
ನಿಮಗಾಗಿ ಕಾಯುತಿಹೆನು ಮುನಿ ಮಾತಿನಂತೆ,I
ಹೇಳುತ ಸಂಪತಿ ಮುದುವರೆಸಿದ: II
“ರಾವಣನ ವಿಷಯ ತಿಳಿದು ಪುತ್ರನಿಂದI
ಏಕೆ ರಕ್ಷಿಸಲಿಲ್ಲಾ ಸೀತೆಯನು ಎಂದು ದೋಷಿಸಿದೆ ಪುತ್ರನ; II
ಪ್ರತ್ಯಕ್ಷವಾಗಿ ರಾಮನಿಗೆ ಸಹಾಯ ಮಾಡದಿದ್ದರೂ ನಾ,I
ಸೀತೆ ಸುಳಿವು ನೀಡಿ ಪರೋಕ್ಷ ಸಹಾಯ ಮಾಡಿದೆ ನಾ; II
ನನಗೆ ಸಮಾಧಾನ ತಂದಿತೀ ಕ್ಷಣ”,| ಸಂಪತಿ ವಾನರರಿಗೆ ಸೀತೆ ಸುಳಿವು ತಿಳಿಸಿದ; ಸೀತೆಗಾಥೆ ಹೇಳುತಿದ್ದಂತೆ II
ಚಿಗುರಿದವು ಹೊಸ ಪಕ್ಕಗಳು ಸಂಪತಿಯ,I
ಹರುಷದಿ ಸಂಪತಿ ವಾನರರಿಗೆ ನುಡಿದ: II
“ಯಾವ ಪಕ್ಕ, ಶೌರ್ಯ ಸಾಹಸ ಬಲಗಳು ಹೀನವಾಗಿದ್ದವೋ,I
ಮರಳಿವೆ ನನಗಿಂದು ನಿಮ್ಮ ದರ್ಶನದಿಂದ; II
ಯಶ್ವಯಾಗಲಿ ಸೀತೆ ಹುಡುಕುವ ಕಾರ್ಯ ನಿಮಗೆ”I
ಹಾರೈಕೆ ಕೋರುತ ಸಂಪತಿ ಹಾರಿ ಹೋದನು ಆಕಾಶದತ್ತ; II
ದಕ್ಷಿಣದಲಿ ಸೀತೆ-ಶೋಧನೆ ಕಾರ್ಯ ಚಾಲನೆಗೆI
ಮುಹೂರ್ತ ಕಾದರು ವಾನರರು. II
ಕಿಷ್ಕಿಂಧಕಾಂಡ ರಾಮಾಯಣ
ಸಂಪತಿಗೆ ಹೊಸ ಪಕ್ಕ ಬೆಳೆದ ಮತ್ತು ನಿಶಾಕರ ಮುನಿ ಮಾತಿನಂತೆ ಸಂಪತಿ ವಾನರಿಗಾಗಾಗಿ ಕಾಯುತ್ತಿರುವೆ ಸನ್ನಿವೇಶವನ್ನು ಆದಿಕವಿ ವಾಲ್ಮೀಕಿಯು ವಿವರಿಸಿರುವರು (1) ಸಂಪತಿಯು ರಾಮನಿಗೆ ಪರೋಕ್ಷವಾಗಿ ಸಹಾಯ ಮಾಡಿದ ಬಗ್ಗೆ ತೃಪ್ತಿ ಪಟ್ಟನು: ನಾನು ಪುತ್ರನಿಂದ ರಾವಣನ ವಿಷಯ ತಿಳಿದು ಏಕೆ ರಕ್ಷಿಸಲಿಲ್ಲಾ ಸೀತೆಯನು ಎಂದು ತನ್ನ ಮಗನನ್ನು ಸಂಪತಿ ದೋಷಿಸಿದನು; ತಾನು ಪ್ರತ್ಯಕ್ಷವಾಗಿ ರಾಮನಿಗೆ ಸಹಾಯ ಮಾಡದಿದ್ದರೂ ಸೀತೆಯ ಸುಳಿವು ನೀಡುವ ಮೂಲಕ ಪರೋಕ್ಷ ಸಹಾಯ ಮಾಡಿದೆನು ಎಂದು ಸಮಾಧಾನ ಪಟ್ಟನು;(2) ಸಂಪತಿ ತನಗೆ ಹೊಸ ಪಕ್ಕಗಳನ್ನು ಪಡೆದನು: ಸಂಪತಿಯು ವಾನರರಿಗೆ ಸೀತೆಗಾಥೆಯನ್ನು ಹೇಳುತಿದ್ದಂತೆ ಅವನಿಗೆ ಹೊಸ ಪಕ್ಕಗಳು ಚಿಗುರಿದವು, ಅವುಗಳನ್ನು ನೋಡಿ ಸಂಪತಿಯು ಹರುಷದಿಂದ ವಾನರರಿಗೆ “ಯಾವ ಪಕ್ಕ, ಶೌರ್ಯ ಸಾಹಸ ಬಲಗಳು ಹೀನವಾಗಿದ್ದವೋ, ನನಗಿಂದು ನಿಮ್ಮ ದರ್ಶನದಿಂದ ಮರಳಿವೆ ; ಸೀತೆ ಹುಡುಕುವ ಕಾರ್ಯದಲ್ಲಿ ನಿಮಗೆ ಯಶ್ವಯಾಗಲಿ”ಎಂದು ಹಾರೈಕೆ ಕೋರುತ ಸಂಪತಿಯು ಆಕಾಶದತ್ತ ಹಾರಿ ಹೋದನು; ಸೀತೆ ಸುಳಿವು ತಿಳಿದ ವಾನರರು ದಕ್ಷಿಣದಲ್ಲಿ(ಲಂಕಾದಲ್ಲಿ) ಸೀತೆ-ಶೋಧನೆ ಕಾರ್ಯ ಚಾಲನೆಗೆ ಮುಹೂರ್ತ(ಸಮಯಕ್ಕಾಗಿ) ಕಾದರು. ಪ್ರತ್ಯಕ್ಷವಾಗಿ ಸಹಾಯ ಮಾಡದಿದರೂ ಪರೋಕ್ಷವಾಗಿ ಸತ್ಕಾರ್ಯಕ್ಕೆ ಸಹಾಯ ಮಾಡಬೇಕೆಂಬ ನೀತಿಶಾಸ್ತ್ರದ ನಿಯಮವನ್ನು ಆದಿಕವಿ ವಾಲ್ಮೀಕಿ ಯಪ ಈ ಸಂದರ್ಭದಲ್ಲಿ ಮಂಡಿಸಿರುವರು.
ಡಾ. ಅರ್ಜುನ ಯ. ಪಂಗಣ್ಣವರ ವಾಲ್ಮೀಕಿ ಸಾಹಿತ್ಯ ಚಿಂತಕ
