
ನೇಹಾ ಸಜ್ಜನ್ ಬೆಂಗಳೂರು
ಪುಸ್ತಕದ ಹೆಸರು :- ಜೋಗಿ ಚಿಕ್ಕಪ್ಪ ಕಾದಂಬರಿ
ಲೇಖಕರ ಹೆಸರು :- ಗಿರೀಶ್ ರಾವ್ ಹತ್ವಾರ್
ಊರು :- ಸುರತ್ಕಲ್ ಬಳಿಯ ಹೊಸಬೆಟ್ಟು
ಹುಟ್ಟಿದು :- ಮೈಸೂರು
ಬೆಳೆದಿದ್ದು :- ದಕ್ಷಿಣ ಕನ್ನಡ ಜಿಲ್ಲೆಯ ಗುರುವಾಯನ ಕೆರೆ,
ಓದಿದ್ದು ಉಪ್ಪಿನಂಗಡಿ ಸದ್ಯದ
ವಾಸ್ತವ್ಯ :- ಬೆಂಗಳೂರು,
ನಾನು ಇದೆ ಮೊದಲ ಬಾರಿ ಕಾದಂಬರಿ ಓದಿದ್ದು. ಪ್ರತಿಯೊಂದು
ಪುಟವು ಕುತೂಹಲ ಮೂಡಿಸುವತ್ತವೆ.
ಮುಂದೆ ಏನ ಇರಬಹುದು ? ಒಮ್ಮೆ ಕೂತುಹಲ ಮೂಡಿದರೇ ಇನ್ನೊಮ್ಮೆ ಇಲ್ಲಿ ಬರುವ ಪಾತ್ರಗಳೆಲ್ಲಾ ಕಣ್ಣು ಮುಂದೆ ಹಾದು ಹೋದಂತೆ ಆಗುತ್ತದೆ. ನಾನು ಹೆಚ್ಚು ಓದುವುದು ಕತೆಗಳನ್ನು. ಬೇರೆ ಲೇಖನ ಓದುವ
ಆಸಕ್ತಿ ಇಲ್ಲಾ ಅಂತೇನಿಲ್ಲಾ ಅವುಗಳು ಹೆಚ್ಚು ಆಸಕ್ತಿ ಕುತೂಹಲ ಮೂಡಿಸುತ್ತಿರಲಿಲ್ಲಾ. ಅದಕ್ಕೆ ಕಾದಂಬರಿಗಳು ಕೂಡ ಹೀಗೆ ಇರಬಹುದು ಅಂತಾ ಓದಿರಲಿಲ್ಲಾ ಆದರೆ ಈ ಕಾದಂಬರಿ ನನ್ನ ಊಹೆಯನ್ನು ಸುಳ್ಳು ಮಾಡಿದೆ, ಈ ಕಾದಂಬರಿಯಲ್ಲಿ ವ್ಯವಹಾರ, ವ್ಯಾಪಾರ,ಕಳ್ಳತನ, ಪ್ರೀತಿ, ಧರ್ಮ, ಶಿಕ್ಷಣ, ರಾಜಕೀಯ, ಪತ್ರಿಕೋದ್ಯಮ, ಇದೆಲ್ಲದರ ಬಗ್ಗೆ ಲೇಖಕರು ಸ್ಪಷ್ಟವಾಗಿ ವಿವರಿಸಿದ್ದಾರೆ.

