By admin


ತಮ್ಮ ತಮ್ಮ ದಂಡಿನಜೊತೆ ಹೋದರು ವಾನರ I
ನಾಯಕರು, ರಾಮ ಸುಗ್ರೀವನ ಕೇಳಿದ: II
“ಭೂಮಂಡಲ ಬಗ್ಗೆ ನೀನಗ್ಹೇಗೆ ಗೊತ್ತು?”I
ಶಿರಬಾಗಿ ನಮಸ್ಕರಿಸಿ ರಾಮನಿಗೆ ಸುಗ್ರೀವ ನುಡಿದ: II
“ಅಕ್ಷರಶಃ ಹೇಳುವೆ, ನನ್ನ ಶಬ್ದಗಳನು ಕೇಳು, I
ಮಲಯ-ಪರ್ವತದತ್ತ ಮಹಿಷರೂಪ ದುಂದುಭಿ ಬೆನ್ನಟ್ಟಿದ ವಾಲಿ, II
ಪರ್ವತ ಗುಹೆ ಹೊಕ್ಕ ದುಂದುಭಿ, ಹೊಕ್ಕನು ಬೆನ್ನಟ್ಟಿ ವಾಲಿ;I
ಗುಹೆ ದ್ವಾರ ಬಳಿ ಕಾಯಲು ಹೇಳಿದ ನನಗೆ ವಾಲಿ, II
ಒಂದು ವರ್ಷ ಕಾಯ್ದರೂ ಹೊರ ಬರಲಿಲ್ಲ ವಾಲಿ;I
ತುಂಬಿ ಹರಿದು ಬಂತು ರಕ್ತ ಗವಿಯೊಳಗಿಂದ,ಕಂಡು ಮೂಕಸ್ಮಿತನಾದೆ, II
ಅಣ್ಣನ ದುಃಖದಿ; ಮರಳಿದೆ ನಿರಾಶೆದಿ ಕಿಷ್ಕಿಂಧಕ್ಕೆ,I
ಪಡೆದು ರಾಜ್ಯಭಾರ ರುಮಾ, ತಾರಾ ವ ಮಿತ್ರಜೊತೆ ನೆಮ್ಮದಿ;II
ದುಂದುಭಿನ ಕೊಂದ ವಾಲಿ ಪ್ರತ್ಯಕ್ಷನಾದ ಕಿಷ್ಕಿಂಧದಲಿ,I
ಸಾವಿಗೆ ಅಂಜಿ ರಾಜ್ಯ ಮರಳಿಸಿದೆ ವಾಲಿಗೆ; II
ಆದರೂ ನನ್ನ ಹತ್ಯೆಗೈಯಲು ಹವಣಿಸಿದ ಕ್ರೋದಿತ ವಾಲಿ, I
ಪ್ರಾಣ ರಕ್ಷಿಸಿಕೊಳ್ಳು ಮುಂದೆ ಮುಂದೆ ಓಡಿದೆ, ಬೆನ್ನಟ್ಟಿ ವಾಲಿ; II
ಓಡಿದೆ ಜಿಗಿಯುತ ಕಂಡ ದಿಕ್ಕು ನಗರ ನದಿ ಅರಣ್ಯ ಪರ್ವತಗಳತ್ತ,I
ವಾಲಿ ಕೋಪದಿಂದ ಪ್ರಾಣ ರಕ್ಷಿಸಿಸಿಕೊಳುತ;II
ಎತ್ತರದಿ ಕಂಡಿತೆನಗೆ ಭೂಮಂಡಲ ಕನ್ನಡಿ ಪ್ರತಿಬಿಂಬಿನಂತೆ, I
ಕೆಂಪು ಕಂದುವರ್ಣ ಖನಿಜದ ಬೆಂಕಿ ಚಂಡಿನಂತೆ; II
ಗೋ-ಎಣಿಯಂತೆ;ರಮ್ಯ ಸರೋವರ ಪರ್ವತ ಗವಿಗಳನು ಕಂಡೆI
ಪೂರ್ವದಿಕ್ಕಿನಲಿ ಓಡುವಾಗ, ಬೆನ್ನಟ್ಟಿದಾಗ ವಾಲಿ; II
ಪೂರ್ವದಿಂದ ಮರಳಿ ಮತ್ತೆ ದಕ್ಷಿಣಕ್ಕೆ ಓಡಿದೆ,I
ಶ್ರೀಗಂಧವೃಕ್ಷ ವಿಂಧ್ಯ ಪರ್ವತಗಳತ್ತ, ಕಂಡು ವಾಲಿ ಕೋಪ; II
ದಕ್ಷಿಣ ಪ್ರದೇಶ ಸುತ್ತಾಡಿ ಮರಳಿ ಬಂದೆ, ವಾಲಿಯ ಆರದI
