ಸುಂದರಕಾಂಡ ರಾಮಾಯಣ ಭಾಗ-58

By admin


ಲಂಬ-ಪರ್ವತ ತುದಿ ಮೇಲೆ ನಿಂತು ಹನುಮ ಚಿಂತಿಸಿದ,I
“ವಾಸ್ತವ ರೂಪದಲ್ಲಿ ನನಗೆ ಅಸಾಧ್ಯ ಲಂಕೆಗೆ ನುಸುಳಲು, II
ಸೀತೆ ಹುಡುಕಲು ನಾನು ಮೋಸ ಮಾಡಬೇಕುI
ಮೊದಲೀ ಸಬಲ ಅಸಾಮಾನ್ಯ ರಾಕ್ಷಸರನು,II
ಅತೀ ಚಿಕ್ಕಗಾತ್ರಕೆ ದೇಹ ಕುಗ್ಗಿಸಿI
ಲಂಕೆಗೆ ರಾತ್ರಿ ನುಸುಳುವ ಕೃತ್ಯವೇ ಯಶಸ್ವಿ, II
ಏನು ಯೋಜಿಸಲಿ ಸೀತೆಯನು ಕಾಣಲುI
ಒಬ್ಬಂಟಿಯಾಗಿ, ಏಕಾಂತ ರಹಸ್ಯ ಸ್ಥಳದಲಿ ?II
ದುಷ್ಟ ರಾವಣ ಕಾಣದ ಸೀತೆಯನು ಏನೆಂದು ಕಾಣಲಿ ನಾನು? I
ಅರುಣೋದಯಕ್ಕೆ ಕತ್ತಲು ನಾಶವಾದಂತೆ, II
ಮಧ್ಯವರ್ತಿಗಳಿಂದ ನನ್ನ ಸಮಯ ಸ್ಥಳI
ಕಾರ್ಯ ಯೋಜನೆ ಹಾಳಾಗಬಹುದು, II
ಲಾಭ,ಹಾನಿ ಚಿಂತಸುವ ಮನ ಅಸ್ಥಿರವಾದಾಗ I
ಬುದ್ಧಿವಂತ ಮಧ್ಯವರ್ತಿಯ ಅಜ್ಞಾನದಿಂದ ಕೆಡುವದು ಕೆಲಸ, II
ಕೆಟ್ಟಿತೇ ಸಮುದ್ರದಾಟಿ ಬಂದ ಕೆಲಸ? ದುಃಖಿಸಿತ್ತೇ ಎನ್ನ ಮನ?I
ಹೇಗೆ ರಕ್ಷಿಸಿಕೊಳ್ಳಲಿ ನಾ ಬಂದ ಕೆಲಸ? II
ನೋಡಿದರೆ ರಾಕ್ಷಸರು ರಾಮನ ಕಾರ್ಯಕ್ಕೆ ಬಂದ ನನ್ನI
ಬಂದ ಕಾರ್ಯ ವ್ಯರ್ಥ, ರಾವಣ-ವಧೆ ಬಯಕೆ ವ್ಯರ್ಥ,II
ರಾಕ್ಷಸರೂಪದಲ್ಲಾಗಲಿ,ಯಾವೂದೇ ರೂಪದಲ್ಲಾಗಲಿI
ಉತ್ತರಿಸಲು ನನಗೆ ಸಾಧ್ಯವೇ ಲಂಕೆಯಲಿ? II
ಗಾಳಿ ಸುಳಿಯದು, ಎಲ್ಲವನ್ನು ಬಲ್ಲರು ರಾಕ್ಷಸರುI
ಯೋಚನೆಗಳು ಹೊಳೆಯುತ್ತಿಲ್ಲ ನನ್ನ ಮನಸಿಗೆ, II
ವಾಸ್ತವರೂಪದಲ್ಲಿ ಇಲ್ಲಿಯೇ ನಿಂತರೆ ನಾ,I
ನಾಶಪಡಿಸುವರು ನನ್ನ, ರಾಮನ ಕಾರ್ಯ ವಿಫಲ, II
ರಾಮನ ಕಾರ್ಯ ಯಶಸ್ವಿಗೆ, ಅತೀ ಚಿಕ್ಕವನಾಗಿI
ರಾತ್ರಿ ಲಂಕೆಗೆ ನುಸುಳುವದೇ ಲೇಸು, II
ಅಭೇದ ಲಂಕೆಯನ್ನು ರಾತ್ರಿ ನುಸುಳಿI