ಈ ಕಾದಂಬರಿ ಓದುತ್ತಿದಂತೆ ಕೆಲವು ದಿನಗಳ ಹಿಂದೆ ಹೀಜಾಬ ಮತ್ತು ಕೇಸರಿ ಶಾಲಿನ ಪ್ರಕರಣ ನೆನಪಾಗಿ, ಒಂಥರಹ ಹಿಂಸೆ ಆಯ್ತು ನನಗೆ ಇನ್ನೂ ಅದನ್ನು ಅನುಭವಿಸಿದ ನಮ್ಮ ಸ್ನೇಹಿತೆಯರಿಗೆ ಹೇಗೆ ಆಗಿರಬಹುದು ಅಂತಾನು ಅನ್ಸ್ತು ನನಗೂ ಮೊದಲು ಶಾಲಾ ಕಾಲೇಜಿನಲ್ಲಿ ಎಲ್ಲರು ಸಮಾನವಾಗಿ ಇರಬೇಕು ಅವರು ಹೀಜಾಬ್ ಹಾಕ್ಕೊಂಡು ಬರೋದು ತಪ್ಪು, ಎಲ್ಲರು ಸಮಾನವಾಗಿ ಇರೋ ಜಾಗ ಇದೂ ಅಂತಾ ತಪ್ಪಾಗಿ ಯೋಚಿಸಿದ್ದೆ ಆಳವಾಗಿ ಯೋಚಿಸಿದಾಗ ನಾವು ಕುಂಕುಮ ಬೊಟ್ಟು ಎಲ್ಲಾ ಮೊದಲಿಂದ ಹಚ್ಚಿಕೊಂಡು ಬರ್ತೇವೆ ಅವರು ಸಹ ಮೊದಲಿನಿಂದ ಹೀಜಾಬ್ ಹಾಕಿಕೊಂಡು ಬರೋ ಪದ್ಧತಿ ಇದ್ದೆ ಇದೆ ಇದ್ಯಾಕೆ ಇಷ್ಟು ದಿನ ತೊಂದರೆ ಆಗದ ಹೀಜಾಬ್ ಈಗಾ ಯಾಕೆ ಎಲ್ರು ಹೊಡೆದಾಡುವ ಹಾಗೆ ಮಾಡುತ್ತಿದೆ ಅಂತಾ ಅರ್ಥ ಆಗ್ಲಿಲ್ಲಾ.
ಈ ಕಾದಂಬರಿಯಲ್ಲಿಯು ಒಮ್ಮೆಲೇ ಮುಸ್ಲಿಂ ಡಾಕ್ಟರ್ ಅಂದ ತಕ್ಷಣ ಊರು ಬಿಟ್ಟು ಓಡಿಸುವ ಕೆಲಸಕ್ಕೆ ಮುಂದಾಗ್ತಾರೆ. ಇದು ಕೆಲವು ಪ್ರದೇಶಗಳಲ್ಲಿ ಪ್ರಸ್ತುತವಾಗಿ ಈಗಲೂ ನಡೆಯುವ ಕೆಟ್ಟ ದಿನಚರೀಯಾಗಿದೆ.
ಇಷ್ಟಕೂ ಈ ಕೋಮುವಾದದ ವಿಷ ಇವರಲ್ಲಿ ಬಿತ್ತಿದ್ದು ಯಾರು.? ಇದರಿಂದ ಅವರಿಗೇನು ಲಾಭ.? ಜನರಿಗೆ ನಮ್ಮನ್ನು ನಾವೇ ಬಲಿಕೊಟ್ಟುಕೊಳ್ಳುತ್ತಿದ್ದೇವೆ ಅಂತಾ ಅರ್ಥವಾಗ್ತಿಲ್ವಾ..? ಹೀಗೆ ಹಲವಾರು ಪ್ರಶ್ನೆಗಳು ನನ್ನಲ್ಲಿ ಮೂಡುತ್ತಿದಂತೆ . ನಮ್ಮ ಸಂವಿಧಾನ ನಾವು ಪೂರ್ತಿಯಾಗಿ ಓದಿಕೊಳ್ಳದೆ ಇರೋದು ಇದಕ್ಕೆಲ್ಲಾ ಕಾರಣ ಆಗ್ತಾ ಇದೆಯಾ ಅಥವಾ ಅದನ್ನಾ ನಾವು ಸರಿಯಾಗಿ ನಾವು ಪಾಲಿಸುತಿಲ್ವಾ.? ಅಂತಾ ಗೊಂದಲ ಮತ್ತು ಯೋಚನೆ ಶುರುವಾಯಿತು ಮತ್ತು ನಮಗೆ ಇಷ್ಟಾ ಬಂದ ಉಡುಪು ಧರಿಸುವ ಹಕ್ಕನ್ನು ಸಂವಿಧಾನ ನಮಗೆ ಕೊಟ್ಟಿದೆ ಅಂತಾ ಆ ಗದ್ದಲದ ಮುಂದೆ ಹೋಗಿ ಕೂಗಿ ಹೇಳಬೇಕು ಅನ್ನಿಸುತ್ತಿತ್ತು.
