ಮಾತೆಯರ ಮಾತೆ ಅಕ್ಷರದ ಧಾತೆ ಸಾವಿತ್ರಿಬಾಯಿ ಫುಲೆ

ರಮಾ ಬೆಂಗಳೂರು
ಮಾತೆಯರ ಮಾತೆ ಅಕ್ಷರದ ಧಾತೆ ಸಾವಿತ್ರಿಬಾಯಿ ಫುಲೆ
ನಾವು ನಿಮ್ಮ ಪರಿಶ್ರಮದ ಫಲ………
ಅಕ್ಷರದ ಪರಿವೇ ಇಲ್ಲದ ಮನು ಧೋರಣೆಯ ಕಾಲದೊಳು
ಹೆಣ್ಣಿನ ಸ್ಥಿತಿ ಅಧೋಗತಿ
ಅಕ್ಷರದ ಅರಿವು ಮೊಳಕೆಯೊಡೆದೊಡೆ ನಿಮ್ಮಿಂದ, ಕುಶಲಮಯ ಹೆಣ್ಣಿನ ಸ್ಥಿತಿ……….
ಸುತ್ತಲು ಮುಳ್ಳಿನಂತೆ ಮನುವಾದಿಗಳು ಆವರಿಸಿದರೂ ದಿಟ್ಟತನದಿಂದ ಗುಲಾಬಿ ಹೂವಿನಂತೆ ಅರಳಿ ಮಾದರಿಯಾದವರು ನೀವು,
ನಾವು ನಿಮ್ಮ ಪರಿಶ್ರಮದ ಫಲ……….
ಸುತ್ತಲು ಅಜ್ಞಾನದ ಕತ್ತಲು ಆವರಿಸಿದಾಗ ಶೋಷಣೆ ದೌರ್ಜನ್ಯ ದಬ್ಬಾಳಿಕೆ ಅಸ್ಪೃಶ್ಯತೆ & ಅಸಮಾನತೆ ಎಂಬ ಬೇಲಿ ಬಿಗಿದಾಗ ಯಾವಾಗ ಈ ಬಂಧನದಿಂದ ಮುಕ್ತಿಯುಂಟು ಎಂಬ ಕೂಗು ಜೋರಾದಾಗ ಬಂಧನದ ಮುಕ್ತಿಗೆ ಶಿಕ್ಷಣದ ಮಾರ್ಗ ಅಗತ್ಯವಾಗಿ ಎಲ್ಲೋ ದೂರದಲ್ಲಿ ಶಿಕ್ಷಣದ ಕಿಂಡಿ ತೆರೆದು ಕಿರು ಬೆಳಕು ಮೂಡುವಂತೆ ಸಾವಿತ್ರಿಬಾಯಿ ಫುಲೆ ಅವರು ಅಜ್ಞಾನದ ಕತ್ತಲನ್ನು ಅಳಿಸಲು ಶಿಕ್ಷಣವೆಂಬ ಜ್ಯೋತಿ ಬೆಳಗಿದೊಡೆ
ಆಗೊಮ್ಮೆ ಬಂಧನದ ಸರಪಳಿ ನಿಧಾನವಾಗಿ ಕಳಚದೊಡಗಿತು………….
ಕುತಂತ್ರಿ ಮನುವಾದಿಗಳ ಕುತಂತ್ರಕ್ಕೆ ಮಣಿಯದೆ ಮನು ಸಮಾಜಕ್ಕೆ ವಿರೋಧವಾಗಿ ಅಕ್ಷರದ ಬೀಜ ಬಿತ್ತಿ ಬಂಧನದ ಸರಪಳಿ ಕಳಚಿದರು……
ಮನೆ ಮನೆಗೂ ಹೋಗಿ ಶಿಕ್ಷಣದ ಅಗತ್ಯತೆಯನ್ನು ಸಾರಿ
ಎಲ್ಲ ಹೆಣ್ಣು ಮಕ್ಕಳನ್ನು ಕರೆತಂದು ಮನು ಧೋರಣೆಯ ವಿರುದ್ಧ ಅರಿವಿನ ಬೋಧನೆ ಮಾಡಿದರು……
ಹೆಣ್ಣಿನ ಶಿಕ್ಷಣ ಎಂದಾಕ್ಷಣ ಗದರುತ್ತಿದ್ದ ಮನು ಸಮಾಜದ ವಿರುದ್ಧ ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ಪಾಠ ಮಾಡಿದರು……
ಕೆಲವೇ ವರ್ಷಗಳಲ್ಲಿ ಹಲವು ಶಾಲೆಗಳನ್ನು ತರೆದು ಭಾರತೀಯ ಹೆಣ್ಣು ಮಕ್ಕಳ ಬದುಕಲ್ಲಿ ಅರಿವಿನ ಹೂವು ಅರಳುವಂತೆ ಮಾಡಿ ಭಾರತದ ಪ್ರಪ್ರಥಮ ಮಹಿಳಾ ಶಿಕ್ಷಕಿಯಾದರು……..
ಮಾತೆಯರ ಮಾತೆ ಅಕ್ಷರದ ಧಾತೆ ಸಾವಿತ್ರಿ ಅಮ್ಮ
ನಾವು ನಿಮ್ಮ ಪರಿಶ್ರಮದ ಫಲ…….
-ರಮಾ, ಬೆಂಗಳೂರು.
