
ಕುಬೇರನ ಸಹೋದರ ವಿಶ್ರವಸನ ಮಗ ರಾವಣ I
ಲಂಕಾನಗರ ರಾಜ್ಯದ ಮಹಾಪರಾಕ್ರಮಿ ರಾಜಾ ರಾವಣ; II
ಮಹಾಸಾಗರ ಮಧ್ಯೆ ನೂರು ಯೋಜನೆ ದೂರದಲಿI
ಐಶ್ವರ್ಯ ಭರಿತ ಲಂಕಾದ್ವೀಪವಿದೆ, ವಿಶ್ವಕರ್ಮ ನಿರ್ಮಿಸಿದ; II
ಚಿನ್ನ ಬೆಳ್ಳಿ ರತ್ನಾಲಂಕೃತ ದ್ವಾರಗಳು, ಬಹುಮಹಡಿ ಕಟ್ಟಡಗಳು,I
ಸುವ್ಯವಸ್ಥಿತ ಭವ್ಯಪ್ರಾಂಗಣ, ಹೊಂಗಿರಣದಂತೆ II
ಹೊಳೆವವು; ಇದ್ದಿಹಳು ರಾಕ್ಷಸರ ಮಧ್ಯೆ ರಾವಣನ ಅರಮನೆI
ಯಲಿ ಜನಕಪುತ್ರಿ ಸೀತೆ, ರೇಶ್ಮೆಸೀರೆ ಯುವಸ್ತ್ರೀ; II
ಓ ವಾನರರೇ, ಹೊರಡಿ ಕಡಲತೀರ ಬಳಿ ಅದರ ದಕ್ಷಿಣಕ್ಕೆI
ನೂರುಯೋಜನೆ ಅಂತರದಲಿದೆ ದ್ವೀಪ ಕಡಲು, II
ಅದೇ ಲಂಕಾ-ಉತ್ತರ ಕಡಲುತೀರ, ಕಾಣುವದು ರಾವಣನI
ಲಂಕಾರಾಜ್ಯ, ವಿಜಯ ಸಾಧಿಸಲು ದಂಡೆತ್ತಿ ಹೋಗಿ; II
ದಂಡೆತ್ತಿಹೋಗಿ ಸೀತೆಯಿದ್ದಲಿಗೆ ನೀವು, ಸೀತೆಯೊಂದಿಗೆI
ಮರಳುವಿರೆಂದ ಹೇಳುತಿದೆ ನನ್ನ ದಿವ್ಯಜ್ಞಾನ; II
ಉಡಾಣ ಪ್ರಕಾರಗಳ: ಹಾಡುವ ವ ಧಾನ್ಯಗಳ ತಿನ್ನುವI
ಗುಬ್ಬಿಯಂತಹ ಕುಲಿಂಗ ಪಕ್ಷಿಗಳ ಉಡಾಣ, ಮೊದಲನೆ II
ಕಾಗೆ ಪಾರಿವಾಳದಂತೆ ಎಂಜಿಲ ತಿನ್ನುವ,|ಹಣ್ಣು ಕಾಯಿ
ತಿನ್ನುವ ಗಿಳಿಯಂತಹ ಪಕ್ಷಿಗಳ ಉಡಾಣ, ದ್ವಿತೀಯ II
ಕ್ರೌಂಚ,ಹದ್ದುಗಳಂತ ಪಕ್ಷಿಗಳ ಉಡಾಣ, ತೃತೀಯ,I
ಗಿಡಗ ಪಕ್ಷಿಗಳ ಉಡಾಣ, ಚತುರ್ಥ; II
ಗರುಡ ಉಡಾಣ ಪಂಚಮ, ಜನ್ಮದಿ ಸುಂದರI
ಸಾಹಸ ಯುವ ಹಂಸ ಪಕ್ಷಿ ಉಡಾಣ,ಷಷ್ಠಿ;II
ಆದರೆ ವನಿತಾ ಪುತ್ರರಾದ ಗರುಡ ವ ಅನೂರುI
ಪಕ್ಷಿಗಳಲಿ ಶ್ರೇಷ್ಠರು, ಉನ್ನತ ಉಡಾಣ; II
ಆಕಾಶದೆತ್ತರಕ್ಕೆ ಹಾರುವ,ಗುರಿಯತ್ತ ವೇಗದಿ ನುಗ್ಗುI
ಗರುಡ ಪಕ್ಷಿಯ ಉಡಾಣ ಸರ್ವಶ್ರೇಷ್ಠ ; II
ಗುರುಡ ಪಕ್ಷಿ ಕಣ್ಣು ತೀಕ್ಷಣ,ನಾ ನೋಡಿರುವೆI
ಸೀತೆಯನ ಹೊತ್ತೋಯ್ಯುವ ರಾವಣನ; II
