ವಾನರರನು ತಿನ್ನಲು ಬಂದ ಸಂಪತಿ, ತಿಳಿದುI
ಜಟಾಯು ಸುದ್ಧಿ, ದುಃಖ-ದ್ವನಿಯಲಿ ಮಾತಾಡಿತು;II
ತಮ್ಮನು ತಿನ್ನಲು ಬಂದ ಗರುಡನ ನೋಡಿ ಕುಪಿತ ವಾನರರು ನುಡಿದರು:I
” ಆ ಗರುಡ ತಿನ್ನಲು ಬಂದಿದೆ ನಮ್ಮನು, II
ಕುಳಿತಿಹೆವು ನಾವು ಆಮರಣ ಉಪವಾಸ, ಬಂದು ಬೇಗ I
ಗರುಡ ತಿಂದುಹೋಗಲಿ ನಮ್ಮನು, ಮುಕ್ತಿ ಸಿಗುವದು” ;II
ಗರುಡನನ್ನು ಬೆಟ್ಟ-ಗವಿಯಿಂದ ಕೆಳಗೆ ಇಳಿಸುವI
ವಿಚಾರ ಮಾಡಿದರು ವಾನರರು, ವಾನರ ನಾಯಕರು; II
ಬೆಟ್ಟವೇರಿ ಸಂಪತಿಯನು ಕೆಳಗೆ ತಂದರು ವಾನರರು,I
ಅಂಗದ ನುಡಿದ ಸಂಪತಿಗೆ:” ಓ ಪಕ್ಷಿಯೇ, II
ಶೂರ ಪಕ್ಷಿರಾಜನ ಮೊಮ್ಮಗ ನಾನುI
ಶೂರ ವಾಲಿ ವ ಸುಗ್ರೀವರು ಅವನ ಮಕ್ಕಳು; II
ನನ್ನ ಅಜ್ಜ ಪಕ್ಷಿರಾಜನ ತರುವಾಯ ನನ್ನ ತಂದೆI
ಶೂರ ವಾಲಿ ರಾಜನಾದ; ಮಹಾರಾಜ ದಶರಥ ಪುತ್ರ ರಾಮ, II
ತಮ್ಮ ಲಕ್ಷ್ಮಣ, ಪತ್ನಿ ಸೀತೆಯೊಂದಿಗೆ ದಂಡಕಾರಣ್ಯಕೆ ಬಂದ I
ತಂದೆ ವಚನ ಪಾಲನೆಗೆ; ಜನಸ್ಥಾನದಲಿ ಅಪಹರಿಸಿII
ಸೀತೆಯನ ರಾವಣ ಆಕಾಶಮಾರ್ಗವಾಗಿ ಒಯ್ಯುವದನI
ಕಂಡ ದಶರಥಮಿತ್ರ ಜಟಾಯು; ರಾವಣನ ವಿಮಾನ II
ಕೆಳಕ್ಕುರುಳಿಸಿ ಸೀತೆಯನ ರಕ್ಷಿಸುವಾಗ ರಾವಣನಿಂದ I
ಪ್ರಾಣಾಂತಕ ಏಟು ಪಡೆಯಿತು ವೀರ ಜಟಾಯು; II
ರಾಮನಿಗೆ ಸೀತೆ ವಿಷಯ ತಿಳಿಸಿ ಜಟಾಯು ಪ್ರಾಣಬಿಟ್ಟಿತು,I
ರಾಮನಿಂದ ಪಡೆಯಿತು ಅಂತ್ಯಕ್ರಿಯೆ ಜಟಾಯು; II
ಸಹಾಯಕೋರಿ ಸ್ನೇಹಿತನಾದ ರಾಮ ಸುಗ್ರೀವನ, ಮುತ್ಸದಿ I
ನನ್ನ ಚಿಕ್ಕಪ್ಪ ಸುಗ್ರೀವ ರಾಮನಿಂದ ವಾಲಿನ ವಧಿಸಿದ; II
ಪಟ್ಟಗಟ್ಟಿದ ರಾಮ ಸುಗ್ರೀವನ ಕಿಷ್ಕಿಂಧರಾಜ್ಯಕ್ಕೆ, ಬಂದಿಹೆವು
ಸುಗ್ರೀವ-ದಂಡಯಾತ್ರೆಯಲಿ ನಾವೇಲ್ಲ ಮುಖಂಡರು; II
ಹುಡುಕಿದೆವು ಸೀತೆ ರಾತ್ರಿ ಹಗಲ್ಲೆನ್ನದೆ ಸುಗ್ರೀವನI
ಮಾರ್ಗದರ್ಶನದಂತೆ, ಸೀತೆ ಸಿಗಲಿಲ್ಲ; ಮಾಯಾ ನಿರ್ಮಿತII
ಕಪ್ಪುಗುಹೆ ಹೊಕ್ಕೆವು ಸೀತೆ ಅರಿಸುತ ಗಡವು-ಮಾಸ I
