
ಕೇಳಿ ವಾನರರ ಕಣ್ಣೀರಿನ ಕಥೆI
ಕರುಣೆಯಿಂದ ನುಡಿಯಿತು ಸಂಪತಿ;II
“ಓ ವಾನರರೇ, ಯುದ್ಧದಲಿ ಬಲಶಾಲಿ ರಾವಣನI
ನೆಲಕ್ಕುರುಳಿದ ಜಟಾಯು ನನ್ನ ಕಿರಿಯ ಸಹೋದರ; II
ತಮ್ಮನ ಹತ್ಯೆಗೆ ಪ್ರತಿಕಾರ ನೀಡುವ ಸಾಮರ್ಥ್ಯ ನನ್ನಲಿಲ್ಲ,
ವೃದ್ಧನಾಗಿರುವೆ ವ ಪಕ್ಕಹೀನನಾಗಿರುವೆ ನಾನಿಲ್ಲಿ; II
ವೃತ್ರನೆಂಬ ರಾಕ್ಷಸನನು ಹತ್ಯೆಗೈಯಲು ನಾನು
ಜಟಾಯು ಬೆನ್ನಟ್ಟಿ ಹೋದೆವು ದೂರದ ವರೆಗೆ; II
ಬೆನ್ನಟ್ಟಿದ್ದೆವು ಮಧ್ಯಾಹ್ನದ ಸುಡು ಬಿಸಿಲಿನಿಂದ ಜಟಾಯುನ
ರಕ್ಷಿಸಲು ವಿಸ್ತರಿಸಿದೆ ನನ್ನ ಪಕ್ಕಗಳನು ನೀಡಲು ನೆರಳು; II
ಓ ವಾನರಾ, ಸುಡುಬಿಸಿಲಿಗೆ ಹೀನವಾದವು ನನ್ನ ಪಕ್ಕಗಳುI
ವಿಂಧ್ಯಪರ್ವತದ್ಮೇಲೆ ಬಿದ್ದು ಅಸಹಾಯಕನಾಗಿರುವೆ; II
ಜಟಾಯು ಬದುಕಿದ ಇಲ್ಲವೆ ಸತ್ತ ಸುದ್ಧಿತಿಳಿಯಲೂ I
ಅಸಹಾಯಕನಾಗಿರುವೆ ಇಲ್ಲಿ”; ಕೇಳಿ ಸಂಪತಿಯ II
ನುಡಿಗೆ ಉತ್ತರಿಸಿದ ಅಂಗದ: “ನೀನು ಜಟಾಯು ಸಹೋದರ ನಾಗಿದ್ದರೆ,I
ಜಟಾಯುವಿನ ಬಗ್ಗೆ ನಾನಾಡಿದನು ಕೇಳಿದ್ದರೆ, II
ರಾವಣನ ಬಗ್ಗೆ ಗೊತ್ತಿದ್ದರೆ,ರಾವಣನ ತಾಣ ಗೊತ್ತಿದ್ದರೆI
ದಯವಿಟ್ಟು ತಿಳಿಸಿ, ನಾವು ಹುಡುಕುವೆವು ರಾವಣನ”;II
ಕೇಳಿ ಅಂಗದನ ನುಡಿ ವಾನರರಿಗೆ ಸಂತೋಷ ನೀಡುವI
ಸುದ್ಧಿ ತಿಳಿಸಲು ಸಂಪತಿ ನುಡಿದ: II
“ನಾನೊಬ್ಬ ಪಕ್ಕಹೀನ ಅಸಹಾಯಕ ಶೂರ ಆದರೂ I
ಸಹಾಯಕ್ಕಾಗಿ ರಾಮನಿಗೆ ನುಡಿ-ಸೇವೆ ಸಲ್ಲಿಸುವೆ; II
ರಾಮ ವ ಜಟಾಯುವಿನ ಶತ್ರು ನನ್ನ ಶತ್ರು I
ಅಸಹಾಯನಾಗಿರುವೆ ನಾನು ವ ನನ್ನ ಶೌರ್ಯ; ನೋಡಿರುವೆ ರಾವಣ II
ಹೊತ್ತೋಯ್ಯುವದು ಯುವಸ್ತ್ರೀಯನ, ಧರಿಸಿದ I
ಆಭರಣಗಳಿಂದ ರಾಜಕುಮಾರಿಯಂತೆ ಕಂಡಳು; II
ರಾಮಾ, ರಾಮಾ, ಲಕ್ಷ್ಮಣಾ ಎಂದು ಕರೆಯುತಿದ್ದಳುI
ತನ್ನಾಭರಣಗಳನು ಭೂಮಿಗೆ ಎಸೆಯುತ ಸಾಗಿದ್ದಳು; II
