ಸುಂದರಕಾಂಡ ರಾಮಾಯಣ ಭಾಗ-53

By admin


ಕಂಡವು ಐದುಹೆಡೆ ಹಾವಿನಂತೆ ಆಕಾಶದಲಿI
ಹಾರುವ ಹನುಮಾನನ ಚಾಚಿದ ಕೈಗಳು, ಕಂಡನೊಮ್ಮೆII
ಹನುಮ ಸಮುದ್ರ ವ ಅಲೆಗಳನ್ನು ಕುಡಿಯುವನಂತೆ, I
ಮತ್ತೊಮ್ಮೆ ಆಕಾಶ ಕುಡಿಯುವ ಬಯಕೆಯವನಂತೆ; II
ಒಮ್ಮೆ ಮಿಂಚಿನಂತೆ, ಮತ್ತೊಮ್ಮೆ ಸೂರ್ಯ ಚಂದ್ರರಂತೆI
ಕಂಡವು ಹನುಮಾನನ ಕಣ್ಣಗಳೆರಡು, II
ಕೆಂಪು ವರ್ಣದ ಮೂಗು,ತಾಮ್ರವರ್ಣದ ಮುಖI
ಕಂಡವು ಉದಯಿಸು ಸೂರ್ಯ ಹೊಂಗಿರಣದಂತೆ, II
ಹಾರುವ ಹನುಮಾನ ಬಾಲ ಆಕಾಶದಲಿI
ಧ್ವಜಸ್ತಂಬದಂತೆ ಕಂಗೊಳಿಸಿತು,ಹೆಮ್ಮೆದಿ, II
ಕಂಡವು ತೊಡೆಗಳು ಸೀಳಿದ ಪರ್ವತಗಳಂತೆI
ಮೈಗೆ ಕೊರೆದು ಬಿಸುವ ಗಾಳಿ ಕೇಳಿಸಿತು ಸಿಡಿಲಿನಂತೆ, II
ಉತ್ತರ ದಿಕ್ಕಿನಿಂದ ತೂರಿ ಬರುವ ಉಲ್ಕೆಯಂತೆ I
ಕಂಡನು ಆಕಾಶದಲಿ ವೇಗದಿ ಹಾರುವ ಹನುಮ, II
ಕಂಡಿತು ಸಮುದ್ರದಲಿ ಗಾಳಿಗೆ ಚಲಿಸುವ ನಾವಿಂತೆI
ಆಕಾಶದಲಿ ಹಾರುವ ದೈತ ಹನುಮನ ನೆರಳು, II
ಹನುಮನ ತೊಡೆಗಳು ಗಾಳಿ ಭೇದಿಸುವ I
ರಭಸಕ್ಕೆ ತಳಮಳಗೊಳ್ಳುತಿತ್ತು ಸಮುದ್ರ ನೀರು, II
ಒಂದೆಡೆ ಹನುಮನ ರಭಸದ ಗಾಳಿ, ಮತ್ತೊಂದೆಡೆI
ಮೋಡಗಳಿಂದ ಬರುವ ಗಾಳಿ, ದಿಕ್ಕೆಟ್ಟಿತು ಸಮುದ್ರ, II
ನಿರ್ವಸ್ತ್ರ ಮಾನವ ದೇಹಗಳಂತೆ ಕಂಡವುI
ಸಮುದ್ರದಲಿ ತಿಮಿಂಗಲ, ಮೀನ ಕುರ್ಮೆ ಮೊಸಳೆಗಳು,II
ಆಕಾಶದಲ್ಲಿ ಹಾರುವ ಹನುಮನ ಕಂಡು ಗರುಡನೆಂದುI
ಆಳಕ್ಕಿಳಿದವು ಹೆದರಿ ಸಮುದ್ರದಲಿ ಹಾವುಗಳು, II
ಆಕಾಶದಲಿ ಮೋಡಗಳ ಮಧ್ಯೆ ಗರುಡನಂತೆ I
ಹನುಮಾನ ಹಾರುತ ಸಾಗಿದನು ಸಮುದ್ರ ಮೇಲೆ, II
ಮೋಡಗಳ ಮಧ್ಯೆ ಚಂದ್ರನ ಚಲ್ಲಾಟದಂತೆI
ಕಂಡನು ಹನುಮಾನ ಹಾರುತ ಮೋಡಗಳ ಮಧ್ಯೆ, II
ಸೂರ್ಯ ಹಿಂಸಿಸಲಿಲ್ಲ, ಗಾಳಿ ತಡೆಲಿಲ್ಲI
ಸಮುದ್ರ ಮೇಲೆ ನಿರಂತರ ಸಾಗಿತು ಹನುಮನ ಹಾರಾಟ, II
ಹೊಗಳಿದರು ನಾಗ,ಯಕ್ಷ ರಾಕ್ಷಸ ದೇವ ಗಣI
ಕಂಡು ಹನುಮಾನನ ಅದ್ಭುತ ಹಾರಾಟ, II
“ದಣಿಯದಂತೆ ಹನುಮ ನಾ ಸಹಾಯ ಮಾಡುವೆ”I
ಸಮುದ್ರರಾಜ ನುಡಿದನು ಮೆಚ್ಚಿ ಸಾಹಸ, II
ಕೋರಿತು ಮೈನಕ-ಪರ್ವತವನು ಸಮುದ್ರ ನೀಡಲು I
ವಿಶ್ರಾಂತಿಗೆ ಆಶ್ರಯ ಹನುಮನಿಗೆ, ಪಾತಾಳದಿ ಮೇಲೆದ್ದು II
ಆಶ್ರಯಿಸು ಹನುಮನ, ಅಸುರರನು I
ತಡೆಯಲು ನಿಂತ ನೀ” ಮೈನಿಕನಿಗೆ ಸಮುದ್ರ ನುಡಿಯಿತು, II
“ಎಸಗಬೇಕಾದ ಸುಕೃತ್ಯಕ್ಕೆ ಮಾಡುವ ಸಹಾಯ I
ಎಲ್ಲರಿಂದಲೂ ವಂದನೀಯ, ತರಿಸದು ಜನರ ಕೋಪ”, II
ಪಾತಾಳದಿ ಮೇಲೆದ್ದಿತು ಗಿಡ ಬಳ್ಳಿ ಸಮೇತ ಮೈನಕI
ಹನುಮನ ಸಹಾಯಕ್ಕಾಗಿ, ಕೇಳಿ ಸಮುದ್ರರಾಜ ನುಡಿ;II
ಸೂಯರ್ನಂತೆ ಉಗಮಗೋಡ ಮೈನಕ-ಪರ್ವತದಿI
ನೀರು ಸರಿಯಿತು, ಹನುಮನ ಸ್ವಾಗತಿಸಲು ಮೈನಕ, II
ಸುಂದರಕಾಂಡ

ಆಕಾಶದಲ್ಲಿ ಹಾರುವ ಹನುಮಾನನ ದೃಶ್ಯವನ್ನು ಆದಿಕವಿ ವಾಲ್ಮೀಕಿಯು ಮನದಟ್ಟುವಂತೆ ಬಣ್ಣಿಸಿರುವರು, ಅದರಲ್ಲಿಯ ಮುಖ್ಯಾಂಶಗಳು (1) ಹಾರುವ ಹನುಮಾನನ ದೃಶ್ಯ: ಆಕಾಶದಲಿ ಹಾರುವ ಹನುಮಾನನ ಚಾಚಿದ ಕೈಗಳು ಐದುಹೆಡೆ ಹಾವಿನಂತೆ ಕಂಡವು; ಆಕಾಶದಲ್ಲಿ ಹಾರುವ ಹನುಮಾನ ಬಗೆ ಬಗೆ ರೂಪದಲಿ ಕಂಡನು: ಹನುಮನು ಸಮುದ್ರ ಮತ್ತು ಅಲೆಗಳನ್ನು ಕುಡಿಯುವನಂತೆ ಒಮ್ಮೆ ಕಂಡರೇ, ಮತ್ತೊಮ್ಮೆ ಆಕಾಶ ಕುಡಿಯುವ ಬಯಕೆಯವನಂತೆ ಕಂಡರೇ; ಒಮ್ಮೆ ಮಿಂಚಿನಂತೆ ಕಂಡರೇ, ಮತ್ತೊಮ್ಮೆ ಸೂರ್ಯ ಚಂದ್ರರಂತೆ ಕಂಡನು; ಹನುಮಾನನ ಕಣ್ಣುಗಳು, ಕೆಂಪು ವರ್ಣದ ಮೂಗು, ತಾಮ್ರವರ್ಣದ ಮುಖ, ಉದಯಿಸುವ ಸೂರ್ಯನ ಹೊಂಗಿರಣದಂತೆ ಕಂಡವು; ಹಾರುವ ಹನುಮಾನ ಬಾಲ ಆಕಾಶದಲಿ ಧ್ವಜಸ್ತಂಬದಂತೆ ಕಂಗೊಳಿಸಿತು, ತೊಡೆಗಳು ಸೀಳಿದ ಪರ್ವತಗಳಂತೆ ಹೆಮ್ಮೆಯಿಂದ ಕಂಡವು; ಹನುಮಾನನ ಮೈಗೆ ಕೊರೆದು ಬಿಸುವ ಗಾಳಿ ಶಬ್ದ ಸಿಡಿಲಿನಂತೆ ಕೇಳಿಸಿತು; ಆಕಾಶದಲಿ ವೇಗದಿಂದ ಹಾರುವ ಹನುಮನು ಉತ್ತರ ದಿಕ್ಕಿನಿಂದ ತೂರಿ ಬರುವ ಉಲ್ಕೆಯಂತೆ ಕಂಡನು; ಆಕಾಶದಲಿ ಹಾರುವ ದೈತ ಹನುಮನ ನೆರಳು ಸಮುದ್ರದಲಿ ಗಾಳಿಗೆ ಚಲಿಸುವ ನಾವಿಂತೆ ಕಂಡಿತು; ಹನುಮನ ತೊಡೆಗಳು ಗಾಳಿಯನ್ನು ಭೇದಿಸುವ ರಭಸಕ್ಕೆ ಸಮುದ್ರ ನೀರು ಅಲ್ಲೋಲ ಕಲ್ಲೋಲವಾಗುತಿತ್ತು; (2) ಹನುಮಾನನ ಕಂಡ ಜಲಚರಗಳಲ್ಲಿ ಭಯ: ಒಂದೆಡೆಯಿಂದ ಹನುಮನ ರಭಸದಿಂದ ಅಪ್ಪಳಿಸುವ ಗಾಳಿ, ಮತ್ತೊಂದೆಡೆಯಿಂದ ಮೋಡಗಳಿಂದ ಬರುವ ರಭಸದ ಗಾಳಿಗಳಿಗೆ ಸಮುದ್ರಕ್ಕೆ ದಿಕ್ಕುತೋಚದಂತಾಯಿತು; ಸಮುದ್ರದಲಿ ತಿಮಿಂಗಲ, ಮೀನ, ಕುರ್ಮೆ, ಮೊಸಳೆಗಳು, ನಿರ್ವಸ್ತ್ರ ಮಾನವ ದೇಹಗಳಂತೆ ಕಂಡವು; ಆಕಾಶದಲ್ಲಿ ಹಾರುವ ಹನುಮನ ಕಂಡು ಹಾವುಗಳು ಗರುಡನೆಂದು ಹೆದರಿ ರಕ್ಷಣೆಗಾಗಿ ಸಮುದ್ರದಲಿ ಆಳಕ್ಕಿಳಿದವು; ಆಕಾಶದಲಿ ಮೋಡಗಳ ಮಧ್ಯೆ ಗರುಡನಂತೆ ಹನುಮಾನ ಹಾರುತ ಸಮುದ್ರ ಮೇಲೆ ಸಾಗಿದನು, ಮೋಡಗಳ ಮಧ್ಯೆ ಚಂದ್ರನ ಚಲ್ಲಾಟದಂತೆ ಮೋಡಗಳ ಮಧ್ಯೆ ಹಾರುವ ಹನುಮಾನ ಕಂಡನು; (3) ಆಕಾಶ ಮಾರ್ಗವಾಗಿ ಹಾರುವ ಹನುಮಾನನಿಗೆ ಯಾವುದೇ ತೊಂದರೆಗಳು