ಕಿಷ್ಕಿಂಧಕಾಂಡ ರಾಮಾಯಣ ಭಾಗ-51

By admin


ಕೇಳಿ ಹನುಮಾನನ ಘರ್ಜನೆ ಜಾಂಬವಂತ ನುಡಿದ: I
“ಓ ವಾಯು ಸುತ ಕೇಸರಿಪುತ್ರ, ನಮ್ಮನು ನಿಷ್ಕಾಳಜಿ ಮಾಡಿದಿ; II
ವಾನರ ನಾಯಕರೆಲ್ಲರೂ ನಿನಗೆ ಋಣಿ,I
ಗುರು ಹಿರಿಯರ ಆಸೆಯಂತೆ ಹಾರು ಸಮುದ್ರದಾಚೆ;II
ಇಲ್ಲೆ ಕಾಯುವೆವು ಒಂಟಿಗಾಲಿನಿಂದ ನೀ ಬರುವ ತನಕ” I
ಆಶಿರ್ವದಿಸಿದ ಹನುಮಗೆ ಕಾರ್ಯನಿರತನಾಗಲು ಜಾಂಬವಂತ; II
ವಾನರರಿಗೆ ಹನುಮಾನ ನುಡಿದ:”ಶಿಲೆ-ಶಿಖರ ಕಂದಕಗಳI
ದುರ್ಗಮ ಮೇರು ಪರ್ವತ , ಏರಲು ಕಠಿಣ; II
ವಿಭಿನ್ನ ವೃಕ್ಷಗಳ, ಖನಿಜಗಳ ಮೇರು ಪರ್ವತI
ಶಿಖರ ತುದಿ ಹಾರಲು ಎನಗೆ ಯೋಗ್ಯ ಸ್ಥಳ; II
ಎತ್ತರಕ್ಕೆ ನೆಗೆದಾಗ ನಾ ಪರ್ವತದ ಕಲ್ಲ-ಬಂಡಗಳುI
ಕಂಪಿಸಿ ಕೆಳಗೆ ಉರುಳಿ ಬೀಳುವವು”; II
ಶತ್ರು ಶೋಧನೆಗೆ ಪರ್ವತ್ತೇರಲು ಆರಂಭಿಸಿದ ಹನುಮಾನ,I
ಹುಲಿ ಸಿಂಹ, ಗಿಡ ಬಳ್ಳಿ, ಹಕ್ಕಿಗಳ ಗದ್ದಲದ ಪರ್ವತ; II
ಮಹೇಂದ್ರನಿಗೆ ಸಮಬಲ ಹನುಮಾನ ಏರಿದನುI
ಕಡಿದಾದ ಕಲ್ಲ-ಬಂಡೆ ಶಿಖರಗಳ, ತಲುಪಿದ ಅತ್ತ್ಯುನ್ನತ ಶಿಖರ; II
ಕೈಗಳಿಂದ ಬಲವಾಗಿ ಹಿಂಡಿಕೊಂಡಾಗ ಹನುಮಾನ I
ಸಿಂಹದ ಪಂಜೆಯಲಿ ಜಿಂಕೆ ಸಿಕ್ಕಂತಾಯಿತು ಪರ್ವತ ಶಿಖರ; II
ಚಿಲ್ಲಾಪಲ್ಲಿಯಾದವು ಗಿಡ ಮರ, ಬಂಡೆಗಳು ಪಕ್ಷಿ ಪ್ರಾಣಿಗಳುI
ಹೌಹಾರಿದವು ಕೇಳಿ ಹನುಮಾನನ ಹೆಜ್ಜೆಗಳು; II
ಓಡಿ ಹೊರಬಂದರು ಮಧು-ಅಮಲಿನಲ್ಲಿದ್ದ ಗಂಧರ್ವ,I
ವಿಧ್ಯಾಧರರು, ಸರ್ಪಗಳು ಹೊರಬಿದ್ದವು ಹುತ್ತುಗಳಿಂದ II
ಕೇಳಿ ಹನುಮಾನನ ಹೆಜ್ಜೆ ಶಬ್ದ; ಬೆಚ್ಚಿಬಿದ್ದರು ಪರ್ವತದಲಿ ವಾಸವಿದ್ದ ಮುನಿಗಳು,I
ಹಾದಿಕೋರರು, ಕಂಡನು ಹನುಮಾನ ಧ್ವಜದಂತೆ ಮಹೇಂದ್ರಗಿರಿ ತುದಿ ಮೇಲೆ; II
ಲಂಕೆಯತ್ತ ಮುಖಮಾಡಿ, ಮನಸ್ಸು ಕೇಂದ್ರಿಕರಿಸಿ I
ವೀರ ಹನುಮಾನ ಸಮುದ್ರದಾಚೆ ಹಾರಲು ಸಿದ್ಧನಾದ. II
ಮುಗಿಯಿತು ವಾಲ್ಮೀಕಿ ರಾಮಾಯಣ ಕಿಷ್ಕಿಂಧಕಾಂಡ

ಈ ಸಂದರ್ಭದಲ್ಲಿ ಆದಿಕವಿ ವಾಲ್ಮೀಕಿಯು ಹನುಮಾನನಿಂದ ಎಲ್ಲವೂ ಸಾಧ್ಯವೆನ್ನುವ ಅವನ ಸಾಮರ್ಥ್ಯದ ಕುಲಂಕುಶವಾದ ಪರಿಚಯವನ್ನು ವರ್ಣಿಸಿರುವರು, ಅದರಲ್ಲಿಯ ಮುಖೈ ಅಂಶಗಳು (1) ಹನುಮಾನನಿಗೆ ಕೃತಜ್ಞ ಸಲ್ಲಿಕೆ: ಹನುಮಾನನ ಘರ್ಜನೆಯ ಮಾತುಗಳನ್ನು ಕೇಳಿದ ಜಾಂಬವಂತನು ಹನುಮಾನನಿಗೆ “ಓ ವಾಯುಸುತ ಕೇಸರಿಪುತ್ರ, ನೀನು ನಮ್ಮನು ನಿಷ್ಕಾಳಜಿ ಮಾಡಿದಿ, ವಾನರ ನಾಯಕರೆಲ್ಲರೂ ನಿನಗೆ ಋಣಿ, ಗುರು ಹಿರಿಯರ ಆಸೆಯಂತೆ ಸಮುದ್ರದಾಚೆ ಹಾರು; ನೀನು ಬರುವತನಕ ನಾವು ಒಂಟಿಗಾಲಿನಿಂದ ಇಲ್ಲೆ ಕಾಯುವೆವು” ಎಂದು ಕೃತಜ್ಞತೆ-ಸಲಲ್ಲಿಕೆ ಮಾತುಗಳನ್ನಾಡುತ ಹನುಮನನ್ನು ಕಾರ್ಯನಿರತನಾಗಲು ಪ್ರೋತ್ಸಾಹಿಸಿದನು; (2) ಕಾರ್ಯನಿರತನಾದನು ಹನುಮಾಣ: ಜಾಂಬವಂತನ ಆಶಿರ್ವಾದದ ಮಾತುಗಳನ್ನು ಕೇಳಿದ ಹನುಮಾನನು ವಾನರರಿಗೆ ಪುನಃ ”ಶಿಲೆ-ಶಿಖರ ಕಂದಕಗಳ, ವಿಭಿನ್ನ ವೃಕ್ಷಗಳ, ಖನಿಜಗಳ, ಏರಲು ಕಠಿಣ ದುರ್ಗಮ ಮೇರು ಪರ್ವತದ (ಇಂದಿನ ತಮಿಳ ನಾಡಿನ ಮಹೇಂದ್ರಗಿರಿ ಪರ್ವತದ, ) ಶಿಖರ ತುದಿಯು ನನಗೆ ಲಂಕೆಯತ್ತ ಹಾರಲು ಯೋಗ್ಯ ಸ್ಥಳ; ನಾನು ಎತ್ತರಕ್ಕೆ ನೆಗೆದಾಗ ಆ ಪರ್ವತದ ಕಲ್ಲ-ಬಂಡಗಳು ಕಂಪಿಸಿ ಕೆಳಗೆ ಉರುಳಿ ಬೀಳುವವು” ಎಂದು ತಾನು ಕಾರ್ಯ ನಿರತನಾಗುವ ಸೂಚಿತ ಮಾತುಗಳನ್ನು ಆಡಿದನು.(3) ಲಂಕೆಯತ್ತ ಹಾರಲು ಹನುಮಾನನು ಮಹೇಂದ್ರಗಿರಿ ಏರಿದನು:
ಹನುಮಾನನು ತನ್ನ ಶತ್ರು (ರಾವಣನ) ಶೋಧನೆಗೆ ಪರ್ವತವೇರಲು ಆರಂಭಿಸಿದನು,ಪರ್ವತವು ಹುಲಿ, ಸಿಂಹ, ಗಿಡ ಬಳ್ಳಿ, ಹಕ್ಕಿಗಳ ಗದ್ದಲದಿಂದ ತುಂಬಿತ್ತು; ಮಹೇಂದ್ರ ಪರ್ವತಕ್ಕೆ ಸಮಬಲನಾಗಿ ಹನುಮಾನ ಆ ಪರ್ವತವನ್ನು ಏರಿದನು, ಕಡಿದಾದ ಕಲ್ಲ-ಬಂಡೆ ಶಿಖರಗಳ ಮಧ್ಯೆ ಅದರ ಅತ್ತ್ಯುನ್ನತ ಶಿಖರವನ್ನು ತಲುಪಿದನು; ಹನುಮಾನನು ತನ್ನ ಕೈಗಳಿಂದ ಪರ್ವತ ಶಿಖರವನ್ನು ಬಲವಾಗಿ ಹಿಂಡಿಕೊಂಡಾಗ ಅದು ಸಿಂಹದ ಪಂಜೆಯಲಿ ಜಿಂಕೆ ಸಿಕ್ಕಂತೆ ಕಂಡಿತು; ಹನುಮಾನನ ಹೆಜ್ಜೆ ಸಪ್ಪಳಕ್ಕೆ ಗಿಡ ಮರ, ಬಂಡೆಗಳು ಚಿಲ್ಲಾಪಲ್ಲಿಯಾದವು, ಪಕ್ಷಿ ಪ್ರಾಣಿಗಳ ಹೌಹಾರಿದವು, ಮಧು-ಅಮಲಿನಲ್ಲಿದ್ದ ಗಂಧರ್ವ ಮತ್ತು ವಿಧ್ಯಾಧರರು ಗವಿನಗರಗಳಿದ ಓಡಿ ಹೊರಬಂದರು, ಹುತ್ತುಗಳಿಂದ ಸರ್ಪಗಳು ಹೊರಬಿದ್ದವು, ಪರ್ವತದಲ್ಲಿ ವಾಸವಿದ್ದ ಮುನಿಗಳು,ಹಾದಿಕೋರರು ಮಹೇಂದ್ರಗಿರಿ ತುದಿಮೇಲೆ ಹನುಮಾನನ್ನು ಧ್ವಜದಂತೆ ಕಂಡು ಬೆಚ್ಚಿಬಿದ್ದರು; ವೀರ ಹನುಮಾನನು ಲಂಕೆಯತ್ತ ಮುಖವಾಗಿ ನಿಂತು, ಮನಸ್ಸು ಕೇಂದ್ರಿಕರಿಸಿ ಸಮುದ್ರದಾಚೆ ಹಾರಲು ಸಿದ್ಧನಾದನು. ಆದಿಕವಿ ವಾಲ್ಮೀಕಿಯು ಹನುಮಾನನ ಸದ್ದತೆ ರೂಪದಲ್ಲಿಯೇ ಅವನ ಸಾಮರ್ಥ್ಯದ ಪರಿಚಯವನ್ನು ವರ್ಣಿಸಿರುವರು.
ಇಲ್ಲಿಗೆ ಕಿಷ್ಕಿಂಧಕಾಂಡವು ಮುಗಿಯುವದು