ರಾಮಣನ ಹಿಡಿತದಿಂದ ಬಿಡಿಕೊಳ್ಳುತಿದ್ದಳುI
ಅಂಗಾಗಳನ್ನು ತನ್ನ, ಅಸಹಾಯಕ ಸ್ತ್ರೀ; II
ಕಪ್ಪು-ಪರ್ವತದ್ಮೇಲೆ ಸೂರ್ಯಕಿರಣ ಅಪ್ಪಳಿಸಿದಂತೆ,I
ಕಪ್ಪು-ಸಮುದ್ರದ್ಮೇಲೆ ಮಿಂಚು ಅಪ್ಪಳಿಸಿದಂತೆ, II
ಅಪ್ಪಳಿಸುತಿತ್ತು ಅವಳ ರೇಷ್ಮೆಸೀರೆ ಸೆರಗು ಪದೆ ಪದೆI
ಕಪ್ಪು-ದಿಮ್ಮೆಯಂತಹ ರಾಕ್ಷಸನ ಮೇಲೆ; II
ರಾಮನ ಹೆಸರು ಕರೆಯುವ ಸ್ತ್ರೀಯು ಸೀತೆಯೇ,I
ನನಗೆ ಗೊತ್ತು ಆ ರಾಕ್ಷನ ತಾಣ, ಹೇಳುವೆ ಕೇಳು: II
ಕಿಷ್ಕಿಂಧಕಾಂಡ ರಾಮಾಯಣ
ಸಂಪತಿಯಿಂದ ಸೀತೆ ಸುಳಿವು ವಾನರರು ತಿಳಿದ ಪ್ರಸಂಗವನ್ನು ಆದಿಕವಿ ವಾಲ್ಮೀಕಿಯು ವಿವರಿಸಿರುವರು, ಅದರಲ್ಲಿಯ ಮುಖ್ಯ ಅಂಶಗಳು (1) ಸಂಪತಿಯು ವಾನರರಿಗೆ ತನ್ನ ಅಸಹಾಯಕತೆಯನ್ನು ತಿಳಿಸಿದನು: ವಾನರರ ಕಣ್ಣೀರಿನ ಕಥೆಯನ್ನು ತಿಳಿದು ಸಂಪತಿಯು ಕರುಣೆಯಿಂದ ವಾನರರಿಗೆ ಯುದ್ಧದಲ್ಲಿ ಬಲಶಾಲಿ ರಾವಣನನ್ನು ನೆಲಕ್ಕುರುಳಿದ ಜಟಾಯು ತನ್ನ ಕಿರಿಯ ಸಹೋದರನೆಂದು ಪರಿಚಯ ಮಾಡಿಕೊಂಡನು ಆದರೆ ಈಗ ತಮ್ಮನ ಹತ್ಯೆಗೆ ಪ್ರತಿಕಾರ ನೀಡುವ ಸಾಮರ್ಥ್ಯ ತನ್ನಲಿಲ್ಲ, ತಾನು ವೃದ್ಧನಾಗಿರುವೆ ಮತ್ತು ಪಕ್ಕಹೀನನಾಗಿರುವೆನು ಎಂದು ತನ್ನ ಅಸಹಾಯಕತೆಯನ್ನು ತಿಳಿಸಿದನು, (2) ಸಂಪತಿಯ ಅಸಹಾಯಕತೆಗೆ ಕಾರಣ: ವೃತ್ರನೆಂಬ ರಾಕ್ಷಸನನ್ನು ಹತ್ಯೆಗೈಯಲು ತಾನು ಮತ್ತು ಜಟಾಯು ಬೆನ್ನಟ್ಟಿ ದೂರದವರೆಗೆ ಹೋದೆವು; ಮಧ್ಯಾಹ್ನದ ಸುಡು ಬಿಸಿಲಿನಿಂದ ಜಟಾಯುನನ್ನು ರಕ್ಷಿಸಲು ನೆರಳು ನಿಡುವದಕ್ಕಾಗಿ ತಾನು ತನ್ನ ಪಕ್ಕಗಳನು ವಿಸ್ತರಿಸಿದೆನು, ಸುಡುಬಿಸಿಗೆ ಕಮರಿ ತನ್ನ ಪಕ್ಕಗಳು ಹೀನವಾದವು, ತಾನು ವಿಂಧ್ಯಪರ್ವತದ್ಮೇಲೆ ಬಿದ್ದು ಅಲ್ಲಿ ಅಸಹಾಯಕನಾಗಿರುವೆನು ಅದರಂತೆ ಜಟಾಯು ಬದುಕಿದ ಇಲ್ಲವೆ ಸತ್ತ ಎಂಬ ಸುದ್ಧಿತಿಳಿಯಲೂ ಅಲ್ಲಿ ಅಸಹಾಯಕನಾಗಿರದ್ದ ಅಸಹಾಯಕತೆಯ ಘಟನೆಯನ್ನು ಸಂಪತಿಯು ವಾನರ ವೀರರಿಗೆ ಹೇಳಿದನು;(3) ಸಂಪತಿಯಲ್ಲಿ ಅಂಗದನ ಕೋರೀಕೆ: ಸಂಪತಿಗೆ ಅಂಗದನು ತಾನು ಜಟಾಯುವಿನ ಸಹೋದರನಾಗಿದ್ದರೆ, ಜಟಾಯುವಿನ ಬಗ್ಗೆ ತಾನು ಆಡಿದನು ಕೇಳಿದ್ದರೆ, ರಾವಣನ ಬಗ್ಗೆ ಗೊತ್ತಿದ್ದರೆ, ರಾವಣನ ತಾಣ ಗೊತ್ತಿದ್ದರೆ ದಯವಿಟ್ಟು ತಿಳಿಸು ಎಂದು ಕೋರಿದನು, (4) ಸೀತೆಯ ಸುಳಿವು ನೀಡಿದ: ಅಂಗದನ ಕೋರಿಕೆ ಮಾತುಗಳನ್ನು ಕೇಳಿದ ಸಂಪತಿಯು ವಾನರರಿಗೆ ಸಂತೋಷ ನೀಡುವ ಸುದ್ಧಿ ತಿಳಿಸಲು ಹೀಗೆ ಹೇಳಿದನು “ನಾನೊಬ್ಬ ಪಕ್ಕಹೀನ ಅಸಹಾಯಕ ಶೂರ ಆದರೂ ಸಹಾಯಕ್ಕಾಗಿ ರಾಮನಿಗೆ ನುಡಿ-ಸೇವೆ ಸಲ್ಲಿಸುವೆನು; ರಾಮ ಮತ್ತು ಜಟಾಯುವಿನ ಶತ್ರುವು ನನ್ನ ಶತ್ರು ಆದರೆ ನಾನು ಮತ್ತು ನನ್ನ ಶೌರ್ಯ ಅಸಹಾಯನಾಗಿರುವೆವು; ಧರಿಸಿದ ಆಭರಣಗಳಿಂದ ರಾಜಕುಮಾರಿಯಂತೆ ಕಂಡ ಯುವಸ್ತ್ರೀಯನ್ನು ರಾವಣನು ಹೊತ್ತೋಯ್ಯುವದನ್ನು ನಾನು ನೋಡಿರುವೆನು, ಅವಳು ರಾಮಾ, ರಾಮಾ, ಲಕ್ಷ್ಮಣಾ ಎಂದು ಕೂಗಿ ಕರೆಯುತಿದ್ದಳು ಹಾಗು ತನ್ನಾಭರಣಗಳನು ಭೂಮಿಗೆ ಎಸೆಯುತ ಸಾಗಿದ್ದಳು; ರಾಮಣನ ಹಿಡಿತದಿಂದ ತನ್ನ ಅಂಗಾಗಳನ್ನು ಬಿಡಿಕೊಳ್ಳುತಿದ್ದಳು, ಆ ಅಸಹಾಯಕ ಸ್ತ್ರೀ; ಕಪ್ಪು-ಪರ್ವತದ್ಮೇಲೆ ಸೂರ್ಯಕಿರಣ ಅಪ್ಪಳಿಸಿದಂತೆ, ಕಪ್ಪು-ಸಮುದ್ರದ್ಮೇಲೆ ಮಿಂಚು ಅಪ್ಪಳಿಸಿದಂತೆ, ಅವಳ ರೇಷ್ಮೆಸೀರೆ ಸೆರಗು ಪದೇ ಪದೇ ಕಪ್ಪು-ದಿಮ್ಮೆಯಂತಹ ರಾಕ್ಷಸನ ಮೈಮೇಲೆ ಅಪ್ಪಳಿಸುತಿತ್ತು; ರಾಮನ ಹೆಸರು ಕರೆಯುವ ಆ ಸ್ತ್ರೀಯು ಸೀತೆಯೇ ಆಗಿರಬೇಕು; ನನಗೆ ಗೊತ್ತು ಆ ರಾಕ್ಷನ ತಾಣ.” ಈ ಸಂದರ್ಭದಲ್ಲಿ ಆದಿಕವಿ ವಾಲ್ಮೀಕಿಯು ಸಂಪತಿ ಮೂಲಕ ಸೀತೆಯು ರಾವಣನ ಲಂಕೆಯಲಿದ್ದ ಸುಳಿವು ನೀಡಿದನ್ನು ವಿವರಿಸುವರು.
-ಡಾ. ಅರ್ಜುನ ಯ. ಪಂಗಣ್ಣವರ ವಾಲ್ಮೀಕಿ ಸಾಹಿತ್ಯ ಚಿಂತಕ
