ನಿತ್ರಾನ್ಮಧ್ಯೆಯೂ ಬಿಡಲಿಲ್ಲ ಪ್ರಯತ್ನ ವಾನರರು I ಕಿಷ್ಕಿಂದಕಾಂಡ ರಾಮಾಯಣ ಭಾಗ-34

By admin


ನಿತ್ರಾನ್ಮಧ್ಯೆಯೂ ಬಿಡಲಿಲ್ಲ ಪ್ರಯತ್ನ ವಾನರರು,I
ನಿರಾಶೆಯಲ್ಲೂ ವೀರ ಸದಾ ಜೀವಂತನಿರುವನು;II
ನೆರಳಹೀನ ಗಿಡಮರಗಳ ಕಂಡರು ವಾನರರು,I
ಯಜ್ಞಬೆಳಕಿನಂತೆ ಹೊಳೆತಿದ್ದವು ಗಿಡ ಮರಗಳು; II
ಸಾಲ, ತಾಲ, ಧವ, ಚಂಪಕ, ಕರ್ಣಿಕ ಗಿಡ ಮರಗಳು,I
ಸುತ್ತುವರೆದಿದ್ದವು ಅವುಗಳನ್ನ ಹಕ್ಕಿಗಳು;II
ಕಮಲ ಹೂಗಳ ಹೊಂಡ ಗೋಚರಿಸಿತು ವಾನರರಿಗೆ, I
ಗಟ್ಟಿಯಾಗಿ ಹಿಡಿದು ಗಿಡಮರಗಳಲಿ ಕುಳಿತ ವಾನರರಿಗೆ; II
ಕಂಡವು ಆಮೆ ಸುವರ್ಣ ಮೀನಗಳ ಹಿಂಡುI
ಪ್ರಶಾಂತ ಜಲ ಕಮಲ ಹೊಂಡು; II
ಮುತ್ತು ರತ್ನ ಲೇಪಿತ ಅಂತಪುರ ಬಹುಮಹಡಿಗಳು,I
ಚಿನ್ನ ಬೆಳ್ಳಿ ಅಲಂಕೃತ ಮಹಡಿಗಳು; II
ಕೆಂಪು ಕಂದು ವರ್ಣ ಹಣ್ಣು ಹೂ ಗಿಡ ಬಳ್ಳಿಗಳು,I
ಸವರ್ಣ ಭ್ರಮರ ಜೇನುಗೂಡಗಳು; II
ಚಿತ್ರಕಲೆ ಕೆತ್ತನೆ ಕುಸುರಿನ ಆಸನ ಶಯನಗಳು,I
ಕುಸುರಿನ ಚಿನ್ನ ಬೆಳ್ಳಿ ಪಾತ್ರೆಗಳು; II
ಚಂದನ ಲೋಳೆರಸ ಧೂಪ ಬತ್ತಿಗಳು,I
ಹಣ್ಣು ಗೆಡ್ಡೆಗಳ ರಾಶಿಗಳು;II
ಜಿಂಕೆ-ಚರ್ಮ,ಹೊದಿಕೆ ಉಡುಪು ರಾಶಿಗಳು,I
ರುಚಿಕರ ಮಧು, ಪೇಯಿಗಳ ದಾಸ್ತಾನಗಳು; II
ಅತ್ತಿತ್ತು ಹುಡುಕುವಾಗ ಸೀತೆಯನ ವಾನರರು,I
ಕಂಡರು ಕೆಲ ಸ್ತ್ರಿಯರ ಸುಳಿವು ವಾನರರು; II
ಕಪ್ಪುಜಿಂಕೆ ಚರ್ಮಧಾರಿ ತಪಸ್ವಿ ಸ್ತ್ರೀ ಕಂಡಳು ವಾನರರಾಶ್ಚರ್ಯ ಮಧ್ಯೆ
ಹನುಮಾನ ವಿಚಾರಿಸಿದವಳನು: ”ಯಾರು ನೀ? II
ಯಾರದೀ ಗುಹೆ?”; ಕೈಮುಗಿದು ಹನುಮನಿಗೆ ಕೇಳಿದವಳು: I
”ಯಾರು ನೀ? ಯಾರ ಗುಹೆ? ಯಾರ ವಡವೆಗಳಿವು?” II
ಕಿಷ್ಕಿಂಧಕಾಂಡ ರಾಮಾಯಣ