ಸೀತೆ ಹುಡುಕುವೆ ರಾವಣನ ಎಲ್ಲ ಕಟ್ಟಡಗಳಲಿ”; II
ಹೀಗೆ ಯೋಚಿಸುತ ಸಾಹಸಿ ವಾನರI
ಕಾಯ್ದನು ಸೂರ್ಯಾಸ್ತ ಸಮಯ, II
ಸುರ್ಯಾಸ್ತವಾಯಿತು, ಬೆಕ್ಕಿನಗಾತ್ರ ಪಡೆದI
ಹನುಮನ ನೋಟ ವಿಷ್ಮಯ, II
ಸಂಜೆಯಲಿ ಕಾಲದಾರಿ ಸಂಧಿಗಳಲ್ಲಿI
ಹನುಮ ನುಸುಳಿದ ಲಂಕಾ ನಗರದಲಿ,II
ಗಂಧರ್ವರ ನಗರಗಳಂತೆ ಹೊಂಬಣ್ಣಿನ ಸ್ತಂಬಗಳI
ಕಿಟಕಿಗಳ ಕಟ್ಟಡಗಳನು ಕಂಡ ಹನುಮ, II
ಏಳು, ಏಂಟು ಅಂತಸ್ತುಗಳ ಕಟ್ಟಡಗಳುI
ಚಿನ್ನ ರತ್ನ ಸ್ಪಟಿಕಗಳಿಂದ ಹೊಳೆಯುವ ಛಾವಣಿಗಳು, II
ಬೆಕ್ಕಿನ ಕಣ್ಣಗಳಂತೆ ಹೊಳೆವ ಛಾವಣಿI
ಕಟ್ಟಡಗಳು ರಾಕ್ಷಸರ ಮನೆಗಳು, II
ಬಣ್ಣ ಬಣ್ಣದ ಚಿನ್ನದ ಕಮಾನುಗಳು ಅಲಂಕರಿಸಿದ್ದವುI
ಎಲ್ಲ ದಿಕ್ಕುಗಳಿಂದ ಲಂಕೆಯನು, ಕಂಡು ಕಲ್ಪನಾತೀತ II
ಸುಂದರ ಲಂಕಾನಗರ ಹನುಮ ವಶಪಡಿಸಿಕೊಳ್ಳಲು I
ಚಿಂತಿತನಾದ, ಹರುಷಿತನಾದ ಸೀತೆ ಹುಡುಕಲು, II
ಸಾವಿರು ಸಾವಿರು ಕಿರಣಗಳೊಂದಿಗೆ ಉದಯಿಸಿದ I
ಹನುಮನಿಗೆ ಸಹಾಯ ಮಾಡಲೆಂದು ಚಂದ್ರ, II
ಸರೋವರದಲಿ ಹಂಸ ಈಜುವಂತೆ, ನಕ್ಷತ್ರಗಳ ಮಧ್ಯೆ ಶಂಖದಂತೆ ಹೊಳೆವ I
ಕ್ಷೀರವರ್ಣದ ಚಂದ್ರನ ಕಂಡ ಹನುಮ, II
ಸುಂದರಕಾಂಡ

ಲಂಕಾದ್ವೀಪವನ್ನು ತಲುಪಿದ ಹನುಮಾನನು ಲಂಕಾ ನಗರವನ್ನು ಪ್ರವೇಶಿಸಲು ಮಾಡಿದ ಆಲೋಚನೆ ಮತ್ತು ಅವನು ಕಂಡ ಲಂಕಾನಗರದ ಒಳಸೌಂದರ್ಯವನ್ನು ಆದಿಕವಿ ವಾಲ್ಮೀಕಿಯು ವಿವರಿಸಿರುವರು, ಅದರಲ್ಲಿಯ ಮುಖೈಆಂಸಗಳು: (1) ಲಂಕಾನಗರದಲ್ಲಿ ಪ್ರವೇಶಿಸಲು ಹನುಮಾನನ ಆಲೋಚನೆಗಳು: ಲಂಬ-ಪರ್ವತ ಶಿಖರದ ಮೇಲೆ ನಿಂತು ಹನುಮ ಪುನಃ ಮನದಲಿ ಹೀಗೆ ಯೋಚಿಸಿದನು: “ ವಾಸ್ತವಿಕ ರೂಪದಲ್ಲಿ ಲಂಕೆಗೆ ನುಸುಳಲು