ಕಿಷ್ಕಿಂದಕಾಂಡ ರಾಮಾಯಣ ಭಾಗ-33

By admin


ಸಾಗಿದರು ಗಜ, ಗವಾಕ್ಷ, ಗವಯ, ಶರಭ,ಗಂಧಮಾದನ,I
ಮೈಂದ,ದ್ವಿವಿದ, ಹನುಮ, ಜಾಂಬವಂತ ವ ಅಂಗದ; II
ಕಂಡಿತು ದುರ್ಗಮ ಭಯಾನಕ ‘ರಿಕ್ಷ’ ನಾಮ ಗುಹೆ’I
ಮಾಯಾ ನಾಮ ದಾನವನ ಗುಹೆ; II
ಹಸಿವು ನೀರಡಿಕೆ ದಣಿವಿನ ವಾನರರುI
ಕಂಡರು ಗವಿ ಸುತ್ತ ಗಿಡ ಬಳ್ಳಿಗಳನು; II
ಹಂಸ, ಕ್ರೌಂಚ,ಸಾರ್ಸ, ನೀರಗೋಳಿ ತೊಯ್ದ ಪಕ್ಷಿಗಳು,I
ಕೆಂಪು ಕಮಲದ ರಾಶಿ ವಾನರರಿಗೆ ಗೋಚರಿಸಿತು; II
ಗವಿ ಸಮೀಪಿಸಿದ್ದಂತೆ ಎದೆ ಜಲ್ಲೆಂದಿತು ವಾನರರ, “ಪಾತಾಳವೆ! I
ಇಲ್ಲಾ, ವಾಲಿಯ ನರಕವೆ!!” ಎನ್ನುತ ಹೋದರು II
ನೀರು ಬಳಿ; ವಾಲಿ ರಚಿಸಿದ ರಹಸ್ಯ ಪಾತಾಳದಂತೆ ವಿಭಿನ್ನI
ಜೀವರಾಶಿಗಲಿದ್ದವು,ಭಯಾನಕ ಗವಿಯಲಿ; II
ಪರ್ವತ್ಕಾಯದ ಮಾರುತಾತ್ಮಜ ಹನುಮಾನ ವಾನರಿಗೆ ನುಡಿದ:I
“ಶೋಧಿಸಿದೆವು ಪರ್ವತ ಪ್ರದೇಶಗಳನೆಲ್ಲ ದಕ್ಷಿಣದ, II
ಸಿಗಲಿಲ್ಲೆಮಗೆ ಎಲ್ಲೂ ಸುಳಿವು ಜಾನಕಿಯ; ತೊಯ್ದ ಹಂಸ,I
ನೀರುಗೋಳಿ ಬರುತಿಹವು ಗುಹೆಯಿಂದ II
ಇರಲೇಬೇಕಲ್ಲಿ ನೀರಿನ ಝರಿ ಇಲ್ಲವೇ ಹೊಂಡ”;I
ನಂಬಿ ಹನುಮನ ನುಡಿ ಗವಿ ಹೊಕ್ಕರು ವಾನರರು, II
ಸೂರ್ಯನಿಲ್ಲ, ಚಂದ್ರನಿಲ್ಲ,ಭಯಾನಕ ಕತ್ತಲು; ಕಂಡರು I
ವ್ಯಾಘ್ರ ವಾನರರು ಸಿಂಹ, ಮೃಗ, ಪಕ್ಷಿಗಳು ಗವಿಯಿಂದ II
ಹೊರಹೋಗುವದನ; ದೃಷ್ಠಿ, ಶೌರ್ಯ, I
ಪರಾಕ್ರಮಗಳಿಗೆ ಅಡ್ಡಿಯಾಗದ ಗಾಳಿ ಅಡ್ಡಿಯಾಯಿತುII
ಕ್ಷಣಿಕ ಕಣ್ಣುಗಳಿಗೆ ವಾನರರ;ರಭದಿ ನುಗ್ಗಿದರು ಎದೆಗುಂದದI
ಆನೆಗಳಂತಹ ವಾನರರು, ಕಂಡರು ರಮ್ಯ ಹೊಳಪಿನ II
ತಾಣ ಗುಹೆಯಲಿ; ಒಬ್ಬರಕೈ ಮತ್ತೊಬ್ಬರ್ಹಿಡಿದುI
ಒಂದು ಯೋಜನೆ ದೂರ ಪ್ರವೇಶಿಸಿದರು, ಗಿಡಮರಗಳ ಮಧ್ಯೆ; II
ನೀರಡಿಕೆ ನಿತ್ರಾಣದಲ್ಲೂ ಹಿಂಜರಿಯದೆI
ಕಾರ್ಯ ಸಾಧನೆಗೆ ಸಾಗಿದರು ಮುಂದೆ;II
ಕಿಷ್ಕಿಂಧಕಾಂಡ ರಾಮಾಯಣ

ಗಜ, ಗವಾಕ್ಷ, ಗವಯ, ಶರಭ,ಗಂಧಮಾದನ, ಮೈಂದ,ದ್ವಿವಿದ, ಹನುಮ, ಜಾಂಬವಂತ ಮತ್ತು ಅಂಗದ ಎಲ್ಲರೂ ಸೀತೆಯನ್ನು ಹುಡುಕುತ ದಕ್ಷಿಣದತ್ತ ಸಾಗಿದ ಮತ್ತು ಅವರಿಗೆ ದಾರಿಮಧ್ಯೆ ಮಾಯಾ ನಾಮ ದಾನವನ ದುರ್ಗಮ ಭಯಾನಕ ‘ರಿಕ್ಷ’ ನಾಮ ಗುಹೆ ಕಂಡ ವಿವರಣೆಯನ್ನು ಆದಿಕವಿ ವಾಲ್ಮೀಕಿಯು ವಿವರಿಸಿರುವರು: (1) ದಕ್ಷಿಣದ ಪ್ರದೇಶಗಳಲ್ಲಿ ಸೀತೆಯನ್ನು ಹುಡುಕುವಾಗ ಅವರಿಗೆ ದಾರಿಮಧ್ಯೆ ಮಾಯಾ ನಾಮ ದಾನವನ ದುರ್ಗಮ ಭಯಾನಕ ‘ರಿಕ್ಷ’ ನಾಮ ಗುಹೆ ಕಂಡಿತು, ಅದು ಇಂದಿನ ಆಂಧ್ರ ಪ್ರದೇಶ ರಾಜ್ಯದ ಕರ್ನೂಲ ಜಿಲ್ಲೆಯ ಕೊಲಿಮಿಗುಂಡಲ ಮಂಡಳದ ಬೆಲಂ ಗ್ರಾಮದಲ್ಲಿಯ ಬೆಲಂ ಗುಹೆ ಆಗಿರಬೇಕು, ಹಸಿವು ನೀರಡಿಕೆ ದಣಿವಿನಿಂದ ಬಳಲಿದ ವಾನರರು ಆ ಗವಿ ಸುತ್ತ ಗಿಡ ಬಳ್ಳಿಗಳನ್ನು ಕಂಡರು; ಹಂಸ, ಕ್ರೌಂಚ,ಸಾರ್ಸ, ನೀರಗೋಳಿ ತೊಯ್ದ ಪಕ್ಷಿಗಳು,ಕೆಂಪು ಕಮಲದ ರಾಶಿ ವಾನರರಿಗೆ ಗೋಚರಿಸಿತು; ಆ ಗವಿಯನ್ನು ಸಮೀಪಿಸುತಿದ್ದಂತೆ ವಾನರರ ಎದೆ ಜಲ್ಲೆಂದಿತು, ಇದು “ಪಾತಾಳವೆ! ಇಲ್ಲಾ, ವಾಲಿ ರಚಿಸಿದ ನರಕವೆ!!” ಎನ್ನುತ ನೀರು ಬಳಿ ಹೋದರು,(2) ರಿಕ್ಷ ಗವಿ ವಿವರಣೆ: ವಾಲಿಯು ರಚಿಸಿದ ರಹಸ್ಯ ಪಾತಾಳದಂತೆ ಆ ಭಯಾನಕ ಗವಿಯಲ್ಲಿ ವಿಭಿನ್ನ ಜೀವರಾಶಿಗಳಿದ್ದವು; ಅದನ್ನು ಕಂಡು ಪರ್ವತ ಕಾಯದ ಮಾರುತಾತ್ಮಜ ಹನುಮಾನನು ವಾನರಿಗೆ “ನಾವು ದಕ್ಷಿಣದ ಪರ್ವತ ಪ್ರದೇಶಗಳನೆಲ್ಲ ಶೋಧಿಸಿದೆವು ಆದರೆ ನಮಗೆ ಎಲ್ಲೂ ಜಾನಕಿಯ ಸುಳಿವು ಸಿಗಲಿಲ್ಲ, ಈ ಗುಹೆಯಿಂದ ತೊಯ್ದ ಹಂಸ, ನೀರುಗೋಳಿ ಹೊರ ಬರುತ್ತಿರುವವು, ಇಲ್ಲಿ ನೀರಿನ ಝರಿ ಇಲ್ಲವೇ ಹೊಂಡ ಇರಲೇ ಬೇಕು” ಎಂದು ಹೇಳಿದನು; ಹನುಮನ ಮಾತುಗಳನ್ನು ನಂಬಿ ವಾನರರು ಆ ಗವಿ ಹೊಕ್ಕರು; ಆ ಗವಿಯಲ್ಲಿ ಸೂರ್ಯನ ಬೆಳಕಿಲ್ಲ, ಚಂದ್ರನ ಬೆಳಕಿಲ್ಲ, ಕೆವಲ ಭಯಾನಕ ಕತ್ತಲು ವರಿಸಿತ್ತು; ವ್ಯಾಘ್ರ ವಾನರರು ಆ ಗವಿಯಿಂದ ಸಿಂಹ, ಮೃಗ, ಪಕ್ಷಿಗಳು ಹೊರಹೋಗುವದನ್ನು ಕಂಡರು; ದೃಷ್ಠಿ, ಶೌರ್ಯ, ಪರಾಕ್ರಮಗಳಿಗೆ ಅಡ್ಡಿಯಾಗದ ಗಾಳಿ ಒಂದು ಕ್ಷಣ ವಾನರರ ಕಣ್ಣುಗಳಿಗೆ ಗಾಳಿಯ ರಭಸ ಅಡ್ಡಿಯಾಯಿತು ಆದರೂ ವಾನರರು ಎದೆಗುಂದದ ಆನೆಗಳಂತಹ ರಭದಿಂದ ನುಗ್ಗಿದರು ಹಾಗು ಗುಹೆಯಲಿ ಅವರು ರಮ್ಯ ಹೊಳಪಿನ ತಾಣವನ್ನು ಕಂಡರು; ಆ ಗುಹೆಯಲ್ಲಿ ವಾನರರು ಒಬ್ಬರಕೈ ಮತ್ತೊಬ್ಬರ್ಹಿಡಿದು ಒಂದು ಯೋಜನೆ ದೂರದಷ್ಟು ಗವಿಯನ್ನು ಗಿಡಮರಗಳ ಮಧ್ಯೆ ಪ್ರವೇಶಿಸಿದರು; ನೀರಡಿಕೆ ನಿತ್ರಾನದಲ್ಲೂ ಹಿಂಜರಿಯದೆ ವಾನರರು ಕಾರ್ಯ ಸಾಧನೆಗೆ ಮುಂದೆ ಸಾಗಿದರು, ಮತ್ತು (3) , ಹಸಿವು ನೀರಡಿಕೆ ದಣಿವಿನಿಂದ ಬಳಲಿದ ವಾನರರು ಆ ಗವಿಯಲ್ಲಿ ಸಸ್ಯ ಮತ್ತು ಜೀವರಾಶಿಗಳನ್ನು ಕಂಡರು ಹಾಗು ಅದನ್ನು ವಾಲಿಯು ರಚಿಸಿದ ರಹಸ್ಯ ಪಾತಾಳದಂತಹ ಭಯಾನಕ ಗವಿಯೆಂದು ತಿಳಿದ್ದನು ಹಾಗು ಅಲ್ಲಿಯೇ ಕಪ್ಪುಜಿಂಕೆ ಚರ್ಮಧಾರಿ ತಪಸ್ವಿ ಸ್ತ್ರೀ ಸ್ವಯಂಪ್ರಭೆಯನ್ನು ಕಂಡ ವಿವರಣೆಗಳನ್ನು ಆದಿಕವಿ ನೀಡಿರುವರು.
ಡಾ. ಅರ್ಜುನ ಯ. ಪಂಗಣ್ಣವರ ವಾಲ್ಮೀಕಿ ಸಾಹಿತ್ಯ ಚಿಂತಕ‌