ಡಾ. ಅರ್ಜುನ ಯ. ಪಂಗಣ್ಣವರ ವಾಲ್ಮೀಕಿ ಸಾಹಿತ್ಯ ಚಿಂತಕ‌

ಪ್ರೀಯ ಓದುಗರಿಗೆ,
ಇಂದಿಗೆ ವಾಲ್ಮೀಕಿ ಚಿಂತನ ಲಹರಿ ಲೇಖನವು ನಿರಂತರ 610 ದಿನಗಳನ್ನು ಪೂರ್ಣಗೊಳಿಸಿತು, ಬಾಲಕಾಂಡ, ಅಯೋಧ್ಯೆ ಕಾಂಡ, ಅರಣ್ಯ ಕಾಂಡ ಮತ್ತು ಕಿಷ್ಕಿಂಧಕಾಂಡ ಪೂರ್ಣಗೊಂಡವು, ಬಿಡಲು ಮಾಡಿಕೊಂಡು ಓದಿದ, ಪ್ರತಿಕ್ರಿಯೆ ನೀಡಿದ ಎಲ್ಲರಿಗೂ ಧನ್ಯವಾದಗಳು. ನಾಳೆಯಿಂದ ಸುಂದರಕಾಂಡ ಆರಂಭಿಸುವೆ, ತಮ್ಮ ಸಹಕಾರ ಇರಲಿ.
ತಮ್ಮ ಡಾ. ಅರ್ಜುನ ಯ ಪಂಗಣ್ಣವರ ಗೋಕಾಕ