ಸುಂದರಕಾಂಡ ರಾಮಾಯಣ ಭಾಗ-59

By admin


ಕಂಡು ಬೆಕ್ಕಿನ ಕಣ್ಣಿನಂತಹ ರತ್ನ, ವಜ್ರ, ಹರಳು ಅಲಂಕೃತI
ಸುವರ್ಣ-ದ್ವಾರಗಳ ಲಂಕಾನಗರ, II
ಹೃದಯ ಹಿಗ್ಗಿತು ಹನುಮನ, ವೈಢೂರ್ಯ-ವೇದಿಕೆ, I
ರತ್ನ ಲೇಪಿತ ನೆಲ-ಹಾಸಿಗೆ, ಚಿನ್ನ ಬೆಳ್ಳಿಯ ಆನೆಗಳು, II
ವಜ್ರ ರತ್ನಗಳ ಸೋಪಾನ, ಧೂಳರಹಿತ ಮುತ್ತು ರತ್ನ ಲೇಪಿತ ಗೋಡೆಗಳು, I
ಒಳಾಂಗಣಗಳು,ಸುಸಜ್ಜಿತ ಸಭಾಂಗಣಗಳು,II
ಗುಂಜಿಸುವ ಕ್ರೌಂಚ ನವಿಲಗಳ ದ್ವನಿ,I
ಆಕಾಶಕ್ಕೆ ಹಾರುವ ಹಂಸಗಳಂತ ವಿಷ್ಮಯ, II
ವಸ್ವೊಕಸಾರ ನಗರ ವೈಭವಕ್ಕೆ ಸಮI
ಕಂಡಿತು ರಾವಣನ ಲಂಕಾ ನಗರವು, II
ನಗರಗಳಲ್ಲಿ ಸರ್ವೋತ್ತಮ ರಾವಣನ ಲಂಕಾI
ಸಮೃದ್ಧ, ರವ್ಯ, ಶುಭ ಕಂಡು ಹನುಮ ನುಡಿದ, II
“ಆಯುಧ ಸುಸಜ್ಜಿತ ಸೈನ್ಯ ಕಾವಲದI
ರಾವಣನ ಲಂಕೆ ಯಾರಿಂದಲೂ ಗೆಲ್ಲಲು ಅಸಾಧ್ಯ, II
ಈ ಭೂಮಿ ಗೆಲ್ಲಲು ಸಾಧ್ಯ ಕುಮುದ ಇಲ್ಲವೆ ಅಂಗದI
ಇಲ್ಲವೆ ಸುಶೆನ ಇಲ್ಲವೆ ಮೈಂದ ಇಲ್ಲವೆ ದ್ವಿವಿದ, ಇವರಿಂದ, II
ಸಾಧ್ಯ ಭೇದಿಸಲು ಈ ಭೂಮಿ ಸುಗ್ರೀವ, ಕುಸಪರ್ವನI
ವಾನರ ನಾಯಕ ರಿಕ್ಷ, ಇವರಿಂದ”, II
ಅಜಾನುಬಾಹು ಸಬಲ ರಾಮ ವ ಶೂರ ಲಕ್ಷ್ಮಣರI
ನೆನಪಿಸಿ ಸಂತೋಷ ಪಟ್ಟನು ಹನುಮ,II
ಕಂಡಿತು ರಾಕ್ಷಸರ ನಗರ ಆಭರಣ-ಭೂಷಿತ ಹೆಣ್ಣಿನಂತೆ, I
ವಜ್ರ ತುಂಬಿದ ಉಡುಪು, ಮೊಲೆಕಟ್ಟು, II
ಕರ್ಣಕುಂಡಲ, ಕತ್ತಲ ಭೇದಿಸಿದ ದೀಪಗಳ ಮನೆಗಳು;I
ಕಂಡು ಹನುಮನ ಲಂಕೆಯ ಉಪವನ ಹೂದೋಟಗಳಲಿ, II
ಭಯಾನಕ ಮುಖ,ಕಣ್ಣುಗಳ ತೆರೆದುಕೊಂಡ ನಿಂತಳು ಲಂಕೆ I
ಬಲಶಾಲಿ ವಾನರನ ಎದಿರು, ನುಡಿದಳು ಹನುಮನಿಗೆ, II
“ಓ ಹೂದೋಟದಲ್ಲಿ ಬಂದವನೇ,ಯಾರು ನೀ?I
ಬಂದ ಕಾರಣವೇನು? ಬದುಕಿರುವಾಗಲೆ ಸತ್ಯ ಹೇಳು, II
ಓ ವಾನರಾ! ನಿನಗೆ ಅಸಾಧ್ಯ ಲಂಕೆ ನುಸುಳುವದು, I