ರಿಕ್ಷ ಗುಹೆಯ ವರ್ಣನೆಯನ್ನು ಆದಿಕವಿ ವಾಲ್ಮೀಕಿಯು ಮುಂದುವರೆಸಿ ವಿವರಿಸಿರುವರು: (1) ರಿಕ್ಷ ಗುಹೆ ವಿವರಣೆ; ವಾನರರು ನಿತ್ರಾನ್ಮಧ್ಯೆಯೂ ತಮ್ಮ ಪ್ರಯತ್ನ ಬಿಡಲಿಲ್ಲ: ನಿರಾಶೆಯಲ್ಲೂ ವೀರ ಸದಾ ಜೀವಂತನಿರುವನು; ಅಲ್ಲಿ ವಾನರರು ನೆರಳಹೀನ ಗಿಡಮರಗಳನ್ನು ಕಂಡರು, ಅಲ್ಲಿ ಯಜ್ಞಬೆಳಕಿನಂತೆ ಗಿಡ ಮರಗಳು ಹೊಳೆತಿದ್ದವು; ಅಲ್ಲಿ ಹಕ್ಕಿಗಳು ಸಾಲ, ತಾಲ, ಧವ, ಚಂಪಕ, ಕರ್ಣಿಕ ಗಿಡ ಮರಗಳುನ್ನು ಸುತ್ತುವರೆದಿದ್ದವು, ಅಲ್ಲಿಯೇ ವಾನರರಿಗೆ ಕಮಲ ಹೂಗಳ ನೀರಿನ ಹೊಂಡ ಗೋಚರಿಸಿತು; ವಾನರರು ಆ ಗಿಡಮರಗಳಲ್ಲಿ ಗಟ್ಟಿಯಾಗಿ ಹಿಡಿದು ಕುಳಿತರು ಹಾಗು ಅವರಿಗೆ ಪ್ರಶಾಂತ ಜಲ ಕಮಲ ಹೊಂಡದಲ್ಲಿ ಆಮೆ ಸುವರ್ಣ ಮೀನಗಳ ಹಿಂಡು ಕಂಡವು ಅದರಂತೆ ಅವರಿಗೆ ಮುತ್ತು ರತ್ನ ಲೇಪಿತ ಅಂತಪುರ ಬಹುಮಹಡಿಗಳು, ಚಿನ್ನ ಬೆಳ್ಳಿ ಅಲಂಕೃತ ಮಹಡಿಗಳು, ಕೆಂಪು ಕಂದು ವರ್ಣ ಹಣ್ಣು ಹೂ ಗಿಡ ಬಳ್ಳಿಗಳು, ಸವರ್ಣ ಭ್ರಮರ ಜೇನುಗೂಡಗಳು, ಚಿತ್ರಕಲೆ ಕೆತ್ತನೆ ಕುಸುರಿನ ಆಸನ ಶಯನಗಳು, ಕುಸುರಿನ ಚಿನ್ನ ಬೆಳ್ಳಿ ಪಾತ್ರೆಗಳು, ಚಂದನ ಲೋಳೆರಸ ಧೂಪ ಬತ್ತಿಗಳು, ಹಣ್ಣು ಗೆಡ್ಡೆಗಳ ರಾಶಿಗಳು, ಜಿಂಕೆ-ಚರ್ಮಹೊದಿಕೆ ಉಡುಪು ರಾಶಿಗಳು, ರುಚಿಕರ ಮಧು ಮತ್ತು ಪೇಯಿಗಳ ದಾಸ್ತಾನಗಳು ಕಂಡವು; (2) ಸ್ತ್ರೀಯರ ದರ್ಶನ: ವಾನರರು ಸೀತೆಯನ್ನು ಅತ್ತಿತ್ತು ಹುಡುಕುವಾಗ ಕೆಲವು ಸ್ತ್ರಿಯರ ಸುಳಿವು ಕಂಡರು, ಅಲ್ಲಿಯೇ ಕಪ್ಪುಜಿಂಕೆ ಚರ್ಮಧಾರಿ ತಪಸ್ವಿ ಸ್ತ್ರೀ ಕಂಡಳು ಹಾಗು ವಾನರರು ಆಶ್ಚರ್ಯ ಪಟ್ಟರು ಅದರ ಮಧ್ಯೆಯೇ ಹನುಮಾನನು ಅವಳಿಗೆ “ನೀನು ಯಾರು? ಈ ಗುಹೆ ಯಾರದು?” ಎಂದು ಕೈಮುಗಿದು ವಿಚಾರಿಸಿದನು ಆವಾಗ ಅವಳು ಪ್ರತಿಯಾಗಿ ಹನುಮನಿಗೆ “ಯಾರು ನೀ? ಯಾರ ಗುಹೆ? ಯಾರ ವಡವೆಗಳಿವು?” ಎಂದು ಆಶ್ಚರ್ಯಕರ ರೀತಿಯಲ್ಲಿ ಪ್ರಶ್ನಿಸಿದನ್ನು ಆದಿಕವಿ ವಾಲ್ಮೀಕಿಯು ವಿವರಿಸಿರುವರು.
ಡಾ. ಅರ್ಜುನ ಯ. ಪಂಗಣ್ಣವರ ವಾಲ್ಮೀಕಿ ಸಾಹಿತ್ಯ ಚಿಂತಕ‌