ನನಗೆ ಅಸಾಧ್ಯ, ಸೀತೆಯನು ಹುಡುಕಲು ನಾನು ಮೊದಲೀ ಸಬಲ ಅಸಾಮಾನ್ಯ ರಾಕ್ಷಸರನು ಮೋಸಮಾಡಬೇಕು, ಅತೀ ಚಿಕ್ಕಗಾತ್ರಕೆ ನನ್ನ ದೇಹ ಕುಗ್ಗಿಸಿ ಲಂಕೆಗೆ ರಾತ್ರಿ ನುಸುಳುವ ಕೃತ್ಯವೇ ಯಶಸ್ವಿಯಾಗುವದು, ನಾನು ಒಬ್ಬಂಟಿಯಾಗಿ ಏಕಾಂತ ರಹಸ್ಯ ಸ್ಥಳದಲಿ ಸೀತೆಯನು ಕಾಣಲು ಏನು ಯೋಜಿಸಲಿ? ದುಷ್ಟ ರಾವಣ ಕಾಣದ ಸೀತೆಯನು ಏನೆಂದು ಕಾಣಲಿ ನಾನು? ಅರುಣೋದಯಕ್ಕೆ ಕತ್ತಲು ನಾಶವಾದಂತೆ ಮಧ್ಯವರ್ತಿಗಳಿಂದ ನನ್ನ ಸಮಯ, ಸ್ಥಳ, ಕಾರ್ಯ ಯೋಜನೆ ಹಾಳಾಗಬಹುದು; ಲಾಭ, ಹಾನಿ ಚಿಂತಸುವ ಮನ ಅಸ್ಥಿರವಾದಾಗ ಬುದ್ಧಿವಂತ ಮಧ್ಯವರ್ತಿಯ ಅಜ್ಞಾನದಿಂದ ಕೆಲಸ ಕೆಡುವದು, ಕೆಟ್ಟಿತೇ ನಾನು ಸಮುದ್ರದಾಟಿ ಬಂದ ಕೆಲಸ? ದುಃಖಿಸಿತ್ತೇ ಎನ್ನ ಮನ? ಹೇಗೆ ರಕ್ಷಿಸಿಕೊಳ್ಳಲಿ ನಾ ಬಂದ ಕೆಲಸ? ರಾಮನ ಕಾರ್ಯಕ್ಕೆ ಬಂದ ನನ್ನನ್ನು ರಾಕ್ಷಸರು ನೋಡಿದರೆ ನಾನು ಬಂದ ಕಾರ್ಯ ವ್ಯರ್ಥವಾಗುವದು, ರಾವಣ-ವಧೆ ಬಯಕೆಯೂ ವ್ಯರ್ಥವಾಗುವದು, ರಾಕ್ಷಸರೂಪದಲ್ಲಾಗಲಿ, ಯಾವೂದೇ ರೂಪದಲ್ಲಾಗಲಿ ಲಂಕೆಯಲಿ ಉತ್ತರಿಸಲು ನನಗೆ ಸಾಧ್ಯವೇ? ರಾವಣನ ಆಜ್ಞೆಯಲ್ಲದೆ ಗಾಳಿ ಸುಳಿಯುವದಿಲ್ಲ, ರಾಕ್ಷಸರು ಎಲ್ಲವನ್ನು ಬಲ್ಲರು, ಈ ಕ್ಷಣ ನನ್ನ ಮನಸಿಗೆ ಯೋಚನೆಗಳು ಹೊಳೆಯುತ್ತಿಲ್ಲ, ನಾನು ವಾಸ್ತವರೂಪದಲ್ಲಿ ಇಲ್ಲಿಯೇ ನಿಂತರೆ ರಾಕ್ಷಸರು ನನ್ನನು ನಾಶಪಡಿಸುವರು, ನಾನು ಬಂದ ರಾಮನ ಕಾರ್ಯ ವಿಫಲವಾಗುವದು, ರಾಮನ ಕಾರ್ಯ ಯಶಸ್ವಿಯಾಗಬೇಕಾದರೆ ನಾನು ಅತೀ ಚಿಕ್ಕವನಾಗಿ ರಾತ್ರಿವೇಳೆ ಲಂಕೆಗೆ ನುಸುಳುವದೇ ಯೋಗ್ಯ ಉಪಾಯ, ಅಭೇದ ಲಂಕೆಯನ್ನು ರಾತ್ರಿ ನುಸುಳಿ ನಾನು ರಾವಣನ ಎಲ್ಲ ಕಟ್ಟಡಗಳಲಿ ಸೀತೆ ಹುಡುಕುವೆ”;ಮನಸನ್ನು ಸ್ಥಿರವಾಗಿ ಇಟ್ಟುಕೊಂಡು ಹಿಡಿದ ಕೆಲಸವನ್ನು ಜಾಣ್ಮೆಯಿಂದ ಪೂರ್ಣಗೊಳಿಸುವ ಆಲೋಚನೆ ಹೋದುವದು ಉತ್ತಮ ಎಂಬ ಸಂದೇಶವನ್ನು ಆದಿಕವಿ ವಾಲ್ಮೀಕಿಯು ಈ ಮೂಲಕ ಕೊಟ್ಟಿರುವರು; (2) ಹನುಮಾನನಿಂದ ಲಂಕಾನಗರದಲ್ಲಿ ಪ್ರವೇಶ: ಸಾಹಸಿ ವಾನರ ಹನುಮಾನನು ಸೂರ್ಯಾಸ್ತ ಸಮಯ ಆಗುವದನ್ನು ಕಾಯ್ದನು, ಸುರ್ಯಾಸ್ತವಾದ ನಂತರ ಹನುಮನನು ಬೆಕ್ಕಿನಗಾತ್ರದ ವಿಷ್ಮಯ ಆಕಾರ ಪಡೆದನು, ಸಂಜೆ ಸಮಯದಲಿ ಕಾಲದಾರಿ ಸಂಧಿಗಳಲ್ಲಿ ಹನುಮನು ನುಸುಳುತ ಲಂಕಾ ನಗರದಲಿ ಪ್ರವೇಶಿಸಿದನು; (3) ಲಂಕಾನಗರ ಸೌಂದರ್ಯ: ಆದಿಕವಿ ವಾಲ್ಮೀಕಿಯು ಲಂಕಾನಗರದ ಒಳನೋಟದ ಸೌಂದರ್ಯವನು “ಶರದಕಾಲದ ಮೋಡಗಳಂತ ದೈತ ಮನೆಗಳ, ಅಲಂಕೃತ ಓಣಿಗಳ, ಸ್ವರ್ಣಕಮಾನುಗಳ, ಪತಾಕೆಗಳಿಂದ ಅಲಂಕೃತ ಸುಂದರ ನಗರ, ವಿಶ್ವಕರ್ಮ ನಿರ್ಮಿಸಿದ ರಾಕ್ಷಸರಾಜ ರಾವಣನ ಲಂಕೆಯು ಆಕಾಶದಲಿ ತೆಲುವಂತೆ ಕಾಣುವದು, ಕೋಟೆಗೋಡೆಯು ಸಿಂಹ ಮತ್ತು ನಗರದ ಸೊಂಟದಂತೆ, ಅದರ ಸುತ್ತುವರೆದ ಹೊಂಡಗಳು ಸರಪಳಿ ಕೀಲಿಗಳಂತೆ ಕಾಣುವವು, ಲಂಕಾ ನಗರದಲ್ಲಿಯ ಕರ್ಣಕುಂಡಲಾಕೃತಿ ಕಟ್ಟಡಗಳು, ಗಂಧರ್ವರ ನಗರಗಳಂತೆ ಹೊಂಬಣ್ಣಿನ ಸ್ತಂಬಗಳು, ಕಿಟಕಿಗಳು, ಏಳು/ಏಂಟು ಅಂತಸ್ತುಗಳ ಕಟ್ಟಡಗಳು,ಚಿನ್ನ ರತ್ನ ಸ್ಪಟಿಕಗಳಿಂದ ಹೊಳೆಯುವ ಛಾವಣಿಗಳು, ಬೆಕ್ಕಿನ ಕಣ್ಣಗಳಂತೆ ಹೊಳೆವ ಛಾವಣಿ ಕಟ್ಟಡಗಳು, ರಾಕ್ಷಸರ ಮನೆಗಳು, ಬಣ್ಣ ಬಣ್ಣದ ಚಿನ್ನದ ಕಮಾನುಗಳು, ಎಲ್ಲ ದಿಕ್ಕುಗಳಿಂದ ಲಂಕೆಯನ್ನು ಅಲಂಕರಿಸಿದ್ದವು” ಎಂದು ಬಣ್ಣಿಸುವದರ ಜೊತೆ “ಕಂಡು ಕಲ್ಪನಾತೀತ ಸುಂದರ ಲಂಕಾನಗರ ಹನುಮನು ಒಂದು