ಸುಭಧ್ರವಾಗಿದೆ, ರಾವಣನ ಸಬಲ ಸೈನ್ಯದ ರಕ್ಷಣೆಯಲಿ”, II
ನುಡಿದ ಹನುಮ ಲಂಕಾಳಿಗೆ “ ಸತ್ಯವನ್ನು ಹೇಳುವೆ ನೀI
ಕೇಳಿದ ಎಲ್ಲ ವಿಷಯಗಳಿಗೆ, ಓ ಕುರೂಪಿ ಕಣ್ಣಿನವಳೇ, II
ಯಾರು ನೀ, ನಗರ ಪ್ರವೇಶದಾರಿಯಲಿ ನಿಂತಿರುವಿ?I
ನನ್ನ ಹೆದರಿಸಲು ಕಾರಣವೇನು? ತಡೆಯುವೇಕೇ?” II
ಸುಂದರಕಾಂಡ

ಹನುಮಾನನು ಲಂಕಾನಗರವನ್ನು ಪ್ರವೇಶಿಸಿ ಅದರ ಅಂದವನ್ನುಕಂಡ ದೃಶ್ಯವನ್ನು ಆದಿಕವಿ ವಾಲ್ಮೀಕಿಯು ಬಣ್ಣಿಸಿರುವರು (1) ಹನುಮಾನ ಕಂಡ ಸರ್ವೋತ್ತಮ ನಗರ: ಬೆಕ್ಕಿನ ಕಣ್ಣಿನಂತಹ ರತ್ನ, ವಜ್ರ,ಹರಳು ಅಲಂಕೃತ ಸುವರ್ಣ-ದ್ವಾರಗಳ ಲಂಕಾನಗರವನ್ನು ಕಂಡು ಹನುಮನ ಹೃದಯ ಹುರುಪುಗೊಂಡತು ಹಾಗು ವೈಢೂರ್ಯ-ವೇದಿಕೆ, ರತ್ನ ಲೇಪಿತ ನೆಲ-ಹಾಸಿಗೆ, ಚಿನ್ನ ಬೆಳ್ಳಿಯ ಆನೆಗಳು, ವಜೃ ರತ್ನಗಳ ಸೋಪಾನ, ಧೂಳರಹಿತ ಮುತ್ತು ರತ್ನ ಲೇಪಿತ ಗೋಡೆಗಳು, ಒಳಾಂಗಣಗಳು, ಸುಸಜ್ಜಿತ ಸಭಾಂಗಣಗಳು, ಗುಂಜಿಸುವ ಕ್ರೌಂಚ ನವಿಲಗಳ ದ್ವನಿ, ಆಕಾಶಕ್ಕೆ ಹಾರುವ ಹಂಸಗಳಂತ ವಿಷ್ಮಯ, ವಸ್ವೊಕಸಾರನಗರ (ಇಂದ್ರನ ಅಮರಾವತಿ ನಗರ)ವೈಭವಕ್ಕೆ ಸಮ ರಾವಣನ ಲಂಕಾ ನಗರವು ಹನುಮನಿಗೆಕಂಡಿತು ; ನಗರಗಳಲ್ಲಿ ಸರ್ವೋತ್ತಮ ರಾವಣನ ಲಂಕಾನಗರದ ಸಮೃದ್ಧ, ರವ್ಯ, ಶುಭ ಕಂಡು ಹನುಮ ಮನದಲ್ಲಿ ಹೀಗೆ ನುಡಿದನು “ಆಯುಧ ಸುಸಜ್ಜಿತ ಸೈನ್ಯ ಕಾವಲದ ರಾವಣ ಲಂಕೆ ಯಾರಿಂದಲೂ ಗೆಲ್ಲಲು ಅಸಾಧ್ಯ; ಕುಮುದ ಇಲ್ಲವೆ ಅಂಗದ ಇಲ್ಲವೆ ಸುಶೆನ ಇಲ್ಲವೆ ಮೈಂದ ಇಲ್ಲವೆ ದ್ವಿವಿದ, ಇವರಿಂದ ಮಾತ್ರ ಈ ಭೂಮಿ ಗೆಲ್ಲಲು ಸಾಧ್ಯ; ಅದರಂತೆ ಸುಗ್ರೀವ, ಕುಸಪರ್ವನ, ವಾನರ ನಾಯಕ ರಿಕ್ಷ, ಇವರಿಂದ ಮಾತ್ರ ಸಾಧ್ಯ ಈ ಭೂಮಿ ಭೇದಿಸಲು”.ಮುಂದುವರೆದು ಅಜಾನುಬಾಹು ಸಬಲ ರಾಮ ಮತ್ತ ಶೂರ ಲಕ್ಷ್ಮಣರನ್ನು ನೆನಪಿಸಿಕೊಂಡು ಹನುಮ ಸಂತೋಷ ಪಟ್ಟನು, ಹನುಮನಿಗೆ ಕತ್ತಲ ಭೇದಿಸಿದ ದೀಪಗಳ ಮನೆಗಳ ರಾಕ್ಷಸರ ಲಂಕಾ ನಗರವು ವಜೃಗಳು ತುಂಬಿದ ಉಡುಪು, ಮೊಲೆಕಟ್ಟು, ಕರ್ಣಕುಂಡಲಗಳ ಆಭರಣ-ಭೂಷಿತ ಹೆಣ್ಣಿನಂತೆ ಕಂಡಿತು; ಲಂಕೆಯನ್ನು ಎಷ್ಟೆ ವರ್ಣಿಸಿದರು ಸಾಲದು ಎಂಬ ಚಿಂತನೆಯನ್ನು ಆದಿಕವಿ ವಾಲ್ಮೀಕಿಯು ತಿಳಿಸಿರುವರು, (2) ಹನುಮಾನನಿಗೆ ಲಂಕಾಳ ದರ್ಶನ: ಲಂಕೆಯ ಉಪವನ ಹೂದೋಟಗಳಲಿ ಭಯಾನಕ ಮುಖ ಮತ್ತು ಕಣ್ಣುಗಳ ತೆರೆದುಕೊಂಡು ನಿಂತ ಲಂಕಾಳನ್ನು ಹನುಮನ ಕಂಡನು; ರಾಕ್ಷಸಿ ಲಂಕೆಯು ಬಲಶಾಲಿ ವಾನರನ ಎದಿರು ನಿಂತು ಅವನಿಗೆ ಘರ್ಜಿಸುತ : “ಓ ಹೂದೋಟದಲ್ಲಿ ಬಂದವನೇ,ಯಾರು ನೀ? ಬಂದ ಕಾರಣವೇನು? ಬದುಕಿರುವಾಗಲೆ ಸತ್ಯ ಹೇಳು, ಓ ವಾನರಾ! ಲಂಕೆಯನ್ನು ನುಸುಳುವದು ನಿನಗೆ ಅಸಾಧ್ಯ, ರಾವಣನ ಸಬಲ ಲಂಕಾನಗರವು ಸೈನ್ಯದ ರಕ್ಷಣೆಯಲಿ ಸುಭಧ್ರವಾಗಿದೆ” ಎಂದು ಘರ್ಜಿಸಿದಳು; ಲಂಕಾಳ ಪ್ರಶ್ನೆಗಳಿಗೆ ಹನುಮಾನನು “ ನಾನು ಸತ್ಯವನ್ನು ಹೇಳುವೆ ನೀ ಕೇಳಿವ ಎಲ್ಲ ವಿಷಯಗಳಿಗೆ, ಓ ಕುರೂಪಿ ಕಣ್ಣಿನವಳೇ, ಮೊದಲು ನನಗೆ ಹೇಳು ನಗರ ಪ್ರವೇಶದಾರಿಯಲಿ ನಿಂತಿರುವಿ ಯಾರು ನೀ? ನನ್ನ ಹೆದರಿಸಲು ಕಾರಣವೇನು? ನನ್ನನು ತಡೆಯುವೇಕೇ?” ಎಂದು ಮನುಮಾನನು ಮರುಪ್ರಶ್ನೆಗಳನ್ನು ಕೇಳಿದನು. ಒಟ್ಟಿನಲ್ಲಿ ಆದಿಕವಿ ಈ ಸಂದರ್ಭದಲ್ಲಿ ಪುನಃ ಲಂಕಾನಗರವನ್ನು ವಜ್ರಗಳು ತುಂಬಿದ ಉಡುಪು, ಮೊಲೆಕಟ್ಟು, ಕರ್ಣಕುಂಡಲಗಳ ಆಭರಣ-ಭೂಷಿತ ಹೆಣ್ಣಿಗೆ ಹೋಲಿಸುತ್ತ ಅದರ ಭದ್ರತೆ ಯನ್ನು ಮೆಚ್ಚುತ ಹನುಮಾನ ಎದಿರು ಪ್ರತ್ಯಕ್ಷಳಾದ ರಾಕ್ಷಸಿ ಲಂಕಾಳ ವಿರೋಧವನ್ನು ಎದುರಿಸಿದನ್ನು ವಿವರಿಸಿರುವರು.
-ಡಾ. ಅರ್ಜುನ ಯ. ಪಂಗಣ್ಣವರ ವಾಲ್ಮೀಕಿ ಸಾಹಿತ್ಯ ಚಿಂತಕ‌