ಈ ಪುಸ್ತಕ ಓದುತ್ತಾ ಹೋದಂತೆ ಇದೆಲ್ಲಾ ಮತ್ತೆ ನೆನಪಾಯಿತು.
ಇದು ಹೆಚ್ಚಾಗಿ ದಕ್ಷಿಣ ಕನ್ನಡ ಉಡುಪಿ ಜಿಲ್ಲೆಕಡೆ ಕೋಮುಗಲಭೆಗಳು ತುಂಬಾ ನಡೆಯುತ್ತವೆ ಅಂತಾ ನಾನು ಈ ಪುಸ್ತಕದ ಮೂಲಕ ತಿಳಿದುಕೊಳ್ಳಬಹುದು
ನಮ್ಮನ್ನು ಯಾವೊ ಕಾಣದ ಕೈಗಳು ನಿಯಂತ್ರಿಸುತ್ತಿವೆ.
ಕೀಲಿ ಕೊಟ್ಟ ಬೊಂಬೆಯಂತೆ ನಾವೂ ಆಡುತ್ತಿದ್ದೇವೆ
ಇಷ್ಟಕ್ಕೂ ಈ ಧರ್ಮ ಜಾತಿ ಯಾವುದು ಮುಖ್ಯವಲ್ಲಾ ನಾವು ಎಲ್ಲರು ಮನುಷ್ಯರೇ ಅನ್ನೋದು ನಾವು ಮೊದಲು ಅರ್ಥ ಮಾಡಿ ಕೊಳ್ಳಬೇಕಾದ ವಿಷಯ.
ಈ ಪುಸ್ತಕ ಓದುತ್ತಾ ಹೋದಂತೆ ಇದರಲ್ಲಿ ಇರುವ ಒಳ ಅರ್ಥ ಹಳ್ಳಿಗರ ಮನಸ್ಥಿತಿ ಶಿಕ್ಷಕರಿಗೆ ಇರಬೇಕಾದ ಮುಖ್ಯಗುಣಗಳು ಇವುಗಳನ್ನು ಓದುತ್ತಾ ಹೋದಂತೆ ನನ್ನಾ ಕಾಲೇಜಿನ ನೆನಪು ಮತ್ತೆ ಮರುಕಳಿಸಿತು.
ಈ ಕಾದಂಬರಿಲಿ ಇರುವ ಸುಧೀಂದ್ರ ಎಂಬ ಮೇಷ್ಟ್ರಂತೆ ನಮ್ಮ ಮೇಸ್ಟ್ರು ಕೂಡ ಇದ್ರು ನಮ್ಗೆಲ್ಲಾ ಧರ್ಮ ಜಾತಿಗಿಂತಾ ಮನುಷ್ಯತ್ವ ಮುಖ್ಯ ಅಂತಾ ಹೇಳಿಕೊಟ್ಟವರು ಇದೆಲ್ಲಾ ನಾವೇ ಮಾಡಿಕೊಂಡದ್ದು ಅಂತಾ ಆಗಾಗ ಹೇಳ್ತಿದ್ರು.
ಈ ಪುಸ್ತಕನ ನೀವು ಒಮ್ಮೆ ಓದಿ ಇದರಿಂದ ಅರ್ಥೈಸಿ ಕೊಳ್ಳೊದು ತುಂಬಾ ಇದೆ.
Neha sajjan..
