
ಕೇಳಿ ನಕ್ಷತ್ರಗಳ ಅಧಿಪತಿಯಂತಹ ತಾರನ ಕುತಂತ್ರ ನುಡಿ,I
ಚಿಂತಿತ ಗೊಂಡ ಹನುಮ ಅಂಗದನ ಹಿತದಲಿ; ಅಂಗದನಲಿಯ II
ಎಂಟುಪಟ್ಟು ಜ್ಞಾನ , ನಾಲ್ಕುಪಟ್ಟು ಯುಕ್ತಿ ,I
ಹದಿನಾಲ್ಕುಪಟ್ಟ ಸಾಮರ್ಥ್ಯ ನೆನಪಿಸಿಕೊಂಡ ಹನುಮ; II
ತೇಜೋಬಲ ಮಹಾಪರಾಕ್ರಮಿ ಹುಣ್ಣಿಮೆ ಚಂದ್ರಕಾಂತಿI
ಬುದ್ಧಿಯಲಿ ಬೃಹಸ್ಪತಿ ತಂದೆಯಂತೆ ಬಲಶಾಲಿ ಅಂಗದ; II
ತಾರನ ಬೋಧನೆ ಪ್ರಭಾವದಿ ಅಂಗದ ಸುಗ್ರೀವನI
ವಿರುದ್ಧ ಬಂಡಾಯೇಳುವ ಮನಸ್ಥಿ ತಿಳಿದ ಹನುಮಾನ; II
ಸುಗ್ರೀವನಿಂದ ತಪ್ಪಿಸಿಕೊಳ್ಳುವ ಸರ್ವ ವಾನರ ಮನೋಸ್ಥಿತಿ I
ತಿಳಿದ ಜ್ಞಾನಿ ಹನುಮ, ವಾನರ ಮನ ಬದಲಿಸಿದ II
ಭೇದ-ವಿಧಾನದಿ; ಹನುಮನ ಮಾತಿನಂತೆ ವಾನರರು ವಿರೋದಿಸಿದರುI
ಅಂಗದನ ಸುಗ್ರೀವ-ವಿರೋಧ ನಿಲವು; II
ಹನುಮ ಅಂಗದನಿಗೆ ನುಡಿದನು:” ಓ ತಾರಾಪುತ್ರನೇ,I
ಯುದ್ಧದಲಿ ನಿನೊಬ್ಬ ಪ್ರಶ್ನಾತೀತ ಶೂರ; II
ವಾಲಿಯಂತೆ ವಾನರ-ರಾಜ್ಯ ನಿಭಾಯಿಸಬಲ್ಲೆ, I
ವಾನರರು ಹೆಂಡತಿ ಮಕ್ಕಳ ಬಿಟ್ಟು ಬಹಳದಿನ ವಾಸಿಸರು ನಿನ್ಹತೋಟೆಯಲಿ; II
ದುಃಖದಿ ಸತ್ಯ ಹೇಳುವೆ, ಜಾಂಬವಂತ,ನೀಲ ಸುಹೋತ್ರI
ಯಾರು ನಿನ್ನೊಂದಿಗಿರರು, ನಾನೂ ಕೂಡ ಇರೇನು; II
ಸಾಧ್ಯವಿಲ್ಲ ನಿನಗೆ ಸುಗ್ರೀವನಿಂದ ದೂರವಿರಲು ಯಾವುದೇ ಯುಕ್ತಿ ಬಳಸಿ;I
ಸಬಲನೊಂದಿಗೆ ಅಬಲನು ಸಬಲ, II
ಸುಗ್ರೀವನಿಂದ ತಪ್ಪಿಸಿಕೊಂಡು ಕಪ್ಪು-ಗವಿಯಲಿದ್ದರೂ ನಿಮಗೆI
ಲಕ್ಷ್ಮಣನ ಬಾಣದಿಂದ ರಕ್ಷಿಸಿಕೊಳ್ಳಲು ಅಸಾಧ್ಯ; II
ರಾಜನಾಗಿ ವಾಸಿಸಿದರೂ ನೀ ಕಪ್ಪು-ಗವಿಯಲಿ,ಇರರು ಬಹಕಾಲI
