ಸುಂದರಕಾಂಡ ರಾಮಾಯಣ ಭಾಗ-52

By admin


ರಾವಣ ಸೀತೆ ಹುಡುಕಲು ಹೊರಟI
ಗುಪ್ತಚಾರ ಮಾರ್ಗದಿ ಶತ್ರುನಾಶಕ, II
ತಂದೆ ತಾಯಿಗೆ ಕೈಮುಗಿದು,ಮಹೇಂದ್ರಗಿರಿ ಮೇಲೆI
ದಕ್ಷಿಣಮುಖಿಯಾಗಿ ಹಾರಲು ಸಿದ್ಧನಾದ ಹನುಮಾನ,II
ಅಸಾಧ್ಯ ಕರ್ಮ ಸಾಧ್ಯಮಾಡಲು ವಾನರI
ನಿರಾಂತಕವಾಗಿ ತಲೆ-ಎತ್ತಿ ನುಗ್ಗಿದ ಗೂಳಿಯಂತೆ, II
ವೈಡೂರ್ಯವರ್ಣ ಶಾಂತ ಹುಲ್ಲುಗಾವಲದಂತಹI
ದೂರದ ಮಹಾಸಾಗರದತ್ತ ಹಾರಿದ ಮಹಾಬಲಿ, II
ದಕ್ಷಿಣಮುಖದತ್ತ ಸಮುದ್ರ್ಮೇಲೆ ರಾಮ-ಕಾರ್ಯಕ್ಕೆ ಹಾರುವI
ಹನುಮಾನನ ಕಂಡು ಪಟ್ಟರು ಸಂತೋಷ ವಾನರರು, II
ಮಹೇಂದ್ರಗಿರಿ ಬೆವರಿತು ಹನುಮಾನ ನೆಗೆತಕ್ಕೆ,I
ಚಿಮ್ಮುವ ನೀರಿನಂತೆ ಆನೆಸೊಂಡಿಲದಿ,II
ಗಿಡಗ ಬಳ್ಳಿಗಳಿಂದ ಉದರಿದವು ಹೂಗಳುI
ಮಹೇಂದ್ರಗಿರಿಯೇ ಸಜ್ಜಾಯಿತಾ ಹೂಗಳಿಂದ; II
ಹೊರಬಂದವು ಸ್ವಸ್ತಿಕ ಹೆಡೆ ಸರ್ಪಗಳುI
ಕಚ್ಚಿದವು ಬಂಡೆಗಳನು ವಿಷ-ಹಲ್ಲುಗಳಿಂದ, II
ಗುಡುಗಿದ ಶಬ್ದಕ್ಕೆ ರಾಕ್ಷಸರೆಂದು ಗವಿಗಳಿಂದI
ಹೆದರಿ ಹೊರ ಬಂದರು ಧ್ಯಾನಮಗ್ನ ಮುನಿಗಳು,II
ತ್ಯಜಿಸಿ ಆಹಾರ ಚರ್ಮ-ಬಟ್ಟೆ,ಚಿನ್ನದ ಖಡ್ಗ ಪಾತ್ರೆಗಳನ್ನುI
ಹೆದರಿ ಸ್ತ್ರಿಯರೊಂದಿಗೆ ಹೊರಬಂದರ ವಿಧ್ಯಾಧರರು, II
ಕೊರಳಲಿ ಕೆಂಪುಹೂ-ಹಾರ, ಮೈಗೆ ಗಂಧಲೇಪನ ಮತ್ತದಲಿI
ಆಕಾಶ ವೀಕ್ಷಿಸಿದರು ವಿಧ್ಯಾಧರರು, ಕೊರಳತುಂಬ II
ಹಾರ, ಕೈತುಂಬ ಬಳೆ, ಕಾಲಗಳಲ್ಲಿ ತೋಡೆ, ನಗುತ್ತ I
ಆಕಾಶ ನೋಡಿದರು ವಿಧ್ಯಾಧರ-ಸ್ತ್ರೀಯರು ಸಖರೊಂದಿಗೆ, II
“ಪರ್ವತಾಕಾರ ಹನುಮನಿವನು, ಪವನಪುತ್ರ, ದಾಟುತ್ತಿರುವನುI
ಮೊಸಳೆಗಳ ಸಮುದ್ರ”ನೆಂದರು ಮುನಿ, ವಿಧ್ಯಾಧರರು;II
ರಭಸದಿ ಹಾರುವಾಗ ಆಕಾಶದಲಿ ಹನುಮಾನ, I
ಗಿಡಬಳ್ಳಿ ಹೂಗಳು ಕಿತ್ತು ಅವನೊಂದಿಗೆ ನೆಂಟರಂತೆ ಹಾರಿದವು; II
ಹನುಮಜೊತೆ ರಮ್ಯತೆ ರಚಿಸಿದ ಗಿಡಬಳ್ಳಿ ಹೂಗಳು I
ಸಮುದ್ರದಲಿ ಬಿದ್ದು ಮುಳುಗಿದವು ಹೆದರಿ ಮಹೇಂದ್ರನಿಗೆ; II
ಹೂ-ಬಳ್ಳಿ ಗಿಡ ಸುರಿಮಳೆ ಮಧ್ಯೆ ಕಂಡನು ಮಿಂಚುಳಿ ಮಧ್ಯೆ I
ಪರ್ವತದಂತೆ,ಮೋಡಾಕಾರ್ದ ಹನುಮನು, II
ಆಕಾಶದಿಂದ ಸಮುದ್ರಕ್ಕೆ ಉದುರುವ ಗಿಡ ಹೂಗಳುI
ಕಂಡವು ಹನುಮನಿಗೆ ವಿದಾಯ ಹೇಳುವ ಸ್ನೇಹಿತರಂತೆ, II
ಕಂಡವು ಚುಕ್ಕೆಗಳಂತೆ ಬಿದ್ದ ಗಿಡ ಹೂ-ಬಳ್ಳಿಗಳುI
ಶಾಂತ ಸಮುದ್ರದಲಿ ಹರುಷ ಉಣಬಡಿಸುತ, II
ಸುಂದರಕಾಂಡ

ಆದಿಕವಿ ವಾಲ್ಮೀಕಿಯು ಸುಂದರಕಾಂಡದ ಆರಂಭಿಕ ಸರ್ಗದಲ್ಲಿ ಹನುಮಾನನ ನೂರು ಯೋಜನೆ ವಿಶಾಲವಾದ ಸಮುದ್ರದಾಟುವ ಸಾಹಸದ ದೃಶ್ಯವನ್ನು ವಿವರಿಸಿರುವರು; ಈ ವಿವರಣೆಯಲ್ಲಿ ಮುಖ್ಯವಾಗಿ ಕಂಡುಬರುವ ಅಂಶಗಳು (1) ಹನುಮಾನನು ಸಮುದ್ರದಾಟಲು ಆಕಾಶಕ್ಕೆ ಹಾರಿದನು: ರಾವಣ ಸೀತೆಯರನು ಹುಡುಕಲು ಗುಪ್ತಚಾರ ಮಾರ್ಗದಿಂದ ಹೊರಟ ಶತ್ರುನಾಶಕ ಹನುಮಾನನು ತನ್ನ ತಂದೆ ತಾಯಿಗೆ ಕೈಮುಗಿದು, ಹೇಮಗಿರಿ ಮೇಲೆ ದಕ್ಷಿಣಮುಖಿಯಾಗಿ ಹಾರಲು ಸಿದ್ಧನಾದನು; ಅಸಾಧ್ಯ ಕರ್ಮವನ್ನು ಸಾಧ್ಯ ಮಾಡಿ ಸಾಧಿಸಿ ತೋರಿಸಲು ವಾನರಶ್ರೇಷ್ಠ ಹನುಮಾನ ನಿರಾಂತಕವಾಗಿ ತಲೆ-ಎತ್ತಿ ಗೂಳಿಯಂತೆ ಆಕಾಶಕ್ಕೆ ನುಗ್ಗಿದನು; ವೈಡೂರ್ಯವರ್ಣದ ಶಾಂತ ಹುಲ್ಲುಗಾವಲದಂತೆ ಕಾಣುವ ದೂರದ ಮಹಾಸಾಗರದತ್ತ ಮಹಾಬಲಿ ಹನುಮಾನ ಹಾರಿದನು; (2) ಹನುಮಾನನ ಹಾರಲು