ಆಗಲಿಲ್ಲ: ಆಕಾಶದಲಿ ಹಾರುವ ಹನುಮನಿಗೆ ಯಾವುದೇ ತೊಂದರೆ ಯಾಗಲಿಲ್ಲ: ಸೂರ್ಯ ತನ್ನ ಕಿರಣ ಶಾಖಗಳಿಂದ ಹಿಂಸಿಸಲಿಲ್ಲ, ಗಾಳಿ ತನ್ನ ರಭದಿಂದ ತಡೆಲಿಲ್ಲ, ಹನುಮನ ಹಾರಾಟ ಸಮುದ್ರ ಮೇಲೆ ನಿರಂತರ ಸಾಗಿತು; ಹನುಮಾನನ ಈ ಅದ್ಭುತ ಹಾರಾಟ ಕಂಡು ನಾಗ,ಯಕ್ಷ ,ರಾಕ್ಷಸ, ದೇವ ಗಣಗಳು ಹೊಗಳಿದರು. (4) ಸಮುದ್ರರಾಜನ ಮೆಚ್ಚುಗೆ: ಹನುಮಾನನ ಸಾಹಸ ಮೆಚ್ಚಿ ಸಮುದ್ರರಾಜ ನುಡಿದನು “ದಣಿಯದಂತೆ ಹನುಮ, ನಾ ಸಹಾಯ ಮಾಡುವೆ”; ಸಮುದ್ರ ಮಧ್ಯದಲ್ಲಿ ಹನುಮನಿಗೆ ವಿಶ್ರಾಂತಿಗೆ ಆಶ್ರಯ ನೀಡಲು ಸಮುದ್ರ ಮೈನಕ-ಪರ್ವತವನು ಕೋರಿತು “ಅಸುರರನು ತಡೆಯಲು ನಿಂತ ನೀನು, ಪಾತಾಳದಿಂದ ಮೇಲೆದ್ದು ಹನುಮನಿಗೆ ಆಶ್ರಯ ನೀಡು” ಮುಂದುವರೆದು ಮೈನಿಕನಿಗೆ ಸಮುದ್ರ ನುಡಿಯಿತು: “ಎಸಗಬೇಕಾದ ಸುಕೃತ್ಯಕ್ಕೆ ಮಾಡುವ ಸಹಾಯ ಎಲ್ಲರಿಂದಲೂ ವಂದನೀಯ, ತರಿಸದು ಜನರ ಕೋಪ” ಅರ್ಥಾತ್ ಹನುಮನು ಒಳ್ಳೆಯ ಕೆಲಸಕ್ಕೆ ಹೊರಟಿರುವನು ಅವನಿಗೆ ಸಹಾಯ ಮಾಡುವದನ್ನು ಯಾರೂ ಕೋಪಿಸರು, ಯಾರೂ ನಿಂದಿಸರು; ಕೇಳಿ ಸಮುದ್ರರಾಜ ನುಡಿ ಮೈನಕ ಪರ್ವತವು ಹನುಮನ ಸಹಾಯಕ್ಕಾಗಿ, ಹನುಮನ ಸ್ವಾಗತಿಸಲು ಗಿಡ ಬಳ್ಳಿ ಸಮೇತ ಪಾತಾಳದಿಂದ ಮೇಲೆದ್ದಿತು, ಸೂಯರ್ನಂತೆ ಉಗಮಗೊಂಡ ಮೈನಕ-ಪರ್ವದಿಂದ ನೀರು ಸರಿಯಿತು. ಒಳ್ಳೆಯ ಕೆಲಸಕ್ಕೆ ಹೊರಟವರಿಗೆ ಸಹಾಯ ಮಾಡುವದನ್ನು ಯಾರೂ ಕೋಪಿಸರು, ಯಾರೂ ನಿಂದಿಸರು ಎಂಬ ಸಂದೇಸವನ್ನು ಆದಿಕವಿ ವಾಲ್ಮೀಕಿಯು ಈ ಸಂದರ್ಭದಲ್ಲಿ ನೀಡಿರುವರು.
ಡಾ. ಅರ್ಜುನ ಯ. ಪಂಗಣ್ಣವರ ವಾಲ್ಮೀಕಿ ಸಾಹಿತ್ಯ ಚಿಂತಕ‌