ಓ ವಾನರರೇ, ಆಹಾರ-ಬಲಿ ಹುಡುಕಲುI
ನೂರು ಯೋಜನಾಚೆಯದೂ ನಮಗೆ ಕಾಣುವದು; II
ತನ್ನ ಪಾದದಡಿ ಆಹಾರ ಹುಡುಕುವದು ಕಾಲುಗಳಿಂದI
ಕಾದಾಡುವ ಕೋಳಿ, ಬಹು ದೂರದಿ ಆಹಾರII
ಹುಡುಕುವ ಸಾಮರ್ಥ್ಯ ಗರುಡ ಪಕ್ಷಿದು; I
ಈ ಉಪ್ಪು-ಸಮುದ್ರದಾಚೆ ಜಿಗಿದು ಸೀತೆಯನ ಹುಡುಕಿ, II
ಕಾರ್ಯ-ಸಫಲತೆ ಹುರುಪಿನಲಿ ಹಿಂದಿರುಗಿ ಕಿಷ್ಕಿಂಧಕ್ಕೆ; I
ಮಾಡಲು ಸಹೋದರ ಜಟಾಯುವಿಗೆ ಜಲರ್ಪಣೆ ||
ಸಮುದ್ರತೀರ ಬಳಿ ನನ್ನನು ಇಳಿಸಿರಿ”;I
ಜಟಾಯುವಿಗೆ ಜಲರ್ಪಣೆ ಕಾರ್ಯಕ್ಕಾಗಿ, ಸಂಪತಿಯನು ಸಮುದ್ರII
ಬಳಿಯೋಯ್ದು ಕಾರ್ಯನಂತರ ಪರ್ವತಕ್ಕೆ ತಂದರು ವಾನರರು; I
ಹರುಷಪಟ್ಟರು ಸೀತೆ ಸುಳಿವು ತಿಳಿದು.II
ಕಿಷ್ಕಿಂಧಕಾಂಡ ರಾಮಾಯಣ
ಸಂಪತಿಯು ಅಂಗದನಿಗೆ ಸೀತೆಯನ್ನು ರಾವಣನು ಲಂಕೆಗೆ ಒಯ್ದ ಸಂಗತಿ ಹೇಳಿದನ್ನು ಆದಿಕವಿ ವಾಲ್ಮೀಕಿಯು ವಿವರಿಸಿರುವರು, ಅದರಲ್ಲಿಯ ಮುಖ್ಯ ಅಂಶಗಳು (1) ಲಂಕೆಯ ವಿವರ: ಸಂಪತಿಯು ಅಂಗದನಿಗೆ ಲಂಕೆಯ ಬಗ್ಗೆ ಹೀಗೆ ವಿವರಿಸಿದನು “ರಾವಣನು ಕುಬೇರನ ಸಹೋದರ ಮತ್ತು ವಿಶ್ರವಸನ ಮಗ ಹಾಗು ಲಂಕಾನಗರ ರಾಜ್ಯದ ಮಹಾಪರಾಕ್ರಮಿ ರಾಜಾನು; ಇಲ್ಲಿಂದ ನೂರು ಯೋಜನೆ ದೂರದಲ್ಲಿ ಮಹಾಸಾಗರ ಮಧ್ಯೆ ಐಶ್ವರ್ಯಭರಿತ ಲಂಕಾದ್ವೀಪವಿದೆ, ಲಂಕಾನಗರಿಯನ್ನು ವಿಶ್ವಕರ್ಮ ನಿರ್ಮಿಸಿದನು; ಆ ಲಂಕಾನಗರದ ಚಿನ್ನ ಬೆಳ್ಳಿ ರತ್ನಾಲಂಕೃತ ದ್ವಾರಗಳು,ಬಹುಮಹಡಿ ಕಟ್ಟಡಗಳು, ಸುವ್ಯವಸ್ಥಿತ ಭವ್ಯಪ್ರಾಂಗಣ,ಹೊಂಗಿರಣದಂತೆ ಹೊಳೆವವು; ರೇಶ್ಮೆಸೀರೆಯ ಆ ಯುವಸ್ತ್ರೀ, ಜನಕಪುತ್ರಿ ಸೀತೆಯು ರಾಕ್ಷಸರ ಮಧ್ಯೆ ರಾವಣನ ಅರಮನೆಯಲ್ಲಿ ಇದ್ದಿರುವಳು; ಓ ವಾನರರೇ, ಮೊದಲು ಕಡಲತೀರ ಬಳಿ ಹೊರಡಿರಿ ಅದರ ದಕ್ಷಿಣಕ್ಕೆ ನೂರುಯೋಜನೆ ಅಂತರದಲ್ಲಿ ದ್ವೀಪ ಕಡಲು ಇದೆ, ಅದೇ ಲಂಕಾನಗರ-ಉತ್ತರ ಕಡಲುತೀರ, ಅಲ್ಲಿಂದ ರಾವಣನ ಲಂಕಾರಾಜ್ಯ ಕಾಣುವದು, ನೀವು ವಿಜಯ ಸಾಧಿಸಲು ಅಲ್ಲಿಗೆ ದಂಡೆತ್ತಿ ಹೋಗಿರಿ ಹಾಗು ನೀವು ಗೆದ್ದು ಸೀತೆಯೊಂದಿಗೆ ಮರಳುವಿರೆಂದು ನನ್ನ ದಿವ್ಯಜ್ಞಾನ ಹೇಳುತ್ತಿದೆ” ಎಂದು ಸೀತೆಯ ಮತ್ತು ಗೆಲವಿನ ಸುಳಿವು ನೀಡಿತು, (2) ಹಾರುವ/ಉಡಾಣ ಪ್ರಕಾರಗಳು: ಸಂಪತಿಯು ವಾನರರಿಗೆ ಹಕ್ಕಿಗಳ ಉಡಾಣ ಪ್ರಕಾರಗಳನ್ನು ಹೀಗೆ ವಿವರಿಸಿತು ” ಹಾಡುವ ವ ಧಾನ್ಯಗಳ ತಿನ್ನುವ ಗುಬ್ಬಿಯಂತಹ ಉಡಾಣ, ಕುಲಿಂಗ ಪಕ್ಷಿಗಳ ಉಡಾಣಗಳು ಮೊದಲನೇ ಪ್ರಕಾರದ ಉಡಾಣಗಳು; ಕಾಗೆ ಪಾರಿವಾಳದಂತೆ ಎಂಜಿಲ ತಿನ್ನುವ, ಹಣ್ಣು ಕಾಯಿ ತಿನ್ನುವ ಗಿಳಿಯಂತಹ ಪಕ್ಷಿಗಳ ಉಡಾಣಗಳು ದ್ವಿತೀಯ ಪ್ರಕಾರದ ಉಡಾಣಗಳು; ಕ್ರೌಂಚ, ಹದ್ದುಗಳಂತ ಪಕ್ಷಿಗಳ ಉಡಾಣ ತೃತೀಯ ಪ್ರಕಾರದ ಉಡಾಣಗಳು; ಗಿಡಗ ಪಕ್ಷಿಗಳ ಉಡಾಣವು ಚತುರ್ಥ ಪ್ರಕಾರದ ಉಡಾಣಗಳು; ಗರುಡ ಉಡಾಣವು ಐದನೇ ಪ್ರಕಾರದು; ಜನ್ಮದಿಂದ ಸುಂದರ ಸಾಹಸ ಯುವ ಹಂಸ ಪಕ್ಷಿ ಉಡಾಣವು ಆರನೇ ಪ್ರಕಾರದು ಆದರೆ ವನಿತಾ ಪುತ್ರರಾದ ಗರುಡ ಮತ್ತು ಅನೂರು (ವಿಷ್ಣುವಿನ ವಾಹನ-ಗರುಡ) ವರು ಪಕ್ಷಿಗಳಲ್ಲಿ ಶ್ರೇಷ್ಠರು ಹಾಗು ಅವರ ಉನ್ನತ ಉಡಾಣ ಸರ್ವಶ್ರೇಷ್ಠ : ಆಕಾಶದೆತ್ತರಕ್ಕೆ ಹಾರುವ, ಗುರಿಯತ್ತ ವೇಗದಿಂದ ನುಗ್ಗುವ ಗರುಡ ಪಕ್ಷಿಯ ಉಡಾಣವು ಸರ್ವಶ್ರೇಷ್ಠ ಮತ್ತು ಅಂತಿಮ ಪ್ರಕಾರದು” ಎಂದು ಪಕ್ಷಿ ಮತ್ತು ಉಡಾಣಗಳ ಪ್ರಕಾರಗಳನ್ನು ತಿಳಿಸಿತು. ತದ್ಮೂಲಕ ಆದಿ ಪಕ್ಷಿಶಾಸ್ತ್ರಜ್ಞ ವಾಲ್ಮೀಕಿಯು ಹಾರಾಟದ ಪ್ರಕಾರಗಳ ಮೂಲಕ ಪಕ್ಷಿಗಳ ಪ್ರಭೇದಗಳನ್ನು ಗುರುತಿಸುವ ವೈಜ್ಞಾನಿಕ ಮಾನದಂಡವನ್ನು ಮಂಡಿಸಿರುವರು, (3) ಗರುಡ ಪಕ್ಷಿಯ ವಿಶೇಷತೆ: ಸಂಪತಿಯು ವಾನರರಿಗೆ ಗರುಡ ಪಕ್ಷಿಯ ವಿಶೇಷತೆ ಬಗ್ಗೆ ಹೀಗೆ ತಿಳಿಸಿತು “ಗುರುಡ ಪಕ್ಷಿಯ ಕಣ್ಣು ಬಹು ತೀಕ್ಷಣ, ನಾನು ಸೀತೆಯನ್ನು ಹೊತ್ತೋಯ್ಯುವ ರಾವಣನನ್ನು ಇಲ್ಲಿಂದಲೇ ನೋಡಿರುವೆನು; ಓ ವಾನರರೇ, ಆಹಾರ-ಬಲಿ ಹುಡುಕಲು ನೂರು ಯೋಜನಾಚೆಯದೂ ನಮಗೆ ಕಾಣುವದು; ತನ್ನ ಪಾದದಡಿ ಆಹಾರ ಹುಡುಕುವದು ಕಾಲುಗಳಿಂದ ಕಾದಾಡುವ ಕೋಳಿಗಳು ಆದರೆ ಬಹು ದೂರದಿಂದ ಆಹಾರ ಹುಡುಕುವ ಸಾಮರ್ಥ್ಯ ಗರುಡ ಪಕ್ಷಿಯದು; ನೀವು ಈ ಉಪ್ಪು-ಸಮುದ್ರದಾಚೆ ಜಿಗಿದು ಸೀತೆಯನ್ನು ಹುಡುಕಿ, ಬಂದ ಕಾರ್ಯ-ಸಫಲತೆ ಹುರುಪಿನಲ್ಲಿ ಕಿಷ್ಕಿಂಧಕ್ಕೆ ಹಿಂದಿರುಗಿರಿ” ಗರುಡ ಪಕ್ಷಿಯ ದೃಷ್ಠ-ಸಾಮರ್ಥ್ಯದ ಬಗ್ಗೆ ಸಂಪತಿ ತಿಳಿಸಿದರ ಮೂಲಕ ಆದಿಜೀವಶಾಸ್ತ್ರಜ್ಞ ವಾಲ್ಮೀಕಿಯು ಕೋಲಿ, ಗರುಡಗಳಂತಹ ಪಕ್ಷಿಗಳ ಜೀವನ ಚಕ್ರ, ಚಟುವಟಿಕೆಗಳು ಅತಿ ಹತ್ತಿರ ದಿಂದ ಅಧ್ಯಯನ ಮಾಡಿದನ್ನು ಮಂಡಿಸಿರುವರು, (4) ಸಂಪತಿ ಕೋರಿಕೆ: ಸಂಪತಿಯು ವಾನರರಿಗೆ ತಾನು ಸಹೋದರ ಜಟಾಯುವಿಗೆ ಜಲರ್ಪಣೆ ಮಾಡಲು ತನ್ನನು ಸಮುದ್ರತೀರ ಬಳಿ ಇಳಿಸಲು ಕೋರಿತು, ಅದರಂತೆ ವಾನರರು ಸಂಪತಿಯನು ಜಟಾಯುವಿಗೆ ಜಲರ್ಪಣೆ ಕಾರ್ಯಕ್ಕಾಗಿ ಸಮುದ್ರ ಬಳಿಯೋಯ್ದು ಕಾರ್ಯ ಮುಗಿದ ನಂತರ ಪುನಃ ಪರ್ವತಕ್ಕೆ ತಂದರು ಹಾಗು ಸಂಪತಿಯಿಂದ ಸೀತೆ ಸುಳಿವು ತಿಳಿದು ವಾನರರು ಹರುಷಪಟ್ಟ ಸನ್ನಿವೇಶವನ್ನು ಆದಿಕವಿ ವಾಲ್ಮೀಕಿಯು ವಿವರಿಸುವ ಜೊತೆ (ಅ) ಪಕ್ಷಿಗಳ ವರ್ಗಿಕರಣ ಮತ್ತು ಅವುಗಳ ಹಾರುವ ಸಾಮರ್ಥ್ಯ, (ಬ) ಗರುಡ ಪಕ್ಷಿ ಬಹುದೂರದ ವರೆಗೆ ನೋಡುವ ದೃಷ್ಠಿ ಸಾಮರ್ಥ್ಯಗಳ ವಿವರಣೆ ನೀಡುವ ಮೂಲಕ ತಮ್ಮ ಪಕ್ಷಿಶಾಸ್ತ್ರದ ಜ್ಞಾನದ ಹರವನ್ನು ಹಂಚಿಕೊಂಡಿರುವರು.
-ಡಾ. ಅರ್ಜುನ ಯ. ಪಂಗಣ್ಣವರ ವಾಲ್ಮೀಕಿ ಸಾಹಿತ್ಯ ಚಿಂತಕ