ನಿನ್ನೊಂದಿಗೀ ವಾನರರು ಬಿಟ್ಟು ತಮ್ಮ ಸಂಸಾರ;II
ಎಲ್ಲರನ್ನೂ ಕಳಕೊಂಡು ಕೊನೆಗೆ, ಓ ಅಂಗದಾ,I
ನೀನು ನಿತ್ರಾಣ ಹುಲ್ಲಿನ ಗರಿಯಂತೆ ಅಂತ್ಯವಾಗುವಿ;II
ಕಿಷ್ಕಿಂಧಕ್ಕೆ ನಮ್ಮೊಂದಿಗೆ ಮರಳಿದರೆI
ಎಂದಿನಂತೆ ಸುಗ್ರೀವನ ಕರುಣೆದಿ ಸುಖವಾಗಿರುವಿ; II
ಸುಗ್ರೀವನೊಬ್ಬ ಪ್ರಮಾಣಿಕ,ನಿರುಪ್ರದ್ರವಿ ರಾಜ,I
ನಿನ್ನ ಚಕ್ಕಪ್ಪ, ಮಾಡಲಾರ ನಿನ್ನ ಹತ್ಯೆ; II
ನೀನು, ನಿನ್ನ ತಾಯಿ ಸುರಕ್ಷಿತರು ಸುಗ್ರೀವನ ಆಶ್ರಯದಲಿ,I
ನಿನೊಬ್ಬನೇ ಅವರ ವಂಶಕುಡಿ, ಉದ್ಧಾರಕ; II
ಓ ಅಂಗದಾ, ಸುಗ್ರೀವನಿಗೆ ವಿದ್ರೋಹ ಮಾಡದೇI
ಮರಳು ಕಿಷ್ಕಿಂಧಕ್ಕೆ, ನಿನ್ನ ಸ್ವಂತ ರಾಜ್ಯಕ್ಕೆ”.II
ಕಿಷ್ಕಿಂಧಕಾಂಡ ರಾಮಾಯಣ
ನಕ್ಷತ್ರಗಳ ಅಧಿಪತಿಯಂತಹ ತಾರನ ಕುತಂತ್ರ ಸಲಹೆಯನ್ನು ಕೇಳಿದ ಹನುಮಾನ ಅಂಗದನ ಹಿತಕ್ಕಾಗಿ ಚಿಂತಿತಗೊಂಡ ಸನ್ನಿವೇಶವನ್ನು ಆದಿಕವಿ ವಾಲ್ಮೀಕಿಯು ವಿವರಿಸಿರುವರು, ಅದರಲ್ಲಿಯ ಮುಖ್ಯಾಂಶಗಳು: (1) ತಾರನ ಕುತ್ರಂತ್ರೋಪದೇಶಕ್ಕೆ ಬಲಿಯಾದ ಅಗಂದನನ್ನು ಹನುಮಾನನು ತನ್ನ ಉಪದೇಶ ಬಲದಿಂದ ಅವನ ಮನಸ್ಸು ಬದಲಿಸಿದನು, ಹನುಮನು ವಾಲಿಪುತ್ರ ಅಂಗದನಿಗೆ ಅವನಲಿಯ ಎಂಟುಪಟ್ಟು ಜ್ಞಾನ (1.ಜಾಗೃತ,2.ಗ್ರಹಿಕೆ,3.ಸ್ಮರ್ಣನೆ,4. ಓರೆಗಲ್ಲು 5.ಸ್ಪಂದಿಸು, 6.ಸತ್ವ-ಸಮಗ್ರ ಜ್ಞಾನ,7. ತತ್ವಜ್ಞಾನ, 8. ನಡತೆ ), ನಾಲ್ಕುಪಟ್ಟು ಯುಕ್ತಿ (1.ಸಾಮ,2.ದಾನ, 3.ಭೇದ, 4.ದಂಡ), ಹದಿನಾಲ್ಕುಪಟ್ಟ ಸಾಮರ್ಥ್ಯ(1 ಸಮಯ,ಸ್ಥಳ ಜ್ಞಾನ,Time, Space, Knowledge, 2.