ಆಕಾಶಕ್ಕೆ ನೆಗೆದ ನೆಗೆತದ ಅಬ್ಬರ: ದಕ್ಷಿಣಮುಖದತ್ತ ಸಮುದ್ರ್ಮೇಲೆ ಸೀತೆಯನು ಹುಡುಕುವ ರಾಮ-ಕಾರ್ಯಕ್ಕೆ ಹಾರುವ ಹನುಮಾನನ ಕಂಡು ವಾನರರು ಸಂತೋಷ ಪಟ್ಟರು; ಹನುಮಾನ ನೆಗೆತದ ಅಬ್ಬರಕ್ಕೆ ಮಹೇಂದ್ರಗಿರಿ ಹೆದರಿ ಆನೆಸೊಂಡಿಲದಿಂದ ಚಿಮ್ಮುವ ನೀರಿನಂತೆ ಬೆವರಿತು, ಪರ್ವತ ಮೇಲಿನ ಗಿಡಗ ಬಳ್ಳಿಗಳಿಂದ ಎಲೆ ಹೂಗಳು ಉದರಿದವು, ಬಿದ್ದ ಹೂಗಳಿಂದ ಮಹೇಂದ್ರಗಿರಿಯೇ ಅಲಂಕಾರಗೊಂಡಂತೆ ಕಂಡಿತು. ಹನುಮಾನ ನೆಗೆತದ ಅಬ್ಬರಕ್ಕೆ ಮಹೇಂದ್ರಗಿರಿಯಿಂದ ಸ್ವಸ್ತಿಕ ಹೆಡೆ ಸರ್ಪಗಳು ಹೊರ ಬಂದವು ಹಾಗು ಸಿಟ್ಟಿನಿಂದ ಬಂಡೆಗಳನು ವಿಷ-ಹಲ್ಲುಗಳಿಂದ ಕಚ್ಚಿದವು; ಗುಡುಗಿದ ಶಬ್ದ ಕೇಳಿ ಧ್ಯಾನಮಗ್ನ ಮುನಿಗಳು ರಾಕ್ಷಸರು ಬಂದರೆಂದು ಭಾವಿಸಿ ಗವಿಗಳಿಂದ ಹೆದರಿ ಹೊರ ಬಂದರು; ಗುಡುಗಿದ ಶಬ್ದ ಕೇಳಿದ ವಿಧ್ಯಾಧರರು ಆಹಾರ ಚರ್ಮ-ಬಟ್ಟೆ, ಚಿನ್ನದ ಖಡ್ಗ ಪಾತ್ರೆಗಳನ್ನು ತೊರೆದು ಹೆದರಿ ಸ್ತ್ರಿಯರೊಂದಿಗೆ ಓಡಿ ಹೊರಬಂದರು, ಕೊರಳಲ್ಲಿ ಕೆಂಪು ಹೂ-ಹಾರ, ಮೈಗೆ ಗಂಧಲೇಪನ ಧರಿಸಿದ ವಿಧ್ಯಾಧರರು ಮಾದಕಮಲಿನಲ್ಲಿ ಮನೆಗಳಿಂದ ಹೊರಬಂದು ಆಕಾಶ ವೀಕ್ಷಿಸಿದರು, ಕೊರಳತುಂಬ ಹಾರ, ಕೈತುಂಬ ಬಳೆ, ಕಾಲಗಳಲ್ಲಿ ತೋಡೆಗಳ ತೊಟ್ಟ ಶೃಂಗಾದಲಿ ವಿಧ್ಯಾಧರ-ಸ್ತ್ರೀಯರು ಸಖರೊಂದಿಗೆ ನಗುತ್ತ ಆಕಾಶದಲಿ ಹಾರುವ ಹನುಮನನ್ನು ನೋಡಿದರು. ಆಕಾಶದಲಿ ಹಾರುವ ಹನುಮಾನನ ಕಂಡು ಮುನಿಗಳು ಮತ್ತು ವಿಧ್ಯಾಧರರು “ ಪರ್ವತಾಕಾರ ಹನುಮನಿವನು, ಪವನಪುತ್ರ, ದಾಟುತ್ತಿರುವನು ಮೊಸಳೆಗಳ ಸಮುದ್ರ”ನೆಂದು ತಮ್ಮೊಳಗೆ ಆಡಿಕೊಂಡರು.
