರನ ಆನೆಯು ಹೆಣ್ಣಾನೆ ಜೊತೆ ಆ ಸರೋವರಕ್ಕೆ ಸದಾ ಬರುವದು” ಎಂದು ಸುಗ್ರೀವನು ವಾನರರಿಗೆ ಹೇಳುವನು, ತದ್ಮೂಲಕ ಆದಿಭೌಗೋಳಶಾಸ್ತ್ರಜ್ಞ ವಾಲ್ಮೀಕಿಯು ಕೈಲಾಸ ಪರ್ವತ ವಲಯದಾಚೆ ಉತ್ತರ ದಿಕಿನಲ್ಲಿರುವ ಪ್ರದೇಶಗಳ ಬಗ್ಗೆ ತಿಳಿಸಿರುವರು, (2) ಉತ್ತರ ಕುರು ಪ್ರದೇಶ( ಇಂದಿನ ರಷ್ಯಾ ದೇಶ) ವರ್ಣನೆ: ಸಿದ್ದರ ಆಶ್ರಮ ಸರೋವರದಾಚೆ ಯಾವಾಗಲೂ ಸೂರ್ಯ ಚಂದ್ರ ನಕ್ಷತ್ರ ಮೋಡಗಳಿಲ್ಲದ ನಿಶಬ್ದ ಆಕಾಶವಿದೆ; ಅಲ್ಲಿ , ದೇವಸಮಾನ ಸಿದ್ಧಿ ಸಾಧನೆಗೆ ತಪಸ್ಸನಿರತ ಸ್ವತೇಜಿ ಮುನಿಗಣವಿದೆ; ಅದರಾಚೆ ಸಾಗಿದಾಗ ಶೈಲೊದಾನದಿ ದೃಶ್ಯಕಾಣುವದು, ಆ ನದಿ ದಡಗಳು ಬಿದಿರುಮೇಳಗಳಿಂದ ತುಂಬಿವೆ; ಬಿದಿರು-ವೇಣು (ಬಾಂಬೂ) ತೆಪ್ಪ ಸಹಾಯದಿಂದ ಸಿದ್ಧರು ನಿತ್ಯ ದಡದಿಂದ ದಡಕ್ಕೆ ನದಿ ದಾಟುವ ದೃಶ್ಯ ಕಾಣುವದು; ಅಲ್ಲಿ ಉತ್ತರ ಕುರು ಪ್ರದೇಶವಿದೆ(ಇಂದಿನ ರಷ್ಯಾದೇಶ), ಆ ಪ್ರದೇಶದಲ್ಲಿ ಸುದೈವಿಗಳು ಜನ್ಮತಾಳಿ ಬದುಕುವರು; ಆ ಪ್ರದೇಶದಲ್ಲಿ ಹೊಂಬಣ್ಣಜಲದ ಸಾವಿರಾರು ನದಿಗಳು ಹರಿದಿವೆ, ಅವು ನೀಲಿವರ್ಣದೆಲೆಯ ಕಮಲಗಳಿಂದ ತುಂಬಿವೆ, ಅದು ರಕ್ತಗೆಂಪು ಹೊಂಬಣ್ಣದ ವೃಕ್ಷಗಳ ನಾಡು, ಅದು ನೀಲಿ ಕಮಲಗಳಿಂದ ಅಲಂಕೃತ ಸರೋವರಗಳ ನಾಡು; ಅಲ್ಲಿಯ ನದಿಗಳು ಮುತ್ತು ರತ್ನ ಹವಳ ತಂದು ತುಂಬಿದ ಮರಳು ರಾಶಿಗಳನ್ನು ರಚಿಸಿವೆ ಹಾಗು ಅದು ನಿತ್ಯ ಹೂ ಹಣ್ಣು ದಿವ್ಯಗಂಧ ಆನಂದ ಸ್ಪರ್ಷ ಉಡುಗೆ ನೀಡುವ ಗಿಡ ವನಗಳ ತಾಣ; ಅದು ಉಡುಗೆ, ತೊಡಿಗೆ, ಮಂಚ ತಯ್ಯಾರಿಸಲು ಯೋಗ್ಯ ಗಿಡಗಂಟಿಗಳ ವನ ಮತ್ತು ಆಹಾರ ತಾಣ; ಉತ್ತರ ಕುರು ಪ್ರದೇಶದ ಸ್ತ್ರೀಯರು ಯಾವಾಗಲೂ ಹದಿಹರೆಯದ ರೂಪವತಿಯರು ಹಾಗು ಅಲ್ಲಿ ಗಂಧರ್ವ, ಕಿನ್ನರ, ಸಿದ್ದರು ತಮ್ಮ ಪತ್ನಿಯರೊಂದಿಗೆ ಸುಖವಾಗಿರುವರು; ಉತ್ತರ ಕುರು ಪ್ರದೇಶದಲ್ಲಿ ಸುಕರ್ಮ ಫಲದಿಂದ ಸುದೈವಿಗಳು ಜನ್ಮ ತಾಳುವರು, ಅವರು ಭಾವನೆ ಸಮೃದ್ಧಿ ಸ್ತ್ರೀ ಸುಖಾನುಭವಿಗಳು; ಉತ್ತರಕುರು ಪ್ರದೇಶದಿಂದ ಕಿಲಿಕಿಲಿ ನಗು,ವಾದ್ಯಗಳ ಸಂಗೀತ, ಗಾಯಕರ ಇಂಚರ ಹೃದಯ ಕದಿಯಲು ತೇಲಿ ಬರುವವು; ಈ ಪ್ರದೇಶದಲ್ಲಿ ಸತ್ಕರಿಸದವರಿಲ್ಲ, ಅಸತ್ಯರಿಲ್ಲ, ಎಲ್ಲರೂ ನಿಷ್ಕಲ್ಮಷ ಹೃದಯ ಶ್ರೀಮಂತರು; ಉತ್ತರ ಕುರು ಪ್ರದೇಶವು ನಿತ್ಯ ಸುಖ ಸಂತೋಷದ ಸಮೃದ್ಧ ತಾಣ ಎಂದು ಸುಗ್ರೀವನು ಉತ್ತರ ಕುರು ಪ್ರದೇಶದ ವರ್ಣನೆ ಮಾಡಿರುವರು ಅದರ ಮೂಲಕ ಆದಿ ಭೌಗೋಳಶಾಸ್ತ್ರಜ್ಞ ವಾಲ್ಮೀಕಿಯು ಉತ್ತರ ಗೋಲಾರ್ಧದ ಪ್ರದೇಶಗಳ ವಿವರಣೆ ನೀಡಿರುವರು, ಅದು ತ್ರೇತಾಯುಗದಲ್ಲಿ ಜಂಬುದ್ವೀಪದ ಭಾಗವಾಗಿತ್ತು, ಅದನ್ನು ಇಕ್ಷ್ವಾಕುವಂಶಜರೆ ಆಳುತಿದ್ದರು,(3) ಉತ್ರರ ಧ್ರವದ ಮಹಾಸಾಗರ (ಆರ್ಕಟಿಕ ಮಹಾಸಾಗರ) ಪ್ರದೇಶದ ವರ್ಣನೆ ಉತ್ತರ ಕುರುದಾಚೆ ಜಲರಾಶಿಯ ಉತ್ತರ ಮಹಾಸಾಗರ, ಆ ಮಹಾಸಾಗರ ಮಧ್ಯೆ ಸೋಮ ನಾಮ ದೈತ ಪರ್ವತವಿದೆ (ರಷ್ಯಾದ ನೂರಿಲ್ಸಕ ಪರ್ವತ ಶ್ರೇಣಿ); ಅಂತರಿಕ್ಷದಿಂದಲೂ ಈ ಪರ್ವತ ಕಾಣುವದು, ಇಲ್ಲಿ(ಉತ್ತರ ರಷ್ಯಾದ ಪ್ರದೇಶಗಳಲ್ಲಿ) ಸೂರ್ಯನಿಲ್ಲದಿದ್ದರೂ ಸೂರ್ಯಕಿರಣ( ಸೂರ್ಯ ರಷ್ಮಿ/ಅರುಣೋದಯ) ಕಾಣುವದು, ಉತ್ತರಕುರು ಪ್ರದೇಶದ ಉತ್ತರಕ್ಕೆ ಹೋಗದಿರಿ, ಅಲ್ಲಿಗೆ ಯಾರಿಂದಲೂ ಹೋಗಲು ಸಾಧ್ಯವಿಲ್ಲ; ಉತ್ತರಕುರುವರೆಗೆ (ಇಂದಿನ ರಷ್ಯಾದೇಶ,) ಅದರಾಚೆ ಸೂರ್ಯನಿಲ್ಲ, ನಮಗೂ ತಿಳಿಯದ ಅನಂತ ತಾಣ; ನೀವು ನಾನು ನಾ ತಿಳಿಸಿದ ಮತ್ತು ತಿಳಸದ ಪ್ರದೇಶಗಳಲ್ಲಿ ಸೀತೆ ರಾವಣರನ್ನು ಹುಡುಕಿ ನಮ್ಮ ಗುರಿ ತಲುಪಿರಿ ಎಂದು ಸುಗ್ರೀವನು ವಾನರರಿಗೆ ಉತ್ತರ ದಿಕ್ಕಿಣ ಪ್ರದೇಶಗಳ ಭೌಗೋಲಿಕ ವಿವರಣೆ ತಿಳಿಸಿದನು. ಒಟ್ಟಿನಲ್ಲಿ ಆದಿಕವಿ ವಾಲ್ಮೀಕಿಯು ಇಂದಿನ ಉತ್ತರ ಭಾರತ, ನೇಪಾಳ, ಪಾಕಿಸ್ತಾನ, ಅಫ್ಘಾನಿಸ್ತಾನ, ಕಜಕಿಸ್ತಾನ, , ಚೀನಾ, ಮಂಗೋಲ ಮತ್ತು ರಷ್ಯಾ ಭೂ ಪ್ರದೇಶಗಳ ಭೌಗೋಲಿಕ ವಿವರಣೆಯನ್ನು ಈ ಸಂದರ್ಭದಲ್ಲಿ ನೀಡಿರುವರು.ಅಂತರಿಕ್ಷದಿಂದ ಕಾಣುವ ರಷ್ಯಾದ ಪರ್ವತಗಳ ಬಗ್ಗೆ ತಿಳಿಸಿದ್ದು ಆದಿಕವಿ ವಾಲ್ಮೀಕಿಯ ಜ್ಞಾನ ಹರವನ್ನು ಪರಿಚಯಿಸುವದು.
ಡಾ. ಅರ್ಜುನ ಯ. ಪಂಗಣ್ಣವರ ವಾಲ್ಮೀಕಿ ಸಾಹಿತ್ಯ ಚಿಂತಕ