ತಾರತಮ್ಯ,3. ಸಮಸ್ಯೆ-ಎದೆಗಾರಿಕೆ,4. ಸರ್ವಜ್ಞಾನಿ,5.ನಿಪುಣತೆ,6. ಆತ್ಮರಕ್ಷಣೆ,7.ರಹಸ್ಯಕಾಪಾಡುವ, 8, ಅಸಂಬದ್ಧ ಚರ್ಚೆ ಮಾಡದಿರುವ, 9.ದೈರ್ಯ, 10. ಸಬಲ, ಅಬಲ ತಿಳಿವಳಿಕೆ, 11. ವಿಶ್ವಾಸ, 12.ಆಶ್ರಯ ನೀಡುವ, 13. ಸಮಯೋಚಿತ ಕೋಪ,14. ಅಭಿಪ್ರಾಯ, ಕೃತಿಯಲಿ ಅಚಲತೆ) ನೆನಪಿಸಿಕೊಂಡನು ಹಾಗು ತೇಜೋಬಲ ಮಹಾಪರಾಕ್ರಮಿ ಹುಣ್ಣಿಮೆ ಚಂದ್ರನಂತಹ ಕಾಂತಿಯ, ಬುದ್ಧಿಯಲಿ ಬೃಹಸ್ಪತಿಯಂತೆ, ತಂದೆಯಂತೆ ಬಲಶಾಲಿತನವನ್ನು ನೆನಪಿಸಿಕೊಟ್ಟನು ಹಾಗು ಅಂಗದನು ಮತ್ತು ವಾನರರು ತಾರನ ಕುತಂತ್ರ ಬೋಧನೆ ಪ್ರಭಾವದಿಂದ ಸುಗ್ರೀವನ ವಿರುದ್ಧ ಬಂಡಾಯ ಏಳುವ ಮನಸ್ಥಿ ತಿಳಿದು ಹನುಮಾನನು ಭೇದ-ವಿಧಾನದಿಂದ ಅಂಗದ ಮತ್ತು ವಾನರರ ಮನಸ್ಸು ಬದಲಿಸಿದನು; ಯಾರಾದರೂ ದಾರಿತಪ್ಪಿಸುವ ಸಲಹೆಯನ್ನು ನೀಡಿದಾಗ ಭೇದ ವಿಧಾನ ಮೂಲಕ ಆ ಪರಿಸ್ಥಿತಿಯನ್ನು ತಿಳಿಗೊಳಿಸುವ ವಿಧಾನವನ್ನ ಆದಿಕವಿ ವಾಲ್ಮೀಕಿಯು ಈ ಸಂದರ್ಭದಲ್ಲಿ ವಿವರಿಸಿರುವರು; (2) ಹನುಮನ ಮಾತಿನ ಪ್ರಭಾವಕ್ಕೊಳಗಾಗಿ ವಾನರರು ಅಂಗದನ ಸುಗ್ರೀವ-ವಿರೋಧ ನಿಲವುವನ್ನು ವಿರೋಧಿಸಿದರು; ಅದರಂತೆ ಹನುಮನು ಅಂಗದನಿಗೆ ” ಓ ತಾರಾಪುತ್ರನೇ, ಯುದ್ಧದಲಿ ನೀನೊಬ್ಬ ಪ್ರಶ್ನಾತೀತ ಶೂರನು, ನೀನು ತಂದೆ ವಾಲಿಯಂತೆ ವಾನರ-ರಾಜ್ಯವನ್ನು ನಿಭಾಯಿಸಬಲ್ಲೆ, ನಿನ್ನ ಹತೋಟೆಯಲ್ಲಿ ವಾನರರು ಹೆಂಡತಿ ಮಕ್ಕಳ ಬಿಟ್ಟು ಬಹಳ ದಿನಗಳಿಂದ ವಾಸಿಸಲು ಅಸಾಧ್ಯ, ನಿನಗೆ ದುಃಖದಿಂದ ಸತ್ಯ ಹೇಳುವದೇನೆಂದೆರೆ ಜಾಂಬವಂತ, ನೀಲ, ಸುಹೋತ್ರ ಯಾರು ನಿನ್ನೊಂದಿಗೆ ಬರುವದಿಲ್ಲ ಹಾಗು ನಾನೂ ಕೂಡ ನಿನ್ನೊಂದಿಗೆ ಬರುವದಿಲ್ಲ; ನಿನಗೂ ಸುಗ್ರೀವನಿಂದ ದೂರವಿರಲು ಸಾಧ್ಯವಿಲ್ಲ, ನೀನು ಈ ಸಂದರ್ಭಲ್ಲಿ ಯಾವುದೇ ಯುಕ್ತಿ ಬಳಿಸು—ಸಬಲನೊಂದಿಗೆ ಅಬಲನು ಸಬಲನಾಗುವನು; ನೀವು ಸುಗ್ರೀವನಿಂದ ತಪ್ಪಿಸಿಕೊಂಡು ಕಪ್ಪು-ಗವಿಯಲಿದ್ದರೂ ನಿಮಗೆ ಲಕ್ಷ್ಮಣನ ಬಾಣದಿಂದ ರಕ್ಷಿಸಿಕೊಳ್ಳಲು ಅಸಾಧ್ಯ; ನೀನು ಕಪ್ಪು-ಗವಿಯಲ್ಲಿ ರಾಜನಾಗಿ ವಾಸಿಸಿದರೂ ವಾನರರು ಬಹಕಾಲ ತಮ್ಮ ಸಂಸಾರ ಬಿಟ್ಟು ನಿನ್ನೊಂದಿಗೆ ಇರರು; ಓ ಅಂಗದಾ, ಕೊನೆಗೆ ಎಲ್ಲರನ್ನೂ ಕಳಕೊಂಡು ನೀನು ನಿತ್ರಾಣ ಹುಲ್ಲಿನ ಗರಿಯಂತೆ ಅಂತ್ಯವಾಗುವಿ; ನೀನು ಕಿಷ್ಕಿಂಧಕ್ಕೆ ನಮ್ಮೊಂದಿಗೆ ಮರಳಿದರೆ ಎಂದಿನಂತೆ ನೀನು ಸುಗ್ರೀವನ ಕರುಣೆಯಿಂದ ಸುಖವಾಗಿರುವಿ; ಸುಗ್ರೀವನೊಬ್ಬ ಪ್ರಮಾಣಿಕ, ನಿರುಪ್ರದ್ರವಿ ರಾಜನು, ನಿನ್ನ ಚಕ್ಕಪ್ಪನು, ನಿನ್ನ ಹತ್ಯೆ ಮಾಡಲಾರನು; ಸುಗ್ರೀವನ ಆಶ್ರಯದಲ್ಲಿ ನೀನು ಮತ್ತು ನಿನ್ನ ತಾಯಿ ಸುರಕ್ಷಿತರು, ನಿನೊಬ್ಬನೇ ಅವರ ವಂಶಕುಡಿ, ವಂಶ-ಉದ್ಧಾರಕ; ಓ ಅಂಗದಾ, ಸುಗ್ರೀವನಿಗೆ ವಿದ್ರೋಹ ಮಾಡದೇನಿನ್ನ ಸ್ವಂತ ರಾಜ್ಯ ಕಿಷ್ಕಿಂಧಕ್ಕೆ ಮರಳು”ಎಂದು ಹಿತೋಪದೇಶ ಮಾಡುವ ಮೂಲಕ ಅಂಗದನ ಮನಸ್ಸನ್ನು ಬದಲಿಸಿದನು ಭೇದ-ವಿಧಾನದಿಂದ ವಾನರರ ಮನಸ್ಸು ಬದಲಿಸಿದ ಘಟನೆಯ ಮುಖೇನ ಆದಿಕವಿ ವಾಲ್ಮೀಕಿಯು ಭೇದ ವಿದಾನದ ಮಹತ್ವದ ವಿವರಣೆ ನೀಡಿರುವರು.
ಡಾ. ಅರ್ಜುನ ಯ. ಪಂಗಣ್ಣವರ ವಾಲ್ಮೀಕಿ ಸಾಹಿತ್ಯ ಚಿಂತಕ