(3) ಹನುಮಾನನ ಹಾರಾಟದ ಅಬ್ಬರ: ಆಕಾಶದಲಿ ಹನುಮಾನ ರಭಸದಿಂದ ಹಾರುವಾಗ ಅವನೊಂದಿಗೆ ಗಿಡಬಳ್ಳಿ ಹೂಗಳು ಕಿತ್ತು ಹಾರುವಾಗ ಅವನ ಸಂಬಂಧಿಗಳಂತೆ ಕಂಡವು, ಆಕಾಶದಲಿ ಹನುಮನೊಂದಿಗೆ ಹಾರುವ ರಮ್ಯನೋಟ ರಚಿಸಿದ ಗಿಡಬಳ್ಳಿ ಹೂಗಳು ಮಹೇಂದ್ರ ಪರ್ವತಕ್ಕೆ ಹೆದರಿ ಸಮುದ್ರದಲಿ ಬಿದ್ದು ಮುಳುಗಿದವು, ಸಮುದ್ರಕ್ಕೆ ಬೀಳುವ ಹೂ-ಬಳ್ಳಿ ಗಿಡ ಸುರಿಮಳೆ ಮಧ್ಯೆ ಮೋಡಾಕಾರ್ದ ಹನುಮನು ಮಿಂಚುಳಿಗಳ ಮಧ್ಯೆ ಪರ್ವತದಂತೆ ಕಂಡನು; ಆಕಾಶದಿಂದ ಸಮುದ್ರಕ್ಕೆ ಉದುರುವ ಗಿಡ ಹೂಗಳು ಹನುಮನಿಗೆ ವಿದಾಯ ಹೇಳುವ ಸ್ನೇಹಿತರಂತೆ ಕಂಡವು; ಶಾಂತ ಸಮುದ್ರದಲಿ ಹರುಷ ಉಣಬಡಿಸುತ ಬಿದ್ದ ಗಿಡ ಹೂ-ಬಳ್ಳಿಗಳು ಆಕಾಶದಲ್ಲಿಯ ಚುಕ್ಕೆಗಳಂತೆ ಕಂಡವು. ಒಟ್ಟಿನಲ್ಲಿ ಆದಿಕವಿ ವಾಲ್ಮೀಕಿಯು (ಅ) ಹನುಮಾನ ಆಕಾಶಕ್ಕೆ ನೆಗೆದ ಮತ್ತು ಆಕಾಶದಲ್ಲಿ ಹಾರವ ದೃಶ್ಯಗಳ ವರ್ಣನೆಯ ಉಪಮೆ, ಉಪಮಾ ಮತ್ತು ವ್ಯಕ್ತೀಕರಣ ಕಾವ್ಯಾಲಂಕಾರವು ಮನಮುಟ್ಟಿ ರಂಜಿಸುವಂತ ವಿವರಣೆ ನೀಡಿರುವರು (ಆ) ಹನುಮಾನ ನೆಗೆತದ ಅಬ್ಬರಕ್ಕೆ ಮಹೇಂದ್ರಗಿರಿ ಹೆದರಿ ಆನೆಸೊಂಡಿಲದಿಂದ ಚಿಮ್ಮುವ ನೀರಿನಂತೆ ಬೆವರಿತು, ಪರ್ವತ ಮೇಲಿನ ಗಿಡಗ ಬಳ್ಳಿಗಳಿಂದ ಎಲೆ ಹೂಗಳು ಉದರಿದವು, ಬಿದ್ದ ಹೂಗಳಿಂದ ಮಹೇಂದ್ರಗಿರಿಯೇ ಅಲಂಕಾರಗೊಂಡಂತೆ ಕಂಡದನ್ನು ವಿವರಿಸಿರುವರು.