ಕ್ಷಣ ಅದನ್ನು ವಶಪಡಿಸಿಕೊಳ್ಳಲು ಚಿಂತಿತನಾದನು” ಎಂಬ ಉಧ್ಗಾರದೊಂದಿಗೆ ಆದಿಕವಿಯು ಲಂಕೆ ಒಳನೋಟ ಸೌಂದರ್ಯ ಅದ್ವಿತೀಯವೆಂದು ಷರಾ ನೀಡಿರುವರು. (4) ಹನುಮಾನನಿಗೆ ಪ್ರಕೃತಿಯ ಸಹಾಯ: ಹನುಮನು ನಗರದಲ್ಲಿ ಗಂಧರ್ವರ ನಗರಗಳಂತೆ ಹೊಂಬಣ್ಣಿನ ಸ್ತಂಬಗಳನು, ಕಿಟಕಿಗಳನು, ಏಳು/ಏಂಟು ಅಂತಸ್ತುಗಳ ಕಟ್ಟಡಗಳು,ಚಿನ್ನ ರತ್ನ ಸ್ಪಟಿಕಗಳಿಂದ ಹೊಳೆಯುವ ಛಾವಣಿಗಳು, ಬೆಕ್ಕಿನ ಕಣ್ಣಗಳಂತೆ ಹೊಳೆವ ಛಾವಣಿ ಕಟ್ಟಡಗಳು, ರಾಕ್ಷಸರ ಮನೆಗಳು, ಬಣ್ಣ ಬಣ್ಣದ ಚಿನ್ನದ ಕಮಾನುಗಳು, ಎಲ್ಲ ದಿಕ್ಕುಗಳಿಂದ ಅಲಂಕರಿಸಿದ್ದ ಲಂಕೆಯ ಕಟ್ಟಡಗಳನು ಕಂಡನು; ಕಂಡು ಕಲ್ಪನಾತೀತ ಸುಂದರ ಲಂಕಾನಗರ ಹನುಮನು ಒಂದು ಕ್ಷಣ ಅದನ್ನು ವಶಪಡಿಸಿಕೊಳ್ಳಲು ಚಿಂತಿತನಾದನು, ಮರುಕ್ಷಣ ಸೀತೆ ಹುಡುಕಲು ಹರುಷಿತನಾದನು; ಹನುಮನಿಗೆ ಸಹಾಯ ಮಾಡಲೆಂದು ಸಾವಿರು ಸಾವಿರು ಕಿರಣಗಳೊಂದಿಗೆ ಚಂದ್ರ ಉದರಿಸಿದನು, ಹನುಮನಿಗೆ ಚಂದ್ರನು ಸರೋವರದಲಿ ಹಂಸ ಈಜುವಂತೆ ನಕ್ಷತ್ರಗಳ ಮಧ್ಯೆ ಹೊಳೆವ ಕ್ಷೀರವರ್ಣದ ಶಂಖದಂತೆ ಕಂಡನು. ಲಂಕೆನಗರವನ್ನು ಆದಿಕವಿ ವಾಲ್ಮೀಕಿಯು ರಸವತ್ತಾಗಿ ಬಣ್ಣಿಸಿರುವರು. ಒಟ್ಟಿನಲ್ಲಿ ತನ್ನ ಮಾನಸಿಕ ಗೊಂದಲ ಮಧ್ಯೆ ಲಂಕೆ ಭದ್ರತೆಯನ್ನು ನೋಡಿದ ಹನುಮನನು ಅತೀ ಚಿಕ್ಕಗಾತ್ರಕೆ ನನ್ನ ದೇಹ ಕುಗ್ಗಿಸಿ ಲಂಕೆಗೆ ರಾತ್ರಿ ನುಸುಳುವನು, ಬಂದ ಕೃತ್ಯ ಶಸ್ವಿಯಾಗಲು ಅಸ್ಥಿರ ಮನಸ್ಸಿನ (ಮಧ್ಯವರ್ತಿ) ಅಜ್ಞಾನದಿಂದ ಯೋಜನೆಗಳು ವಿಫಲಗೊಳ್ಳುದಂತೆ ಎಚ್ಚರಿಕೆ ವಹಿಸವದು ಸೂಕ್ತವೆಂದು ತಿಳಿಸಿರುವರು.
ಡಾ. ಅರ್ಜುನ ಯ. ಪಂಗಣ್ಣವರ ವಾಲ್ಮೀಕಿ ಸಾಹಿತ್ಯ ಚಿಂತಕ‌