ಕೋಪಕಂಡು ಓಡಿದೆ ಮತ್ತೆ ಪಶ್ಚಿಮದಿಕ್ಕಿನತ್ತ; II
ಅಸ್ತಗಿರಿ ಪರ್ವತ ವಲಯ ಸುತ್ತಿದೆ,I
ಬೆನ್ನು ಬಿಡಲಿಲ್ಲ ಎನ್ನ,ಅಲ್ಲಿಯೂ ವಾಲಿ; II
ಹಾರಿದೆನು ಅಲ್ಲಿಂದ ಉತ್ತರಕ್ಕೆ ಹಿಮಾಲಯ,I
ಮೇರು-ಪರ್ವತ, ಉತ್ತರ ಮಹಾಸಾಗರಗಳತ್ತ; II
ಇಷ್ಟೆಲ್ಲ ಸುತ್ತಿದರೂ ಕ್ಷಮಿಸಲಿಲ್ಲ ವಾಲಿ,I
ಆಶ್ರಯ ನೀಡಲಿಲ್ಲ ನನಗೆ ವಾಲಿ;II
ಕಂಡು ನನ್ನ ಅಸಹಾಯಕತೆ ಹನುಮಾನ ನುಡಿದ: I
‘ಓ ಸುಗ್ರೀವಾ, ನೆನಪಿದೆನಗೆ, ವಾಲಿಗೆ ಮಾತಂಗನ ಶಾಪ: II
ನೂರು ಹೋಳಾಗುವದು ವಾಲಿ ಶಿರ ಪ್ರವೇಶಿಸಿದರೆI
ವಾಲಿ ಮಾತಂಗಮುನಿ ವನ; ಮಾತಂಗ ವನದಲಿII
ನೀನರಬಹುದ ನೆಮ್ಮದಿದಿ’; ಮಾತಂಗ-ಶಾಪಕ್ಹೆದರಿ ವಾಲಿ ಬಾರನಿಲ್ಲಿ,I
ಋಷಮುಕದಲಿ ಇದ್ದೇವೆ ನೆಮ್ಮದಿದಿ”.II
ಕಿಷ್ಕಿಂಧಕಾಂಡ ರಾಮಾಯಣ

ಸುಗ್ರೀವನ ಭೌಗೋಲಿಕ ಜ್ಞಾನ ಕುರಿತು ಆದಿಕವಿ ವಾಲ್ಮೀಕಿಯು ಸನ್ನಿವೇಸವನ್ನು ವಿವರಿಸಿರುವರು:(1) ಭೂಮಂಡಲ ಮಾಹಿತಿ ಬಗ್ಗೆ ರಾಮನ ಜಿಜ್ಞಾಸೆ: ವಾನರ ನಾಯಕರು ತಮ್ಮ ತಮ್ಮ ದಂಡಿನೊಂದಿಗೆ ಸೀತೆಯನ್ನು ಹುಡುಕಲು ಹೋದರು. ಅದೇವೇಳೆ ರಾಮನು ಸುಗ್ರೀವನಿಗೆ “ಭೂಮಂಡಲ ಬಗ್ಗೆ ನೀನಗೆ ಹೇಗೆ ಗೊತ್ತು?” ಎಂದು ಜಿಜ್ಞಾಸೆಯಿಂದ ಪ್ರಶ್ನಿಸಿದರು; (2) ಸುಗ್ರೀವನು ಭೂಮಂಡಲ ಕಂಡ ಮಾಹಿತಿ: ರಾಮ ಕೇಳಿದ ಪ್ರಶ್ನೆಗೆ ಸುಗ್ರೀವನು “ಅಕ್ಷರಶಃ ಹೇಳುವೆ, ನಾನು ಹೇಳುವದನ್ನು ಕೇಳು, ಮಲಯ-ಪರ್ವತದತ್ತ ಮಹಿಷರೂಪ ದುಂದುಭಿಯನ್ನು ವಾಲಿಯು ಬೆನ್ನಟ್ಟಿದನು, ದುಂದುಭಿ ರಕ್ಷಣೆಗಾಗಿ ಪರ್ವತದ ಗುಹೆಯನ್ನು ಹೊಕ್ಕನು, ಅವನ ಬೆನ್ನು ಹಿಂದೆ ವಾಲಿಯೂ ಅವನ ಬೆನ್ನಟ್ಟಿ ಗುಹೆ ಹೊಕ್ಕನು ಹಾಗು ನನಗೆ ಗುಹೆ ದ್ವಾರ ಬಳಿ ಕಾಯಲು ಹೇಳಿದನು, ಒಂದು ವರ್ಷ ಕಾಯ್ದರೂ ಗುಹೆಯಿಂದ ವಾಲಿ ಹೊರ ಬರಲಿಲ್ಲ ಆದರೆ ಗವಿಯೊಳಗಿಂದ ರಕ್ತ ತುಂಬಿ ಹರಿದು ಬಂತು, ಅದನ್ನು ಕಂಡ ತಕ್ಷಣ ನಾನು ಮೂಕಸ್ಮಿತನಾದೆನು, ಅಣ್ಣನ ಕಳೆದಕೊಂಡ ದುಃಖದಲ್ಲಿ ನಿರಾಶೆಯಿಂದ ಕಿಷ್ಕಿಂಧಕ್ಕೆ ಮರಳಿದೆ, ರಾಜ್ಯಭಾರವನ್ನು ಪಡೆದು ಪತ್ನಿ ರುಮಾ, ತಾರಾ ಮತ್ತು ಮಿತ್ರರೊಂದಿಗೆ ನೆಮ್ಮದಿಯಿಂದ ಇದ್ದೆನು; ದುಂದುಭಿನ ಕೊಂದ ವಾಲಿಯು ಕಿಷ್ಕಿಂಧದಲ್ಲಿ ಪ್ರತ್ಯಕ್ಷನಾದನು; ನಾನು ನನ್ನ ಸಾವಿಗೆ ಅಂಜಿ ರಾಜ್ಯವನ್ನು ವಾಲಿಗೆ ಮರಳಿಸಿದೆನು ಆದರೂ ವಾಲಿಯು ತನ್ನ ಕ್ರೋದದಲ್ಲಿ ನನ್ನ ಹತ್ಯೆಗೈಯಲು ಹವಣಿಸಿದನು; ವಾಲಿಯಿಂದ ಪ್ರಾಣ ರಕ್ಷಿಸಿಕೊಳ್ಳು ನಾನು ಮುಂದೆ ಮುಂದೆ ಓಡಿದೆನು, ವಾಲಿಯು ನನ್ನ ಬೆನ್ನಟ್ಟಿ ಬಂದನು; ನಾನು ವಾಲಿ ಕೋಪದಿಂದ ಪ್ರಾಣ ರಕ್ಷಿಸಿಸಿಕೊಳಲು ಕಂಡ ದಿಕ್ಕು ನಗರ ನದಿ ಅರಣ್ಯ ಪರ್ವತಗಳತ್ತ ಜಿಗಿಯುತ ಓಡಿದೆನು; ನಾನು ಎತ್ತರಕ್ಕೆ ಹಾರಿದಾಗ ಅಲ್ಲಿಂದ ನನಗೆ ಭೂಮಂಡಲ ಕನ್ನಡಿ ಪ್ರತಿಬಿಂಬಿನಂತೆ ಕಂಡಿತು, ಅದು ನನಗೆ ಕೆಂಪು ಕಂದುವರ್ಣ ಖನಿಜದ ಬೆಂಕಿ ಚಂಡಿನಂತೆ (ಭೂಗ್ರಹವು ಗೋಲಾಕಾರವಿದ್ದ ಬಗ್ಗೆ ಮಾಹಿತಿ) ಮತ್ತು ಆಕಳ ಬುಜದ ಎಣಿಯಂತೆ (ಅಂಡಾಕಾರ) ಕಂಡಿತು, ರಮ್ಯ ಸರೋವರ ಪರ್ವತ ಗವಿಗಳನ್ನೂ ಕಂಡೆನು; ನಾನು ಪೂರ್ವದಿಕ್ಕಿನ ಪ್ರದೇಶಗಳಲ್ಲಿ ಓಡುವಾಗ ವಾಲಿಯು ಅಲ್ಲೂ ನನ್ನ ಬೆನ್ನಟ್ಟಿದನು, ಪೂರ್ವದಿಂದ ಮರಳಿ ಬಂದು ಮತ್ತೆ ದಕ್ಷಿಣ ದಿಕ್ಕಿನ ಪ್ರದೇಶಗಳತ್ತ ಓಡಿದಾಗ ವಾಲಿಯೂ ಅಲ್ಲೂ ಬಂದನು; ವಾಲಿಯ ಕೋಪ ಕಂಡು ಶ್ರೀಗಂಧವೃಕ್ಷ ವಿಂಧ್ಯ ಪರ್ವತಗಳತ್ತ ನಾನು ಒಡಿ ದಕ್ಷಿಣದ ಪ್ರದೇಶಗಳನ್ನು ಸುತ್ತಾಡಿ ಮರಳಿ ಬಂದೆನು ಆದರೆ ವಾಲಿಯ ಆರದ ಕೋಪವನ್ನು ಕಂಡು ಮತ್ತೆ ಪಶ್ಚಿಮದಿಕ್ಕಿನತ್ತ ಓಡಿದೆ, ಅಲ್ಲಿ ಅಸ್ತಗಿರಿ ಪರ್ವತ ವಲಯ ಸುತ್ತಿದೆನು ಆದರೆ ಅಲ್ಲಿಯೂ ವಾಲಿಯು ನನ್ನ ಬೆನ್ನು ಬಿಡಲಿಲ್ಲ, ಅಲ್ಲಿಂದ ಉತ್ತರಕ್ಕೆ ಹಿಮಾಲಯದತ್ತ ಹಾರಿದೆನು, ಅಲ್ಲಿಂದ ನಾನು ಮೇರು-ಪರ್ವತ, ಉತ್ತರ ಮಹಾಸಾಗರಗಳತ್ತ (ಆರ್ಕಟಿಕ ಮಹಾಸಾಗರ) ಹಾರಿದೆನು ಹಾಗು ಆ ಪ್ರದೇಶಗಳಲ್ಲಿ ಸುತ್ತಾಡಿದೆನು” ಉತ್ತರಿಸುತ್ತ ಭೂ ಮಂಡಲದ ಭೌಗೋಲಿಕ ಅಂಶಗಳ ಮಾಹಿತಿಯನ್ನು ನೀಡಿದನು, ಭೂಮಂಡಲವು ಅಂಡಾಕಾರವಾಗಿದೆ ಎಂಬದನ್ನು ಸುಗ್ರೀವನ ಮುಖೇನ ಆದಿಭೌಗೋಲಿಕತಜ್ಞ ವಾಲ್ಮೀಕಿಯು ತ್ರೇತಾಯುಗದಲ್ಲಿಯೇ ತಿಳಿಸಿರುವರು, (3) ಮಾತಂಗಮುನಿ ಶಾಪ: ಅಷ್ಟೆಲ್ಲ ಸುತ್ತಿದರೂ ವಾಲಿಯು ತನ್ನನು ಕ್ಷಮಿಸಲಿಲ್ಲ ಹಾಗು ತನಗೆ ಆಶ್ರಯ ನೀಡಲಿಲ್ಲ, ತನ್ನ ಅಸಹಾಯಕತೆಯನ್ನು ಹನುಮಾನ ಕಂಡು ತನಗೆ ವಾಲಿಗೆ ಮಾತಂಗ ಮುನಿ ನೀಡಿದ ಶಾಪ ಬಗ್ಗೆ ನೆನಪಿಸಿದನು , ಆ ಶಾಪದಂತೆ ಮಾತಂಗಮುನಿ ವನದಲ್ಲಿ ವಾಲಿಯು ಪ್ರವೇಶಿಸಿದರೆ ಅವನ ತಲೆನೂರು ಹೋಳಾಗುವದು ಎಂಬ ವಿಷಯ ನೆನಪಿಸಿಕೊಂಡು ತಾನು ಮಾತಂಗ ವನದಲ್ಲಿ ಸುರಕ್ಷತ ಮತ್ತು ನೆಮ್ಮದಿಯಿಂದ ಇದದ್ದನ್ನು ಸುಗ್ರೀವನು ರಾಮನಿಗೆ ತಿಳಿಸಿದನು. ಈ ಸಂದರ್ಭದಲ್ಲಿ ಆದಿಕವಿ ವಾಲ್ಮೀಕಿಯು (ಅ) ವಾಲಿಯ ಕೋಪ ಕಂಡ ಸುಗ್ರೀವನು ಜೀವ-ಸುರಕ್ಷಣೆಗಾಗಿ ಅವನಿಂದ ತಪ್ಪಿಸಿಕೊಳ್ಳಲು ಭೂಮಂಡಲದ ನಾಲ್ಕೂ ದಿಕ್ಕುಗಳಲ್ಲಿಯ ಪ್ರದೇಶಗಳನ್ನು ಸುತ್ತುಹಾಕುವ ಮೂಲಕ ಪಡೆದ ಭೂಮಂಡಲದ ಭೌಗೋಲಿಕ ಅಂಶಗಳ ಅನುಭವ ಪಡೆದ ಬಗ್ಗೆ , (ಆ) ಭೂಗ್ರಹ ಅಂಡಾಕಾರವಿದ್ದ ವಿಷಯ ಮತ್ತು (ಇ) ವಾಲಿಗೆ ಮಾತಂಗ ಮುನಿಯಿಂದ ಬಂದ ಶಾಪ ಘಟನೆಗಳ ವರ್ಣನೆಯನ್ನು ನೀಡಿರುವರು.
ಡಾ. ಅರ್ಜುನ ಯ. ಪಂಗಣ್ಣವರ ವಾಲ್ಮೀಕಿ ಸಾಹಿತ್ಯ ಚಿಂತಕ‌