(ಇ) ಹನುಮಾನ ನೆಗೆತದ ಅಬ್ಬರಕ್ಕೆ ಮಹೇಂದ್ರಗಿರಿಯಿಂದ ಸ್ವಸ್ತಿಕ ಹೆಡೆ ಸರ್ಪಗಳು ಹೊರ ಬಂದವು ಹಾಗು ಸಿಟ್ಟಿನಿಂದ ಬಂಡೆಗಳನು ವಿಷ-ಹಲ್ಲುಗಳಿಂದ ಕಚ್ಚಿದವು; ಗುಡುಗಿದ ಶಬ್ದ ಕೇಳಿ ಧ್ಯಾನಮಗ್ನ ಮುನಿಗಳು ರಾಕ್ಷಸರು ಬಂದರೆಂದು ಭಾವಿಸಿ ಗವಿಗಳಿಂದ ಹೆದರಿ ಹೊರ ಬಂದ ದೃಶ್ಯವನ್ನು ಬಣ್ಣಿಸಿರುವರು (ಈ) ಗುಡುಗಿದ ಶಬ್ದ ಕೇಳಿದ ವಿಧ್ಯಾಧರರು ಆಹಾರ ಚರ್ಮ-ಬಟ್ಟೆ, ಚಿನ್ನದ ಖಡ್ಗ ಪಾತ್ರೆಗಳನ್ನು ತೊರೆದು ಹೆದರಿ ಸ್ತ್ರಿಯರೊಂದಿಗೆ ಓಡಿ ಹೊರಬಂದರು, ಕೊರಳಲ್ಲಿ ಕೆಂಪು ಹೂ-ಹಾರ, ಮೈಗೆ ಗಂಧಲೇಪನ ಧರಿಸಿದ ವಿಧ್ಯಾಧರರು ಮಾದಕಮಲಿನಲ್ಲಿ ಮನೆಗಳಿಂದ ಹೊರಬಂದು ಆಕಾಶ ವೀಕ್ಷಿಸಿದರು, ಕೊರಳತುಂಬ ಹಾರ, ಕೈತುಂಬ ಬಳೆ, ಕಾಲಗಳಲ್ಲಿ ತೋಡೆಗಳ ತೊಟ್ಟ ಶೃಂಗಾರದಲಿ ವಿಧ್ಯಾಧರ-ಸ್ತ್ರೀಯರು ಸಖರೊಂದಿಗೆ ನಗುತ್ತ ಆಕಾಶದಲಿ ಹಾರುವ ಹನುಮನನ್ನು ನೋಡಿ ಆಶ್ಚರ್ಯಚಕಿತರಾದದನ್ನು ಬಣ್ಣಿಸಿರುವರು.
-ಡಾ. ಅರ್ಜುನ ಯ. ಪಂಗಣ್ಣವರ ವಾಲ್ಮೀಕಿ ಸಾಹಿತ್ಯ ಚಿಂತಕ‌