ಮುಗಿಯಿತಯ ಗುಹೆಯಲಿ, ಅರಿಸುವದರಲಿ; II
ಹುಡುಕಲು ಕೊಟ್ಟ ಸಮಯ ಮುಗಿಯಿತು, ಸುಗ್ರೀವನ ಕೋಪಕ್ಹೆದರಿ, I
ಕುಳಿತಿಹೆವು ಆಮರಣ-ಉಪವಾಸ; II
ನಮ್ಮ ವೈಪಲ್ಯ ರಾಮ ಲಕ್ಷ್ಮಣ ಸುಗ್ರೀವರಿಗೆI
ಕೋಪ ತರುವದು, ನಮಗೆ ಉಳಿವು ಇಲ್ಲ”.II
ಕಿಷ್ಕಿಂಧಕಾಂಡ ರಾಮಾಯಣ
ವಾನರರನ್ನು ಬಲಿಯೆಂದು ತಿನ್ನಲು ಬಂದ ಸಂಪತಿಯು ಜಟಾಯು ಸುದ್ಧಿ ಕೇಳಿ ದುಃಖ-ದ್ವನಿಯಲ್ಲಿ ಅಂಗದನೊಂದಿಗೆ ನಡೆಸಿದ ಸಂವಾದವನ್ನು ಆದಿಚಿಂತಕ ವಾಲ್ಮೀಕಿಯು ವಿವರಿಸಿರುವರು, ಅದರಲ್ಲಿಯ ಮುಖ್ಯ ಅಂಶಗಳು: (1) ವಾನರರಲ್ಲಿ ಆತಂಕ ಮತ್ತು ಬೇಸರ: ತಮ್ಮನು ತಿನ್ನಲು ಬಂದ ಗರುಡನನ್ನು ನೋಡಿ ವಾನರರು ಕೋಪದಲ್ಲಿ “ಆ ಗರುಡನು ನಮ್ಮನು ತಿನ್ನಲು ಬಂದಿರುವನು, ನಾವು ಆಮರಣ ಉಪವಾಸ ಕುಳಿತಿರುವೆವು, ಆ ಗರುಡನು ಬೇಗ ಬಂದು ನಮ್ಮನು ತಿಂದುಹೋಗಲಿ, ನಮಗೆ ಸೀತೆ ಹುಡುಕುವ ಕಾರ್ಯದಿಂದ ಮುಕ್ತಿ ಸಿಗುವದು” ಎಂದು ತಮ್ಮಲ್ಲಿಯೇ ಆಡಿಕೊಂಡರು ಹಾಗು ತಮ್ಮ ಬೇಸರ ವ್ಯಕ್ತ ಪಡಿಸಿದರು, ವಿಫಲತೆಯಿಂದ ನಿರಾಶೆಗೊಂಡ ಮನುಷ್ಯರು ಆಡುವ ಮಾತುಗಳನ್ನು ವಾನರ ಮುಖೇನ ವಾಲ್ಮೀಕಿಯು ವ್ಯಕ್ಕ್ತ ಪಡಿಸಿರುವರಯ, (2) ಸಂಪತಿಯೊಂದಿಗೆ ಅಂಗದನ ಅಳಲು:, ವಾನರ ನಾಯಕರು ಗರುಡನನ್ನು ಬೆಟ್ಟ-ಗವಿಯಿಂದ ಕೆಳಗೆ ಇಳಿಸುವ ವಿಚಾರ ಮಾಡಿದರು; ವಾನರರು ಬೆಟ್ಟವೇರಿ ಸಂಪತಿಯನ್ನು ಕೆಳಗೆ ತಂದರು; ಅಂಗದನು ಸಂಪತಿಗೆ “ಓ ಪಕ್ಷಿಯೇ, ನಾನು ಶೂರ ಪಕ್ಷಿರಾಜನ ಮೊಮ್ಮಗನು, ನನ್ನ ತಂದೆ ಶೂರ ವಾಲಿ ಮತ್ತು ಅವನ ತಮ್ಮ ಸುಗ್ರೀವನು ಪಕ್ಷಿರಾಜನ ಮಕ್ಕಳು; ನನ್ನ ಅಜ್ಜ ಪಕ್ಷಿರಾಜನ ತರುವಾಯ ನನ್ನ ತಂದೆ ಶೂರ ವಾಲಿಯು ಕಿಷ್ಕಿಂಧದ ರಾಜನಾದನು; ಇಕ್ಷ್ವಾಕುವಂಶದ ಮಹಾರಾಜ ದಶರಥ ಪುತ್ರ ರಾಮ, ಅವನ ತಮ್ಮ ಲಕ್ಷ್ಮಣ, ಪತ್ನಿ ಸೀತೆಯೊಂದಿಗೆ ತಂದೆ ವಚನ ಪಾಲನೆಗಾಗಿ ದಂಡಕಾರಣ್ಯಕೆ ಬಂದನು; ಜನಸ್ಥಾನದಲ್ಲಿ ರಾವಣನು ಸೀತೆಯನ್ನು ಅಪಹರಿಸಿ ಆಕಾಶಮಾರ್ಗವಾಗಿ ಹೋಗುವದನ್ನು ಕಂಡ ದಶರಥಮಿತ್ರ ಜಟಾಯು ರಾವಣನೊಂದಿಗೆ ಯುದ್ಧ ಮಾಡಿದನು; ಯುದ್ಧದಲ್ಲಿ ರಾವಣನ ವಿಮಾನ ಕೆಳಕ್ಕುರುಳಿಸಿ ಸೀತೆಯನ ರಕ್ಷಿಸುವಾಗ ವೀರ ಜಟಾಯು ರಾವಣನಿಂದ ಪ್ರಾಣಾಂತಕ ಏಟು ತಿಂದನು ಹಾಗು ರಾಮನಿಗೆ ಸೀತೆ ವಿಷಯ ತಿಳಿಸಿ ಜಟಾಯು ಪ್ರಾಣಬಿಟ್ಟನು, ಜಟಾಯು ರಾಮನಿಂದ ಅಂತ್ಯಕ್ರಿಯೆ ಪಡೆದು ಧನ್ಯವಾಯಿತು; ಮುತ್ಸದಿ ಸುಗ್ರೀವನ ಸಹಾಯಕೋರಿ ರಾಮನು ಅವನ ಸ್ನೇಹಿತನಾದನು, ನನ್ನ ಚಿಕ್ಕಪ್ಪ ಸುಗ್ರೀವನು ರಾಮನಿಂದ ನನ್ನ ತಂದೆ ವಾಲಿಯನ್ನು ವಧಿಸಿದನು; ರಾಮನು ಸುಗ್ರೀವನಿಗೆ ಕಿಷ್ಕಿಂಧರಾಜ್ಯದ ಪಟ್ಟಗಟ್ಟಿದನು; ಸುಗ್ರೀವನ ಮಾರ್ಗದರ್ಶನದಂತೆ ನಾವೇಲ್ಲ ವಾನರ ಮುಖಂಡರು ರಾತ್ರಿ ಹಗಲ್ಲೆನ್ನದೆ ಸೀತೆಯನ್ನು ಹುಡುಕಿದೆವು ಆದರೆ ನಮಗೆ ಸೀತೆ ಸಿಗಲಿಲ್ಲ; ಸೀತೆಯನ್ನು ಹುಡುಕುತ್ತ ನಾವು ಮಾಯಾ ನಿರ್ಮಿತ ಕಪ್ಪುಗುಹೆಯನ್ನು ಹೊಕ್ಕೆವು ಆ ಗುಹೆಯಲ್ಲಿಯೇ ಸೀತೆ ಹುಡುಕುವ ಗಡವು-ಮಾಸ ಮುಗಿಯಿತು, ನಾವು ಸುಗ್ರೀವನ ಕೋಪಕ್ಕೆ ಹೆದರಿ ಇಲ್ಲಿ ಆಮರಣ-ಉಪವಾಸ ಕುಳಿತಿರುವೆವು; ನಮ್ಮ ವೈಪಲ್ಯವು ರಾಮ ಲಕ್ಷ್ಮಣ ಸುಗ್ರೀವರಿಗೆ ಕೋಪ ತರುವದು, ನಮಗೆ ಉಳಿವು ಇಲ್ಲ” ಎಂದು ತನ್ನ ಅಳಲು ತೊಡಿಕೊಂಡನು. ಪಕ್ಷಿರಾಜನವಂಶಸ್ಥರು ತಾವು ಎಂದು ಅಂಗದನು ಹೇಳುತ ತಾವು ರಾಮನಿಗೆ ಸಹಾಯಮಾಡಲು ಸೀತೆಯನ್ನು ಹುಡುಕುವದಕ್ಕಾಗಿ ಅಲ್ಲಿಗೆ ಬಂದದ್ದು ಮತ್ತು ತಮ್ಮ ಕಾರ್ಯದಲ್ಲಿ ವಿಪಲಗೊಂಡು ಆಮರಣ ಉಪವಾಸ ಕುಳಿತಿದ್ದು ತಮ್ಮನ್ನು ಬೇಗ ಸಾಯಿಸುವಂತೆ ಕೋರಿದ ಪ್ರಸಂಗ ಹಾಗು ಸಂಪತಿಗೆ ರಾವಣ-ಜಟಾಯು ಯದ್ಧದಲ್ಲಿ ಜಟಾಯು ಮರಣ ಪ್ರಸಂಗಗಳನ್ನು ವಿವರಿಸಿರುವರು ಸಂದರ್ಭದಲ್ಲಿ ಆದಿಕವಿ ವಾಲ್ಮೀಕಿಯು ಅಂಗದನ ಹತಾಶೆ ಮನೋಸ್ಥಿತಿಯನ್ನು ವಿವರಿಸಿರುವರು.
ಡಾ. ಅರ್ಜುನ ಯ. ಪಂಗಣ್ಣವರ ವಾಲ್ಮೀಕಿ ಸಾಹಿತ್ಯ ಚಿಂತಕ

ವಾನರರನು ತಿನ್ನಲು ಬಂದ ಸಂಪತಿ, ತಿಳಿದುI